Latest Updates
-
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು?
ಹುಡುಗಿಯರ ವಿಚಿತ್ರ ವರ್ತನೆ ನಿಮಗೆ ತಿಳಿದಿದೆಯೇ?
ಹೆಣ್ಣು ಮಕ್ಕಳನ್ನು ಅರ್ಥಮಾಡಿಕೊಳ್ಳುವದೇ ಕಷ್ಟ ಎಂಬ ಮಾತಿದೆ. ಈ ಮಾತನ್ನು ನೀವು ಹುಡುಗರಲ್ಲಿ ಕೇಳಿದರೆ ಅವರು ಅಂಜದೆ ಅಳುಕದೆ ಇದಕ್ಕೆ ಉತ್ತರ ನೀಡುತ್ತಾರೆ. ಹೌದು ಹೆಚ್ಚಿನ ಮಹಿಳೆಯರ ಇಷ್ಟ ಭಾವನೆ ಕ್ಲಿಷ್ಟಕರವಾಗಿದ್ದು ಅವರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳು ಯಾವುವು?
ಈ ಲೇಖನವನ್ನು ಓದುತ್ತಿರುವವರು ಒಬ್ಬರು ಮಹಿಳೆಯಾದರೆ ಇದನ್ನು ಕೂಡಲೇ ಒಪ್ಪಿಕೊಳ್ಳುವುದಿಲ್ಲ. ತಾವು ಮಾಡಿದ್ದೇ ಸರಿ ಎಂಬ ಭಾವನೆ ಮಹಿಳೆಯರದ್ದು ಎಂಬುದು ಪುರುಷರ ಅಭಿಪ್ರಾಯವಾಗಿದೆ. ಹೆಚ್ಚಿನ ಗಂಡಸರು ಹೆಂಗಳೆಯರನ್ನು ವಿಚಿತ್ರ ಅಭಿರುಚಿ ಉಳ್ಳವರು ಎಂದೇ ಚಿತ್ರಿಸುತ್ತಾರೆ. ವರ್ತನೆಯಲ್ಲಿ ಮಾತ್ರ ವಿಚಿತ್ರವಾಗಿರದೆ ಹೆಂಗಸರ ಕೆಲವು ಹವ್ಯಾಸಗಳು ಅವರಂತೇ ವಿಶೇಷವಾಗಿರುತ್ತವೆ.
ಹೆಂಗಳೆಯರು ತಮ್ಮ ಜೀವನದಲ್ಲಿ ಬೆಳೆಸಿಕೊಂಡಿರುವ ಕೆಲವು ವಿಲಕ್ಷಣ ಅನುಭವಗಳಿವೆ. ಹೆಂಗಳೆಯರ ಈ ಹವ್ಯಾಸ ಮತ್ತೊಬ್ಬರಿಗೆ ಹಾಸ್ಯವೆನಿಸಿದರೂ ಆಕೆ ಅದನ್ನು ತುಂಬಾ ಇಷ್ಟಪಡುತ್ತಾಳೆ. ಹೆಂಗಳೆಯರ ವಿಲಕ್ಷಣ ವರ್ತನೆಗಳನ್ನು ಆಸ್ವಾದಿಸೋಣ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಂಪ್ರದಾಯಿಕ ಬಾಲ್ಯದ ಆಟಗಳು

1.ತಮ್ಮ ಫೋಟೋ ತಾವೇ ತೆಗೆಯುವುದು
ಇಂದು ಹಲವಾರು ಮಹಿಳೆಯರು ತಮ್ಮ ಫೋಟೋವನ್ನು ತಾವೇ ತೆಗೆಯುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಇದು ದೊಡ್ಡ ಟ್ರೆಂಡ್ ಆಗಿದೆ.

2.ಪರಿಶೀಲನೆ
ಪ್ರತಿಯೊಬ್ಬ ಮಹಿಳೆಯೂ ಜೀವನದಲ್ಲಿ ಅನುಸರಿಸುವ ವಿಲಕ್ಷಣ ಪದ್ಧತಿಯಾಗಿದೆ ಪರಿಶೀಲನೆ. ಇನ್ನೊಬ್ಬ ಮಹಿಳೆಯಲ್ಲಿ ತನ್ನನ್ನು ಪರಿಶೀಲಿಸುವಂತೆ ಹೇಳುವುದು ಮತ್ತು ಬಾರಿ ಬಾರಿ ನಿಲುಗನ್ನಡಿ ನೋಡುವುದು ಮಹಿಳೆಯರ ವಿಲಕ್ಷಣ ಪ್ರಕ್ರಿಯೆಯಾಗಿದೆ.

3.ಗರ್ಭಿಣಿಯಂತೆ ಭಾವಿಸುವುದು
ಪ್ರತಿಯೊಬ್ಬ ಹುಡುಗಿಯೂ ನಿರ್ದಿಷ್ಟ ಸಮಯಕ್ಕೆ ಬಂದಾಗ ತನ್ನ ಹೊಟ್ಟೆಯನ್ನು ಮುಂದಕ್ಕೆ ಮಾಡಿ ಗರ್ಭಿಣಿಯಾದಾಗ ಹೇಗೆ ಕಾಣಿಸಿಕೊಳ್ಳುತ್ತೇನೆಂಬ ವಿಲಕ್ಷಣ ಚಟುವಟಿಕೆಯನ್ನು ನಡೆಸುತ್ತಾರೆ.

4.ಸೂಪರ್ ಹೀರೋನಂತೆ ಭಾವಿಸುವುದು
ನೀವು ಇದನ್ನೇ ಮಾಡಿಲ್ಲವೇ? ಮಾರುಕಟ್ಟೆಗಳಲ್ಲಿ ಸಿಗುವ ಏಕ್ಷನ್ ಮೂವಿಗಳನ್ನು ನೋಡಿಕೊಂಡು ತಮ್ಮನ್ನು ತಾವೇ ಸೂಪರ್ ಹೀರೋನಂತೆ ವರ್ತಿಸುವುದು ಪ್ರತಿಯೊಬ್ಬ ಹುಡುಗಿಯು ಮಾಡುವ ವಿಲಕ್ಷಣ ಕ್ರಿಯೆಯಾಗಿದೆ.

5.ತಮ್ಮಷ್ಟಕ್ಕೆ ತಾವೇ ಮಾತನಾಡುವುದು
ಇದೀಗ, ಹೀಗೆ ಮಾಡಿಲ್ಲವೆಂದು ಖಂಡಿತ ವಾದಿಸಬೇಡಿ. ಈ ಕ್ರಿಯೆಯನ್ನು ಪ್ರತಿಯೊಬ್ಬ ಹುಡುಗಿಯೂ ತಮ್ಮ ಜೀವನದಲ್ಲಿ ಮಾಡಿಯೇ ಮಾಡುತ್ತಾರೆ. ಕನ್ನಡಿಯ ಎದುರು ನಿಂತು ತಮ್ಮಷ್ಟಕ್ಕೇ ತಾವೇ ಮಾತನಾಡುವುದು ವಿಲಕ್ಷಣ ಚಟುವಟಿಕೆಯಾಗಿದೆ.

6.ನಾಟಕೀಯವಾಗಿ ವರ್ತಿಸುವುದು
ಹುಡುಗಿಯರನ್ನು ನಾಟಕ ರಾಣಿಯರೆಂದೇ ಕರೆಯುತ್ತಾರೆ. ಗಂಡಸರಿಗೆ ಹೋಲಿಸಿದಾಗ, ನಾಡಕೀಯವಾಗಿರುವುದು ಗಂಡಸರಿಗಿಂತ ಹೆಚ್ಚು ಹೆಂಗಸರೇ ಮಾಡುವಂಥದ್ದಾಗಿದೆ.

7.ಕೂದಲನ್ನು ಆಘ್ರಾಣಿಸುವುದು
ಹೌದು ಹೆಚ್ಚಿನ ಮಹಿಳೆಯರು ದಿನಕ್ಕೆ ಹಲವಾರು ಬಾರಿ ತಮ್ಮ ಕೂದಲನ್ನು ಆಘ್ರಾಣಿಸುತ್ತಾರೆ.

8.ತಮ್ಮನ್ನು ತಾವೇ ಹೊಗಳುವುದು
ಈ ಕ್ರಿಯೆಯನ್ನು ಪ್ರತಿಯೊಬ್ಬ ಮಹಿಳೆ ಮಾಡಿಯೇ ಮಾಡುತ್ತಾರೆ. ಅಂದವಾದ ಫಿಗರ್ ಹೆಣ್ಣಿಗಿದ್ದರೆ ಸರಳವಾಗಿ ಮೇಕಪ್ ಮಾಡಿಕೊಂಡು ನಿಲುಗನ್ನಡಿಯಲ್ಲಿ ತನ್ನನ್ನು ತಾನೇ ಹಲವಾರು ಬಾರಿ ನೋಡುಕೊಳ್ಳುತ್ತಾರೆ.

9.ಬಾತ್‌ರೂಮ್‌ಗೆ ಒಬ್ಬಂಟಿಯಾಗಿ ಹೋಗುವುದಿಲ್ಲ
ಪ್ರತಿಯೋರ್ವ ಹುಡುಗಿಯರೂ ಇದನ್ನು ಮಾಡುತ್ತಾರೆ. ಬಾತ್‌ರೂಮ್ ಅನ್ನು ಗಾಸಿಪ್ ಮಾತನಾಡಲು ಮತ್ತು ತಮ್ಮ ಫೋಟೋ ತೆಗೆಯಲು ಕೂಲೆಸ್ಟ್ ಸ್ಥಳವೆಂದೇ ಭಾವಿಸುತ್ತಾರೆ.



Click it and Unblock the Notifications
