ತರ್ಕಕ್ಕೆ ನಿಲುಕದ್ದು: ಟೀ ಕಪ್‌‪ಗಳು ಭವಿಷ್ಯವೇ ಹೇಳುತ್ತವೆಯಂತೆ!

By Arshad

ಜನರ ಜೊತೆ ಇದ್ದು ನೋಡು, ಚಿನ್ನವನ್ನು ಉಜ್ಜಿ ನೋಡು ಎಂಬ ಉಕ್ತಿಯೊಂದು ಹಿಂದಿ ಭಾಷೆಯಲ್ಲಿದೆ. ಇದರರ್ಥ ಯಾವುದೇ ವ್ಯಕ್ತಿಯನ್ನು ಆತನ ಬಾಹ್ಯರೂಪ ಅಥವಾ ಕ್ಷಣಿಕ ಕಾಲದ ವರ್ತನೆಯಿಂದ ಆತನ ಸ್ವಭಾವವನ್ನು ಅರಿಯಲಾಗದು.

ಆ ವ್ಯಕ್ತಿಯೊಂದಿಗೆ ಇದ್ದು ಆತನ ಇಡಿಯ ದಿನದ ದಿನಚರಿಯನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಆತನ ನಿಜವಾದ ಸ್ವಭಾವವನ್ನು ಅರಿಯಬಹುದು ಎನ್ನುತ್ತದೆ ಈ ಸುಭಾಷಿತ. ಆದರೆ ಆ ವ್ಯಕ್ತಿಯ ಬಗ್ಗೆ ಸಂಪೂರ್ಣವಾಗಿ ಅರಿಯಲು ಒಂದೆರಡು ದಿನ ಸಾಲದು ಬಹುಕಾಲವೇ ಬೇಕು.

ಆದರ ಬದಲಾಗಿ ಆ ವ್ಯಕ್ತಿಯ ಖಾಸಗಿ ವಸ್ತುಗಳನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿದರೆ ಆತನ ಸ್ವಭಾವವನ್ನು ಸ್ಥೂಲವಾಗಿ ಅರಿಯಲು ಸಾಧ್ಯ. ಗಾಂಧೀಜಿಯವರನ್ನು ನೋಡಲು ಬಂದವರಿಗೆ ಅವರ ಚರಕ ಮತ್ತು ಖಾದಿಯ ಬಟ್ಟೆಗಳನ್ನು ನೋಡುತ್ತಿದ್ದಂತೆಯೇ ಅವರ ಸರಳತೆಯ ಬಗ್ಗೆ ಅರಿವಾಗುತ್ತಿತ್ತು.

ಅಂತೆಯೇ ಓರ್ವ ವ್ಯಕ್ತಿಯ ಮನೆಯಲ್ಲಿರುವ ಚಹಾದ ಕಪ್ಪು-ಸಾಸರುಗಳನ್ನು ಗಮನಿಸಿದರೆ ಅವರ ಬಗ್ಗೆ ಕೊಂಚ ಅಭಿಪ್ರಾಯ ಪಡೆಯಬಹುದು. ಇದು ಹೇಗೆ ಎಂಬ ಕುತೂಹಲ ಮೂಡಿತೇ? ಕೆಳಗಿನ ಸ್ಲೈಡ್ ಶೋ ನಿಮ್ಮ ಕುತೂಹಲವನ್ನು ತಣಿಸಲಿದೆ.

ಬಿಳಿಯ ಟೀ ಕಪ್

ಬಿಳಿಯ ಟೀ ಕಪ್

ಸರಳ ವ್ಯಕ್ತಿತ್ವ ಮತ್ತು ಸಾದಾ ಜೀವನವನ್ನು ಬಯಸುವ ವ್ಯಕ್ತಿಗಳು ತಮ್ಮ ಮನೆಯ ಟೀ ಕಪ್ಪುಗಳನ್ನು ಸಾದಾ, ಬಿಳಿಯ ಬಣ್ಣದಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಇವರು ಯಾವುದೇ ಕೆಲಸ ಮಾಡತೊಡಗಬೇಕಾದರೆ ಪೂರ್ವಸಿದ್ಧತೆಗಳನ್ನು ಮಾಡಿಕೊಂಡೇ ತೊಡಗುತ್ತಾರೆ. ಇವರು ಜೀವನವನ್ನು ಪ್ರೀತಿಸುವವರಾಗಿದ್ದು ತಮ್ಮ ನಿಯಮಿತ ಕಾರ್ಯಗಳನ್ನು ತಪ್ಪದೇ ಕರಾರುವಾಕ್ಕಾಗಿ ಮಾಡುವ ನಿಷ್ಠೆಯವರಾಗಿದ್ದಾರೆ. ಇವರು ಅತ್ಯಂತ ಪ್ರಾಮಾಣಿಕರೂ, ಸತ್ಯವಂತರೂ, ಜಗಳಕ್ಕೆ ಒಲ್ಲದವರೂ ಆಗಿದ್ದು ತಮ್ಮ ಭಾವನೆಯ ಏರಿಳಿತಗಳನ್ನು ಸಮರ್ಥವಾಗಿ ನಿಯಂತ್ರಿಸಬಲ್ಲವರಾಗಿದ್ದಾರೆ. ಒಂಟಿತನವನ್ನು ಹೆಚ್ಚು ಇಷ್ಟಪಡುವ ಇವರು ಸಮಾಜದಲ್ಲಿ ಗಣ್ಯರೂ

ಆಗಿರುತ್ತಾರೆ.

ವಿವಿಧ ಬಣ್ಣದ ಕಪ್

ವಿವಿಧ ಬಣ್ಣದ ಕಪ್

ಈ ವ್ಯಕ್ತಿಗಳು ಟೀ ಕುಡಿಯಲು ಕೆಂಪು, ನೀಲಿ, ಕಿತ್ತಳೆ ಅಥವಾ ಹಳದಿ ಬಣ್ಣದ ಟೀ ಕಪ್ಪುಗಳನ್ನು ಬಳಸುತ್ತಿದ್ದರೆ ಇವರು ಸಾಹಸಪ್ರವೃತ್ತಿಯುಳ್ಳವರೂ, ಸಂತೋಷದ ಅತಿರೇಕವನ್ನು ಬಯಸುವವರೂ ಆಗಿದ್ದಾರೆ ಎಂದು ತಿಳಿದುಕೊಳ್ಳಬಹುದು. ಇವರು ಸದಾ ಸಕಾರಾತ್ಮಕವಾಗಿ ಚಿಂತಿಸುವವರಾಗಿದ್ದು ಸದಾ ಜನರ ನಡುವೆ ಇರಲು ಬಯಸುತ್ತಾರೆ. ಒಂಟಿತನ ಇವರಿಗೆ ಸಲ್ಲದು.

Image courtesy - Dailybhaskar

ಗಾಢ ಬಣ್ಣದ ಕಪ್

ಗಾಢ ಬಣ್ಣದ ಕಪ್

ಕಪ್ಪು, ಕಂದು, ಗಾಢ ನೀಲಿ ಮೊದಲಾದ ಬಣ್ಣಗಳ ಕಪ್ಪುಗಳನ್ನು ಹೊಂದಿರುವವರು ಸಾಮಾನ್ಯವಾಗಿ ತೆರೆದ ಮನಸ್ಸಿನವರಾಗಿದ್ದು ಚಂಚಲ ಸ್ವಭಾವದವರಾಗಿರುತ್ತಾರೆ.

Image courtesy - Dailybhaskar

ಗಾಢ ಬಣ್ಣದ ಕಪ್

ಗಾಢ ಬಣ್ಣದ ಕಪ್

ಇವರು ಅತ್ಯಂತ ಪ್ರಾಮಾಣಿಕರೂ ತಮ್ಮ ಕೆಲಸವನ್ನು ಯಾವುದೇ ಪರಿಸ್ಥಿತಿಯಲ್ಲಿ ಮುಗಿಸಿಕೊಡುವವರೂ ಆಗಿದ್ದಾರೆ. ಇವರಿಗೆ ಫಲವಿಲ್ಲದ ಕೆಲಸಗಳು ಎಂದರೆ ಕಿರಿಕಿರಿಯಾಗುತ್ತದೆ.

ಅಂಚುಗಳಲ್ಲಿ ಬಣ್ಣವಿರುವ ವಿನ್ಯಾಸದ ಕಪ್

ಅಂಚುಗಳಲ್ಲಿ ಬಣ್ಣವಿರುವ ವಿನ್ಯಾಸದ ಕಪ್

ಈ ವ್ಯಕ್ತಿಗಳು ವೈವಿಧ್ಯತೆಯನ್ನು ಬಯಸುವವರೂ ಕಡ್ಡಿತುಂಡು ಮಾಡಿದಂತೆ ನೇರನುಡಿಗಳಲ್ಲಿ ಮಾತನಾಡುವವರೂ ಆಗಿರುತ್ತಾರೆ. ಇವರಿಗೆ ಜೀವನವೆಂದರೆ ಹೊಸತನ್ನು ಸದಾ ಸವಿಯುವ ಉತ್ಸಾಹವಾಗಿರುತ್ತದೆ. ಇವರು ಅತಿಶ್ರಮಿಗಳೂ, ಹಿಡಿದ ಕೆಲಸವನ್ನು ಹಟಕಟ್ಟಿ ಮಾಡುವವರೂ ಧೈರ್ಯವಂತರೂ ಆಗಿರುತ್ತಾರೆ.

Image courtesy - Dailybhaskar

 ಕಾರ್ಟೂನು ಚಿತ್ರಗಳ ಪ್ರಿಂಟ್ ಇರುವ ಕಪ್

ಕಾರ್ಟೂನು ಚಿತ್ರಗಳ ಪ್ರಿಂಟ್ ಇರುವ ಕಪ್

ಆನೆಯ ಸೊಂಡಿಲನ್ನೇ ಕಪ್‌ನ ಹಿಡಿಯಾಗಿಸಿರುವಂತಹ ಅಥವಾ ಕಪ್‌ನ ಪಾರ್ಶ್ವದಲ್ಲಿ ನಗೆಬರಿಸುವ ವ್ಯಂಗ್ಯಚಿತ್ರ ಅಥವಾ ಬರವಣಿಗೆ ಇರುವ ಕಪ್‌ಗಳನ್ನು ಇಷ್ಟಪಡುವವರು ಸಾಂಸಾರಿಕ ಕರ್ತವ್ಯಗಳಿಗೆ ಅತಿಹೆಚ್ಚು ಪ್ರಾಮುಖ್ಯತೆ ನೀಡುವವರಾಗಿದ್ದು ತಮ್ಮ ಕುಟುಂಬಕ್ಕೆ ತಮ್ಮೆಲ್ಲಾ ಜೀವನವನ್ನು ಮುಡಿಪಾಗಿರಿಸುತ್ತಾರೆ. ಇವರಿಗೆ ಮಕ್ಕಳೆಂದರೆ ಪಂಚಪ್ರಾಣ..

Image courtesy - Dailybhaskar

ಹೂವಿನ ಮತ್ತು ಎಲೆಗಳ ಚಿತ್ರಗಳಿರುವ ಕಪ್

ಹೂವಿನ ಮತ್ತು ಎಲೆಗಳ ಚಿತ್ರಗಳಿರುವ ಕಪ್

ಈ ವ್ಯಕ್ತಿಗಳು ಕ್ರಿಯಾತ್ಮಕರಾಗಿದ್ದು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮುಗಿಸಬಲ್ಲವರಾಗಿರುತ್ತಾರೆ. ಇವರು ಸದಾ ಬದಲಾವಣೆಯನ್ನು ಬಯಸುತ್ತಿದ್ದು ಒಂದೇ ಕಡೆ ಅಥವಾ ಒಂದೇ ವಿಷಯದ ಮೇಲೆ ಹೆಚ್ಚು ಹೊತ್ತು ತಮ್ಮ ಗಮನವನ್ನು ಇರಿಸಲಾರರು. ವಿವಿಧ ಪ್ರಾಕಾರದ ಕಲೆಗಳಲ್ಲಿ ಇವರಿಗೆ ಅಭಿರುಚಿಯಿದ್ದು ಸ್ನೇಹಿತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಇವರಿಗೆ ಒಂದು ಹವ್ಯಾಸವಾಗಿರುತ್ತದೆ.

Image courtesy - Dailybhaskar

ವಿವಿಧ ಗಾತ್ರ ಮತ್ತು ಆಕಾರಗಳ ಕಪ್

ವಿವಿಧ ಗಾತ್ರ ಮತ್ತು ಆಕಾರಗಳ ಕಪ್

ಜೀವನದ ಕಷ್ಟಕರ ಪ್ರಸಂಗಗಳನ್ನು ಎದುರಿಸುವಲ್ಲಿ ಈ ವ್ಯಕ್ತಿಗಳು ಸಮರ್ಥರಾಗಿದ್ದು ಸದಾ ಸ್ಥಿತಪ್ರಜ್ಞೆಯನ್ನು ಉಳಿಸಿಕೊಳ್ಳುವವರಾಗಿರುತ್ತಾರೆ. ಇವರಲ್ಲಿ ನಾಯಕತ್ವದ ಗುಣವಿದ್ದು ತಮ್ಮ ಕೆಳಗಿನವರಿಂದ ಕೆಲಸ ಮಾಡಿಸಿಕೊಳ್ಳುವುದು ಹೇಗೆಂದು ತಿಳಿದಿರುತ್ತದೆ. ಇವರು ಸಾಮಾನ್ಯವಾಗಿ ಒಂದೇ ಗುರಿಯನ್ನಿಟ್ಟುಕೊಂಡು ಅದನ್ನು ಸಾಧಿಸುವ ಛಲವುಳ್ಳವರಾಗಿರುತ್ತಾರೆ. ತಮ್ಮ ಗುರಿಗೆ ಸಂಬಂಧಿಸದ ವ್ಯಕ್ತಿ ಅಥವಾ ವಿಷಯಗಳಲ್ಲಿ ಇವರು ಮೂಗು ತೂರಿಸಲು ಇಷ್ಟಪಡುವುದಿಲ್ಲ.

X
Desktop Bottom Promotion