For Quick Alerts
ALLOW NOTIFICATIONS  
For Daily Alerts

ವಿಷಕಾರಿ ಕೀಟ - ಜೇಡಗಳ ಕುರಿತಾದ ಮೈ ನವಿರೇಳಿಸುವ ಸಂಗತಿಗಳು

By Arshad
|

ಭಯ, ಇದು ಮೇಲ್ನೋಟಕ್ಕೆ ಒಂದು ತರಹ ಎಂದು ಕಂಡುಬಂದರೂ ಭಯದಲ್ಲಿ ಹಲವಾರು ಪ್ರಕಾರಗಳಿವೆ.ವಿಜ್ಞಾನ ಈ ಭಯಗಳನ್ನೆಲ್ಲಾ ಫೋಬಿಯಾ (phobia) ಎಂಬ ಪದದಲ್ಲಿ ಕೊನೆಗೊಳ್ಳುವಂತೆ ಮೂರು ಪ್ರಮುಖ ವರ್ಗಗಳಲ್ಲಿ ವರ್ಗೀಕರಿಸಿದೆ. ೧) ದೇವರ ಭಯ, ಹಿರಿಯರ ಭಯ, ಶಿಕ್ಷೆಯ ಭಯ, ಕಾನೂನಿನ ಭಯ ಮೊದಲಾದವು ಸಾಮಾಜಿಕ ಭಯಗಳು (Social phobias) ೨)ಕ್ರೂರ ಪ್ರಾಣಿಗಳ, ಹಾವು ಚೇಳುಗಳ, ನೀರಿನ, ಎತ್ತರದ ಭಯ ಮೊದಲಾದವು ಜೀವಭಯವಾಗಿದೆ. ಫೇಸ್‌ ಬುಕ್‌ ರಹಸ್ಯ: ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಏಕೆ?

(Specific phobias), ೩) ಒಂಟಿಯಾಗಿರುವ ಭಯ, ವಿಮಾನವೇರಲು ಭಯ, ಮೆಟ್ಟಿಲಿಳಿಯಲು ಭಯ ಮೊದಲಾದವುಗಳು Agoraphobia ಎಂದು ಕರೆಯಲ್ಪಡುತ್ತದೆ. ಉದಾಹರಣೆಗೆ altitude ಅಂದರೆ ಎತ್ತರ, phobia ಸೇರಿದರೆ Altophobia ಆಗುತ್ತದೆ, ಅಂದರೆ ಎತ್ತರದ ಭಯ (ಕೆಲವರಿಗೆ ನೀರಿನಿಂದ ಭಯವಾಗುತ್ತದೆ, ಅಂದರೆ ಕೆರೆ, ನದಿಗಳನ್ನು ಕಂಡಲ್ಲಿ ಅಲ್ಲ, ಕುಡಿಯುವ, ಸ್ನಾನದ ನೀರಿನಿಂದಲೂ ಅವರು ದಿಗಿಲುಗೊಳ್ಳುತ್ತಾರೆ-hydrophobia)

ಇಂದು ನಾವು ಆಯ್ದುಕೊಂಡಿರುವ ಭಯ ಎಂದರೆ ಜೇಡಗಳ ಕುರಿತಾದ ಭಯ ಅಥವಾ Arachnofobia. ಎಂಟು ಕಾಲುಗಳ, ಬಲೆ ಹೆಣೆದು ತನ್ನ ಆಹಾರವನ್ನು ಬಲಿತೆಗೆದುಕೊಳ್ಳುವ, ಮಿಲನಕ್ಕೆಂದು ಬಂದ ಸಂಗಾತಿಯನ್ನೇ ಕೊಂದು ನುಂಗಿ ನೀರು ಕುಡಿಯುವ ಜೇಡಗಳ ಬಗ್ಗೆ ನಾವು ಅರಿತಿರುವ ಮಾಹಿತಿಗಳಲ್ಲಿ ಉಪಯುಕ್ತ ಮಾಹಿತಿಗಿಂತ ಭಯಭೀತ ಮಾಹಿತಿಗಳೇ ಹೆಚ್ಚಾಗಿವೆ.

ವಾಸ್ತವವಾಗಿ ಎಲ್ಲಾ ಜೇವಿಗಳಿಗೂ ಸೃಷ್ಟಿಕರ್ತನು ನೀಡಿರುವ ಕೊಡುಗೆಗಳಂತೆಯೇ ಜೇಡಕ್ಕೂ ಬಲೆ ಹೆಣೆಯುವ ಮತ್ತು ಹಿಡಿದ ಆಹಾರದಲ್ಲಿ ವಿಷವನ್ನು ತುಂಬಿ ಆ ಕ್ರಿಮಿಯ ಹೊರಕವಚ ಬಿಟ್ಟು ಉಳಿದ ಅಂಗಗಳೆಲ್ಲಾ ದ್ರವವಾದ ನಂತರ ನಾವು ಸ್ಟ್ರಾ ಉಪಯೋಗಿಸಿ ಎಳನೀರು ಕುಡಿಯುವಂತೆ ಹೀರಿ ಟೊಳ್ಳಾದ ಕವಚವನ್ನು ತ್ಯಜಿಸುತ್ತದೆ. ಜೇಡದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಭಯಭೀತರಾಗದಿರಲು ಈ ಲೇಖನದ ಮೂಲಕ ಪ್ರಯತ್ನಿಸಲಾಗಿದೆ. ವಿಶ್ವದಾದ್ಯಂತ ಜನಪ್ರಿಯತೆ ಪಡೆದಿರುವ ಕೋಕಾ ಕೋಲಾ ಯಶಸ್ಸಿನ ಗುಟ್ಟೇನು?

ಜೇಡ ಮಾಂಸಾಹಾರಿಯಾಗಿದೆ

ಜೇಡ ಮಾಂಸಾಹಾರಿಯಾಗಿದೆ

ವಾಸ್ತವವಾಗಿ ಜೇಡ ಬೇಟೆಯಾಡುವುದು ಚಿಕ್ಕ ಪುಟ್ಟ ಕೀಟಗಳನ್ನು ಮಾತ್ರ. ಅಮೆಜಾನ್ ನಲ್ಲಿರುವ ಟೊರಾಂಟುಲ (Goliath Bird-Eating tarantula) ಎಂಬ ಜೇಡ ಸುಮಾರು ಒಂದು ಅಡಿಯಷ್ಟು ಅಗಲವಿದ್ದು ಇದರ ಬಲೆ ಚಿಕ್ಕ ಹಕ್ಕಿಗಳನ್ನೂ ಹಿಡಿಯುವಷ್ಟು ಸಬಲವಾಗಿರುತ್ತದೆ. ಆದರೆ ಭಾರತದಲ್ಲಿ ಇಷ್ಟು ದೊಡ್ಡದಾದ ಜೇಡಗಳಿಲ್ಲ. ಪೀಠಿಕೆಯಲ್ಲಿ ತಿಳಿಸಿದಂತೆ ಜೇಡ ಮಾಂಸಾಹಾರಿಯಾದರೂ ಅದು ಭಕ್ಷಿಸುವುದು ರಕ್ತವನ್ನಲ್ಲ, ಕೀಟಗಳ ಮೃದು ಒಳಭಾಗವನ್ನು. ಹಾಗಾಗಿ ಜೇಡಗಳಿಗಿಂತ ಗಾತ್ರದಲ್ಲಿ ಎಷ್ಟೋ ಸಾವಿರ ಪಟ್ಟು ದೊಡ್ಡದಾಗಿರುವ ಮನುಷ್ಯರು ಜೇಡಕ್ಕೆ ಆಹಾರವಾಗುವ ಸಂಭವವೇ ಇಲ್ಲ. ಹಾಗಾಗಿ ಜೇಡ ಮನುಷ್ಯನಿಗೆ ಬೇಕೆಂದು ಯಾವತ್ತೂ ಕುಟುಕುವುದಿಲ್ಲ. ಕುಟುಕುವುದಿದ್ದರೆ ತನ್ನ ರಕ್ಷಣೆಗೋಸ್ಕರ ಮಾತ್ರ. ಆದರೆ ಜೇಡಗಳು ಸ್ವಜಾತಿ ಭಕ್ಷಕಗಳೂ ಹೌದು.

ಜೇಡ ಬಾಯಿಯ ಮೂಲಕ ದೇಹ ಪ್ರವೇಶಿಸುತ್ತದೆ ಎನ್ನುವುದು ಅಪ್ಪಟ ಸುಳ್ಳು

ಜೇಡ ಬಾಯಿಯ ಮೂಲಕ ದೇಹ ಪ್ರವೇಶಿಸುತ್ತದೆ ಎನ್ನುವುದು ಅಪ್ಪಟ ಸುಳ್ಳು

1993 ರ ಆಸುಪಾಸಿನಲ್ಲಿ ಅಮೇರಿಕಾದ ಖ್ಯಾತ ಪತ್ರಿಕೆಯೊಂದು ಪ್ರತಿಯೊಬ್ಬರೂ ಅಕಸ್ಮಿಕವಾಗಿ (ಅಂದರೆ ರಾತ್ರಿ ಮಲಗಿದ್ದ ವೇಳೆಯಲ್ಲಿ ತೆರೆದ ಬಾಯಿಯ ಮೂಲಕ) ಎಂಟು ಜೇಡಗಳನ್ನು ಭಕ್ಷಿಸುತ್ತಾರೆ ಎಂದು ಪ್ರಕಟಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಸಂಶೋಧನೆ ನಡೆಸಿದ ಹಲವು ವಿಜ್ಞಾನಿಗಳು ಇದು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.

ಜೇಡವನ್ನು ಕಂಡರೆ ಸಾವಿನ ರಾಯಭಾರಿಗಳನ್ನು ಕಂಡಂತಾಗುತ್ತದೆ

ಜೇಡವನ್ನು ಕಂಡರೆ ಸಾವಿನ ರಾಯಭಾರಿಗಳನ್ನು ಕಂಡಂತಾಗುತ್ತದೆ

ಜೇಡದ ವಿಷ ಮನುಷ್ಯನನ್ನು ಕೊಲ್ಲುವಷ್ಟೇನೂ ಭಯಾನಕವಾಗಿಲ್ಲ. ಆದರೆ ಎಂಟು ಕಾಲುಗಳ, ರೋಮಭರಿತ, ಬಲೆ ನೇಯುವ, ನೂರಾರು ಚಲಿಸದ ಕಣ್ಣುಗಳ ಕಪ್ಪಗಿನ ಅದರ ರೂಪವೇ ಭಯಹುಟ್ಟಿಸುವಂತಿದೆ. ಇದೇ ಕಾರಣಕ್ಕಾಗಿ ಜನರು ಭಯಭೀತರಾಗುತ್ತಾರೆ. ಮನುಷ್ಯರನ್ನು ಕಂಡರೆ ಓಡಿ ತಪ್ಪಿಸಿಕೊಳ್ಳಲೆತ್ನಿಸುವ ಜೇಡಕ್ಕೇ ನಮಗಿಂತ ಹೆಚ್ಚಿನ ಭಯವಿದೆ. ನೀವೇ ಅದನ್ನು ಹಿಡಿದು ಅದಕ್ಕೆ ಜೀವಭಯವನ್ನುಂಟುಮಾಡಿದರೆ ಮಾತ್ರ ಅನಿವಾರ್ಯವಾಗಿ ಅದು ತನ್ನ ವಿಷವನ್ನಿಳಿಸುತ್ತದೆ. ಈ ವಿಷದಿಂದ ಅತೀವ ನೋವು, ಜ್ವರ, ನಡುಕ, ವಾಂತಿ ಮೊದಲಾದ ತೊಂದರೆಗಳು ಎದುರಾಗಬಹುದು. ಆದರೆ ಜೇಡದ ಕಡಿತಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ಆದರೂ ಯಾವುದೇ ವಿಷಕಾರಿ ಕೀಟ ಅಥವಾ ಜೀವಿಯನ್ನು ಕೆಣಕದಿರುವಂತೆ ಜೇಡವನ್ನೂ ಕೆಣಕದಿರುವುದೇ ವಾಸಿ.

ಜೇಡದ ಭಯ ಹುಟ್ಟುವುದಕ್ಕಿಂತ ಮೊದಲೇ ಇರುತ್ತದೆ

ಜೇಡದ ಭಯ ಹುಟ್ಟುವುದಕ್ಕಿಂತ ಮೊದಲೇ ಇರುತ್ತದೆ

ಒಂದು ವೇಳೆ ತಾಯಿ ಜೇಡವನ್ನು ಕಂಡರೆ ಹೆದರುವವರಾಗಿದ್ದರೆ ಅವರ ಮಗು ಸಹಾ ಗರ್ಭದಲ್ಲಿದ್ದಾಗಿನಿಂದಲೇ ಈ ಭಯವನ್ನು ಪಡೆದುಕೊಳ್ಳುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಟೊರಾಂಟುಲ ಜೇಡಗಳ ವಯಸ್ಸು ನಲವತ್ತು ವರ್ಷ

ಟೊರಾಂಟುಲ ಜೇಡಗಳ ವಯಸ್ಸು ನಲವತ್ತು ವರ್ಷ

ಹೌದು, ಅಮೇಜಾನ್ ನದಿ ತೀರದಲ್ಲಿ ಕಾಣಸಿಗುವ ಈ ಅತಿದೊಡ್ಡ ಜೇಡಗಳು ಸುಮಾರು ನಲವತ್ತು ವರ್ಷ ಕಾಲ ಬದುಕುತ್ತವೆ. ಆದರೆ ಈ ದೀರ್ಘ ಅವಧಿಯಷ್ಟು ಬದುಕಿ ಬರಬೇಕಾದರೆ ಅದು ತನ್ನನ್ನು ತಿನ್ನಬರುವ ತನ್ನ ಒಡನಾಡಿಗಳನ್ನೇ ತಿಂದು ತೇಗಿರಬೇಕಾಗುತ್ತದೆ. ಕಾಳಿಂಗ ಸರ್ಪಗಳಿಗೂ ಇದು ಅನ್ವಯಿಸುತ್ತದೆ.

ಜೇಡ ಸತ್ತ ಬಳಿಕ ಅವುಗಳ ಕಾಲುಗಳು ಗುಂಗುರು ಕೂದಲಿನಂತೆ ಮಡಚಿಕೊಳ್ಳುತ್ತದೆ

ಜೇಡ ಸತ್ತ ಬಳಿಕ ಅವುಗಳ ಕಾಲುಗಳು ಗುಂಗುರು ಕೂದಲಿನಂತೆ ಮಡಚಿಕೊಳ್ಳುತ್ತದೆ

ಹೌದು, ಜೇಡ ಬದುಕಿದ್ದಾಗ ಮೂಳೆಯಿಲ್ಲದ ಅದರ ಟೊಳ್ಳಾದ ಕಾಲುಗಳ ಒಳಗೆ ದ್ರವ ತುಂಬಿಕೊಂಡಿರುತ್ತದೆ. ಜೇಡ ಸತ್ತ ಬಳಿಕ ಈ ನೀರು ಆವಿಯಾಗಿ ಟೊಳ್ಳಾದ ಕೊಳವೆ ಗುಂಗುರು ಕೂದಲಿನಂತೆ ವಕ್ರವಾಗಿ ಬಾಗುತ್ತದೆ.

ಜೇಡವನ್ನು ಬೆಂಕಿಗೆ ಹಾಕಿದರೆ ಪಟಾಕಿಯಂತೆ ಸಿಡಿಯುತ್ತದೆ

ಜೇಡವನ್ನು ಬೆಂಕಿಗೆ ಹಾಕಿದರೆ ಪಟಾಕಿಯಂತೆ ಸಿಡಿಯುತ್ತದೆ

ಇತರ ಕೀಟಗಳಂತೆ ಜೀಡವೂ ದೃಢವಾದ ಹೊರಕವಚದೊಳಗೆ ಮೃದುವಾದ ಅಂಗಗಳನ್ನು ಹೊಂದಿರುವ ಜೀವಿಯಾಗಿದೆ. ಒಂದು ವೇಳೆ ಜೇಡವನ್ನು ಬೆಂಕಿಗೆ ಹಾಕಿದರೆ ಹೊರಕವಚ ಸುಡುವ ಮುನ್ನ ಒಳಗಣ ಅಂಗಗಳು ಕರಗಿ ಒತ್ತಡ ಹೆಚ್ಚುತ್ತದೆ. ಈ ಒತ್ತಡ ಹೊರಕವಚವನ್ನು ಸೀಳಿ ಹೊರಬರುವುದರಿಂದ ಪಟಾಕಿಯಂತೆಯೇ ಸಿಡಿದ ಸದ್ದು ಬರುತ್ತದೆ, ಆದರೆ ಅಷ್ಟು ದೊಡ್ಡದಾಗಿ ಅಲ್ಲ, ಚಿಕ್ಕದಾಗಿ ಪಿಟ್ ಎನ್ನುತ್ತದೆ. ಜೊತೆಗೇ, ಬಲೆ ಹೆಣೆಯಲು ಸಂಗ್ರಹವಾಗಿದ್ದ ದ್ರವ ಬೆಂಕಿಗೆ ಸುಲಭವಾಗಿ ಹೊತ್ತಿಕೊಳ್ಳುವುದರಿಂದ ಅದು ಹೊತ್ತಿಕೊಂಡು ಉರಿಯುವುದರಿಂದ ಪಟಾಕಿಯಂತಹ ಚಿಕ್ಕ ಸ್ಪೋಟ ಕಾಣಬರುತ್ತದೆ.

ಜೇಡರ ಬಲೆ ಹಳತಾದ ಬಳಿಕ ಜೇಡವೇ ಮತ್ತೆ ತಿನ್ನುತ್ತದೆ

ಜೇಡರ ಬಲೆ ಹಳತಾದ ಬಳಿಕ ಜೇಡವೇ ಮತ್ತೆ ತಿನ್ನುತ್ತದೆ

ಹೌದು, ಒಮ್ಮೆ ಹೆಣೆದ ಬಲೆಯಲ್ಲಿ ಹಲವಾರು ಕೀಟಗಳು ಸಿಕ್ಕಿಬಿದ್ದ ಬಳಿಕ ಅದು ತುಂಡುತುಂಡಾಗಿ ಹೋಗಿ ಕೀಟ ಹಿಡಿಯಲು ಸಿಷ್ಪಲವಾಗುವುದರಿಂದ ಇದನ್ನು ಜೇಡ ಮತ್ತೆ ತಿಂದು ಹೊಸ ಬಲೆಯನ್ನು ನಿರ್ಮಿಸಲು ಅಗತ್ಯವಾದ ಪ್ರೊಟೀನುಗಳನ್ನು ಸಿದ್ಧರೂಪದಲ್ಲಿ ಪಡೆಯುತ್ತದೆ. ಆಗ ಅದು ಸೇವಿಸಿದ ಆಹಾರ ಈ ಕೆಲಸಕ್ಕೆ ಬಳಕೆಯಾಗುವುದು ಉಳಿಯುತ್ತದೆ.

ಪುರುಷರಿಗಿಂತಲೂ ಮಹಿಳೆಯರೇ ಜೇಡಕ್ಕೆ ಹೆಚ್ಚು ಹೆದರುತ್ತಾರೆ

ಪುರುಷರಿಗಿಂತಲೂ ಮಹಿಳೆಯರೇ ಜೇಡಕ್ಕೆ ಹೆಚ್ಚು ಹೆದರುತ್ತಾರೆ

ಒಂದು ಸಮೀಕ್ಷೆಯ ಪ್ರಕಾರ ಈ ಭಯ ಪುರುಷರಿಗಿಂತಲೂ ಮಹಿಳೆಯರಲ್ಲಿ ನಾಲ್ಕು ಪಟ್ಟು ಹೆಚ್ಚು. ವಿಜ್ಞಾನಿಗಳ ಪ್ರಕಾರ ಆನುವಂಶಿಕವಾಗಿ ಬರುವ ಈ ಭಯ ಮಹಿಳೆಯರಲ್ಲಿಯೇ ಹೆಚ್ಚು. ಕೇವಲ ಜೇಡ ಮಾತ್ರವಲ್ಲ, ಇಲಿಯಿಂದ ಹಿಡಿದು ಹುಲಿಯವರೆಗೆ, ಅಷ್ಟೇ ಏಕೆ, ಜಿರಲೆಗೂ ಹೆದರುವವರು ಮಹಿಳೆಯರೇ ಆಗಿದ್ದಾರೆ.

ಶೇ. 95 ರಷ್ಟು ಜೇಡಗಳು ಬಿಸಿಲಿನಲ್ಲಿ ಸತ್ತು ಹೋಗುತ್ತವೆ

ಶೇ. 95 ರಷ್ಟು ಜೇಡಗಳು ಬಿಸಿಲಿನಲ್ಲಿ ಸತ್ತು ಹೋಗುತ್ತವೆ

ಜೇಡಗಳಲ್ಲಿ ದೇಹವನ್ನು ತಂಪುಮಾಡುವ ಯಾವುದೇ ವ್ಯವಸ್ಥೆ ಇಲ್ಲದಿರುವ ಕಾರಣ ಅವು ನೇರಬಿಸಿಲನ್ನು ಸಹಿಸಲಾರವು. ಹಾಗಾಗಿ ಅವು ಕತ್ತಲೆಯ ಮತ್ತು ನೆರಳಿನ ಸ್ಥಳವನ್ನೇ ಆಯ್ದುಕೊಳ್ಳುತ್ತವೆ. ಒಂದು ವೇಳೆ ಜೇಡವೊಂದನ್ನು ಹಿಡಿದು ಬಿಸಿಲಿನಲ್ಲಿ ಬಿಟ್ಟರೆ ಅದು ಕೂಡಲೇ ನೆರಳಿನತ್ತ ಓಡಲು ತೊಡಗುತ್ತದೆ. ಕೆಲನಿಮಿಷಗಳಲ್ಲಿ ನೆರಳು ಸಿಕ್ಕರೆ ಬಚಾವ್, ಇಲ್ಲದಿದ್ದರೆ ಸೂರ್ಯನ ಕಿರಣದಿಂದ ಅದರ ದೇಹ ಬಿಸಿಯಾಗುತ್ತಾ ಕೆಲವು ನಿಮಿಷಗಳಲ್ಲಿಯೇ ಸತ್ತು ಹೋಗುತ್ತದೆ.

ಜೇಡಗಳಲ್ಲಿ 43,678 ಪ್ರಬೇಧಗಳಿವೆ

ಜೇಡಗಳಲ್ಲಿ 43,678 ಪ್ರಬೇಧಗಳಿವೆ

ನೋಡಲು ಒಂದೇ ತರಹ ಕಂಡುಬಂದರೂ ವಿಶ್ವದಲ್ಲಿ ಇದುವರೆಗೆ 43,678 ಜೇಡದ ಪ್ರಬೇಧಗಳನ್ನು ಗುರುತಿಸಲಾಗಿದೆ. ಇತ್ತೀಚೆಗೆ ಗುರುತಿಸಲಾದ ಒಂದು ಜೇಡ ನೋಡಲು ಇರುವೆಯಂತೆಯೇ ಇರುತ್ತದೆ. ಇರುವೆಗೆ ಆರು ಕಾಲುಗಳಿದ್ದರೆ ಈ ಜೇಡಕ್ಕೆ ಎಂಟು ಕಾಲುಗಳಿರುವುದೊಂದೇ ವ್ಯತ್ಯಾಸ. ಆದರೆ ಈ ವ್ಯತ್ಯಾಸ ಗೊತ್ತಿಲ್ಲದ ಇರುವೆಗಳು ಈ ನಯವಂಚಕನನ್ನು ಮನೆಯೊಳಗೆ ಸೇರಿಸಿ ತಮ್ಮ ಸಾವಿಗೆ ತಾವೇ ಕಾರಣವಾಗುತ್ತವೆ.

ಜೇಡಗಳು ಭೂಮಿಯಿಂದ ಎರಡೂವರೆ ಮೈಲಿ ಎತ್ತರದಲ್ಲಿಯೂ ಕಂಡುಬರುತ್ತವೆ

ಜೇಡಗಳು ಭೂಮಿಯಿಂದ ಎರಡೂವರೆ ಮೈಲಿ ಎತ್ತರದಲ್ಲಿಯೂ ಕಂಡುಬರುತ್ತವೆ

ಭೂಮಿಯಿಂದ ಸುಮಾರು ಎರಡೂವರೆ ಮೈಲು ಎತ್ತರದಲ್ಲಿ ಹಾರುತ್ತಿದ್ದ ಬೆಲೂನಿನ ಕ್ಯಾಮೆರಾದಲ್ಲಿ ಜೇಡ ಗಾಳಿಯಲ್ಲಿ ತೇಲುತ್ತಿರುವುದು ಕಂಡುಬಂದು ವಿಜ್ಞಾನಿಗಳ ತಲೆಕೆಡಿಸಿತ್ತು. ಹೌದು, ಭೂಮಿಯ ಸ್ಥಾಯೀವಿದ್ಯುತ್ತಿನ (electrostatic) ಪರಿಣಾಮವನ್ನೇ ಉಪಯೋಗಿಸಿ ಈ ಜೇಡಗಳು ಗಾಳಿಯಲ್ಲಿ ತೇಲುತ್ತಿದ್ದವು. ಇದಕ್ಕೂ ಮೊದಲು ಅವು ತಮ್ಮ ಬಲೆಯನ್ನೇ ಬೆಲೂನಿನಂತೆ ಹಿಗ್ಗಿಸಿ ಗಾಳಿಯ ಮೂಲಕ ಮೇಲೆ ಹಾರುತ್ತಿದ್ದವು ಎಂದು ನಂಬಲಾಗಿತ್ತು. ಆದರೆ ಇವು ಇಷ್ಟು ಮೇಲೆ ಎಕೆ ಬಂದಿವೆ? ಬಿಸಿಲಿಗೆ ಸಲ್ಲದ ಇವು ಯಾವಾಗ ಬಂದವು ಎಂಬ ಪ್ರಶ್ನೆಗಳಿಗೆ ಇನ್ನೂ ಸಮರ್ಪಕ ಉತ್ತರ ಸಿಕ್ಕಿಲ್ಲ.

ಒಂದು ಜಾತಿಯ ಜೇಡ ಬಿಟ್ಟು ಉಳಿದವುಗಳೆಲ್ಲಾ ವಿಷಯುಕ್ತವಾಗಿವೆ

ಒಂದು ಜಾತಿಯ ಜೇಡ ಬಿಟ್ಟು ಉಳಿದವುಗಳೆಲ್ಲಾ ವಿಷಯುಕ್ತವಾಗಿವೆ

ಒಂದು ಜಾತಿಯ ಜೇಡಗಳು (ಇದರಲ್ಲಿ ಏಳು ಪ್ರಜಾತಿಯವನ್ನು ವಿಜ್ಞಾನಿಗಳು ಗುರುತಿಸಿದ್ದಾರೆ-Funnel weaver spiders, jumping spiders, Hairless spider, Ground spiders, House spiders, Cellar spiders, Wolf spiders) ವಿಷ ಹೊಂದಿಲ್ಲ. (ಅಥವಾ ಅತ್ಯಂತ ಕಡಿಮೆ ವಿಷ ಹೊಂದಿದೆ), ಇದು ಬಿಟ್ಟರೆ ಬೇರೆಲ್ಲಾ ಜೇಡಗಳ ವಿಷ ಮನುಷ್ಯರಿಗೆ ಅಪಾಯಕರವಾಗಿದೆ. ಅದರಲ್ಲಿಯೂ "Daddy Long Legs" ಎಂಬ ಪ್ರಬೇಧದ ವಿಷ ಅತ್ಯಂತ ಅಪಾಯಕಾರಿಯಾಗಿದೆ. ಆದರೆ ಈ ಜೇಡದ ಹಲ್ಲುಗಳು ನಮ್ಮ ಚರ್ಮವನ್ನು ಹರಿಯುವಷ್ಟು ಗಟ್ಟಿಯಾಗಿಲ್ಲದ ಕಾರಣ ಮನುಷ್ಯರಿಗೆ ಕಚ್ಚಿ ಅಪಾಯ ಎದುರಾಗುವ ಸಂಭವವಿಲ್ಲ.

ಈ ಕಟ್ಟಡದಲ್ಲಿತ್ತು 107 ಮಿಲಿಯನ್ ಜೇಡಗಳ ಬಲೆ

ಈ ಕಟ್ಟಡದಲ್ಲಿತ್ತು 107 ಮಿಲಿಯನ್ ಜೇಡಗಳ ಬಲೆ

ಅಮೇರಿಕಾದ ಬಾಲ್ಟಿಮೋರ್ ನಗರದಲ್ಲಿರುವ Wastewater Treatment Plant (ತ್ಯಾಜ್ಯ ನೀರು ನಿರ್ವಹಣಾ ಘಟಕ) ಕಟ್ಟಡ ಬಹುಕಾಲ ಮುಚ್ಚಿತ್ತು. ಈ ಅವಧಿಯಲ್ಲಿ ಕಟ್ಟಡವನ್ನು ಆಕ್ರಮಿಸಿಕೊಂಡ ಜೇಡಗಳು ಇಡಿಯ ಒಳಾಂಗಣವನ್ನು ತಮ್ಮ ಬಲೆಗಳಿಂದ ಆವರಿಸಿಬಿಟ್ಟವು. ಒಂದು ಅಂದಾಜಿನ ಪ್ರಕಾರ ಈ ಜೇಡಗಳ ಸಂಖ್ಯೆ 107 ಮಿಲಿಯನ್. ಇದನ್ನು ಕರಾರುವಕ್ಕಾಗಿ ಲೆಕ್ಕ ಹಾಕಿದುದಾದರೂ ಹೇಗೆ? ಇದೂ ಸ್ವಾರಸ್ಯವಾಗಿದೆ. ಎಂಟಮಾಲಜಿ (ಕೀಟಶಾಸ್ತ್ರಜ್ಞರು) ಈ ಬಲೆಗಳ ವಿಸ್ತಾರ ಮತ್ತು ಆಳವನ್ನು ಅಭ್ಯಸಿಸಿ ಪ್ರತಿ ಚದರಡಿ ನೇಯಲು ಎಷ್ಟು ಜೇಡಗಳು ಅಗತ್ಯವಿದೆ ಎಂದು ಲೆಕ್ಕ ಹಾಕಿ ಈ ಅಂಕಿ ಅಂಶಗಳನ್ನು ನೀಡಿದ್ದಾರೆ.

ಜೇಡಗಳ ಪ್ರಥಮ ಮಿಲನವೇ ಕಡೆಯ ಮಿಲನವೂ ಆಗಿದೆ

ಜೇಡಗಳ ಪ್ರಥಮ ಮಿಲನವೇ ಕಡೆಯ ಮಿಲನವೂ ಆಗಿದೆ

ಕೆಲವು ಪ್ರಬೇಧಗಳಲ್ಲಿ ಪ್ರಥಮ ಮಿಲನದ ಬಳಿಕ ಗಂಡು ಜೇಡ ತನ್ನ ಜನನಾಂಗವನ್ನು ಹೆಣ್ಣಿನ ಜನನಾಂಗದೊಡನೇ ಬಿಟ್ಟುಬಿಡುತ್ತದೆ ಹಾಗೂ ಉಳಿದ ಜೀವಮಾನವಿಡೀ ಷಂಡನಾಗಿ ಬದುಕುತ್ತದೆ.

ಜಪಾನಿನ ಒಂದು ಕಾಳಗಕ್ಕೆ ಜೇಡದ ಹೆಸರಿದೆ

ಜಪಾನಿನ ಒಂದು ಕಾಳಗಕ್ಕೆ ಜೇಡದ ಹೆಸರಿದೆ

ಸಾಮಾನ್ಯವಾಗಿ ಜೇಡಗಳು ಜಗಳವಾಡುವುದಿಲ್ಲ. ಇವನ್ನು ಜಗಳವಾಡಲು ಬಿಟ್ಟು ಅಂಕ ನಡೆಸುವುದೂ ಇಲ್ಲ. ಆದರೂ ಜಪಾನ್, ಸಿಂಗಪುರ ಮತ್ತು ಫಿಲಿಪ್ಪೀನ್ಸ್ ದೇಶದಲ್ಲಿ ಜನರು ಇವುಗಳನ್ನು ಜಗಳವಾಡಲು ಪ್ರೇರೇಪಿಸಿ ಜುಗಾರಿ ನಡೆಸುತ್ತಾರೆ.

ಈ ಜಗತ್ತಿನಲ್ಲಿ ಅಂಟಾಕ್ಟಿಕಾದಲ್ಲಿ ಮಾತ್ರ ಜೇಡ ಇಲ್ಲ

ಈ ಜಗತ್ತಿನಲ್ಲಿ ಅಂಟಾಕ್ಟಿಕಾದಲ್ಲಿ ಮಾತ್ರ ಜೇಡ ಇಲ್ಲ

ಅತ್ಯಂತ ಶೀತಲ ಪ್ರದೇಶವಾದ ಅಂಟಾರ್ಕ್ಟಿಕಾದಲ್ಲಿ ಮಾತ್ರ ಜೇಡವನ್ನು ವಿಜ್ಞಾನಿಗಳು ಕಂಡಿಲ್ಲ. ಆದರೆ ಸರಿಸುಮಾರು ಇಷ್ಟೇ ತಣ್ಣಗಿರುವ ಸೈಬೀರಿಯಾದಲ್ಲಿ ಜೇಡಗಳಿವೆ (siberian spider). ಅಂದರೆ ಇದುವರೆಗೆ ಯಾವುದೇ ಹಡಗಿನ ಮೂಲಕ ಜೇಡ ಅಲ್ಲಿ ತಲುಪಿಯೇ ಇಲ್ಲವೆಂದಾಯ್ತು, ಮುಂದಿನ ದಿನಗಳಲ್ಲಿ ಹೀಗಾಗಬಾರದು ಎಂದೇನಿಲ್ಲ.

ಜೇಡಗಳಿಗೆ ನಾಲ್ಕು ಜೋಡಿ ಕಣ್ಣುಗಳಿವೆ

ಜೇಡಗಳಿಗೆ ನಾಲ್ಕು ಜೋಡಿ ಕಣ್ಣುಗಳಿವೆ

ಜೇಡಗಳ ಕಣ್ಣಿನಲ್ಲಿ ಗುಡ್ಡೆಗಳಿಲ್ಲ, ನಾವು ಕಣ್ಣುಗುಡ್ಡೆಗಳನ್ನು ಆಚೀಚೆ ಚಲಿಸಿ ನೋಡುವಂತೆ ಜೇಡಗಳಿಗೆ ಸಾಧ್ಯವಿಲ್ಲ. ಅಂತೆಯೇ ನಿಸರ್ಗ ಅವುಗಳಿಗೆ ನಾಲ್ಕು ಜೋಡಿ ಚಲಿಸದ ಕಣ್ಣುಗಳನ್ನು ನೋಡಿದೆ. ಎರಡು ಮುಂದೆ ನೋಡಿದರೆ ಪಕ್ಕದ ಇನ್ನೆರಡು ಎಡ ಮತ್ತು ಬಲಭಾಗದ ದೃಶ್ಯಗಳನ್ನು ನೋಡುತ್ತವೆ. ಈ ನೋಟವೇ ಭಯ ಹುಟ್ಟಿಸುತ್ತದೆ.

ಜೇಡ ಘನ ಆಹಾರವನ್ನು ತಿನ್ನಲಾದರು

ಜೇಡ ಘನ ಆಹಾರವನ್ನು ತಿನ್ನಲಾದರು

ಹೌದು, ಜೇಡಕ್ಕೆ ಹಲ್ಲುಗಳಿಲ್ಲ, ಪೀಠಿಕೆಯಲ್ಲಿ ತಿಳಿಸಿದಂತೆ ತನ್ನ ಆಹಾರದೊಳಗೆ ವಿಷ ಸ್ರವಿಸಿ ಅದು ದ್ರವವಾದ ಬಳಿಕ ಹೀರಿ ಕುಡಿಯುವುದೇ ಜೇಡದ ಆಹಾರ ಕ್ರಮವಾಗಿದೆ.

ಜೇಡದ ರಕ್ತ ನೀಲಿ ಬಣ್ಣದ್ದಾಗಿದೆ

ಜೇಡದ ರಕ್ತ ನೀಲಿ ಬಣ್ಣದ್ದಾಗಿದೆ

ಜೇಡದ ರಕ್ತದಲ್ಲಿ ಬಹುತೇಕ ಕಬ್ಬಿಣದ ಅಂಶವಿರುವುದರಿಂದ ತೆಳುನೀಲಿ ಬಣ್ಣ ಹೊಂದಿರುತ್ತದೆ.

ಜೇಡನ ಬಲೆಯ ಬಗ್ಗೆ ಕೆಲವು ಮಾಹಿತಿಗಳು

ಜೇಡನ ಬಲೆಯ ಬಗ್ಗೆ ಕೆಲವು ಮಾಹಿತಿಗಳು

* ಜೇಡನ ಬಲೆ ಅದೇ ಗಾತ್ರದ ಉಕ್ಕಿನ ಎಳೆಗಿಂತ ದುಪ್ಪಟ್ಟು ಬಲಶಾಲಿಯಾಗಿದೆ

* ಜೇಡನ ಬಲೆ ಯಾವುದೇ ಅಲೋಹಗಳಿಗಿಂತ ಎಂಟುನೂರು ಪಟ್ಟು ಹೆಚ್ಚು ಸಮರ್ಥವಗಿ ಶಾಖವನ್ನು ಸಾಗಿಸಬಲ್ಲದು

* ಜೇಡನ ಬಲೆಗೆ ಜೇಡನ ಕಾಲು ಅಂಟಿಕೊಳ್ಳುವುದಿಲ್ಲ.

* ಜೇಡನ ಬಲೆಯ ಎಳೆಯನ್ನು ಎಳೆದರೆ ಮೂಲ ಉದ್ದದ ಐದು ಪಟ್ಟು ಹಿಗ್ಗಿದ ಬಳಿಕವೇ ತುಂಡಾಗುತ್ತದೆ.

* -40 ಡಿಗ್ರಿಯಿಂದ ಹಿಡಿದು 220 ಡಿಗ್ರಿ ಸೆಲ್ಸಿಯಸ್ ವರೆಗಿನ ತಾಪಮಾನವನ್ನು ತಾಳಿಕೊಳ್ಳಬಲ್ಲದು

* ಇಂಡೋ ಪೆಸಿಫಿಕ್ ಸಾಗರದ ಮೀನುಗಾರರು ಚಿಕ್ಕ ಮೀನುಗಳನ್ನು ಹಿಡಿಯಲು ಜೇಡರ ಬಲೆಯನ್ನು ಉಪಯೋಗಿಸುತ್ತಾರೆ.

English summary

Arachnofobic Facts About Spiders

Nobody will ever be surprised if you say you are afraid of spiders, many people feel the same. It’s not like being afraid of new potatoes, for example. Spiders are really frightening… The purpose of this post is not to overcome this fear but to learn more about the little creature that has an enourmous power over your mind.
X
Desktop Bottom Promotion