Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಾಸ್ಯ ಪ್ರಜ್ಞೆಯನ್ನು ಹಸಿರಾಗಿರಿಸುವ ಸರಳ ಸಲಹೆಗಳು
ನಗು ಒಂದು ಅತ್ಯಮೂಲ್ಯವಾದ ವರದಾನ. ಇದು ಎಲ್ಲ ರೋಗಕ್ಕೂ ರಾಮಬಾಣ. ಇದಕ್ಕೆ ಸಮಸ್ಯೆಗಳನ್ನು ನಿವಾರಿಸುವ ಗುಣವೂ ಇದೆ. ಜೀವನದಲ್ಲಿ "ಜೀವ" ತುಂಬುವ ಮಹತ್ತರ ಜವಾಬ್ದಾರಿ ಈ ನಗುವಿನದು.
ಸ್ನೇಹಿತರು, ಸಂಬಂಧಿಕರೊಂದಿಗೆ ನಕ್ಕು ನಲಿದ ಎಷ್ಟೊ ಕ್ಷಣಗಳನ್ನು ನಾವು ಮತ್ತೆ-ಮತ್ತೆ ನೆನೆಪಿಸಿಕೊಂಡು ನಗುತ್ತಿರುತ್ತೇವೆ. ಬಾಂಧವ್ಯವನ್ನು ವೃದ್ಧಿಸುವ, ಕಳೆದು ಹೋದ ಸಂಬಂಧಗಳನ್ನು ಮತ್ತೆ ಕುದುರಿಸುವಲ್ಲಿ ಮಧ್ಯಸ್ತಿಕೆವಹಿಸುತ್ತದೆ. ಒಟ್ಟಗಿ ಹೇಳಬೇಕೆಂದರೆ, ಇದೊಂದು ಆರೋಗ್ಯವೃದ್ಧಿ, ಸಂಬಂಧವೃದ್ಧಿ, ಮನೋಬಲವೃದ್ಧಿ.
ನಗು ಎಂದಾಗ ನಕ್ಕು ಬಿಡಲು, ಅಳು ಎಂದಾಗ ಅತ್ತು ಬಿಡಲು ಮಾನವ ಯಂತ್ರ ಅಲ್ಲ. ಅದಕ್ಕೆಂದೇ ಈ ಸಪ್ಪೆ ಜೀವನದಲ್ಲಿ ಸ್ವಲ್ಪ ಮಸಾಲಾ ಸೇರಿಸಲು ಪ್ರತ್ಯೊಬ್ಬರಲ್ಲೂ ಹಾಸ್ಯ ಪ್ರವೃತ್ತಿ ಇರುವುದು ಅವಶ್ಯಕ. ನಿಮಲ್ಲಿರುವ ಅದ್ಭುತ ಹಾಸ್ಯ ಪ್ರವೃತ್ತಿಯಿಂದ ನಿಮ್ಮ ಮನಸ್ಸು ಯಾವಾಗಲೂ ನಿರ್ಮಲವಾಗಿರುವದಲ್ಲದೇ ಎಂತಹದ್ದೇ ಕಷ್ಟ ಬಂದರೂ ಅದನ್ನು ಎದುರಿಸುವ ಮನೋಬಲ ನಿಮ್ಮದಾಗುವುದು. ಅಷ್ಟೇ ಅಲ್ಲ ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯವೂ ವೃದ್ಧಿಸುವದೆಂದು ವೈಜ್ಞಾನಿಕ ಸಂಶೋಧನೆಗಳಿಂದ ದೃಡಪಟ್ಟಿದೆ.
ನಿಮ್ಮಲಿರುವ ಹಾಸ್ಯ, ನಿಮ್ಮ ದೈನಂದಿನ ಒತ್ತಡವನ್ನು ಶಮನಗೊಳಿಸಿ ನಿಮಗೆ ವಿಶ್ರಾಂತಿ ನೀಡುವದಲ್ಲದೇ ನಿಮ್ಮ ಮನಸ್ಸಿಗೆ ಚೈತನ್ಯವನ್ನೂ ತುಂಬುತ್ತದೆ. ದಿನವಿಡೀ ಕೆಲಸ, ಹಣ, ಪ್ರತಿಷ್ಠೆಗಳನ್ನು ಬೆನ್ನುಹತ್ತಿ ದಣಿದ ಜನರಿಗೆ ನಗೆ ಚಿಕಿತ್ಸೆಯ ಅವಶ್ಯಕತೆ ಹೆಚ್ಚುತ್ತಿದೆ. ಜೀವನದ ಇಂತಹ ದಣಿವಿನಲ್ಲೂ ಉತ್ಸಾಹ ಚಿಮ್ಮಿಸಬೇಕೆಂದರೆ ನಿಮಗೊಂದಿಷ್ಟು ಹಾಸ್ಯ ಪ್ರಜ್ಞೆ ಇರಲೇಬೇಕು. ತಾನೂ ನಕ್ಕು- ಇತರರನ್ನೂ ನಗಿಸಬೇಕು. ನಗುವುದು ಸುಲಭ. ಆದರೆ ನಗುಸುವುದು... , ಸ್ವಲ್ಪ ಕಷ್ಟದ ಕೆಲಸ.
ಅಸಲಿಗೆ ನಗಿಸುವುದು ಒಂದು ಕಲೆ. ಕೆಲವರಿಗೆ ಇದು ಹುಟ್ಟಿನಿಂದಲೇ ಬಂದರೆ, ಇನ್ನು ಕೆಲವರಿಗೆ ಹಲವು ಪ್ರಯತ್ನಗಳ ನಂತರ ಒಲಿಯುತ್ತದೆ. ನಿಮ್ಮ ಹಾಸ್ಯ ಪ್ರಜ್ಞೆಯನ್ನು ಚುರುಕುಗೊಳಿಸಿ ಕೊಳ್ಳುವದಕ್ಕಾಗಿ ಇಲ್ಲಿವೆ ಕೆಲವು ಸಲಹೆಗಳು. ಹಣ ಉಳಿತಾಯದ ಅಭಿಯಾನಕ್ಕಾಗಿ 5 ಸೂಕ್ತ ಸಲಹೆಗಳು
ನಿಮ್ಮ ನೋಟವನ್ನು ಬದಲಿಸಿಕೊಳ್ಳಿ

ನಿಮ್ಮಲ್ಲಿನ ಹಾಸ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಮೊಟ್ಟಮೊದಲ ಹೆಜ್ಜೆಯಿದು. ದಿನನಿತ್ಯ ನೀವು ನೋಡುವ ವಸ್ತು, ವ್ಯಕ್ತಿ, ಬವಣೆಗಳನ್ನು ಹಾಸ್ಯಾಸ್ಪದವಾಗಿ ಕಾಣಲು ಪ್ರಯತ್ನಿಸಿ. ನಿಮಗೆ ತಮಾಷೆ ಎನಿಸಿದ್ದನ್ನು ಇತರರೊಂದಿಗೆ ಹಂಚಿಕೊಂಡು ಸಂತಸ ಪಡಿ. ಆಗ ನೋಡಿ, ನಿಮ್ಮ ಜೀವನದ ಪ್ರತಿಯೊಂದು ನಡೆಯಲ್ಲೂ ಹಾಸ್ಯಹೊಕ್ಕಿರುವುದು ನಿಮಗೆ ಗೋಚರಿಸುವುದು. ಮನ ಬಿಚ್ಚಿ ನಕ್ಕಾಗ ನಿಮ್ಮ ಜೀವನ ಆಗುತ್ತೆ ಲೈಟ್!
ನಿರಂತರ ವೀಕ್ಷಣೆ
ನೀವು ಹೆಚ್ಚು ಹೆಚ್ಚು ಹಾಸ್ಯಪ್ರದ ಘಟನಾವಳಿಗಳನ್ನು ವೀಕ್ಷಿಸುವುದರಿಂದ, ಹಾಸ್ಯವನ್ನು ಹುಟ್ಟುಹಾಕುವ ವಿಷಯಗಳನ್ನು ವಿಶ್ಲೇಷಿಸಲು ಸಹಾಯವಾಗುವುದಲ್ಲದೇ, ಮತ್ತು ನೀವು ವಿವಿಧ ಸನ್ನಿವೇಶಗಳಲ್ಲಿ ಬರುವ ಹಾಸ್ಯದ ಕಲ್ಪನೆಯ ಪರಿಚಯವೂ ನಿಮಗಾಗುತ್ತದೆ. ಬೇರೆಯವರನ್ನು ನಗಿಸಬೇಕೆಂದರೆ, ಸ್ವಲ್ಪ ಶ್ರಮವಹಿಸಲೇಬೇಕಾಗುವದಲ್ಲವೇ? ಹಾಸ್ಯ ಕಟ್ಟುವ ಕೆಲಸ ಹೂವು ಕಟ್ಟುವಷ್ಟು ಸುಲಭವಲ್ಲ.
ಎಂದಿಗೂ ಸೋಲೊಪ್ಪದಿರಿ!
ಕೆಲವೊಮ್ಮೆ ನಿಮ್ಮ ಹಾಸ್ಯ ಯಾರಿಗೂ ರುಚಿಸದೇ ಇರಬಹುದು. ಅದಕ್ಕೆ ಯೋಗ್ಯ ಅಥವಾ ಧನಾತ್ಮಕ ಪ್ರತಿಕ್ರಿಯೆ ದೊರೆಯದಿರಬಹುದು. ಆದಾಗ್ಯೂ, ಈ ನಿಮ್ಮ ಪ್ರಯತ್ನವನ್ನು ಬಿಡದಿರಿ. ಟೀಕೆಗಳನ್ನು ಸ್ವಾಗತಿಸಿ, ಆ ತಪ್ಪುಗಳು ಮರುಕಳಿಸದಂತೆ ನಿಗಾವಹಿಸಿ. ಸತತ ಪ್ರಯತ್ನಕ್ಕೆ ಯಶಸ್ಸು ಖಂಡಿತ ದೊರಕುವುದು.
ತಾನಾಗೇ ಬರಲಿ
ಪ್ರತಿಯೊಬ್ಬನ ಮನದಲ್ಲೂ ಹಾಸ್ಯಕ್ಕೆ ಸ್ಥಾನವಿದೆ. ಅದು ಸ್ವಾಭಾವಿಕವಾಗಿ ಹೊರಹೊಮ್ಮಲು ಅವಕಾಶ ನೀಡಿ. ಯಾವುದೇ ಪರಿಸ್ಥಿತಿಯಲ್ಲೂ ಎದೆಗುಂದದೇ ಶಾಂತಚಿತ್ತರಾಗಿ ಕಾರ್ಯನಿರ್ವಹಿಸಿ. ನಿಮ್ಮ ಹಾಸ್ಯ ಆದಷ್ಟೂ ನೈಜವಾಗಿರಲಿ.
ಕಲಿಕೆ
ಕಲಿಕೆ ಜೀವನದ ಅವಿಭಾಜ್ಯ ಅಂಗ. ನಿಮ್ಮ ಹಾಸ್ಯಪ್ರಜ್ಞೆಯ ಉತ್ಕೃಷ್ಟತೆಗಾಗಿ ಮಕ್ಕಳು ಮತ್ತು ಸ್ನೇಹಿತರಿಂದ ಅನೇಕ ವಿಷಯಗಳನ್ನು ಕಲಿಯಬಹುದು. ಅವರೊಂದಿಗೆ ಹೆಚ್ಚಿನ ಸಮಯವನ್ನು ಕೆಳೆಯುವುದರ ಮೂಲಕ ಅವರ ಹಾಸ್ಯಪ್ರಜ್ಞೆಯನ್ನು ಗಮನಿಸಿ. ವಿವಿಧ ಸಂದರ್ಭಗಳನ್ನು ಹಾಸ್ಯಕಾರಕವಾಗಿ ನಿಭಾಯಿಸುವ ಬಗ್ಗೆ ಅವರಿಂದ ತಿಳಿಯಬಹುದು.
ನಗುವುದನ್ನು ಕಲಿಯಿರಿ
ಬೇರೆಯವರನ್ನು ನಗಿಸಬೇಕಾದರೆ ಮೊದಲು ನೀವು ನಗುವುದನ್ನು ಕಲಿಯಬೇಕು. ಕಠೋರವದನರಾಗಿ ಪಾಯಸ ಕೊಟ್ಟರೂ ವಿಷಕೊಟ್ಟಂತೆ ಎಂಬುದನ್ನು ಮರೆಯಬೇಡಿ. ಹಾಸ್ಯ,ನಗು ನಿಮ್ಮ ಬಾಯಲ್ಲಿ ಮಾತ್ರವಿರದೇ, ಅದು ನಿಮ್ಮ ಜೀವನ ಶೈಲಿಯಾಗಿರಬೇಕು. ಆಗ ಮಾತ್ರನಿಮಗೆ ಧನಾತ್ಮಕ ಪ್ರತಿಕ್ರಿಯೆ ಸಿಗಲು ಸಾಧ್ಯ. ನಾವು ಜೀವನದಲ್ಲಿ ಮಾಡುವ ಅತಿ ದೊಡ್ಡ 10 ತಪ್ಪುಗಳು!



Click it and Unblock the Notifications







