ನಿಮ್ಮ ದೇಹದಲ್ಲಿರುವ ಮಚ್ಚೆಯು ಏನನ್ನು ಪ್ರತಿಪಾದಿಸುತ್ತದೆ?

ನಿಮ್ಮ ಪಾಸ್ ಫೋರ್ಟ್‌ನಲ್ಲಿ ಒಂದು ವಿವರವನ್ನು ಕೇಳಲಾಗುತ್ತದೆ. ಅದೇನೆಂದರೆ ನಿಮ್ಮ ದೇಹದಲ್ಲಿರುವ ವಿಶಿಷ್ಟ ಗುರುತು (visible distinguishing mark) ಆಗ ನಮ್ಮ ದೇಹದಲ್ಲಿರುವ ಮಚ್ಚೆ ಅಥವಾ ಬೇರೆ

ಯಾವುದಾದರೂ ಗುರುತನ್ನು ನೀಡುತ್ತೇವೆ. ಇಲ್ಲಿ ಮಚ್ಚೆ ಎಂದರೆ ಹುಟ್ಟಿನಿಂದಲೇ ಬಂದಿರುವ ಒಂದು ಗುರುತು. ಇದು ಪ್ರತಿಯೊಬ್ಬರಲ್ಲೂ ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ಅಕಾರಗಳಲ್ಲಿರುತ್ತದೆ.

ಹಿರಿಯರು ಈ ಮಚ್ಚೆಯಿಂದ ಮಗು ತಮಗೆ ಒಳ್ಳೆಯನ್ನು ಮಾಡುತ್ತದೆಯೋ ಕೆಟ್ಟ ಹೆಸರು ತರುತ್ತದೆಯೋ ಎಂದು ಅನುಭವದಿಂದ ಹೇಳಬಲ್ಲವರಾಗಿದ್ದರು. ಕೆಲವರು ಇವು ಪೂರ್ವಜನ್ಮದ ಕಲೆಗಳ ಉಳಿದ ಭಾಗ ಎಂದು ನಂಬಿದರೆ ಕೆಲವರು ಮಗು ತಾಯಗರ್ಭದಲ್ಲಿರುವಾಗ ಎಲ್ಲಾದರೂ ತಾಕಿದರೆ ಬೇರೆ ಯಾವುದೋ ಕಾರಣದಿಂದ ಈ ಮಚ್ಚೆಗಳು ಮೂಡಿರಬಹುದು ಎಂದು ನಂಬುತ್ತಾರೆ.

ನಮ್ಮ ದೇಹವನ್ನು ಕೊಂಚ ಕೂಲಂಕಶವಾಗಿ ಅವಲೋಕಿಸಿದರೆ ಹಲವಾರು ಮಚ್ಚೆಗಳನ್ನು ಕಾಣಬಹುದು. ಆದರೆ ಇವೆಲ್ಲವೂ ಹುಟ್ಟಿನಿಂದಲೇ ಬಂದವುಗಳಲ್ಲ, ವಯಸ್ಸಿನೊಂದಿಗೆ ನಿಧಾನವಾಗಿ ಬಂದವು. ವಾಸ್ತವವಾಗಿ ಈ ಮಚ್ಚೆಗಳು ಬೆಳೆಯುತ್ತವೆ. ವಯಸ್ಸಾದ ಮೇಲೆ ಗೋಚರಿಸುವ ಮಚ್ಚೆಗಳು ಹುಟ್ಟಿನಿಂದಲೇ ಇದ್ದರೂ ಕಣ್ಣಿಗೆ ಕಾಣಿಸದಷ್ಟು ಚಿಕ್ಕವಿದ್ದವು. ಆದರೆ ಕೆಲವು ಮಚ್ಚೆಗಳು ಮಾತ್ರ್ತಹುಟ್ಟಿನಿಂದಲೇ ಸ್ಪಷ್ಟವಾಗಿ ಗೋಚರಿಸುತ್ತವೆ. ಇವುಗಳನ್ನೇ ಹುಟ್ಟುಮಚ್ಚೆಗಳೆಂದು ತಿಳಿಸುತ್ತಾರೆ. ಬಿಳಿ ಮಚ್ಚೆ ನಿವಾರಣೆಗೆ ಮನೆಮದ್ದು

ಈ ಮಚ್ಚೆಗಳು ಕಂಡುಬರುವ ಸ್ಥಾನಕ್ಕೆ ಅನುಗುಣವಾಗಿ ಆ ವ್ಯಕ್ತಿಯ ವ್ಯಕ್ತಿತ್ವ ಹೀಗೇ ಇರಬಹುದು ಎಂದು ಹಲವರು ಊಹಿಸುತ್ತಾರೆ. ಉದಾಹರಣೆಗೆ ನಾಲಿಗೆಯಲ್ಲಿ ಮಚ್ಚೆ ಇದ್ದವರು ಸುಳ್ಳುಗಾರರು, ಕಣ್ಣಿನಲ್ಲಿ ಮಚ್ಚೆ ಇದ್ದವರು ಸತ್ಯವಂತರು ಇತ್ಯಾದಿ. ಕಲವರಿಗಂತೂ ಮುಖದ ಮೇಲೇ ದೊಡ್ಡದಾದ ಮಚ್ಚೆಯಿದ್ದು ಸಹಜ ಸೌಂದರ್ಯವನ್ನೂ ಕುಂಠಿತಗೊಳಿಸಬಹುದು.

ಕೆಲವೊಮ್ಮೆ ಮಚ್ಚೆಯಲ್ಲಿ ಗಾಢವಾದ ಆದರೆ ನವಿರಾದ ರೋಮಗಳೂ ಇರಬಹುದು. ಜಗತ್ತಿನ ವಿವಿಧ ದೇಶಗಳ ವಿವಿಧ ಜನರಲ್ಲಿ ಈ ಮಚ್ಚೆಗಳ ಕುರಿತು ವಿವಿಧ ರೀತಿಯ ನಂಬಿಕೆಗಳಿವೆ. ಮಚ್ಚೆಗಳಿರುವ ದೇಹದ ಅಂಗವನ್ನಾಧರಿಸಿ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವ ಪ್ರಚಲಿತ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ನಿಮ್ಮ ಹೆಸರಿನ ಒಳಗುಟ್ಟೇನು ಎಂಬುದನ್ನು ಬಲ್ಲಿರಾ?

ಹೊಟ್ಟೆ ಮತ್ತು ಸೊಂಟದಲ್ಲಿದ್ದರೆ

ಹೊಟ್ಟೆ ಮತ್ತು ಸೊಂಟದಲ್ಲಿದ್ದರೆ

ಒಂದು ಸ್ಪಷ್ಟವಾದ ಕಪ್ಪು ಮಚ್ಚೆ ಹೊಟ್ಟೆ ಅಥವಾ ಸೊಂಟದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ) ಆ ವ್ಯಕ್ತಿ ಸಾಮಾನ್ಯವಾಗಿ ಆಸೆಬುರುಕ ಮತ್ತು ಸ್ವಾರ್ಥಿಯಾಗಿರುತ್ತಾರೆ.

ಮುಖದಲ್ಲಿ ತುಟಿಯ ಅಕ್ಕಪಕ್ಕ ಇದ್ದರೆ

ಮುಖದಲ್ಲಿ ತುಟಿಯ ಅಕ್ಕಪಕ್ಕ ಇದ್ದರೆ

ಮುಖದಲ್ಲಿ ತುಟಿಯ ಅಕ್ಕಪಕ್ಕದಲ್ಲಿರುವ ಕಪ್ಪು ಮಚ್ಚೆ ಇರುವ ಪುರುಷರು ಸಾಮಾನ್ಯವಾಗಿ ಧನವಂತರೂ ಜೀವನದಲ್ಲಿ ಹೆಚ್ಚು ಸುಖವನ್ನನುಭವಿಸುವವರೂ ಆಗಿರುತ್ತಾರೆ. ಮಹಿಳೆಯರಲ್ಲಿ ಈ ಮಚ್ಚೆ ವಾಚಾಳಿತನ ಮತ್ತು ಅತಿ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ.

ಬಲಗೆನ್ನೆಯ ಮೇಲಿದ್ದರೆ

ಬಲಗೆನ್ನೆಯ ಮೇಲಿದ್ದರೆ

ಬಲಗೆನ್ನೆಯ ಮೇಲೆ ಸ್ಪಷ್ಟವಾದ ಕಪ್ಪು ಮಚ್ಚೆಯುಳ್ಳ ಪುರುಷರು ಕೆಲವು ವಿಷಯಗಳಲ್ಲಿ ಅತಿ ಅನುರಾಗ ಹೊಂದಿರುವವರಾಗಿರುತ್ತಾರೆ. ಉದಾಹರಣೆಗೆ ಸಂಗೀತಗಾರರಾಗಿದ್ದರೆ ಸಂಗೀತದ ಹೊರತು ಅವರಿಗೆ ಬೇರೆ ಯಾವುದರಲ್ಲೂ ಆಸಕ್ತಿ ಅತಿಹೆಚ್ಚಾಗಿ ಇರುವುದಿಲ್ಲ. ಮಹಿಳೆಯರಲ್ಲಿ ಈ ಮಚ್ಚೆ ತನ್ನ ಪತಿಯೊಂದಿಗೆ ಅತ್ಯುತ್ತಮ ಹಾಗೂ ಸಂತೋಷಕರವಾದ ಸಂಬಂಧವನ್ನು ಹೊಂದಿರುವುದನ್ನು ಸೂಚಿಸುತ್ತದೆ.

ಎಡಗೆನ್ನೆಯ ಮೇಲಿದ್ದರೆ

ಎಡಗೆನ್ನೆಯ ಮೇಲಿದ್ದರೆ

ಎಡಗೆನ್ನೆಯ ಮೇಲಿರುವ ಕಪ್ಪು ಮಚ್ಚೆ ಪುರುಷರಿಗೆ ಆರ್ಥಿಕವಾದ ತೊಂದರೆಗಳಿರುವುದನ್ನು ಸೂಚಿಸುತ್ತದೆ. ಮಹಿಳೆಯರಲ್ಲಿ ಈ ಗುರುತು ಅಗೋಚರ ಖಿನ್ನತೆಯನ್ನು ಬಿಂಬಿಸುತ್ತದೆ.

ಎಡಸ್ತನದ ಕೆಳಭಾಗದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಎಡಸ್ತನದ ಕೆಳಭಾಗದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಗುರುತು ನೀವು ಕೈಹಾಕಿದ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಸೂಚಿಸುತ್ತದೆ ಹಾಗೂ ನಿಮ್ಮ ಹಾಸ್ಯಪ್ರಜ್ಞೆಯನ್ನು ಬಿಂಬಿಸುತ್ತದೆ. ಅಂದರೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ.

ಬಲಸ್ತನದ ಕೆಳಭಾಗದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಬಲಸ್ತನದ ಕೆಳಭಾಗದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಗುರುತು ನಿಮ್ಮ ಜೀವನದಲ್ಲಿ ಎಂದಿಗೂ ಹಣದ ಅಡಚಣೆಯಾಗದಿರುವುದನ್ನು ಸೂಚಿಸುತ್ತದೆ.

ಎದೆಯ ನಡುಭಾಗದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಎದೆಯ ನಡುಭಾಗದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಗುರುತು ನಿಮಗೆ ಶುಭವನ್ನೂ, ಜೀವನದಲ್ಲಿ ಸಾಕಷ್ಟು ಧನವನ್ನೂ ತಂದುಕೊಡುವ ಸೂಚನೆಯಾಗಿದೆ.

ಗದ್ದದ ಮೇಲಿದ್ದರೆ

ಗದ್ದದ ಮೇಲಿದ್ದರೆ

ಪುರುಷರಲ್ಲಿರುವ ಈ ಗುರುತು ಆ ವ್ಯಕ್ತಿ ಅತಿ ಕೋಪಿಷ್ಟನೆಂದು ಬಿಂಬಿಸುತ್ತದೆ. ಮಹಿಳೆಯರಲ್ಲಿ ಈ ಗುರುತು ಕುಟುಂಬ ಆಕೆಯ ಆಶ್ರಯದಲ್ಲಿರುವ ಸೂಚನೆಯನ್ನು ನೀಡುತ್ತದೆ.

ಹಣೆಯ ಬಲಭಾಗದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಹಣೆಯ ಬಲಭಾಗದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಗುರುತು ನೀವು ಮಾನಸಿಕವಾಗಿ ಅತಿ ಬಲಿಷ್ಟರೆಂಬುದನ್ನು ಸೂಚಿಸುತ್ತದೆ.

ಹಣೆಯ ಎಡಭಾಗದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಹಣೆಯ ಎಡಭಾಗದಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಗುರುತು ನಿಮ್ಮ ಜೀವನದ ಆಕಾಂಕ್ಷೆಗಳಿಗೆ ಹಲವು ಅಡ್ದಿ ಆತಂಕಗಳಿರುವುದನ್ನು ಸೂಚಿಸುತ್ತದೆ. ಅಲ್ಲದೇ ಈ ಗುರುತಿರುವವರು ಸಾಮಾನ್ಯವಾಗಿ ಹೆಚ್ಚು ಖರ್ಚು ಮಾಡುವವರಾಗಿರುತ್ತಾರೆ.

ಹಣೆಯ ಮಧ್ಯೆ ಇದ್ದರೆ(ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಹಣೆಯ ಮಧ್ಯೆ ಇದ್ದರೆ(ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಗುರುತು ಹೊಂದಿರುವ ಪುರುಷರು ಮಹಿಳೆಯರಿಗೆ ಅತ್ಯಾಕರ್ಷಕವಾಗಿಯೂ ಮಹಿಳೆಯರು ಪುರುಷರಿಗೆ ಅತ್ಯಾಕರ್ಷಕವಾಗಿಯೂ ಕಾಣುತ್ತಾರೆ. ಸಾಮಾನ್ಯವಾಗಿ ಈ ಗುರುತುಳ್ಳವರು ಒಂದಕ್ಕಿಂತ ಹೆಚ್ಚು ಸಂಬಂಧ ಹೊಂದಿರುವವರಾಗಿರುತ್ತಾರೆ.

ಕೈಗಳ ಮೇಲಿದ್ದರೆ

ಕೈಗಳ ಮೇಲಿದ್ದರೆ

ಕೈಗಳ ಮೇಲಿರುವ ಮಚ್ಚೆ ಇರುವ ಪುರುಷರು ತಮ್ಮ ಹೆಚ್ಚಿನ ವೇಳೆಯನ್ನು ಮನೆಯೊಳಗೇ ಕಳೆಯುವವರಾಗಿರುತ್ತಾರೆ ಹಾಗೂ ಮಕ್ಕಳನ್ನು ನೋಡಿಕೊಳ್ಳುವಲ್ಲಿ, ಶಿಸ್ತನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ಮಹಿಳೆಯಲ್ಲಿರುವ ಈ ಗುರುತು ಆಕೆ ಸ್ವತಂತ್ರಳಾಗಿರಲು ಬಯಸುವುದನ್ನೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಕಾಂಕ್ಷೆಯುಳ್ಳವಳೆಂಬುದನ್ನೂ ಸೂಚಿಸುತ್ತದೆ.

ಕೆನ್ನೆಯ ಕೆಳಗಿನ ದವಡೆಯಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಕೆನ್ನೆಯ ಕೆಳಗಿನ ದವಡೆಯಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಸ್ಥಳದಲ್ಲಿರುವ ಮಚ್ಚೆ ತಮ್ಮ ಶರೀರದ ಕಾಳಜಿ ವಹಿಸದ ಬಗ್ಗೆ ಹಾಗೂ ಅಶಿಸ್ತಿನ ಬದುಕನ್ನು ಬದುಕುತ್ತಿರುವ ಸೂಚನೆ ನೀಡುತ್ತದೆ.

ಬೆನ್ನಿನ ಮೇಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಬೆನ್ನಿನ ಮೇಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಬೆನ್ನಿನ ಮೇಲೆ ಮಚ್ಚೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ಅತಿ ಪ್ರಾಮಾಣಿಕರಾಗಿದ್ದು ಎಲ್ಲರೊಂದಿಗೆ ಸಮಾನವಾಗಿ ಹೊಂದಿಕೊಂಡು ಹೋಗುವವರಾಗಿರುತ್ತಾರೆ.

ಬೆರಳುಗಳ ಮೇಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಬೆರಳುಗಳ ಮೇಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ನಿಮ್ಮ ಕೈಗಳ ಯಾವುದೇ ಬೆರಳುಗಳಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ಸ್ವತಂತ್ರರಾಗಿದ್ದು ಬೇರೆಯವರ ಅಡಿಯಾಳುಗಳಾಗಿರಲು ಬಯಸುವುದಿಲ್ಲ.

ಪಾದ ಮತ್ತು ಕಾಲುಬೆರಳುಗಳಲ್ಲಿದ್ದರೆ

ಪಾದ ಮತ್ತು ಕಾಲುಬೆರಳುಗಳಲ್ಲಿದ್ದರೆ

ಪುರುಷರಲ್ಲಿರುವ ಈ ಮಚ್ಚೆ ಆತ ಹೆಚ್ಚು ಪರ್ಯಟನೆಯನ್ನು ಬಯಸುವ ವ್ಯಕ್ತಿ ಎಂಬುದನ್ನು ಸೂಚಿಸುತ್ತದೆ. ಮಹಿಳೆಯರಲ್ಲಿ ಈ ಗುರುತು ಆಕೆ ಸಾಹಸ ಪ್ರವೃತ್ತಿಯವಳೆಂದೂ ಜೀವನದಲ್ಲಿ ಅಪಾಯಗಳನ್ನು ಎದುರಿಸಲು ಬಯಸುವವಳೆಂದೂ ಸೂಚಿಸುತ್ತದೆ.

ಭುಜಗಳಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಭುಜಗಳಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಒಂದು ವೇಳೆ ಎಡಭುಜದ ಮೇಲಿದ್ದರೆ ಅದು ಯಾವಾಗಲೂ ಆರ್ಥಿಕವಾಗಿ ತೊಂದರೆಯಲ್ಲಿರುವುದನ್ನೂ ಬಲಭುಜದಲ್ಲಿದ್ದರೆ ಜೀವನದಲ್ಲಿ ಸಂಪತ್ತಿಗೆ ಯಾವತ್ತೂ ಕೊರತೆಯಾಗದಿರುವುದನ್ನು ಸೂಚಿಸುತ್ತದೆ.

ಕಾಲುಗಳಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಕಾಲುಗಳಲ್ಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಕಾಲುಗಳಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಸ್ವತಂತ್ರವಾಗಿ ಯಾವುದೇ ನಿರ್ಣಯವನ್ನು ಕೈಗೊಳ್ಳುವಲ್ಲಿ ಹಿಂದೇಟು ಹಾಕುವವರಾಗಿರುತ್ತಾರೆ.

ಮೂಗಿನ ಮೇಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಮೂಗಿನ ಮೇಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಮಚ್ಚೆ ಇರುವ ವ್ಯಕ್ತಿ ಅತಿ ಕ್ರಿಯಾಶೀಲರಾಗಿದ್ದು ಅವರ ಚಿಂತನೆ ಸಾಮಾನ್ಯದವರಿಗಿಂತ ಭಿನ್ನವಾಗಿ ಹಾಗೂ ಊಹಿಸಲು ಅಸಾಧ್ಯವಾದ ದಿಕ್ಕಿನಲ್ಲಿ ಹಾಗೂ ವಿಷಯಗಳಲ್ಲಿರುತ್ತದೆ.

ತೊಡೆಯ ಮೇಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ತೊಡೆಯ ಮೇಲಿದ್ದರೆ (ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯ)

ಈ ಗುರುತು ಸಾಮಾನ್ಯವಾಗಿ ಅದೃಷ್ಟ ತರುತ್ತದೆ. ಇವರಿಗೆ ಜೀವನದಲ್ಲಿ ಸದಾ ಸಂತೋಷ ಹಾಗೂ ಐಶ್ವರ್ಯ ಲಭ್ಯವಿರುತ್ತದೆ.

X
Desktop Bottom Promotion