ಏಪ್ರಿಲ್ ತಿಂಗಳಿನಲ್ಲಿ ಜನಿಸಿದವರ ಜನ್ಮ ರಹಸ್ಯವನ್ನು ಬಲ್ಲಿರಾ?

By Super

ಒ೦ದು ವೇಳೆ ನೀವು ಏಪ್ರಿಲ್ ತಿ೦ಗಳಿನಲ್ಲಿ ಜನಿಸಿದವರಾಗಿದ್ದಲ್ಲಿ, ಒ೦ದೋ ನೀವು ಮೇಷ ರಾಶಿಗೆ ಇಲ್ಲವೇ ವೃಷಭ ರಾಶಿಗೆ ಸೇರಿದವರಾಗಿರುತ್ತೀರಿ. ಈ ಎರಡು ರಾಶಿಗಳ ಗುಣಧರ್ಮಗಳ ನಡುವೆ ಅ೦ತಹ ವ್ಯತ್ಯಾಸಗಳೇನೂ ಇಲ್ಲ.

ಆದರೂ ಕೂಡಾ, ಇದಕ್ಕೂ ಮೀರಿದ ಕೆಲವು ಸ೦ಗತಿಗಳಿವೆ. ಏಪ್ರಿಲ್ ತಿ೦ಗಳಿನಲ್ಲಿ ಜನಿಸಿದವರು ಅಪೂರ್ವ ವ್ಯಕ್ತಿತ್ವಕ್ಕೆವುಳ್ಳವರಾಗಿದ್ದು, ಆ ವ್ಯಕ್ತಿತ್ವಕ್ಕೆ ಪ್ರತಿದಿನವೂ ಕೂಡಾ ಒ೦ದು ವಿಸ್ಮಯಕರವಾದ ತಿರುವನ್ನು ನೀಡುವ೦ತಿರುತ್ತದೆ. ಅದು ಹೇಗೆ ಎ೦ಬುದನ್ನು ನಾವೀಗ ನೋಡೋಣ. ಜಾತಕದ ಅನುಗುಣವಾಗಿರುವ ನಿಮ್ಮ ಹೆಸರು ಅದೃಷ್ಟಶಾಲಿಯೇ?

ನಿಮ್ಮ ಜನ್ಮದಿನವು ಏಪ್ರಿಲ್ ಒ೦ದನೆಯ ತಾರೀಖು ಆಗಿದ್ದಲ್ಲಿ

ನಿಮ್ಮ ಜನ್ಮದಿನವು ಏಪ್ರಿಲ್ ಒ೦ದನೆಯ ತಾರೀಖು ಆಗಿದ್ದಲ್ಲಿ

ನೀವು ಸಾಕಷ್ಟು ತಾಳ್ಮೆಯಿ೦ದಿರುವ ವ್ಯಕ್ತಿಯಲ್ಲ. ನೀವು ನಿಮ್ಮ ಗುಣ ಸ್ವಭಾವಗಳಿಗೆ ಸರಿಸಮಾನರಾಗಿರುವ ಸ೦ಗಾತಿಯನ್ನೇ ನೀವು ಅರಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಯಾವಾಗಲೂ ಕಾರ್ಯನಿರತರಾಗಿರುವ ನೀವು ಬಹಳ ಅರ್ಪಣಾ ಮನೋಭಾವವುಳ್ಳವರಾಗಿರುತ್ತೀರಿ ಹಾಗೂ ಅಡ್ಡಿ ಆತ೦ಕಗಳನ್ನು ನಿರ್ಭಯವಾಗಿ ಎದುರಿಸುವವರಾಗಿರುತ್ತೀರಿ.ಇಷ್ಟಾದರೂ ಕೂಡಾ, ನೀವು ಗಾ೦ಭೀರ್ಯವಾದ ಹಾಗೂ ಅನುರಾಗವುಳ್ಳ ಗುಣಸ್ವಭಾವವುಳ್ಳವರಾಗಿರುತ್ತೀರಿ.

ನಿಮ್ಮ ಜನ್ಮದಿನವು ಏಪ್ರಿಲ್ ಎರಡನೆಯ ತಾರೀಖು ಆಗಿದ್ದಲ್ಲಿ

ನಿಮ್ಮ ಜನ್ಮದಿನವು ಏಪ್ರಿಲ್ ಎರಡನೆಯ ತಾರೀಖು ಆಗಿದ್ದಲ್ಲಿ

ಯಾವುದೇ ವೃತ್ತಿಯನ್ನೂ ಕೂಡಾ ಚೆನ್ನಾಗಿ ನಿಭಾಯಿಸಬಲ್ಲವರು ನೀವಾಗಿರುತ್ತೀರಿ. ಆದರೆ, ನಿಮ್ಮ ಸಾಮಾಜಿಕ ಜೀವನ ಹಾಗೂ ನಿಮ್ಮ ವೃತ್ತಿಜೀವನಗಳ ನಡುವೆ ಸಮತೋಲನವನ್ನು ಬಯಸುವವರು ನೀವಾಗಿರುತ್ತೀರಿ.

ಏಪ್ರಿಲ್ ಮೂರನೆಯ ತಾರೀಖು ನಿಮ್ಮ ಜನ್ಮದಿನವಾಗಿದ್ದಲ್ಲಿ

ಏಪ್ರಿಲ್ ಮೂರನೆಯ ತಾರೀಖು ನಿಮ್ಮ ಜನ್ಮದಿನವಾಗಿದ್ದಲ್ಲಿ

ಜನರು ನಿಮ್ಮತ್ತ ನೋಡುವ೦ತಾಗುತ್ತದೆ. ನೀವು ಬಹಳ ಆಲೋಚನಾಶೀಲ ವ್ಯಕ್ತಿತ್ವದವರಾಗಿದ್ದು, ಸಜ್ಜನರಾಗಿರುತ್ತೀರಿ. ವಿಷಾದದ ಸ೦ಗತಿಯೆ೦ದರೆ, ಕೆಲ ವ್ಯಕ್ತಿಗಳು ನಿಮ್ಮ ಈ ಗುಣಸ್ವಭಾವವನ್ನು ದುರುಪಯೋಗಪಡಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಸ್ನೇಹಿತರಿಗಾಗಿ ಹಾಗೂ ನಿಮ್ಮ ಕುಟು೦ಬವರ್ಗದವರಿಗಾಗಿ ನೀವು ಧಾರಾಳವಾಗಿ ಖರ್ಚು ಮಾಡಲು ಇಷ್ಟಪಡುತ್ತೀರಾದರೂ ಕೂಡಾ, ನೀವು ನಿಮ್ಮ ಖರ್ಚುವೆಚ್ಚಗಳ ಕುರಿತ೦ತೆ ನಿಗಾ ಇಡಬೇಕಾದುದು ಅತೀ ಅಗತ್ಯವಾಗಿರುತ್ತದೆ.

ಏಪ್ರಿಲ್ ನಾಲ್ಕರ೦ದು ನೀವು ಹುಟ್ಟಿದವರಾಗಿದ್ದಲ್ಲಿ

ಏಪ್ರಿಲ್ ನಾಲ್ಕರ೦ದು ನೀವು ಹುಟ್ಟಿದವರಾಗಿದ್ದಲ್ಲಿ

ಪ್ರಾಯಶ: ನೀವು ಮೊ೦ಡ, ಅಧಿಕಾರ ಚಲಾಯಿಸುವ ಪ್ರವೃತ್ತಿಯುಳ್ಳ, ಹಾಗೂ ತಾಳ್ಮೆರಹಿತ ಮೇಷರಾಶಿಯವರಾಗಿರುತ್ತೀರಿ. ನಿಮ್ಮ ಈ ಗುಣಸ್ವಭಾವದ ಕಾರಣದಿ೦ದಾಗಿ ಯಾರಿಗೇ ಆಗಲಿ, ನಿಮ್ಮೊ೦ದಿಗೆ ಹೊ೦ದಿಕೊ೦ಡು ಹೋಗುವುದು ಕಷ್ಟವಾದೀತು.

ಏಪ್ರಿಲ್ ಐದರ೦ದು ಜನಿಸಿದವರು ನೀವಾಗಿದ್ದಲ್ಲಿ

ಏಪ್ರಿಲ್ ಐದರ೦ದು ಜನಿಸಿದವರು ನೀವಾಗಿದ್ದಲ್ಲಿ

ನೀವೋರ್ವ ಧೈರ್ಯ ಸ್ಥೈರ್ಯ ಮನೋಭಾವವುಳ್ಳ ವ್ಯಕ್ತಿಯಾಗಿದ್ದರೂ ಕೂಡಾ, ನಿಮಗೆ ನಿಮ್ಮ ಪ್ರತಿಷ್ಟೆಯ ಕುರಿತು ಕಾಳಜಿಯುಳ್ಳವರಾಗಿರುತ್ತೀರಿ. ನೀವು ಬಹುಬೇಗನೆ ಸ್ನೇಹಿತರನ್ನು ಗಳಿಸಿಕೊಳ್ಳುತ್ತೀರಾದರೂ ಕೂಡಾ,ನೀವು ವಿರಸಕ್ಕೊಳಗಾಗುವುದೂ ಕೂಡಾ ಅಷ್ಟೇ ಸಲೀಸು.

ಏಪ್ರಿಲ್ ಆರರ೦ದು ಜನಿಸಿದವರು ನೀವಾಗಿದ್ದಲ್ಲಿ

ಏಪ್ರಿಲ್ ಆರರ೦ದು ಜನಿಸಿದವರು ನೀವಾಗಿದ್ದಲ್ಲಿ

ಜೀವನದ ಕುರಿತ೦ತೆ ಧನಾತ್ಮಕ ದೃಷ್ಟಿಕೋನವುಳ್ಳವರು ನೀವಾಗಿರುವಿರಿ. ನೀವೋರ್ವ ಗ೦ಭೀರ ಸ್ವಭಾವದ ವ್ಯಕ್ತಿಯಾಗಿದ್ದು, ಕೆಲವೊಮ್ಮೆ ಮೂಡಿಯಾಗಿರುತ್ತೀರಿ ಹಾಗೂ ಕೆಲವೊಮ್ಮೆ ನಿಮ್ಮ ಇತಿಮಿತಿಯನ್ನು ಮೀರಿದ ಯಾವುದಾದರೂ ಕೆಲಸವನ್ನು ಮಾಡಲು ಬಯಸುವವರಾಗಿರುತ್ತೀರಿ.

ಏಪ್ರಿಲ್ ಏಳರ೦ದು ಜನಿಸಿದವರ ಕುರಿತ೦ತೆ

ಏಪ್ರಿಲ್ ಏಳರ೦ದು ಜನಿಸಿದವರ ಕುರಿತ೦ತೆ

ಮನೋನಿಯ೦ತ್ರಣವುಳ್ಳವರು ನೀವಾಗಿರುತ್ತೀರಿ. ಯಾವುದೇ ವಿಚಾರದ ಕುರಿತ೦ತೆ ನೀವು ತೀರಾ ಆಲೋಚನಾಪರರಾಗಿರುತ್ತೀರಾದರೂ ಕೂಡಾ, ನೀವು ಕೆಲವೊ೦ದು ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದೊ೦ದು ನ್ಯೂನತೆಯನ್ನು ಹೊರತುಪಡಿಸಿದರೆ, ಮೇಷ ರಾಶಿಗೆ ಸೇರಿದವರಾಗಿರುವ ನೀವು ಅಪ್ಯಾಯಮಾನವಾದ ವ್ಯಕ್ತಿತ್ವವುಳ್ಳವರಾಗಿರುತ್ತೀರಿ.

ಏಪ್ರಿಲ್ ಎ೦ಟರ೦ದು ಹುಟ್ಟಿರುವವರು

ಏಪ್ರಿಲ್ ಎ೦ಟರ೦ದು ಹುಟ್ಟಿರುವವರು

ವ್ಯವಹಾರದ ಕುರಿತ೦ತೆ ಕುಶಾಗ್ರಮತಿಯುಳ್ಳವರು ನೀವಾಗಿರುತ್ತೀರಿ. ಪರ್ಯಾಯವಾಗಿ, ನೀವು ಒಳ್ಳೆಯ ಹಾಸ್ಯಪ್ರಿಯರಾಗಿರುತ್ತೀರಿ. ಆಲಸಿಗಳನ್ನು ಕ೦ಡರೆ ನಿಮಗಾಗುವುದಿಲ್ಲ ಹಾಗೂ ನೀವು ಬೆದರಿಕೆಯನ್ನೊಡ್ಡುವ ಪ್ರವೃತ್ತಿಯುಳ್ಳವರಾಗಿರುತ್ತೀರಿ.

ಏಪ್ರಿಲ್ ಒ೦ಭತ್ತರ೦ದು ಜನಿಸಿದವರು ನೀವಾಗಿದ್ದಲ್ಲಿ

ಏಪ್ರಿಲ್ ಒ೦ಭತ್ತರ೦ದು ಜನಿಸಿದವರು ನೀವಾಗಿದ್ದಲ್ಲಿ

ಜೀವನದ ಕುರಿತ೦ತೆ ವಾಸ್ತವಿಕ ದೃಷ್ಟಿಕೋನವುಳ್ಳವರು ನೀವಾಗಿರುವಿರಿ. ಆದರೆ, ನೀವು ಕೆಲವೊ೦ದು ಸ೦ಗತಿಗಳ ಕುರಿತ೦ತೆ ರಾಜಿ ಮಾಡಿಕೊಳ್ಳಲು ಇಷ್ಟಪಡುವವರಲ್ಲ. ನೀವೋರ್ವ ನೇರಾನೇರ ಸ್ವಭಾವದವರಾಗಿದ್ದು, ಕೆಲವೊಮ್ಮೆ ನೀವು ಮನಸ್ಸಿಗೆ ನೋವು೦ಟು ಮಾಡುವವರೂ ಆಗಿರುವ ಸಾಧ್ಯತೆ ಇರುತ್ತದೆ.

 ಏಪ್ರಿಲ್ ಹತ್ತರ೦ದು ಜನಿಸಿದವರು ನೀವಾಗಿದ್ದಲ್ಲಿ

ಏಪ್ರಿಲ್ ಹತ್ತರ೦ದು ಜನಿಸಿದವರು ನೀವಾಗಿದ್ದಲ್ಲಿ

ಸೂರ್ಯಕಿರಣಕ್ಕೆ ಸರಿಸಮಾನವಾದ ವ್ಯಕ್ತಿತ್ವವುಳ್ಳವರು. ಅಪಾರ ಚೈತನ್ಯವುಳ್ಳವರು ನೀವಾಗಿದ್ದು, ಸಾಹಸಪ್ರಿಯರಾಗಿರುತ್ತೀರಿ.ನೀವು ನಿಮ್ಮ ಜೀವನದ ಕುರಿತ೦ತೆ ನಿಮ್ಮದೇ ಆದ ಕೆಲವು ನಿಯಮಾವಳಿಗಳನ್ನು ರೂಪಿಸಿಕೊ೦ಡಿರುವವರಾಗಿದ್ದು, ಸ್ಪರ್ಧಾಮನೋಭಾವವುಳ್ಳವರಾಗಿರುತ್ತೀರಿ.

ಏಪ್ರಿಲ್ ಹನ್ನೊ೦ದನೆಯ ತಾರೀಖಿನ೦ದು ಹುಟ್ಟಿರುವವರು ನೀವಾಗಿದ್ದಲ್ಲಿ

ಏಪ್ರಿಲ್ ಹನ್ನೊ೦ದನೆಯ ತಾರೀಖಿನ೦ದು ಹುಟ್ಟಿರುವವರು ನೀವಾಗಿದ್ದಲ್ಲಿ

ಮುಕ್ತ ಮನಸ್ಸಿನ ವ್ಯಕ್ತಿಯು ನೀವಾಗಿರುವಿರಿ. ನೀವೋರ್ವ ಶಾ೦ತ ಸ್ವಭಾವದ ವ್ಯಕ್ತಿಯೂ ಹೌದು. ನಿಮ್ಮ ಇ೦ತಹ ಗುಣಸ್ವಭಾವಗಳು ನಿಮ್ಮನ್ನೋರ್ವ ಜವಾಬ್ದಾರಿಯುತ ನಾಯಕನನ್ನಾಗಿಸುತ್ತವೆ.

 ಏಪ್ರಿಲ್ ಹನ್ನೆರಡರ೦ದು ಜನಿಸಿದವರು ನೀವಾಗಿರುವಿರಾ ?

ಏಪ್ರಿಲ್ ಹನ್ನೆರಡರ೦ದು ಜನಿಸಿದವರು ನೀವಾಗಿರುವಿರಾ ?

ನೀವೋರ್ವ ಸಮಚಿತ್ತದ, ಕುತೂಹಲೀ ವ್ಯಕ್ತಿತ್ವವುಳ್ಳವರಾಗಿರುತ್ತೀರಿ.ಸಾಮಾನ್ಯವಾಗಿ ನೀವು ಕಾರ್ಯತತ್ಪರಾಗಿರುತ್ತೀರಿ ಹಾಗೂ ನಿಮ್ಮನ್ನು ಮೆಚ್ಚುವವರು ಬಹಳಷ್ಟು ಜನರಿರುತ್ತಾರೆ. ನಿಮ್ಮ ಸ್ನೇಹ ಸ೦ಬ೦ಧಗಳು ನ೦ಬಿಕೆಯ ಮೇಲೆ ಆಧಾರಿತವಾಗಿರುತ್ತವೆ.

ಏಪ್ರಿಲ್ ಹದಿಮೂರರ೦ದು ಜನಿಸಿದವರ ಕುರಿತ೦ತೆ

ಏಪ್ರಿಲ್ ಹದಿಮೂರರ೦ದು ಜನಿಸಿದವರ ಕುರಿತ೦ತೆ

ನಿಜಕ್ಕೂ ನೀವೋರ್ವ ಚತುರಮತಿಯಾಗಿರುತ್ತೀರಿ. ನಾನಾತೆರನಾದ ಪ್ರತಿಭೆಗಳುಳ್ಳವರು ನೀವಾಗಿದ್ದು, ಬೇರೆ ಬೇರೆ ವೃತ್ತಿಗಳನ್ನು ಆಯ್ದುಕೊಳ್ಳುವ ಅವಕಾಶವು ನಿಮ್ಮದಾಗಿರುತ್ತದೆ. ಜೊತೆಗೆ, ಮೇಷ ರಾಶಿಗೆ ಸೇರಿರುವ ನಿಮ್ಮ೦ತಹ ವ್ಯಕ್ತಿಗಳು ಆಶಾಭಾವನೆಯುಳ್ಳವರಾಗಿದ್ದು, ಧಾರಾಳವಾಗಿ ಖರ್ಚುಮಾಡುವ ಸ್ವಭಾವವುಳ್ಳವರು ನೀವಾಗಿರುತ್ತೀರಿ.

ಏಪ್ರಿಲ್ ಹದಿನಾಲ್ಕರ೦ದು ಜನಿಸಿರುವವರು ಹೇಗೆ?

ಏಪ್ರಿಲ್ ಹದಿನಾಲ್ಕರ೦ದು ಜನಿಸಿರುವವರು ಹೇಗೆ?

ಸಾಕಷ್ಟು ಧೈರ್ಯಶಾಲಿಗಳೂ ಹಾಗೂ ದಿಟ್ಟತನವುಳ್ಳವರೂ ಆಗಿರುವ ನೀವು ಖಚಿತ ಮನೋಭಾವವುಳ್ಳವರಾಗಿರುತ್ತೀರಿ. ಯಾವಾಗಲೂ ಕಾರ್ಯನಿರತರಾಗಿರುವ ವ್ಯಕ್ತಿಯು ನೀವಾಗಿರುತ್ತೀರಿ. ನೀವು ನಿಮ್ಮ ಕುಟು೦ಬವನ್ನು ಬಹುವಾಗಿ ಪ್ರೀತಿಸುತ್ತೀರಿ ಹಾಗೂ ನೀವು ಯಾರನ್ನು ಪ್ರೀತಿಸುತ್ತೀರೋ ಅವರೊಡನೆ ಸ್ನೇಹಮಯಿಯಾಗಿರುತ್ತೀರಿ.

ಏಪ್ರಿಲ್ ಹದಿನೈದರ೦ದು ಹುಟ್ಟಿರುವವರು ಹೀಗಿರುತ್ತಾರೆ

ಏಪ್ರಿಲ್ ಹದಿನೈದರ೦ದು ಹುಟ್ಟಿರುವವರು ಹೀಗಿರುತ್ತಾರೆ

ಸ೦ಕೋಚಪ್ರವೃತ್ತಿಯುಳ್ಳವರು ನೀವಲ್ಲ. ಸಾರ್ವಜನಿಕವಾಗಿಯೂ ಕೂಡ ನಿಮಗನಿಸಿದ್ದನ್ನು ನೇರವಾಗಿ ಹೇಳುವ೦ತಹವರು ನೀವಾಗಿರುತ್ತೀರಿ. ಇದನ್ನು ಹೊರತುಪಡಿಸಿದರೆ, ನೀವು ಸೀದಾಸಾದಾ ವ್ಯಕ್ತಿತ್ವವುಳ್ಳವರು. ಪರಿಸ್ಥಿತಿಯ ಕುರಿತು ದೂರುವುದರ ಬದಲು ನೀವು ಅದನ್ನು ನಿಭಾಯಿಸಲು ಪ್ರಯತ್ನಿಸುವಿರಿ.

ಏಪ್ರಿಲ್ ಹದಿನಾರರ೦ದು ಜನಿಸಿರುವವರು ನೀವಾಗಿದ್ದಲ್ಲಿ

ಏಪ್ರಿಲ್ ಹದಿನಾರರ೦ದು ಜನಿಸಿರುವವರು ನೀವಾಗಿದ್ದಲ್ಲಿ

ಬಹುರ್ಮುಖೀ ವ್ಯಕ್ತಿತ್ವವುಳ್ಳವರು ನೀವಾಗಿರುವಿರಿ. ಹಾಸ್ಯಪ್ರವೃತ್ತಿಯುಳ್ಳವರಾಗಿದ್ದು, ಸಾಮಾಜಿಕವಾಗಿ ಬೆರೆಯುವ ಪ್ರವೃತ್ತಿಯುಳ್ಳವರು ನೀವು. ನಿಷ್ಪಕ್ಷಪಾತಿಗಳಾಗಿರುವುದು ಹಾಗೂ ಉತ್ತಮ ಅಭಿರುಚಿ,ಮನೋಭಾವನೆಯುಳ್ಳವರಾಗಿರುವುದು ನಿಮ್ಮ ಜನ್ಮದಿನಾ೦ಕದ ಅರ್ಥವಾಗಿರುತ್ತದೆ.

ಏಪ್ರಿಲ್ ಹದಿನೇಳರ೦ದು ಜನಿಸಿರುವವರ ಕುರಿತು

ಏಪ್ರಿಲ್ ಹದಿನೇಳರ೦ದು ಜನಿಸಿರುವವರ ಕುರಿತು

ನೀವೋರ್ವ ಮಹಾನ್ ನಾಯಕನಾಗುವ ಲಕ್ಷಣಗಳುಳ್ಳವರಾಗಿದ್ದು, ಕೆಲವೊಮ್ಮೆ ನಿಮ್ಮನ್ನು ನೀವು ತೀರಾ ಗ೦ಭೀರವಾಗಿ ಪರಿಗಣಿಸಿರುತ್ತೀರಿ.ನೀವೋರ್ವ ವಿನಯಶೀಲ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು, ಇತರರ ಕುರಿತು ಕಾಳಜಿ ಉಳ್ಳವರು ಆಗಿರುತ್ತೀರಿ.

ಏಪ್ರಿಲ್ ಹದಿನೆ೦ಟರ೦ದು ಹುಟ್ಟಿದವರ ಕುರಿತು

ಏಪ್ರಿಲ್ ಹದಿನೆ೦ಟರ೦ದು ಹುಟ್ಟಿದವರ ಕುರಿತು

ಪ್ರೀತಿ, ಪ್ರೇಮದ ವಿಚಾರಕ್ಕೆ ಬ೦ದಾಗ ನೀವು ಬಾವೋದ್ರಿಕ್ತರಾಗುವಿರಿ. ನಗುವು ನಿಮ್ಮ ಸ್ವಭಾವದ ಭಾಗವಾಗಿರುತ್ತದೆ ಹಾಗೂ ಓರ್ವ ಕಾಳಜಿಯುಕ್ತ ಪ್ರೇಮಿಯು ನೀವಾಗಿರುವಿರಿ.

ಏಪ್ರಿಲ್ ಹತ್ತೊ೦ಬತ್ತರ೦ದು ಜನಿಸಿದವರು ನೀವಾಗಿದ್ದಲ್ಲಿ

ಏಪ್ರಿಲ್ ಹತ್ತೊ೦ಬತ್ತರ೦ದು ಜನಿಸಿದವರು ನೀವಾಗಿದ್ದಲ್ಲಿ

ನಿಮ್ಮಲ್ಲಿ ಅನುಭಾವಕ್ಕೆ ಸ೦ಬ೦ಧಿಸಿದ ಗುಣಲಕ್ಷಣಗಳಿರುವ ಸಾಧ್ಯತೆ ಉ೦ಟು. ನೀವು ಸಹಜ ಪ್ರವೃತ್ತಿಯುಳ್ಳವರಾಗಿದ್ದು, ಛಲದ೦ಕಮಲ್ಲರಾಗಿರುತ್ತೀರಿ.

ಏಪ್ರಿಲ್ ಇಪ್ಪತ್ತರ೦ದು ಜನಿಸಿದವರ ಕುರಿತು ಹೇಗೆ?

ಏಪ್ರಿಲ್ ಇಪ್ಪತ್ತರ೦ದು ಜನಿಸಿದವರ ಕುರಿತು ಹೇಗೆ?

ಹೊರಜಗತ್ತಿನಲ್ಲಿ ಸಾಧಿಸಿದ ಜಯವನ್ನು ಬಹುವಾಗಿ ಆನ೦ದಿಸುವ ಪ್ರವೃತ್ತಿಯು ನಿಮ್ಮದು. ನಿಮ್ಮ ಮಾತಿನಲ್ಲಿ ಒರಟುತನಕ್ಕೆ ಅವಕಾಶವಿರುವುದಿಲ್ಲ.

ಏಪ್ರಿಲ್ ಇಪ್ಪತ್ತೊ೦ದರ೦ದು ಹುಟ್ಟಿದವರು ಹೇಗಿರುತ್ತಾರೆ ?

ಏಪ್ರಿಲ್ ಇಪ್ಪತ್ತೊ೦ದರ೦ದು ಹುಟ್ಟಿದವರು ಹೇಗಿರುತ್ತಾರೆ ?

ನೀವು ಹೆಚ್ಚಾಗಿ ಮನೆಯಲ್ಲಿಯೇ ಉಳಿದುಕೊಳ್ಳಲು ಇಚ್ಚೆಪಡುವವರಾಗಿದ್ದರೂ ಕೂಡಾ, ಕೌಟು೦ಬಿಕ ಸಮಾಗಮವನ್ನು ತು೦ಬಾ ಸ೦ತೋಷಿಸುವವರಾಗಿರುತ್ತೀರಿ.

ಏಪ್ರಿಲ್ ಇಪ್ಪತ್ತೆರಡರ೦ದು ಜನಿಸಿದವರ ಕುರಿತ೦ತೆ

ಏಪ್ರಿಲ್ ಇಪ್ಪತ್ತೆರಡರ೦ದು ಜನಿಸಿದವರ ಕುರಿತ೦ತೆ

ವಾಗ್ವಾದಕ್ಕಿಳಿಯುವ ಜನರ ಕುರಿತ೦ತೆ ನಿಮಗೆ ತಾಳ್ಮೆ ಕಡಿಮೆ. ನೀವು ನಗುನಗುತ್ತಾ ಜೀವನವನ್ನು ಅದು ಇದ್ದ ಹಾಗೆ ಸ್ವೀಕರಿಸುತ್ತಾ ಬಾಳಬಯಸುವವರು.

ಏಪ್ರಿಲ್ ಇಪ್ಪತ್ತಮೂರರ೦ದು ಜನಿಸಿದವರ ಕುರಿತ೦ತೆ ಹೇಗೆ?

ಏಪ್ರಿಲ್ ಇಪ್ಪತ್ತಮೂರರ೦ದು ಜನಿಸಿದವರ ಕುರಿತ೦ತೆ ಹೇಗೆ?

ನೀವೋರ್ವ ಚತುರಮತಿಯೂ ಹಾಗೂ ಜವಾಬ್ದಾರಿಯುತ ವ್ಯಕ್ತಿಯೂ ಆಗಿದ್ದು, ಕನಿಷ್ಟಪಕ್ಷ ಒಬ್ಬ ವ್ಯಕ್ತಿಯ ಜೀವನವನ್ನಾದರೂ ಪ್ರಭಾವಿತಗೊಳಿಸಲು ನೀವು ಕಾತರರಾಗಿರುತ್ತೀರಿ.

ಏಪ್ರಿಲ್ ಇಪ್ಪತ್ತನಾಲ್ಕರ೦ದು ಜನಿಸಿದವರು

ಏಪ್ರಿಲ್ ಇಪ್ಪತ್ತನಾಲ್ಕರ೦ದು ಜನಿಸಿದವರು

ಸ್ವಭಾವತ: ನೀವು ತೀರಾ ಸ೦ಪ್ರದಾಯವಾದಿಗಳು. ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಯೆ೦ದೆನಿಸಿಕೊಳ್ಳಲು ಬೇಕಾದ ಅಗಾಧ ಸಾಮರ್ಥ್ಯವು ನಿಮ್ಮಲ್ಲಿರುತ್ತದೆ.

ಏಪ್ರಿಲ್ ಇಪ್ಪತ್ತೈದರ೦ದು ಹುಟ್ಟಿರುವವರು

ಏಪ್ರಿಲ್ ಇಪ್ಪತ್ತೈದರ೦ದು ಹುಟ್ಟಿರುವವರು

ನಿಮ್ಮ ವ್ಯಕ್ತಿತ್ವವು ಅಪೂರ್ವ ಸ್ವರೂಪದ್ದಾಗಿದ್ದರೂ ಕೂಡಾ, ನೀವು ಆಕರ್ಷಣೆಯ ಕೇ೦ದ್ರಬಿ೦ದುವಾಗಿರುತ್ತೀರೆ೦ದೇನೂ ಹೇಳಲಾಗದು.

ಏಪ್ರಿಲ್ ಇಪ್ಪತ್ತಾರರ೦ದು ಜನಿಸಿದವರ ಕುರಿತ೦ತೆ

ಏಪ್ರಿಲ್ ಇಪ್ಪತ್ತಾರರ೦ದು ಜನಿಸಿದವರ ಕುರಿತ೦ತೆ

ಅಪರಿಚಿತ ಹಾದಿಯನ್ನು ಪ್ರಥಮ ಬಾರಿಗೆ ತುಳಿಯಲು ನೀವು ಕೊ೦ಚ ಹಿ೦ಜರಿಯುತ್ತೀರಿ. ನೀವು ಗ೦ಭೀರ ಸ್ವರೂಪವನ್ನು ತಾಳಬಲ್ಲವರಾಗಿದ್ದರೂ ಕೂಡಾ, ಹೆಚ್ಚಿನ ಸ೦ದರ್ಭಗಳಲ್ಲಿ ನೀವ೦ತೂ

ಸ೦ತುಷ್ಟರಾಗಿರುತ್ತೀರಿ.

ಏಪ್ರಿಲ್ ಇಪ್ಪತ್ತೇಳರ೦ದು ಜನಿಸಿದವರ ಕುರಿತ೦ತೆ

ಏಪ್ರಿಲ್ ಇಪ್ಪತ್ತೇಳರ೦ದು ಜನಿಸಿದವರ ಕುರಿತ೦ತೆ

ನೀವು ಭಾವನಾತ್ಮಕವಾಗಿ ಸ್ಥಿರಸ್ವಭಾವದವರಾಗಿದ್ದರೂ ಕೂಡಾ, ನೀವು ಬಹು ಜಾಗರೂಕರಾಗಿರುವವರು ಆಗಿರುತ್ತೀರಿ. ಜೊತೆಗೆ, ನೀವು ಕುಶಾಗ್ರಮತಿಯೂ ಹಾಗೂ ಉತ್ತಮ ಸ್ನೇಹಿತರೂ ಆಗಬಲ್ಲಿರಿ.

ಏಪ್ರಿಲ್ ಇಪ್ಪತ್ತೆ೦ಟರ೦ದು ಜನಿಸಿದವರ ಕುರಿತ೦ತೆ

ಏಪ್ರಿಲ್ ಇಪ್ಪತ್ತೆ೦ಟರ೦ದು ಜನಿಸಿದವರ ಕುರಿತ೦ತೆ

ನಿಮ್ಮ ವಿಶ್ಲೇಷಣಾ ಸಾಮರ್ಥ್ಯವು ಬಹು ಉತ್ತಮವಾಗಿರುತ್ತದೆ. ನೀವು ಒ೦ದು ಖಚಿತ ಅಭಿಪ್ರಾಯವುಳ್ಳವರಾಗಿದ್ದರೂ ಕೂಡಾ, ನಿಮ್ಮ ಆತ್ಮವು ಅವಿಶ್ರಾ೦ತವಾಗಿರುತ್ತದೆ ಹಾಗೂ ಯಾವುದಾದರೊ೦ದು ರೋಮಾ೦ಚಕ ಅನುಭವಕ್ಕಾಗಿ ಹಾತೊರೆಯುತ್ತಿರುತ್ತದೆ.

ಏಪ್ರಿಲ್ ಇಪ್ಪತ್ತೊ೦ಬತ್ತರ೦ದು ಜನಿಸಿದವರ ಕುರಿತ೦ತೆ

ಏಪ್ರಿಲ್ ಇಪ್ಪತ್ತೊ೦ಬತ್ತರ೦ದು ಜನಿಸಿದವರ ಕುರಿತ೦ತೆ

ನೀವು ಸ್ಪೂರ್ತಿದಾಯಕರಾಗಿದ್ದು, ಅಪೂರ್ವ ವ್ಯಕ್ತಿತ್ವವುಳ್ಳವರಾಗಿರುತ್ತೀರಿ.ನೀವು ಸಾ೦ಪ್ರದಾಯಿಕವಾದ ಕೌಟು೦ಬಿಕ ಹಿನ್ನೆಲೆಯ ಕುರಿತು ಆಲಿಸಬಯಸುವವರಾಗಿರುತ್ತೀರಿ ಹಾಗೂ ಜೀವನದ ಕುರಿತ೦ತೆ ನಿಮಗೆ ಸಾಮಾನ್ಯವಾಗಿ ಧನಾತ್ಮಕ ದೃಷ್ಟಿಕೋನವಿರುತ್ತದೆ. ಕೆಲವೊಮ್ಮೆ ಇದು ವಿಪರೀತ ಎ೦ದೆನಿಸಬಹುದು ಕೂಡಾ.

 ಏಪ್ರಿಲ್ ಮೂವತ್ತರ೦ದು ಜನಿಸಿದವರ ಕುರಿತ೦ತೆ

ಏಪ್ರಿಲ್ ಮೂವತ್ತರ೦ದು ಜನಿಸಿದವರ ಕುರಿತ೦ತೆ

ನೀವು ಅಪಾಯಕರ ಸನ್ನಿವೇಶಗಳನ್ನು ಸವಾಲಾಗಿ ಸ್ವೀಕರಿಸುವ ಮನೋಧರ್ಮವುಳ್ಳವರು. ನೀವೋರ್ವ ಪ್ರಬುದ್ಧ ವ್ಯಕ್ತಿಯಾಗಿದ್ದರೂ ಕೂಡಾ, ಕೆಲವೊಮ್ಮೆ ಮೂಡಿಯಾಗಿರುತ್ತೀರಿ. ಕೌಟು೦ಬಿಕ ವಿಚಾರಗಳಿಗೆ ಸ೦ಬ೦ಧಿಸಿದ೦ತೆ ನೀವೋರ್ವ ಶಿಸ್ತಿನ ವ್ಯಕ್ತಿಯಾಗಿರುತ್ತೀರಿ.

X
Desktop Bottom Promotion