ನಿದ್ದೆಯ ಮಾಯಾ ಸ್ವರೂಪ, ಮೈನಡುಗಿಸುವ ಸಂಗತಿ!

ಕೆಲವೊಮ್ಮೆ ಬೆಳಗ್ಗೆದ್ದಾಗ ಮನೆಯವರು ನಾವು ರಾತ್ರಿ ನಿದ್ದೆಯಲ್ಲಿ ನಡೆದದ್ದನ್ನೋ, ಏನೋ ಬಡಬಡಸಿದ್ದನ್ನೋ, ಕನವರಿಸಿದ್ದನ್ನೋ ಹೇಳಿ ಚಕಿತರನ್ನಾಗಿಸುವುದುಂಟು. ಏಕೆಂದರೆ ನಿದ್ದೆಯಲ್ಲಿ ನಡೆದ ಆ ಘಟನೆ ನಮ್ಮ ಅರಿವಿಗೇ ಬಂದಿರುವುದಿಲ್ಲ. ಎಷ್ಟು ನೆನಪು ಮಾಡಿದರೂ ರಾತ್ರಿ ಮಲಗುವ ತನಕ, ಬಳಿಕ ನಿದ್ದೆಯಲ್ಲಿ ಕಂಡ ಕನಸಿನ ತುಣುಕು ಮಿಣುಕು ಘಟನೆಗಳು ಮಾತ್ರ ನೆನಪಿರುತ್ತವೆ.

ಈ ವಿದ್ಯಮಾನವನ್ನು ಗಾಢವಾಗಿ ಅಭ್ಯಸಿಸಿದ ಸಂಶೋಧಕರು ನಮ್ಮ ರಾತ್ರಿಯ ನಡವಳಿಕೆಗಳಿಗೂ ನಮ್ಮ ಜೀವನದಲ್ಲಾದ ಘಟನೆಗಳಿಗೂ, ನಮ್ಮ ಯೋಚನೆಗೂ ನಿಕಟ ಸಂಬಂಧಗಳಿರುವುದನ್ನು ಪತ್ತೆ ಹಚ್ಚಿದ್ದಾರೆ. ಅಯ್ಯೋ ನಿದ್ದೆ ಮಾತ್ರೆಯ ಸಹವಾಸ ಬೇಡಪ್ಪಾ ಬೇಡ!

ಕೆಲವರಿಗೆ ನಿದ್ದೆ ಬರುವುದೇ ಕಷ್ಟಕರವಾಗಿರುವಾಗ (insomnia) ಕೆಲವರು ಮಲಗಿದ ಕೆಲಕ್ಷಣಗಳಲ್ಲಿಯೇ ಗಾಢ ನಿದ್ರೆಗೆ ಜಾರಿರುತ್ತಾರೆ. ಇವೆರಡೂ ವಿಭಾಗಕ್ಕೆ ಸೇರದ ಕೆಲವರಿಗೆ ತಡವಾಗಿ ನಿದ್ದೆ ಬಂದರೂ ಗಾಢ ನಿದ್ರೆಗೆ ಜಾರದೇ ಅರೆನಿದ್ರೆಯಲ್ಲಿರುತ್ತಾರೆ (parasomnia). ಈ ಅವಸ್ಥೆಯಲ್ಲಿಯೇ ವಿಚಿತ್ರ ನಡವಳಿಕೆಗಳು ಹೆಚ್ಚಾಗಿ ಕಂಡು ಬಂದಿವೆ. ಎಲ್ಲರಿಗೂ ಎಲ್ಲಾ ಸಮಯದಲ್ಲಿಯೂ ಗಾಢನಿದ್ದೆ ಅಥವಾ ಅರೆನಿದ್ದೆಯೇ ಆಗಬೇಕೆಂದಿಲ್ಲ. ಅಂದಂದಿನ ಪರಿಸ್ಥಿತಿಗನುಗುಣವಾಗಿ ನಮ್ಮ ನಿದ್ದೆ ಬದಲಾಗುತ್ತಾ ಇರುತ್ತದೆ. ಉದಾಹರಣೆಗೆ ದುಃಖಕರ ಸನ್ನಿವೇಶದಲ್ಲಿ ಮನಸ್ಸು ಆ ಬಗ್ಗೆಯೇ ಯೋಚಿಸುತ್ತಾ ಆ ವಿಷಯಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಹುಡುಕುವುದು ಅಥವಾ ಆ ಕಡೆ ನಡೆಯುವುದು ಮೊದಲಾದವು ನಡೆಯುತ್ತವೆ. ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

ಅಸಮಾಧಾನ, ದುಃಖ, ತನ್ನ ಪ್ರಿಯ ವಸ್ತುವನ್ನು ಅಥವಾ ಪ್ರಿಯ ಜನರನ್ನು ಕಳೆದುಕೊಂಡ ವ್ಯಥೆ, ದೂರ ಹೋದ ಮಕ್ಕಳ ಬಗ್ಗೆ ಚಿಂತೆ, ಕೈಕೊಟ್ಟು ಹೋದ ಪ್ರಿಯಕರ, ನಂಬಿದವರು ಮಾಡಿದ ಮೋಸ, ನೆರವಿಗೆ ಬಾರದ ಸ್ನೇಹಿತ ಮೊದಲಾದ ಸಂದರ್ಭದಲ್ಲಿ ಮನಸ್ಸು ಆ ಬಗ್ಗೆಯೇ ಚಿಂತಿಸುತ್ತಾ ಅರೆನಿದ್ದೆಯಲ್ಲಿ ವಿಚಿತ್ರ ಘಟನೆಗಳಿಗೆ ಕಾರಣವಾಗುತ್ತವೆ. ಕನವರಿಕೆ, ನಡೆಯುವುದು ಸಾಮಾನ್ಯವಾದರೆ ಅಪರೂಪದ ಘಟನೆಯಲ್ಲಿ ದಂಪತಿಗಳ ನಡುವೆ ಸಮಾಗಮವೂ ಆಗುವುದುಂಟು. ಕೆಲವರು ಹೊಡೆದಾಡಿದ್ದೂ ಇದೆ. ಅಂತಹ ಕೆಲವು ವಿಚಿತ್ರ ನಡವಳಿಕೆಗಳನ್ನು ಇಲ್ಲಿ ವಿವರಿಸಲಾಗಿದೆ, ಮುಂದೆ ಓದಿ..

ನಿದ್ದೆಯಲ್ಲೆ ಕಣ್ಣು ಬಿಟ್ಟುಕೊಂಡೇ ಮಾತನಾಡುತ್ತಾರೆ

ನಿದ್ದೆಯಲ್ಲೆ ಕಣ್ಣು ಬಿಟ್ಟುಕೊಂಡೇ ಮಾತನಾಡುತ್ತಾರೆ

ಕೆಲವೊಮ್ಮೆ ಕೆಲವರು ಕಣ್ಣು ಬಿಟ್ಟುಕೊಂಡೇ ಏನೇನೋ ಮಾಡುತ್ತಿರುತ್ತಾರೆ. ಮಾತನಾಡುವುದು, ವಸ್ತುಗಳನ್ನು ಎತ್ತಿಡುವುದು, ನಡೆಯುವುದು ಮೊದಲಾದವು. ಅವರು ಎಚ್ಚರಾಗಿದ್ದಾರೆ ಎಂದುಕೊಂಡು ಏನಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಅವರು ಉತ್ತರಿಸುವುದಿಲ್ಲ ಅಥವಾ ಪ್ರಶ್ನೆಗೆ ಸಂಬಂಧವೇ ಇಲ್ಲದ ಬೇರೇನೋ ವಿಷಯದ ಬಗ್ಗೆ ಮಾತನಾಡುತ್ತಿರುತ್ತಾರೆ. ಚಕಿತರಾಗಿ ಅವರ ಭುಜ ಹಿಡಿದು ಅಲ್ಲಾಡಿಸಿದರೆ ತಡಬಡಿಸಿ ಈಗತಾನೇ ನಿದ್ದೆಯೆಂದ್ದಂತೆ ಆಚೀಚೆ ನೋಡಿ ಏನು? ಎತ್ತ ಎಂದು ಕೇಳಲು ತೊಡಗುತ್ತಾರೆ.

ನಿದ್ದೆಯಲ್ಲೆ ಕಣ್ಣು ಬಿಟ್ಟುಕೊಂಡೇ ಮಾತನಾಡುತ್ತಾರೆ

ನಿದ್ದೆಯಲ್ಲೆ ಕಣ್ಣು ಬಿಟ್ಟುಕೊಂಡೇ ಮಾತನಾಡುತ್ತಾರೆ

hypnagogic jerk ಎಂದು ಮನಃಶಾಸ್ತ್ರಜ್ಞರು ಕರೆಯುವ ಈ ವಿದ್ಯಮಾನ ಸುಮಾರು ಎಪ್ಪತ್ತು ಶೇಖಡಾ ಜನರಲ್ಲಿ ಕಂಡುಬರುತ್ತದೆ. ಆದರೆ ಇದು ಯಾವಾಗ ಹಾಗೂ ಯಾವ ಸಂದರ್ಭದಲ್ಲಿ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಇಲ್ಲದ ಸನ್ನಿವೇಶಗಳನ್ನು ಕಾಣುವುದುಂಟು. ಇದಕ್ಕೆ ಮಿಥ್ಯಾದರ್ಶನ ಅಥವಾ hallucination ಎಂದು ಕರೆಯುತ್ತಾರೆ. ಇದನ್ನು ಅನುಭವಿಸಿದವರು ಶಬ್ದವನ್ನು ಕೇಳಿದ್ದುದಾಗಿ, ಪ್ರಖರ ಬೆಳಕನ್ನು ನೋಡಿದುದಾಗಿ, ಚಳಿಯನ್ನು ಅನುಭವಿಸಿರುವುದಾಗಿ ವಿವರಿಸಿದ್ದಾರೆ. ಆದರೆ ಇವು ಯಾವುವೂ ಅಪಾಯಕಾರಿಯಲ್ಲ. ಆದರೆ ಮೇಲಂತಸ್ತಿನ ಬಾಲ್ಕನಿ, ಬೆಟ್ಟದ ಅಂಚು, ನೀರು ಮೊದಲಾದೆಡೆ ಇರುವಾಗ ಮನೆಯವರು ಕೊಂಚ ಜಾಗ್ರತೆ ವಹಿಸುವುದು ಅಗತ್ಯ.

ನಿದ್ದೆಯಲ್ಲಿಯೇ ಗಬಗಬನೇ ತಿನ್ನುವುದು

ನಿದ್ದೆಯಲ್ಲಿಯೇ ಗಬಗಬನೇ ತಿನ್ನುವುದು

ಕೆಲವರಿಗೆ ರಾತ್ರಿ ನಿದ್ದೆಯಲ್ಲಿದ್ದಾಗಲೇ ಫ್ರಿಜ್ಜಿನಲ್ಲಿಟ್ಟ ಅಥವಾ ಪಾತ್ರೆಯಲ್ಲಿ ಮುಚ್ಚಿಟ್ಟ ಆಹಾರಗಳನ್ನು ತೆಗೆದುಕೊಂಡು ತಿನ್ನುವ ಅಭ್ಯಾಸವಿರುತ್ತದೆ. ಸಾಧಾರಣವಾಗಿ ವಾಸ್ತವ್ಯವಿರುವ ಸ್ಥಳದಲ್ಲಿಯೇ ಈ ವಿದ್ಯಮಾನ ಕಂಡುಬಂದಿರುವುದು ಒಂದು ಸೋಜಿಗ. ಈ ಚಟುವಟಿಕೆಗೆ nocturnal sleep-related eating disorder or NS-RED ಎಂದು ಹೆಸರಿಟ್ಟಿದ್ದಾರೆ. ಇವರು ಎಚ್ಚರವಿದ್ದಾಗ ಎಷ್ಟು ಕರಾರುವಕ್ಕಾಗಿ ಆಹಾರವನ್ನು ಫ್ರಿಜ್ಜಿನಿಂದ ಅಥವಾ ಪಾತ್ರೆಯಿಂದ ತೆಗೆದುಕೊಂಡು ತಿನ್ನುತ್ತಾರೋ ಅಷ್ಟೇ ಕರಾರುವಕ್ಕಾಗಿ ರಾತ್ರಿ ಅರೆನಿದ್ದೆಯಲ್ಲೂ ತೆಗೆದುಕೊಂಡು ತಿನ್ನುವುದನ್ನು ವೈದ್ಯರು ಗಮನಿಸಿದ್ದಾರೆ.

ನಿದ್ದೆಯಲ್ಲಿಯೇ ಗಬಗಬನೇ ತಿನ್ನುವುದು

ನಿದ್ದೆಯಲ್ಲಿಯೇ ಗಬಗಬನೇ ತಿನ್ನುವುದು

ಇನ್ನೊಂದು ಸೋಜಿಗವೆಂದರೆ ಕಬಳಿಸುವ ಆಹಾರದ ಪ್ರಮಾಣ. ಸಾಮಾನ್ಯವಾಗಿ ಸೇವಿಸುವ ಎರಡು ಪಟ್ಟಿಗಿಂತಲೂ ಹೆಚ್ಚು ಇವರು ನಿದ್ದೆಯಲ್ಲಿ ತಿನ್ನುತ್ತಾರೆ! ಆದರೆ ಈ ವ್ಯಾಧಿ ಎಲ್ಲೋ ವರ್ಷದಲ್ಲಿ ಕೆಲವು ದಿನ ಕಂಡುಬಂದರೆ ಬೆರಳೆಣಿಕೆಯಷ್ಟು ಜನರಲ್ಲಿ ಪ್ರತಿದಿನ ಕಂಡುಬರುತ್ತದೆ. ಇವರೆದುರೇ ಎಲ್ಲಾ ಆಹಾರವನ್ನು ಖಾಲಿ ಮಾಡಿ ಪಾತ್ರೆ ತೊಳೆದಿಟ್ಟು ಉಲ್ಟಾ ಮಾಡಿರುವುದನ್ನು ಮನದಟ್ಟು ಮಾಡಿದ ಬಳಿಕ ರಾತ್ರಿ ತಿನ್ನಲು ಏಳದೇ ಇರುವುದು ಸಹಾ ಸಂಶೋಧನೆಗಳಿಂದ ಕಂಡುಬಂದಿದೆ.

ಕನವರಿಕೆ

ಕನವರಿಕೆ

ನಿದ್ದೆಯಲ್ಲಿ ಏನೋ ಬಡಬಡಿಸುವುದು ಸರಿಸುಮಾರು ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಅನುಭವವಾಗಿದೆ. ಕೆಲವೊಮ್ಮೆ ಈ ಮಾತು ಅರ್ಥವಾಗುವ ಭಾಷೆಯಲ್ಲಿದ್ದರೆ ಕೆಲವೊಮ್ಮೆ ಪದಗಳೇ ಅಲ್ಲದ ಏನೇನೋ ಶಬ್ದಗಳನ್ನು ನಮ್ಮ ತುಟಿಗಳು ನುಡಿಯುತ್ತವೆ. ಈ ವಿದ್ಯಮಾನವನ್ನು somniloquy ಎಂದು ವೈದ್ಯರು ಕರೆಯುತ್ತಾರೆ. ಸುಪ್ತ ಮನಸ್ಸಿನಲ್ಲಿ ಅಡಗಿರುವ ಯೋಚನೆಗಳು, ಕನಸಿನಲ್ಲಿ ಕಾಣುತ್ತಿರುವ ಘಟನೆಗಳಿಗೆ ನಾವು ನೀಡುವ ಪ್ರತಿಸ್ಪಂದನೆ, ಹಿಂದಿನ ದಿನ ಯಾರಿಗೋ ಹೇಳಬೇಕಾಗಿದ್ದ ಮಾತುಗಳನ್ನು ಯಾವುದೋ ಕಾರಣದಿಂದ ಹೇಳಲಾಗದೇ ಮನಸ್ಸಿನಲ್ಲಿ ಉಳಿದುಕೊಂಡಿರುವುದು, ಅಗತ್ಯವಾಗಿ ಬೇಕಾಗಿದ್ದ ಮಾಹಿತಿಯೊಂದು ನೆನಪಿನಾಳದಲ್ಲಿ ಹುದುಗಿದ್ದು ಇಡಿಯ ದಿನ ಆ ಮಾಹಿತಿಯನ್ನು ಪಡೆಯಲು ಮಾನಸಿಕವಾಗಿ ಶ್ರಮಿಸಿದ್ದು ಮೊದಲಾದವು ಕನವರಿಕೆಗೆ ಕಾರಣಗಳಾಗಿವೆ.

ಕನವರಿಕೆ

ಕನವರಿಕೆ

ಕೆಲವೊಮ್ಮೆ ಪಾಲಿಗೆ ಅಲಭ್ಯವಾದ ಸುಖ, ವಸ್ತುಗಳು, ಆರೋಗ್ಯ, ಸಂತಾನಭಾಗ್ಯ, ಹಣ, ಮೊದಲಾದವೂ ನಿದ್ದೆಯಲ್ಲಿ ಪದಗಳಾಗಿ ಹೊರಬರುತ್ತವೆ. ಈ ಕನವರಿಕೆ ನಮ್ಮ ಸುಪ್ತ ಮನಸ್ಸಿನಲ್ಲಿದ್ದ ಗೊಂದಲಗಳನ್ನು ಹಾಗೂ ಅನಗತ್ಯವಾದ ಮಾಹಿತಿಯನ್ನು ಹೊರಹಾಕಿ ನಿರಾಳವಾಗುವುದೆಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಅಂದರೆ ಹೊಟ್ಟೆಯಲ್ಲಿದ್ದ ಕಲ್ಮಶಗಳನ್ನು ಹೊರಹಾಕಿದ ಹಾಗೆ. ಅಂದರೆ ಕನವರಿಕೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಯಬಹುದು. ಆದರೆ ಈ ಮಾತುಗಳು ಹೆದರಿಕೆಯಿಂದ ಕಿರಿಚುವ, ಅಳುವ, ನೋವು ತೋರ್ಪಡಿಸುವ ಹಾಗಿದ್ದರೆ ಆ ಪದಗಳ ಮೂಲವನ್ನು ಅರಿಯುವುದು ಹಾಗೂ ತಕ್ಕ ಮನೋಚಿಕಿತ್ಸೆ ಹಾಗೂ ಮನೆಯವರ ಸಹಕಾರ ನೀಡುವುದು ಅಗತ್ಯವಾಗಿದೆ.

X
Desktop Bottom Promotion