Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಮುದ್ದಿನ ಮಗಳಿಗೆ ತಂದೆ ಹೇಳುವ 5 ಕಿವಿಮಾತುಗಳೇನು?
ಬಾಲ್ಯವೆಂಬುದು ಅತ್ಯಂತ ಸುಮಧುರ, ಮುಗ್ಧತೆಯ ದಿನಗಳು. ಈ ದಿನಗಳಲ್ಲಿ ಪಾಲಕರು ಮತ್ತು ಶಿಕ್ಷಕರು ನೀಡುವ ಶಿಕ್ಷಣ ಮತ್ತು ಹಿತವಚನಗಳು ಅವರ ಜೀವನವನ್ನು ರೂಪಿಸುತ್ತವೆ. ಯಾವುದೇ ಮನೆಯಲ್ಲಿ ಗಂಡು ಮಕ್ಕಳು ಅಮ್ಮನಿಗೆ ಪ್ರಿಯವಾಗಿದ್ದರೆ ಹೆಣ್ಣು ಮಕ್ಕಳು ತಂದೆಗೆ ಹೆಚ್ಚು ಆಪ್ತರಾಗಿರುತ್ತಾರೆ.
ಮಕ್ಕಳನ್ನು ಕುರಿತು ಅಪ್ಪ ಅಮ್ಮನ ನಡುವೆ ಜಗಳವಾದರೂ ಅಪ್ಪ ಮಗಳ ಪರ ವಹಿಸಿ ಮಾತನಾಡಿದರೆ ಅಮ್ಮ ಮಗನ ಪರ ವಹಿಸಿಯೇ ಮಾತನಾಡುತ್ತಾರೆ. ಮಕ್ಕಳು ಬೆಳೆಯುತ್ತಾ ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಅಪ್ಪ ಅಮ್ಮಂದಿನ ಜವಾಬ್ದಾರಿಯೂ ಹೆಚ್ಚುತ್ತಾ ಹೋಗುತ್ತದೆ. ಹಣ್ಣುಮಕ್ಕಳ ದೇಹದಲ್ಲಾಗುವ ಪ್ರಕೃತಿ ಬದಲಾವಣೆಯ ಬಗ್ಗೆ ತಾಯಿ ತಿಳಿಹೇಳುವ ಪರಿಯಲ್ಲಿ ಇನ್ನಾರೂ ಹೇಳಲು ಸಾಧ್ಯವಿಲಬಾಲ್ಯವೆಂಬುದು ಅತ್ಯಂತ ಸುಮಧುರ, ಮುಗ್ಧತೆಯ ದಿನಗಳು.
ಈ ದಿನಗಳಲ್ಲಿ ಪಾಲಕರು ಮತ್ತು ಶಿಕ್ಷಕರು ನೀಡುವ ಶಿಕ್ಷಣ ಮತ್ತು ಹಿತವಚನಗಳು ಅವರ ಜೀವನವನ್ನು ರೂಪಿಸುತ್ತವೆ. ಯಾವುದೇ ಮನೆಯಲ್ಲಿ ಗಂಡು ಮಕ್ಕಳು ಅಮ್ಮನಿಗೆ ಪ್ರಿಯವಾಗಿದ್ದರೆ ಹೆಣ್ಣು ಮಕ್ಕಳು ತಂದೆಗೆ ಹೆಚ್ಚು ಆಪ್ತರಾಗಿರುತ್ತಾರೆ. ಮಕ್ಕಳನ್ನು ಕುರಿತು ಅಪ್ಪ ಅಮ್ಮನ ನಡುವೆ ಜಗಳವಾದರೂ ಅಪ್ಪ ಮಗಳ ಪರ ವಹಿಸಿ ಮಾತನಾಡಿದರೆ ಅಮ್ಮ ಮಗನ ಪರ ವಹಿಸಿಯೇ ಮಾತನಾಡುತ್ತಾರೆ.
ಮಕ್ಕಳು ಬೆಳೆಯುತ್ತಾ ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಅಪ್ಪ ಅಮ್ಮಂದಿನ ಜವಾಬ್ದಾರಿಯೂ ಹೆಚ್ಚುತ್ತಾ ಹೋಗುತ್ತದೆ. ಹಣ್ಣುಮಕ್ಕಳ ದೇಹದಲ್ಲಾಗುವ ಪ್ರಕೃತಿ ಬದಲಾವಣೆಯ ಬಗ್ಗೆ ತಾಯಿ ತಿಳಿಹೇಳುವ ಪರಿಯಲ್ಲಿ ಇನ್ನಾರೂ ಹೇಳಲು ಸಾಧ್ಯವಿಲ್ಲ. ಆದರೆ ಮಗಳು ಈಗಲೂ ಅಪ್ಪನ ಮುದ್ದಿನ ಕೂಸು.

ಜೀವನದಲ್ಲಿ ಹೇಗೆ ಮುನ್ನಡಿಯಿಡಬೇಕು ಎಂಬ ಬಗ್ಗೆ ತಾಯಿಗಿಂತಲೂ ತಂದೆಯೇ ತಿಳಿಹೇಳಲು ಇಚ್ಛಿಸುತ್ತಾರೆ. ಹದಿಹರೆಯದಲ್ಲಿರುವ ಮಗಳಿನ ಬಗ್ಗೆ ಕಾಳಜಿ ವಹಿಸುವಲ್ಲಿ ಹಲವು ಕಟ್ಟುಪಾಡುಗಳನ್ನು ಅವರು ಹೇರುತ್ತಾರೆ. ಉದಾಹರಣೆಗೆ ಮಗಳು ಹುಡುಗರೊಡನೆ ಸ್ನೇಹದಿಂದಿರುವ ಸಮಯವನ್ನು ಮೊಟಕುಗೊಳಿಸುವುದು, ಎಲ್ಲಿ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂದು ಸೂಚಿಸುವುದು, ಮಗಳಿಗೆ ಸೂಕ್ತ ವರದನ್ನು ಹುಡುಕಿ ಮದುವೆಯನ್ನು ತಾನೇ ನಿಶ್ಚಯಿಸುವುದು ಮೊದಲಾದವು. ಆದರೆ ಇಂದಿನ ಯುವತಿಯರು ಹೆಚ್ಚಿನ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಸಮಾಜದಲ್ಲಿ ಪುರುಷನಿಗೆ ಸರಿಸಮನಾಗಿ ನಿಲ್ಲಲು ಬಯಸುತ್ತಾರೆ. ತಮ್ಮ ಮೆಚ್ಚಿನ ಸಂಗಾತಿಯೊಡನೆ ಬಾಳು ನಡೆಸಲು ಹಾತೊರೆಯುತ್ತಾರೆ.
ಒಂದು ವೇಳೆ ಈ ಆಯ್ಕೆ ಮತ್ತು ತಂದೆಯ ಆಯ್ಕೆ ಬೇರೆಯಾಗಿದ್ದರೆ ಕಲಹ ಪ್ರಾರಂಭವಾಗುತ್ತದೆ. ವಿಶೇಷವಾಗಿ ಭಾರತದಲ್ಲಿ ತಂದೆಯರು ತಮ್ಮ ಮಗಳ ಹಿತವನ್ನು ತನ್ನಷ್ಟು ಚೆನ್ನಾಗಿ ಕಾಪಾಡಲು ಇತರರಿಂದ ಸಾಧ್ಯವಿಲ್ಲ ಎಂದು ನಂಬಿದ್ದಾರೆ. ಈ ನಂಬಿಕೆಯಲ್ಲಿಯೇ ಕೆಲವು ಹಿತವಚನಗಳನ್ನು ತಮ್ಮ ಮಗಳಿಗೆ ನೀಡುತ್ತಾರೆ. ಈ ಹಿತವಚನಗಳಲ್ಲಿ ಪ್ರಮುಖವಾದ ಐದನ್ನು ಇಲ್ಲಿ ವಿವರಿಸಲಾಗಿದೆ. ಕಾಲೇಜ್ ಲೈಫ್: ಜೀವನದಲ್ಲಿ ಎಂದೂ ಮರೆಯಲಾಗದ ಸವಿ ನೆನಪು!
ಹುಡುಗರೊಡನೆ ಒಡನಾಟವೇನಿದ್ದರೂ ಹದಿನೆಂಟು ತುಂಬಿದ ಬಳಿಕ
ಹದಿಹರೆಯದ ಹುಡುಗಿಯ ಮನಸ್ಸು ಪ್ರಲೋಭನೆಗೆ ಸುಲಭವಾಗಿ ಒಳಗಾಗುತ್ತದೆ. ಇದನ್ನು ಚೆನ್ನಾಗಿ ಅರಿತಿರುವ ತಂದೆಯರು ತಮ್ಮ ಮಕ್ಕಳ ಹಿತ ಕಾಪಾಡಲು ಹುಡುಗರೊಡನೆ ಬೆರೆಯುವುದನ್ನೇ ತಡೆಯುತ್ತಾರೆ. ಹುಡುಗರೊಡನೆ ಓಡಾಡಲು ನಿನಗಿನ್ನೂ ವಯಸ್ಸು ಚಿಕ್ಕದು, ನಿನಗೆ ಹದಿನೆಂಟಾದ ಬಳಿಕ ಸ್ನೇಹ ಮಾಡುವಿಯಂತೆ, ಈಗ ಸ್ವಲ್ಪ ತಾಳ್ಮೆ ಇರಲಿ ಎಂದು ಅವರು ತಮ್ಮ ಮಗಳಿಗೆ ಹಿತವಚನ ನೀಡುತ್ತಾರೆ.
ಸೂರ್ಯ ಮುಳುಗುವ ಮುನ್ನ ನೀನು ಮನೆಯಲ್ಲಿರಬೇಕು
ಇನ್ನೂ ಕೊಂಚ ಕಟ್ಟುನಿಟ್ಟು ವಹಿಸುವ ತಂದೆಯರು ಸೂರ್ಯ ಮುಳುಗುವ ಮುನ್ನ ಮನೆಯಲ್ಲಿರಬೇಕು, ಇಲ್ಲದಿದ್ದರೆ ನಿನ್ನನ್ನು ಕರೆದುಕೊಂಡು ಬರಲು ನಾವೇ ಯಾರಾದರೊಬ್ಬರು ಬರುತ್ತೇವೆ ಎಂದು ಕಟ್ಟಪ್ಪಣೆ ಮಾಡುತ್ತಾರೆ. ಮಗಳನ್ನು ಒಂಟಿಯಾಗಿ ತಿರುಗಲು ಬಿಡದೇ ಮನೆಯವರಲ್ಲೊಬ್ಬರನ್ನು ಜೊತೆಗೆ ಕಳುಹಿಸುತ್ತಾರೆ. ಸಂತೋಷಕೂಟ, ವಿಹಾರಕೂಟಗಳಲ್ಲಿ ತಡವಾಗುವಂತಿದ್ದರೆ ಹೋಗುವುದೇ ಬೇಡ ಎಂದು ತಡೆಯೊಡ್ಡುತ್ತಾರೆ. ಒಂದು ವೇಳೆ ಹೋದರೂ ಸ್ನೇಹಿತೆಯರೊಡನೇ ಇರಬೇಕು, ಹುಡುಗರ ಸಂಗ ಮಾಡಬಾರದು ಎಂದು ಕಟ್ಟಪ್ಪಣೆ ಮಾಡಿಯೇ ಕಳುಹಿಸುತ್ತಾರೆ. ಯುವಜನರ ಹಾಟ್ ಫೇವರೆಟ್ ಬೀದಿ ಬದಿ ಪಾನಿಪೂರಿಯ ವೈಶಿಷ್ಟ್ಯವೇನು?
ಅವನು ನಿನಗೆ ತಕ್ಕವನಲ್ಲ
ಒಂದು ವೇಳೆ ಮಗಳು ತನ್ನ ಬಾಳಸಂಗಾತಿಯನ್ನು ತಾನೇ ಆರಿಸಿ ಒಪ್ಪಿಗೆಗಾಗಿ ತಂದೆಯ ಬಳಿ ಬಂದಾಗ ಹುಡುಗನ ಬಗ್ಗೆ ವಿಚಾರಿಸದೇ ಮೊತ್ತ ಮೊದಲು ನೀಡುವ ಪ್ರತಿಕ್ರಿಯೆ ಎಂದರೆ ' ಅವನು ನಿನಗೆ ತಕ್ಕವನಲ್ಲ'. ನಿನಗೆ ಇವನಿಗಿಂತಲೂ ಒಳ್ಳೆಯ ಚಿನ್ನದಂತಹ ಹುಡುಗನನ್ನು ನಾನು ಹುಡುಕುತ್ತೇನೆ, ಇವನಲ್ಲಿ ಏನಿದೆ ಎಂದು ಆರಿಸಿದ್ದೀಯಾ ಎಂದೆಲ್ಲಾ ಮಗಳ ಆಯ್ಕೆಯನ್ನೇ ತಿರಸ್ಕರಿಸುತ್ತಾರೆ.
ವಿದೇಶಕ್ಕೆ ಹೋದರೇನೇ ಜೀವನದಲ್ಲಿ ಉತ್ತಮ ಸಾಧನೆ ಸಾಧ್ಯ
ಹೆಚ್ಚಿನ ತಂದೆಯರು ತಮ್ಮ ಮಗಳು ಉತ್ತಮ ವ್ಯಾಸಾಂಗ ಪಡೆದು ವಿದೇಶಕ್ಕೆ ಹಾರಿದರೇ ಉತ್ತಮ ವೇತನ ಮತ್ತು ಉತ್ತಮ ಜೀವನ ಲಭ್ಯವಾಗುತ್ತದೆ ಎಂದು ನಂಬಿದ್ದಾರೆ. ಇದನ್ನು ತಮ್ಮ ಮಾತುಗಳು ಮತ್ತು ಕ್ರಿಯೆಗಳಲ್ಲಿ ಸಾರಿ ಸಾರಿ ಹೇಳುತ್ತಿರುತ್ತಾರೆ. ಆದರೆ ಹೆಚ್ಚಿನ ಯುವತಿಯರು ತಂದೆಯ ಮಾತನ್ನು ಗಂಭೀರವಾಗಿ ಪರಿಗಣಿಸದೇ ತಮಗೆ ಅತ್ಯುತ್ತಮ ಎನಿಸಿದ ಮಾರ್ಗವನ್ನೇ ಆಯ್ದುಕೊಳ್ಳುತ್ತಾರೆ.
ಸ್ವಲ್ಪ ನಿನ್ನ ಹಿರಿಯರನ್ನು ನೋಡಿ ಕಲಿತುಕೋ
ಎಲ್ಲಾ ತಂದೆಯರು ತಮ್ಮ ಮಗಳಿಗೆ ಹೇಳುವ ಮಾತಿದು. ನೀನು ಏನು ಮಾಡುವ ಮೊದಲೂ ನಿನ್ನ ಹಿರಿಯರು ಏನು ಮಾಡುತ್ತಿದ್ದಾರೆ ಎಂದು ನೋಡು, ಅವರನ್ನು ನೋಡಿ ಕಲಿತುಕೋ ಎಂಬ ಹಿತವಚನ ನೀಡುತ್ತಾರೆ. ಚಿಕ್ಕವಯಸ್ಸಿನಲ್ಲಿ ಇದು ಚೆನ್ನಿತ್ತು ಆದರೆ ಪ್ರಬುದ್ಧರಾದ ಬಳಿಕ ಸ್ವಂತವಾಗಿ ಯೋಚಿಸಲು ಸಾಮರ್ಥ್ಯ ಪಡೆದ ಮೇಲೂ 'ಹಿರಿಯಕ್ಕನ ಚಾಳಿ ಮನೆಮಂದಿಯೆಲ್ಲಾ ಅನುಸರಿಸಬೇಕೇ?' ಎಂದು ಇಂದಿನ ಯುವತಿಯರು ಪ್ರಶ್ನಿಸುತ್ತಾರೆ.



Click it and Unblock the Notifications
