Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಂಗುಬಡಿಸುವ ವಿಜ್ಞಾನದ ಆವಿಷ್ಕಾರಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು!
"ಏನೇನನ್ನು ಕಂಡುಹಿಡಿಯಬೇಕಾಗಿತ್ತೋ ಅದನ್ನೆಲ್ಲಾ ಕಂಡುಹಿಡಿದಾಗಿದೆ, ಇನ್ನು ಏನನ್ನೂ ಕಂಡುಹಿಡಿಯಬೇಕಾಗಿಲ್ಲ" ಈ ಮಾತನ್ನು ಹೇಳಿದವರು ಚಾರ್ಲ್ಸ್ ಹೆಚ್ ಡ್ಯೂಯೆಲ್, ಅದೂ 1899ರಲ್ಲಿ. ಆದರೆ ವಿಜ್ಞಾನ ಎಂದಿಗೂ ಒಂದು ಹಂತಕ್ಕೆ ತನ್ನ ಕೊನೆಯನ್ನು ಪ್ರಕಟಿಸುವುದಿಲ್ಲ. ನಿರಂತರವಾಗಿ ಹೊಸತನ್ನು, ಸುಲಭವಾದುದನ್ನು, ಊಹಿಸಲೂ ಅಸಾಧ್ಯಾವಾದ ಸಾಧ್ಯತೆಗಳನ್ನು ಮನುಕುಲಕ್ಕೆ ನೀಡುತ್ತಾ ಬಂದಿದೆ.
ಇಂದು ಎಲ್ಲಾ ಕ್ಷೇತ್ರಗಳಲ್ಲಿ ಬಹಳಷ್ಟು ಸಂಶೋಧನೆಗಳಾಗಿವೆ ಹಾಗೂ ಜನಸಾಮಾನ್ಯರ ಜೀವನಮಟ್ಟವನ್ನು ಬಹಳಷ್ಟು ಸುಧಾರಿಸಿದೆ. ಇಂದು ಪ್ರತಿದಿನವೂ ಒಂದಲ್ಲಾ ಒಂದು ಹೊಸತಾದ ಸಂಶೋಧನೆ ಅಥವಾ ಹಿಂದೆ ಆಗಿರುವ ಸಂಶೋಧನೆಯಲ್ಲಿ ಅಭಿವೃದ್ಧಿ ಹೊರಬರುತ್ತಲೇ ಇರುತ್ತದೆ. ಅವುಗಳಲ್ಲಿ ಬಹಳಷ್ಟು ಠುಸ್ ಎಂದು ಪಾತಾಳ ತಲುಪಿದರೆ
ಇನ್ನು ಕೆಲವು ಇದರ ಹೊರತಾಗಿ ನಮ್ಮ ಜೀವನ ಇಷ್ಟು ದಿನ ಹೇಗೆ ನಡೆಯಿತು ಎಂದು ಅಚ್ಚರಿಪಡುವಷ್ಟು ಜನಪ್ರಿಯತೆ ಗಳಿಸುತ್ತವೆ. ಉತ್ತಮ ಉದಾಹರಣೆ ಎಂದರೆ ವೀಡಿಯೋ ಕ್ಯಾಸೆಟ್ ಸಮಯದಲ್ಲಿ ಸೋನಿ ಸಂಸ್ಥೆ ತಂದ ಬೀಟಾಮ್ಯಾಕ್ಸ್ ಕ್ಯಾಸೆಟ್ಟುಗಳು ಹಾಗೂ ಇಂದಿನ ಸ್ಯಾಮ್‌ಸಂಗ್ ಟಚ್ ಫೋನ್‌ಗಳು.
ಆದರೆ ಈ ಸಂಶೋಧನೆಗಳಲ್ಲಿ ಕೆಲವು ಜೀವನದ ದಿಕ್ಕನ್ನೇ ಬದಲಿಸಿ ಬಿಡುತ್ತವೆ. ಜನಸಾಮಾನ್ಯರಿಗೂ ಎಟುಕುವಂತಾಗಿ ಈವರೆಗೆ ಕೇವಲ ಶ್ರೀಮಂತರ ಗರ್ವದ ಸೊತ್ತಾಗಿದ್ದ ತಂತ್ರಜ್ಞಾನ ಎಲ್ಲರ ಕೈಯಲ್ಲಿ ನಳನಳಿಸತೊಡಗುತ್ತದೆ. ಮನುಷ್ಯರು ರಸವಿದ್ಯಾ ತಜ್ಞರು ಎಂಬ ಮಾತು ನಿಜ. ಏಕೆಂದರೆ ಇದುವರೆಗೆ ನಿಕೃಷ್ಟ ಎಂದು ಪರಿಗಣಿತವಾಗಿದ್ದ ಚಿಕ್ಕ ವಸ್ತು ಅಥವಾ ಕಣ ಅದರ ಸರಿಯಾದ ಉಪಯೋಗ ಪಡೆದೊಡನೇ ಅದರ ಬಳಕೆ ಮತ್ತು ಪ್ರಯೋಜನಗಳ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರುತ್ತದೆ.
ಉದಾಹರಣೆಗೆ ಮರಳಿನ ಕಣ, ಹಾಗೇ ಇದ್ದರೆ ಮಣ್ಣಿನ ಪುಟ್ಟ ಕಣ. ಆದರೆ ಸಿಮೆಂಟಿನೊಂದಿಗೆ ಬೆರೆತ ಬಳಿಕ ಬೃಹತ್ ಕಟ್ಟಡಕ್ಕೇ ಮೂಲವಾಗುತ್ತದೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಸಂಶೋಧನೆಗೊಂಡ, ಜೀವನದ ಗತಿಯನ್ನೇ ಬದಲಿಸಬಲ್ಲ, ಆದರೆ ಪ್ರವರ್ಧಮಾನಕ್ಕೆ ಇನ್ನೂ ಬರಬೇಕಾಗಿರುವ ಹತ್ತು ಸಂಶೋಧನೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಹೋವರ್ ಬೋರ್ಡು (ಚಕ್ರವೇ ಇಲ್ಲದೆ ತೇಲುವ ಹಲಗೆ)
ಬ್ಯಾಕ್ ಟು ದ ಪ್ಯೂಚರ್ ಎಂಬ ಇಂಗ್ಲಿಷ್ ಚಲನಚಿತ್ರ ನೋಡಿದವರಿಗೆ ಹೋವರ್ ಬೋರ್ಡ್ ಎಂದರೇನು ಎಂದು ಗೊತ್ತಿರುತ್ತದೆ. ಸುಮಾರು ಮೂರಡಿ ಉದ್ದ, ಅರ್ಧ ಅಡಿ ಅಗಲದ ಹಲಗೆಯ ಕೆಳಗೆ ನಾಲ್ಕು ಚಕ್ರಗಳಿದ್ದು ಒಂದು ಕಾಲಿನಿಂದ ದೂಡುತ್ತಾ ಮುಂದೆ ಚಲಿಸುವ ಗಾಡಿಯಾಗಿದೆ. ಇದರಲ್ಲಿ ಈ ಚಕ್ರಗಳನ್ನು ತೆಗೆದು ಇಡಿಯ ಹಲಗೆಯನ್ನೇ ಗಾಳಿಯಲ್ಲಿ ತೇಲುವಂತೆ ಮಾಡಿದರೆ? ಅಲ್ಲಾವುದ್ದೀನನ ಹಾರುವ ಕಂಬಳಿಯ ಕಲ್ಪನೆ ಮೂಡಿತೇ? ಹೋವರ್ ಬೋರ್ಡು ಸಹಾ ಈ ಕಲ್ಪನೆಯನ್ನು ಸಾಕಾರಗೊಳಿಸುತ್ತದೆ. ಆದರೆ ಒಂದು ವೇಳೆ ಈ ಹಲಗೆ ಮಕ್ಕಳ ಕೈಗೆ ಸಿಕ್ಕರೆ ಇದರ ದುರ್ಬಳಕೆಯಾಗಬಹುದು ಎಂದು ಅಮೇರಿಕಾದ ಪೋಷಕರ ಸಂಘ ತಗಾದೆ ತೆಗೆದಿದ್ದುದರಿಂದ ಹೋವರ್ ಬೋರ್ಡು ಮಾರುಕಟ್ಟೆಯಲ್ಲಿ ಮುಕ್ತವಾಗಿ ಲಭ್ಯವಿಲ್ಲ. ಆದರೆ ಚಕ್ರಗಳಿರುವ ವಾಹನಗಳು ಚಲಿಸಲು ಅಸಾಧ್ಯವಿರುವ ಸ್ಥಳಗಳಲ್ಲಿ (ಉದಾಹರಣೆಗೆ ಭೂಕಂಪದಿಂದ ಕಟ್ಟಡಗಳು ಬಿದ್ದು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿದ್ದಾಗ ವಾಹನ ಸಂಚರಿಸಲು ಅಸಾಧ್ಯವಾದಾಗ) ತುರ್ತು ಚಿಕಿತ್ಸೆ ಮತ್ತು ನೆರವು ನೀಡಲು ಈ ಹೋವರ್ ಬೋರ್ಡುಗಳು ಆಪತ್ಬಾಂಧವ ವಾಹನಗಳಾಗುತ್ತವೆ. ಅಷ್ಟೇ ಏಕೆ, ಒಂದು ವೇಳೆ ಈ ತಂತ್ರಜ್ಞಾನ ಸುಲಭವಾಗಿ ಅಭಿವೃದ್ಧಿಪಡಿಸಿದರೆ ಕಟ್ಟಡಕ್ಕೆ ಬಳಸುವ ಸಾಮಾಗ್ರಿಗಳನ್ನೂ ನಿರ್ಮಿಸಿ ಭೂಕಂಪದಿಂದ ಅತಿ ಕಡಿಮೆ ಹಾನಿಯಾಗುವಂತೆ ಮಾಡಬಹುದು.

ತಂತಿರಹಿತ ವಿದ್ಯುತ್ ಪ್ರಸಾರಣೆ
ಉಪಗ್ರಹದಿಂದ ತಂತಿರಹಿತವಾಗಿ ಮಾಹಿತಿಯನ್ನು ನೇರವಾಗಿ ಮನೆಯ ಟೀವಿಗೆ ಇಳಿಸಿದ್ದುದು ಹಳೆಯ ಮಾತು. ಈಗ ವಿದ್ಯುತ್ತನ್ನೇ ತಂತಿರಹಿತವಾಗಿ ಕಳುಹಿಸುವ ತಂತ್ರಜ್ಞಾನ ಬಂದಿದೆ. ವಿದ್ಯುತ್ ಉತ್ಪಾದನೆಗಿಂತ ವಿದ್ಯುತ್ ಪ್ರಸಾರಣೆಯೇ ಹೆಚ್ಚಿನ ಖರ್ಚಿನ ಬಾಬ್ತು. ಏಕೆಂದರೆ ಎಷ್ಟೇ ಉತ್ತಮ ವಾಹಕವನ್ನು ಉಪಯೋಗಿಸಿದರೂ ಕೊಂಚ ಪ್ರಮಾಣದ ವಿದ್ಯುತ್ ಆ ತಂತಿಯನ್ನು ಕಾಯಿಸಿ ಪೋಲಾಗುತ್ತದೆ. ತಂತಿರಹಿತವಾಗಿ ಕಳುಹಿಸುವ ತಂತ್ರಜ್ಞಾನದಿಂದ ಈ ಪೋಲನ್ನು ತಪ್ಪಿಸಬಹುದು. ಇದರಿಂದ ಸರಿಸುಮಾರು ಮೂವತ್ತು ಶೇಖಡಾ ವಿದ್ಯುತ್ ಖೋತಾವನ್ನು ನಿಲ್ಲಿಸಬಹುದು.

ಮೂರು ಆಯಾಮದ ಮುದ್ರಣ
ಛೋಟಾ ಚೇತನ್ ಎಂಬ ತ್ರೀಡಿ ಚಿತ್ರ ಬಂದಾಗ ನೋಡಿದವರು ಬೆರಗಾಗಿದ್ದೂ ಬೆರಗಾಗಿದ್ದೇ! ಈಗ ಮೂರು ಆಯಾಮದ ಟೀವಿಗಳೇ ಬಂದಿವೆ.ತಂತ್ರಜ್ಞಾನ ಇನ್ನಷ್ಟು ಮುಂದೆ ಹೋಗಿ ಈಗ ಮೂರು ಆಯಾಮದ ಮುದ್ರಣದ ಸರದಿ. ಯಾವುದೇ ಚಿತ್ರವನ್ನು ಮೂರು ಆಯಾಮದಲ್ಲಿ ಮುದ್ರಿಸಿ ನಿಮಗಿಷ್ಟವಾದ ವಸ್ತುವಿನ ಮೇಲೆ ಅಂಟಿಸಬಹುದು. ಉದಾಹರಣೆಗೆ ಕಾಫಿ ಮಗ್‌ನ ಮೇಲೆ ಮಕ್ಕಳ ಚಿತ್ರ ಅಂಟಿಸಿ ಕಾಫಿ ಕುಡಿಯುವಾಗಲೆಲ್ಲಾ ಅವರು ಎದುರಿಗೇ ಇದ್ದಾರೋ ಎನ್ನುವ ಭಾವನೆ ಮೂಡಿಸಬಹುದು.

ಸ್ಮಾರ್ಟ್ ವಾಚ್
ಸ್ಮಾರ್ಟ್ ಫೋನ್ ಈಗ ಹಳೆಯದಾಗುತ್ತಾ ಬಂದಿದೆ. ಇದರ ಮುಂದುವರೆದ ಆವೃತ್ತಿ ಸ್ಮಾರ್ಟ್ ವಾಚ್. ಸ್ಮಾರ್ಟ್ ಫೋನ್ ಮಾಡುವ ಎಲ್ಲಾ ಕೆಲಸಗಳ ಜೊತೆಗೇ ನಮ್ಮ ಆರೋಗ್ಯದ ಮಾಹಿತಿಗಳನ್ನು ನೇರವಾಗಿ ಪಡೆದು ವಿಶ್ಲೇಷಿಸಿ ಸರಿಪಡಿಸಬಲ್ಲ ತಂತ್ರಜ್ಞಾನ ಈಗ ಬಂದಿದೆ. ಉದಾಹರಣೆಗೆ ಹೃದಯಬಡಿತದ ಸತತ ಮಾಹಿತಿ ಪಡೆದು ಹೆಚ್ಚು ಕಡಿಮೆಯಾದರೆ ಕೂಡಲೇ ಎಚ್ಚರಿಕೆ ನೀಡುವ ಅಥವಾ ಆಪತ್ಕಾಲ ಬರುವ ಸಮಯದಲ್ಲಿ ವೈದ್ಯರಿಗೆ ತಾನೇತಾನಾಗಿ ಫೋನ್ ಮಾಡುವ ಮೂಲಕ ಜೀವವನ್ನು ಉಳಿಸುವ ತಂತ್ರಜ್ಞಾನ ಎಲ್ಲರ ಮನ ಗೆದ್ದಿದೆ. ಈ ವರ್ಷ ಈ ವಾಚೊಂದನ್ನು ಹೊಂದಲು ಎಲ್ಲರೂ ಹಪಹಪಿಸುತ್ತಿದ್ದಾರೆ.

ಬೈಕಿನ ವೇಗವರ್ಧಕಗಳು
ಹದಿಹರೆಯ ದಾಟುತ್ತಿದ್ದಂತೆ ಬೈಸಿಕಲ್ ನಿಂದ ಬೈಕಿಗೆ ಬಡ್ತಿ ಪಡೆಯುವ ಯುವ ಜನಾಂಗಕ್ಕೆ ವೇಗ ಪ್ರಿಯವಾದ ವಿಷಯವಾಗಿದೆ. ಅದರಲ್ಲೂ ವೇಗವಾಗಿ ಬೈಕ್ ಓಡಿಸುವುದು ಎಲ್ಲರ ಕನಸು. ನಿಂತ ಸ್ಥಿತಿಯಿಂದ ನೂರು ಕಿ.ಮೀ ವೇಗವನ್ನು ಎಷ್ಟು ಕಡಿಮೆ ಸಮಯದಲ್ಲಿ ಪಡೆಯುತ್ತದೆ ಎಂಬ ಮಾಹಿತಿ ಇವರಿಗೆ ಅತಿ ಮುಖ್ಯವಾದ ಮಾಹಿತಿಯಾಗಿದೆ. ಇದನ್ನೇ ನಗದೀಕರಿಸಲು ವೇಗವರ್ಧಕಗಳು ಈಗ ಬಂದಿವೆ. ನವನವೀನ ಮಾದರಿಯ ಬೈಕುಗಳಿಗೆ ಈ ವೇಗವರ್ಧಕಗಳನ್ನು ಅಳವಡಿಸುವುದರಿಂದ ಥಟ್ಟನೇ ವೇಗ ಪಡೆಯುವುದು ಮಾತ್ರವಲ್ಲ, ಅತಿ ವೇಗವನ್ನೂ ಕಾಯ್ದುಕೊಳ್ಳಬಹುದು. ಜೊತೆಗೇ ರಸ್ತೆಯಲ್ಲಿ ಮುಂದೆ ಇರುವ ಹಳ್ಳಕೊಳ್ಳ, ಇತರ ವಾಹನಗಳು, ಜನಸಂಚಾರ, ತೆಗೆದ ಕೊಳಚೆಗುಂಡಿಗಳು, ವಾಯುವಿನ ದಿಕ್ಕು ಮೊದಲಾದ ಮಾಹಿತಿಯನ್ನು ಮೊದಲೇ ಪಡೆದು ಆ ಪ್ರಕಾರ ವೇಗ ಬದಲಿಸಿಕೊಳ್ಳಲು ನೆರವಾಗುತ್ತದೆ.

ಥಟ್ಟನೇ ತಣಿಸುವ ಕೂಲರುಗಳು
ಮನೆಗೆ ಅತಿಥಿಗಳು ಆಗಮಿಸಿದಾಗ ಅವರಿಗೆ ನೀಡಲು ತಂಪುಪಾನೀಯವಿಲ್ಲದಿದ್ದರೆ ಕೂಡಲೇ ತಂಪುಮಾಡಿ ಕೊಡುವ ವ್ಯವಸ್ಥೆ ಈಗ ಬಂದಿದೆ. ಇದರಿಂದ ಯಾವುದೇ ಸಮಯದಲ್ಲಿ ತಂಪುಪಾನೀಯ ಬೇಕೆಂದರೆ ಸಿದ್ಧರೂಪದಲ್ಲಿ ಬಳಸಲು ಸಾಧ್ಯವಾಗುತ್ತದೆ. ಅಷ್ಟೇ ಏಕೆ ವಿವಿಧ ತಂಪುಪಾನೀಯಗಳನ್ನು ಬೆರೆಸಿ ಮಾಡಬಹುದಾದ vodkaritas ಮತ್ತು margaritas ಗಳಿಗೂ ಮಾರುಕಟ್ಟೆ ಅಲೆಯಬೇಕಾಗಿಲ್ಲ.

ಬ್ರೇಕ್ ಅನ್ನೂ ಶಕ್ತಿಯಾಗಿ ಪರಿವರ್ತಿಸುವ ಬಿಎಂಡಬ್ಲ್ಯೂ ಐ3
ಪಟ್ರೋಲಿಯಂ ನಶಿಸುತ್ತಿರುವ ಇಂಧನ ಎಂದು ತಿಳಿದ ಬಳಿಕ ಪರ್ಯಾಯ ವಾಹನಗಳ ಸಂಶೋಧನೆಗೆ ಹೆಚ್ಚಿನ ಒತ್ತು ಮೂಡಿದೆ. ಇಲೆಕ್ಟ್ರಿಕ್ ಮತ್ತು ಹೈಡ್ರೋಜನ್ ಆಧಾರಿತ ಕಾರುಗಳು ಈಗಾಗಲೇ ಮಾರುಕಟ್ಟೆಗೆ ಇಳಿದಿವೆ. ಇದರ ಮುಂದುವರೆದ ಮಾದರಿಯಾಗಿ ಈಗ ಬಿಎಂಡಬ್ಲ್ಯೂ ಐ3 ಮಾರುಕಟ್ಟೆಗೆ ಬಂದಿದೆ. ಇದರ ವಿಶೇಷತೆ ಎಂದರೆ ಆಕ್ಸಿಲೇಟರ್ ಮತ್ತು ಬ್ರೇಕ್ ಎರಡಕ್ಕೂ ಒಂದೇ ಕಾಲೊತ್ತು ಇದೆ. ಅಂದರೆ ವೇಗವರ್ಧನೆಗೆ ಒತ್ತುವ ಕಾಲೊತ್ತನ್ನು ಸಡಿಲಗೊಳಿಸಿದರೆ ನಿಧಾನಗೊಳ್ಳುವ ಇಂಜಿನ್ ಬ್ರೇಕ್ ನಂತೆ ಕಾರ್ಯನಿರ್ವಹಿಸುತ್ತದೆ. ವಾಸ್ತವವಾಗಿ ಈ ಶಕ್ತಿ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತದೆ. ಈ ಶಕ್ತಿಯನ್ನು ಪುನಃ ಕಾರನ್ನು ಮುಂದೆ ಚಲಿಸಲು ಬಳಸಬಹುದು.

ಮಕ್ಕಳಿಗಾಗಿ ಸುಲಭದ ಟ್ಯಾಬ್ಲೆಟ್
ಸ್ಲೇಟು ಮತ್ತ ಬಳಪ ನೇಪಥ್ಯಕ್ಕೆ ಸರಿದಾಗಿದೆ. ಮಕ್ಕಳ ಕೈಯಲ್ಲಿ ಈಗ ಟ್ಯಾಬ್ಲೆಟ್ಟುಗಳು ಬಂದಿವೆ. ಆದರೆ ಆಪಲ್ ಸಂಸ್ಥ ಮಕ್ಕಳಿಗಾಗಿಯೇ ತಯಾರಿಸಲಾದ 'Reflective AI' ಎಂಬ ಟ್ಯಾಬ್ಲೆಟ್ ಮಕ್ಕಳ ಆಟವನ್ನು ಇನ್ನಷ್ಟು ಸುಲಭವಾಗಿ ಮತ್ತು ಕಲಿಯಲು ಇಷ್ಟವಾಗುವಂತೆ ಮಾಡುತ್ತದೆ. ಇದು ಕ್ಯಾಮೆರಾದಿಂದ ಟ್ಯಾಬ್ಲೆಟ್ ಜೊತೆ ನೀಡಲಾದ ಸರಳ ವಸ್ತುಗಳೊಂದಿಗೆ ರೇಡಿಯೋ ಸಂಪರ್ಕದಲ್ಲಿದ್ದು ಮಕ್ಕಳ ಕಲ್ಪನೆಗೆ ನೂತನ ಆಯಾಮ ನೀಡುತ್ತದೆ ಹಾಗೂ ಮಕ್ಕಳು ಇನ್ನಷ್ಟು ಕ್ರಿಯಾಶೀಲರಾಗಲು ನೆರವಾಗುತ್ತದೆ.

ನಿಂಟೆಂಟೋ Wii
ಪ್ಲೇಸ್ಟೇಷನ್ ಮತ್ತು ಎಕ್ಸ್ ಬಾಕ್ಸ್ ಗಳು ಮಕ್ಕಳ ಆಟಕ್ಕೆ ಹಿಂದೆಂದೂ ಕಲ್ಪಿಸಿರದ ಆಯಾಮ ನೀಡಿವೆ. ಈಗ ಹೊಸತಾಗಿ ಬಂದಿರುವ ನಿಂಟೆಂಟೋ Wii ಆಟಗಾರ ತಂಡದ ಒಂದು ಭಾಗವಾಗಿರುವ ಭಾವನೆಯನ್ನು ಹುಟ್ಟಿಸುತ್ತದೆ.ಇದು ಹಿಂದೆಂದೂ ಊಹಿಸಿರದ ಕಲ್ಪನೆಯಾಗಿದ್ದು ಅಪಾರ ಜನಪ್ರಿಯತೆ ಪಡೆಯುತ್ತಿದೆ.

ಐ ಬಿ ಎಂ. ವಾಟ್ಸನ್
ಕಂಪ್ಯೂಟರುಗಳು ಪ್ರಾರಂಭದ ದಿನಗಳಲ್ಲಿ ಭಾರೀ ಹೆಸರು ಮಾಡಿದ್ದ ಐ ಬಿ ಎಂ ಕೊಂಚ ಕಾಲ ನೇಪಥ್ಯಕ್ಕೆ ಸರಿದಿತ್ತು. ಆದರೆ ಈಗ IBM Watson ಎಂಬ ತಂತ್ರಜ್ಞಾನದ ಮೂಲಕ ಮತ್ತೆ ಜನಪ್ರಿಯತೆ ಗಳಿಸುವತ್ತ ಧಾಪುಗಾಲಿಡುತ್ತಿದೆ. ಇದು ಒಂದು ಕೃತಕ ಜಾಣ್ಮೆಯಾಗಿದ್ದು ಆಸಕ್ತರು ಕೇಳುವ ಯಾವುದೇ ಪ್ರಶ್ನೆಗೆ ಅವರ ಮಾತೃಭಾಷೆಯಲ್ಲಿಯೇ ನೀಡುವುದು ಇದರ ಹೆಗ್ಗಳಿಕೆಯಾಗಿದೆ.



Click it and Unblock the Notifications


