Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಸ್ಕೃತಿಯ ಪ್ರತೀಕ -ಹಣೆಯ ಮೇಲಿನ ಪುಟ್ಟ ಸಿಂಧೂರ
ಭಾರತೀಯ ಮಹಿಳೆಯರ ಸಿಂಗಾರವನ್ನು ಕಂಡರೆ ಎದ್ದು ಕಾಣುವುದೆಂದರೆ ಹಣೆಯ ಮೇಲಿರುವ ಪುಟ್ಟ ಸಿಂಧೂರದ ಬೊಟ್ಟು. 'ಅಟ್ಟದ ಮೇಲಿನ ಪುಟ್ಟಲಕ್ಷ್ಮಿ' ಎಂಬ ಗಾದೆಗೆ ಉತ್ತರವಾದ ಈ ಕುಂಕುಮಬೊಟ್ಟು ಸುಮಾರು ಐದು ಸಾವಿರಕ್ಕೂ ಹೆಚ್ಚಿನ ವರ್ಷಗಳಿಂದ ಭಾರತೀಯ ಮಹಿಳೆಯರ ಅಲಂಕಾರವನ್ನು ಹೆಚ್ಚಿಸುತ್ತಾ ಬಂದಿದೆ. ಕುಂಕುಮದ ಚಿಕ್ಕ ಬೊಟ್ಟು ಕೇವಲ ಆಕರ್ಷಣೀಯ ಮಾತ್ರವಲ್ಲ, ಭಾರತೀಯ ಮಹಿಳೆಯ ಸಾಮಾಜಿಕ ಸ್ಥಾನಮಾನವನ್ನೂ ಸೂಚಿಸುವ ಸಂಕೇತವಾಗಿದೆ. ಆರೋಗ್ಯದ ಗುಟ್ಟು ಹಣೆಯ ತಿಲಕದಲ್ಲಿದೆ ಎಂಬುದು ತಿಳಿದಿದೆಯೇ?
ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆ ಮತ್ತು ಫ್ಯಾಷನ್ ಲೋಕದಲ್ಲಿಯೂ ಭಾರತದ ಮಹಿಳೆಯರ ಹಣೆಯನ್ನು ಅಲಂಕರಿಸುವ ಮೂಲಕ ಭಾರತದ ಸಂಕೇತವನ್ನು ವಿಶ್ವಮಟ್ಟದಲ್ಲಿ ಪಸರಿಸಿದೆ. ಸಿಂಧೂರವನ್ನು ಧರಿಸಿ ಹೊರಹೊರಟ ಮಹಿಳೆಯನ್ನು ವಿಶ್ವ ಯಾವ ದೃಷ್ಟಿಯಲ್ಲಿ ನೋಡುತ್ತದೆ? ಈ ಬಗ್ಗೆ ನಿಮಗೆ ಅರಿವಿದೆಯೇ? ಈ ಬಗ್ಗೆ ಹೆಚ್ಚಿನ ವಿವರವನ್ನು ಕೆಳಗಿನ ಸ್ಲೈಡ್ ಶೋ ನೀಡಲಿದೆ...

ಹಣೆಯ ಮೇಲೆ ಧರಿಸುವ ಸಿ೦ಧೂರ
ತಿಲಕ ಜನಪ್ರಿಯ ನ೦ಬಿಕೆಗಳ ಪ್ರಕಾರ, ಸಿ೦ಧೂರ ಅಥವಾ ಕು೦ಕುಮವು ಭಗವತಿಯಾದ ಪಾರ್ವತಿ ಅಥವಾ ಸತಿಯ ಸ೦ಕೇತವಾಗಿದೆ. ಹಿ೦ದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷರಾಶಿಯ ಮನೆಯು ಹಣೆಯ ಮೇಲಿದೆ. ಮೇಷ ರಾಶಿಯ ಅಧಿದೇವತೆಯು ಮ೦ಗಳನಾಗಿದ್ದಾನೆ.

ಹಣೆಯ ಮೇಲೆ ಧರಿಸುವ ಸಿ೦ಧೂರ
ಮ೦ಗಳನ ಬಣ್ಣವು ಕೆ೦ಪು ಆದ್ದರಿ೦ದ, ಅದನ್ನು ಮ೦ಗಳಕರವೆ೦ದು ನ೦ಬಲಾಗುತ್ತದೆ. ಮ೦ಗಳವು ಸೌಭಾಗ್ಯ ಅಥವಾ ಅದೃಷ್ಟದ ಸ೦ಕೇತವು. ಆದ್ದರಿ೦ದ, ಕೆ೦ಪು ಬಣ್ಣವು ಒಳ್ಳೆಯ ಅದೃಷ್ಟದಾಯಕವೆ೦ದು ನ೦ಬಲಾಗಿದೆ.

ಸಾಮಾಜಿಕ ಮತ್ತು ವೈವಾಹಿಕ ಸ್ಥಾನಮಾನ
ತಲತಲಾಂತರದಿಂದ ಭಾರತೀಯ ಮಹಿಳೆಯರು ಸಿಂಧೂರವನ್ನು ತನ್ನ ನಿತ್ಯದ ಅಲಂಕಾರದ ರೂಪದಲ್ಲಿ ಬಳಸುತ್ತಾ ಬಂದಿದ್ದಾರೆ. ವಿಶೇಷವಾಗಿ ಒಟ್ಟು ಹದಿನಾರು ರೂಪದ ಶೃಂಗಾರದ ಬಳಿಕ ಸಂಪನ್ನಗೊಳ್ಳುವ ಪರಿಪೂರ್ಣ ಸೌಂದರ್ಯದಲ್ಲಿ (ಸೋಲಾ ಶೃಂಗಾರ್) ಸಿಂಧೂರಕ್ಕೆ ಪ್ರಥಮ ಸ್ಥಾನವಿದೆ. ಇದು ಕೇವಲ ಸೌಂದರ್ಯವರ್ಧಕ ಮಾತ್ರವಲ್ಲದೇ ಮಹಿಳೆಯ ಸಾಮಾಜಿಕ ಮತ್ತು ವೈವಾಹಿಕ ಸ್ಥಾನಮಾನವನ್ನೂ ತಿಳಿಸುತ್ತದೆ.

ಸಂಸ್ಕೃತದ ಪದ
ಸಿಂಧೂರ ಅಥವಾ ಬಿಂದಿ ಪದ ಸಂಸ್ಕೃತದ 'ಬಿಂದು' ಪದದಿಂದ ಬಂದಿದ್ದಾಗಿದೆ. ಬಿಂದು ಎಂದರೆ ಕನ್ನಡದಲ್ಲಿ ಚುಕ್ಕೆ ಎಂದರ್ಥ. ಇದಕ್ಕೆ ತಿಲಕ, ತಿಲಾಕ, ತಿಲಕಂ, ಟೀಕಾ ಅಥವಾ ಬೊಟ್ಟು ಎಂದೂ ಕರೆಯುತ್ತಾರೆ. ಇದರಲ್ಲಿ ಕೊಂಚ ವ್ಯತ್ಯಾಸವಿದೆ.

ಸಿಂಧೂರದ ಮಹತ್ವ
ಕುಂಕುಮ ಪುಡಿಯನ್ನು ಬಳಸಿ ಹಣೆಯಲ್ಲಿಟ್ಟ ಬೊಟ್ಟನ್ನು ವಿವಾಹಿತ ಸ್ತ್ರೀಯರು ಬಳಸಿದರೆ ಕುಂಕುಮದ ಹೊರತಾದ ಇತರ ವಸ್ತುಗಳಿಂದ ನಿರ್ಮಿಸಿದ ಮತ್ತು ವಿವಿಧ ಬಣ್ಣಗಳ ಬೊಟ್ಟನ್ನು ಅವಿವಾಹಿತ ಸ್ತ್ರೀಯರು ಬಳಸುತ್ತಾರೆ. ಸಾಮಾನ್ಯವಾಗಿ ಇವು ವೃತ್ತಾಕಾರದಲ್ಲಿದ್ದರೆ ತಿಲಕ ಸರಳ ರೇಖೆಯಲ್ಲಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಿಂಧೂರದ ಮಹತ್ವ
ಧಾರ್ಮಿಕವಾಗಿ ಈ ರೇಖೆಗಳು ವ್ಯಕ್ತಿಯ ಸ್ಥಾನಮಾನ ಮತ್ತು ಕೆಲವು ಅರ್ಹತೆಗಳನ್ನೂ ಪ್ರಕಟಿಸುತ್ತವೆ. ಹೆಚ್ಚಿನ ಮಹತ್ವವಿರುವ ಈ ರೇಖೆಗಳಿಗೆ ನಾಮ ಎನ್ನುತ್ತಾರೆ.

ಸಿಂಧೂರದ ಮಹತ್ವ
ಹಿಂದಿನ ಕಾಲದಲ್ಲಿ ಕುಂಕುಮ ಪುಡಿ ಸುಲಭವಾಗಿ ಲಭ್ಯವಿಲ್ಲದಿದ್ದ ಕಾರಣ ವಿವಿಧ ಬಣ್ಣಗಳ ಎಲೆಗಳನ್ನು ವೃತ್ತಾಕಾರವಾಗಿ ಕತ್ತರಿಸಿ (ಕೆಲವೊಮ್ಮೆ ಬೇರೆ ಬೇರೆ ಆಕೃತಿಯಲ್ಲಿ ಸಹಾ) ಹಣೆಯ ಮೇಲೆ ಅಂಟಿಸಲಾಗುತ್ತಿತ್ತು. ಸೌಂದರ್ಯವರ್ಧಕವಾಗಿ ಬಳಸಲ್ಪಡುತ್ತಿದ್ದ ಈ ಎಲೆಗಳನ್ನು ಪತ್ರ ಎಂದು ಕರೆಯಲಾಗುತ್ತಿತ್ತು. ಇದಕ್ಕೆ ಪತ್ರಲೇಖ, ಪತ್ರಮಾಂಜರಿ, ಪತ್ರಛೆಡ್ಯ ಅಥವಾ ಪತ್ರಭಂಗ ಎಂಬ ಹೆಸರುಗಳೂ ಇವೆ.

ಸಿಂಧೂರದ ಮಹತ್ವ
ಅಚ್ಚ ಕುಂಕುಮದ ಪುಡಿ ಕೇವಲ ಸಿಂಧೂರದ ರೂಪದ ಹೊರತಾಗಿ ದೇವರ ಪೂಜೆಗೂ ಬಳಸಲ್ಪಡುತ್ತದೆ. ಹಿಂದೂ ಧರ್ಮದ ಬಹುತೇಕ ಎಲ್ಲಾ ಧಾರ್ಮಿಕ ವಿಧಿಗಳಲ್ಲಿ ಕುಂಕುಮ ಒಂದು ಅನಿವಾರ್ಯ ಸಾಮಾಗ್ರಿಯಾಗಿದೆ. ಅಂತೆಯೇ ಇದು ಪವಿತ್ರವೂ ಆಗಿದೆ. ಇದರ ಜೊತೆಗೇ ಅರಿಶಿನವೂ ಧಾರ್ಮಿಕ ಮಹತ್ವ ಪಡೆದಿದೆ. ಈ ಮಹತ್ವವನ್ನೇ ಕರ್ನಾಟಕದ ಬಾವುಟಕ್ಕೂ ಬಳಸಲಾಗಿದೆ. (ಕರ್ನಾಟಕದ ಬಾವುಟದ ಕೆಂಪು ಮತ್ತು ಹಳದಿ ಬಣ್ಣಗಳು ಅರಿಶಿನ-ಕುಂಕುಮದ ಸಂಕೇತವಾಗಿವೆ)

ಸಿಂಧೂರದ ಮಹತ್ವ
ಕುಂಕುಮವನ್ನು ಅರಿಶಿನದ ಕೊಂಬನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಇದಕ್ಕೆ ಕೊಂಚ ಸುಣ್ಣವನ್ನು ಅಥವಾ ಲಿಂಬೆರಸವನ್ನು ಸೇರಿಸುವ ಮೂಲಕ ಕೆಂಪು ಬಣ್ಣ ಬರಿಸಲಾಗುತ್ತದೆ. ಸನಾತನ ಧರ್ಮದ ಪ್ರತಿ ದೇವತೆ ಮತ್ತು ಧರ್ಮಪೀಠದಲ್ಲಿ ಈ ಕೆಂಪು ಕುಂಕುಮವನ್ನು ಬಳಸಲಾಗುತ್ತದೆ. ಕೆಂಪು ಬಣ್ಣ ವಾಸ್ತವವಾಗಿ ಶಕ್ತಿಯ ಪ್ರತೀಕವಾಗಿದೆ.

ಕುಂಕುಮದ ಮೂಲ
ಪ್ರಾಚೀನ ವರ್ಣಚಿತ್ರಗಳು, ಕಲಾಕೃತಿಗಳು, ರಾಜಸ್ಥಾನಿ ವರ್ಣಚಿತ್ರಗಳು, ಭಾರತದ ಪುರಾತನ ಮಂದಿರಗಳ ಶಿಲ್ಪಗಳು, ಅಜಂತಾ, ಎಲ್ಲೋರಾ ಗುಹೆಗಳ ಒಳಗಿನ ಗೋಡೆಗಳ ಗುಹಾಚಿತ್ರಗಳನ್ನು ಗಮನಿಸಿದರೆ ಮಹಿಳೆಯರ ಹಣೆಯಲ್ಲಿ ಕುಂಕುಮದ ಬೊಟ್ಟು ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇದರ ಜೊತೆಗೆ ಮಹಿಳೆಯರು ತಮ್ಮನ್ನು ಇತರ ಆಭರಣಗಳೊಂದಿಗೆ ಅಲಂಕರಿಸಿಕೊಂಡಿರುವುದನ್ನೂ ಗಮನಿಸಬಹುದು.

ಕುಂಕುಮದ ಮೂಲ
ಅಜಂತಾ ಗುಹೆಗಳಲ್ಲಿ ಹದಿನಾರನೇ ಗುಹೆಯಲ್ಲಿರುವ ಗೋಡೆಯ ಚಿತ್ರವನ್ನು ಗಮನವಿಟ್ಟು ನೋಡಿದರೆ ರಾಜಕುಮಾರಿಯೊಬ್ಬಳು ತನ್ನ ಪರಿಚಾರಿಕೆಯೊಂದಿಗಿದ್ದು ಇಬ್ಬರೂ ಹಣೆಯಲ್ಲಿ ಕುಂಕುಮ ಧರಿಸಿರುವುದನ್ನು ಸ್ಪಷ್ಟವಾಗಿ ನೋಡಬಹುದು.

ಕುಂಕುಮದ ಮೂಲ
ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಪುರಾತನ ಹರಪ್ಪಾ ನಗರದ ಉತ್ಖತನದಲ್ಲಿ ಕಂಡುಬಂದಿರುವ ವಿಗ್ರಹಗಳಲ್ಲಿಯೂ ಮಹಿಳೆಯರ ಬೈತಲೆಯ ನಡುವಿನಲ್ಲಿ ಕುಂಕುಮವಿರುಸುತ್ತಿರುವುದನ್ನು ಕಾಣಲಾಗಿದೆ. ಅಲ್ಲದೇ ಕೆಲವು ಪಾತ್ರೆಗಳೂ ದೊರಕಿದ್ದು ಇದರಲ್ಲಿ ಕುಂಕುಮವಿರಿಸುತ್ತಿದ್ದಿರಬಹುದೆಂದೂ ಅನುಮಾನಿಸಲಾಗಿದೆ.

ಕುಂಕುಮದ ಮೂಲ
ಸಾಮಾನ್ಯವಾಗಿ ವಿವಾಹಿತ ಮಹಿಳೆಯರು ಮಾತ್ರ ಕುಂಕುಮವನ್ನು ಧರಿಸಬೇಕೆಂದು ಹೆಚ್ಚಿನವರು ತಿಳಿದಿರುವ ತಪ್ಪುಕಲ್ಪನೆಯಾಗಿದೆ. ಇದಕ್ಕೆ ಧಾರ್ಮಿಕ ಮಹತ್ವವನ್ನು ನಾವು ಹಾಕಿಕೊಂಡಿದ್ದೇ ಹೊರತು ಯಾವ ಪುರಾಣದಲ್ಲಿಯೂ ಇದನ್ನು ಕಡ್ಡಾಯರೂಪದಲ್ಲಿ ಧರಿಸಬೇಕೆಂದು ತಿಳಿಸಲಾಗಿಲ್ಲ.

ಕುಂಕುಮದ ಮೂಲ
ಅಂತೆಯೇ ಆಧುನಿಕ ಮಹಿಳೆಯರು ಕುಂಕುಮದ ಹೊರತಾಗಿ ತಮ್ಮ ಅಲಂಕಾರಕ್ಕೆ ಪೂರಕದಾವ ಬಣ್ಣದ ಬೊಟ್ಟುಗಳನ್ನು ಧರಿಸುತ್ತಾರೆ. ಅಷ್ಟೇ ಏಕೆ ವಿವಿಧ ಧರ್ಮಕ್ಕೆ ಸೇರಿದ ಮಹಿಳೆಯರು ತಮ್ಮ ಸೌಂದರ್ಯವನ್ನು ವೃದ್ಧಿಸಲು ವಿವಿಧ ಬಣ್ಣ ಮತ್ತು ಆಕಾರದ ಬೊಟ್ಟುಗಳನ್ನು ಧರಿಸುತ್ತಿದ್ದಾರೆ. ಸಾಮಾನ್ಯವಾಗಿ ಭಾರತೀಯ ಸಂಸ್ಕೃತಿಯಲ್ಲಿ ವಿಧವೆಯರು ಕುಂಕುಮ ಬೊಟ್ಟನ್ನು ಧರಿಸುವುದಿಲ್ಲ.



Click it and Unblock the Notifications









