Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಬೀದಿ ಬದಿಯ ತಿಂಡಿಗಳ ಸ್ವರ್ಗ, ನಮ್ಮ ಭಾರತ!
ಬಹುಶಃ ನೀವು ಪ್ರಪಂಚದ ಇತರೆಡೆಗಳಲ್ಲಿ ದೊರೆಯುವ ಅತ್ಯುತ್ತಮವಾದ ತಿಂಡಿಗಳನ್ನು, ಐಷಾರಾಮಿ ಹೋಟೆಲ್‍ಗಳಲ್ಲಿ ತಿಂದಿರಬಹುದು. ಆದರೆ ಇವುಗಳಲ್ಲಿ ಯಾವ ತಿಂಡಿಗಳು ಭಾರತದ ಬೀದಿ ಬದಿಯಲ್ಲಿ ದೊರೆಯುವ ಪಾನಿ ಪುರಿಗಳನ್ನು ಗುಳುಂ ಎಂದು ನುಂಗುವಾಗ ನೀಡುವ ಆನಂದವನ್ನು ಮೀರಿಸಬಲ್ಲವು ಹೇಳಿ ನೋಡೋಣ. ಬೀದಿ ಬದಿಯಲ್ಲಿ ಮಾರುವ ತಿಂಡಿಗಳು ಸ್ವಚ್ಛತೆಯ ವಿಚಾರಕ್ಕೆ ಬಂದರೆ ಅಷ್ಟೇನು ಶುಚಿಕರವಲ್ಲದಿದ್ದರು, ರುಚಿಕರ ಮತ್ತು ಸಂತೃಪ್ತಿಯನ್ನು ನೀಡುವುದರಲ್ಲಿ ಹಿಂದೇಟು ಹಾಕಲಾರವು.
ಜೀವನದಲ್ಲಿ ಸತತ ಸೋಲು; 12 ಕಾರಣಗಳೇನು ಬಲ್ಲೀರಾ?
ಇನ್ನೂ ನಮ್ಮ ದೇಶದ ವಿಚಾರಕ್ಕೆ ಬಂದರೆ ಪ್ರತಿ ಬೀದಿಗೂ ಕೂಡ ಒಂದು ಇತಿಹಾಸವಿರುವಂತೆ, ಪ್ರತಿ ಮುಖ್ಯ ಬೀದಿಯಲ್ಲೂ ಒಂದು ತಿಂಡಿ ತನ್ನ ಸಾಮ್ರಾಜ್ಯವನ್ನು ಆಳುತ್ತಿರುತ್ತದೆ. ಇವುಗಳನ್ನು ಸವಿಯಬೇಕೆಂದರೆ, ನೀವು ಅವುಗಳಿರುವಲ್ಲಿಗೆ ಹೋಗಬೇಕು, ಅದಕ್ಕೆ ನೀವು ಸ್ವಲ್ಪ ಅಲೆಮಾರಿತನವನ್ನು ರೂಢಿಸಿಕೊಂಡಿರಬೇಕು.
ಭಾರತದಲ್ಲಿ ಪ್ರತಿಯೊಂದು ನಗರಕ್ಕೆ ತನ್ನದೇ ಆದ ವೈಶಿಷ್ಟ್ಯವಿರುವಂತೆ, ಅಲ್ಲಿ ದೊರೆಯುವ ಬೀದಿ ಬದಿಯ ಆಹಾರಗಳಿಗು ಸಹ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ಉದಾಹರಣೆಗೆ ದೆಹಲಿಯನ್ನು ಹೊರತುಪಡಿಸಿ ಭಾರತದ ಇತರೆಡೆ ರುಚಿಕರವಾದ ಚೋಲೆ ಭತುರೆಯನ್ನು ಹುಡುಕಲು ಸಾಧ್ಯವಿಲ್ಲ. ಅದೇ ರೀತಿ, ಮುಂಬೈಯನ್ನು ಹೊರತುಪಡಿಸಿ ಎಲ್ಲಾದರು ವಡಾ ಪಾವ್ ತಿಂದು ನೋಡಿದ್ದೀರಾ? ಯಾವ ನಗರದಲ್ಲಿನ ವಡಾ ಪಾವ್ ರುಚಿಯು ಮುಂಬೈಯ ವಡಾ ಪಾವನ್ನು ಮೀರಿಸಬಲ್ಲದು.
ರುಚಿಯ ಜೊತೆಗೆ ಬೀದಿ ಬದಿಯ ಆಹಾರಗಳು ಕೈಗೆಟುಕುವ ದರದಲ್ಲಿ ನಮಗೆ ದೊರೆಯುತ್ತವೆ. ಈ ಆಹಾರಗಳನ್ನು ಸೇವಿಸಲು ನೀವು ದೊಡ್ಡ ಮೊತ್ತದ ಹಣವನ್ನು ಸಂಪಾದಿಸುವ ವ್ಯಕ್ತಿಯೇ ಆಗಿರಬೇಕೆಂದೇನಿಲ್ಲ. ಅದರ ಬದಲಿಗೆ ಕೈಯಲ್ಲಿ ಕಾಸಿಲ್ಲದೆ ಅಪ್ಪ-ಅಮ್ಮ ನೀಡುವ ಪಾಕೆಟ್ ಮನಿಯಲ್ಲಿ ಜೀವಿಸುವ ಕಾಲೇಜ್ ಹುಡುಗನಾಗಿದ್ದರು ಪರವಾಗಿಲ್ಲ. ನಿಮಗೆ ಇಷ್ಟ ಬಂದ ತಿಂಡಿಯನ್ನು, ನಿಮ್ಮಲ್ಲಿರುವಷ್ಟು ಹಣದಲ್ಲಿಯೇ ತಿನ್ನಬಹುದು. ಅದು ಭಾರತದ ಬೀದಿ ಬದಿಯ ತಿಂಡಿಗಳ ಹೆಚ್ಚುಗಾರಿಕೆ.

ಪಾನಿ ಪೂರಿ
ಭಾರತದ ಪ್ರತಿ ಮೂಲೆಗೆ ಹೋದರು ನೀವು ಈ ಪಾನಿ ಪೂರಿಯ ವಿವಿಧ ಆವೃತ್ತಿಗಳನ್ನು ರುಚಿ ನೋಡುವ ಭಾಗ್ಯವನ್ನು ಪಡೆಯಬಹುದು. ನಮ್ಮ ಕರ್ನಾಟಕದಲ್ಲಿಯು ಬಂಗಾರಪೇಟೆ ಪಾನಿಪೂರಿ ಎಂಬ ಬಗೆಯು ಸಹ ಪ್ರಸಿದ್ಧಿಯನ್ನು ಪಡೆದಿದೆ. ದೆಹಲಿಯಲ್ಲಿ ಇದನ್ನು "ಗೋಲ್‍ಗೊಪ್ಪ" ಎಂದು ಕರೆಯುತ್ತಾರೆ. ಕೊಲ್ಕತ್ತಾದಲ್ಲಿ ಇದನ್ನು "ಫುಚ್ಕಾ" ಎಂದು ಕರೆಯುತ್ತಾರೆ. ಮುಂಬೈನಲ್ಲಿ ಇದನ್ನು "ಪಾನಿಪೂರಿ" ಎಂದು ಕರೆಯುತ್ತಾರೆ. ಇದು ಒಂದು ಬಗೆಯ ಪೂರಿಯಾಗಿದ್ದು, ಹುಣಸೆಹಣ್ಣಿನ ನೀರಿನಲ್ಲಿ ಅದ್ದಿ ತಿನ್ನಲು ನೀಡುತ್ತಾರೆ.

ವಡಾ ಪಾವ್
ಪ್ರತಿಯೊಬ್ಬ ಮುಂಬೈಕರ್ ತಿನ್ನಲು ನೆಪ ಹುಡುಕುವ ಒಂದೇ ತಿಂಡಿ ಅದು ವಡಾ ಪಾವ್. ಇದೊಂದು ಆಲುಗಡ್ಡೆಯ ಬೊಂಡವನ್ನು ಕತ್ತರಿಸಿದ ಬ್ರೆಡ್ ನಡುವೆ ಇಟ್ಟು, ತಿನ್ನಲು ನೀಡುವ ತಿಂಡಿಯಾಗಿದೆ. ಜೊತೆಗೆ ಒಂದು ಉಪ್ಪು ಹಾಕಿದ ಉರಿದ ಹಸಿ ಮೆಣಸಿನ ಕಾಯಿ ಬೇರೆ!. ಆ ಆ ರುಚಿ ಬಲ್ಲವನೆ ಬಲ್ಲ.

ಚೌಮೆನ್
ಇದೊಂದು ಬಗೆಯ ರಸ್ತೆ ಬದಿಯಲ್ಲಿ ದೊರೆಯುವ ನೂಡಲ್ಸ್ ಆಗಿದೆ. ಇದು ನೀವು ಮನೆಯಲ್ಲಿ ಮಾಡುವ ಇನ್‍ಸ್ಟಂಟ್ ನೂಡಲ್ಸ್ ಆಗಲಿ ಅಥವಾ ಐಷಾರಾಮಿ ಚೈನೀಸ್ ಹೋಟೆಲ್‍ಗಳಲ್ಲಿ ದೊರೆಯುವ ನೂಡಲ್ಸ್ ಆಗಲಿ ಅಲ್ಲ. ಇದೊಂದು ಬಗೆಯ ನೂಡಲ್ಸ್ ಆಗಿದ್ದು, ಕರಿದು, ಮಸಾಲೆಯ ಸಾಸ್ ಜೊತೆಗೆ ಸವಿಯಲು ನೀಡುತ್ತಾರೆ.

ದೋಸೆ
ಭಾರತದ ಬಹುತೇಕ ಭಾಗಗಳಲ್ಲಿ ಬೀದಿ ಬದಿಯಲ್ಲಿ ದೋಸೆಯನ್ನು ಮಾರಾಟ ಮಾಡುತ್ತಾರೆ. ಆಯಾ ಸ್ಥಳೀಯ ಭಾಷೆಗಳಲ್ಲಿ ನೀವು ಸಹ ಓದಿರಬಹುದು ರಸ್ತೆ ಬದಿಯಲ್ಲಿ " 99 ಬಗೆಯ ದೋಸೆಗಳು" ಎಂಬ ಬರಹವನ್ನು, ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಇದರ ಬೇಡಿಕೆ ಹೆಚ್ಚು, ಚಟ್ನಿ ಜೊತೆಗೆ ಬಿಸಿ ದೋಸೆಯಿದ್ದರೆ ಅದರ ರುಚಿಯೇ ಬೇರೆಯಾಗಿರುತ್ತದೆ.

ಮೊಮೊಸ್
ಮೊಮೊಸ್ ಎಂಬುದು ಈಶಾನ್ಯ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ತಿಂಡಿಯಾಗಿತ್ತು. ಆದರೆ ಈಗ ಬೆಂಗಳೂರಿನಲ್ಲೂ ಸೇರಿದಂತೆ ದೇಶದಾದ್ಯಂತ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಮೊಮೊಸ್‍ಗಳನ್ನು ಮಾರಾಟ ಮಾಡಲಾಗುತ್ತಿದೆ. ಒಮ್ಮೆ ಮೊಮೊಸ್ ರುಚಿ ನೋಡಿ.

ಬೇಲ್ ಪುರಿ
ವಾರೆವ್ಹಾ!! ಟೈಮ್ ಪಾಸ್‍ಗೆ, ಮಾತನಾಡಲು, ಹೊಟ್ಟೆ ಹಸಿದಾಗ, ಚಳಿ ಎಂದು ಖಾರ ತಿನ್ನಲು ಮನಸ್ಸು ಬೇಡಿದಾಗ ನಿಮಗೆ ಮೊದಲು ಕಂಡು ಬರುವುದು ಬೇಲ್ ಪುರಿ, ಕಡಲೆ ಪುರಿ, ಹುಣಸೆ ರಸ, ಮಸಾಲೆಗಳನ್ನು ಮಿಶ್ರಣ ಮಾಡಿದ ಈ ತಿಂಡಿಯು ಭಾರತೀಯರ ನೆಚ್ಚಿನ ತಿಂಡಿ. ಮೊದಲು ಬೀದಿ ಬದಿಯಲ್ಲಿ ಶುರುವಾಗಿ ಇಂದು ತಾರಾ ಹೋಟೆಲ್‍ವರೆಗು ಇದು ಸಾಗಿದೆ ಎಂದರೆ ಇದರ ಜನಪ್ರಿಯತೆಯನ್ನು ನೀವೇ ಊಹಿಸಿ. ದೇಶದ ಕೆಲವು ಭಾಗಗಳಲ್ಲಿ ಇದನ್ನು "ಜಾಲ್ ಮುರಿ" ಎಂದು ಕರೆಯುತ್ತಾರೆ.

ಎಗ್ ರೋಲ್
ಕೊಲ್ಕತ್ತಾದ ಜನರ ನಾಲಿಗೆಗೆ ಮಾತ್ರ ರುಚಿಯನ್ನು ಒದಗಿಸುತ್ತಿದ್ದ ಎಗ್ ರೋಲ್‍ಗಳು ಈಗ ದೇಶದ ಇತರೆಡೆಗಳಲ್ಲಿ ಸಹ ಸಿಗುತ್ತದೆ. ಇದೊಂದು ಸಾಮಾನ್ಯವಾದ ಪರೋಟದ ಒಳಗೆ ಮೊಟ್ಟೆಯನ್ನು ಕರಿದು, ಅದಕ್ಕೆ ಈರುಳ್ಳಿ, ಟೊಮೇಟೊ ಮತ್ತು ಸಾಸ್‍ಗಳನ್ನು ಜೊತೆಗೆ ತಿನ್ನಲು ನೀಡಲಾಗುತ್ತದೆ.

ಬಜ್ಜಿ
ಬಜ್ಜಿ (ಉತ್ತರ ಕರ್ನಾಟಕದಲ್ಲಿ ಮೆಣಸಿನಕಾಯಿ ಎನ್ನುತ್ತಾರೆ) ಯಾರಿಗೆ ಗೊತ್ತಿಲ್ಲ. ಈರುಳ್ಳಿ ಬಜ್ಜಿ, ಆಲೂಗಡ್ಡೆ ಬಜ್ಜಿ, ಮೆಣಸಿನ ಕಾಯಿ ಬಜ್ಜಿ, ಈಗೀಗ ಬ್ರೆಡ್ ಬಜ್ಜಿ, ಕ್ಯಾಪ್ಸಿಕಂ ಬಜ್ಜಿ, ಮುಂತಾದವು ಆಹಾರ ಪ್ರಿಯರನ್ನು ಸಂಜೆ ಆರು ಗಂಟೆಯಾದ ಕೂಡಲೆ ಒಮ್ಮೆ ನೆನಪಿಸಿಕೊಳ್ಳುವಂತೆ ಮಾಡುವ ತಿಂಡಿಗಳು. ಬಹುಶಃ ಎಲ್ಲಾ ಕಡೆ ಇದನ್ನು ಮಾರುತ್ತಾರೆ. ಅದರಲ್ಲೂ ನಮ್ಮ ಉತ್ತರ ಕರ್ನಾಟಕದಲ್ಲಿ ಇದರ ಭರಾಟೆ ಜೋರು. ನೀವು ಬಜ್ಜಿ ಪ್ರಿಯರಾಗಿದ್ದಲ್ಲಿ, ಕೊಟ್ಟೂರಿಗೆ ಒಮ್ಮೆ ಭೇಟಿ ನೀಡಿ, ಮೆಣಸಿನ ಕಾಯಿ (ಬಜ್ಜಿ) ತಿಂದು ಬನ್ನಿ!!!.

ಸಮೋಸ
ತ್ರಿಭುಜಾಕಾರದಲ್ಲಿರುವ, ಆಲೂಗಡ್ಡೆಯ ಪಲ್ಯವನ್ನು ಒಡಲಲ್ಲಿ ಇರಿಸಿಕೊಂಡ, ಎಣ್ಣೆಯಲ್ಲಿ ಕರಿದ ಈ ತಿಂಡಿ ಯಾರಿಗೆ ಗೊತ್ತಿಲ್ಲ. ಭಾರತದ ಪ್ರತಿ ರಾಜ್ಯದಲ್ಲೂ ಇದರ ಪ್ರಸಿದ್ಧಿ ಬೀದಿ ಬೀದಿಗು ಚಾಚಿದೆ. ಒಮ್ಮೆ ಬಿಸಿ ಸಮೋಸವನ್ನು ಸಾಸ್ ಜೊತೆಗೆ ತಿಂದು ನೋಡಿ. ಅದರ ರುಚಿ ನಿಮ್ಮನ್ನು ಮತ್ತೆ ಅಲ್ಲಿಗೆ ಕರೆದೊಯ್ಯುತ್ತದೆ.

ಜಿಲೇಬಿ
ಕಡಲೆ ಹಿಟ್ಟು, ಸಕ್ಕರೆ ಬೆರೆಸಿ ಮಾಡಿದ ಹಿಟ್ಟನ್ನು ಕುದಿಯುವ ಎಣ್ಣೆಯಲ್ಲಿ ನಿಮ್ಮ ಮುಂದೆಯೇ ಸುರುಳಿಯಾಕಾರದಲ್ಲಿ ಬಿಟ್ಟು ಗರಂ ಗರಂ ಎನ್ನುವಂತೆ ಬೇಯಿಸಿ, ತಿನ್ನಲು ನೀಡುವ ಮಿಠಾಯಿವಾಲಾಗಳು ನಿಮ್ಮ ನಾಲಿಗೆಗೆ ರುಚಿ ಹತ್ತುವ ಮೊದಲೆ ನೀರು ಬರುವಂತೆ ಮಾಡುತ್ತಾರೆ. ಸಿಹಿ ಅಂಗಡಿಗಳಲ್ಲಿ ಆರಿದ ಜಿಲೇಬಿ ತಿನ್ನುವುದಕ್ಕಿಂತ, ರಸ್ತೆ ಬದಿಯಲ್ಲಿ ನಿಂತು, ಮಾಡುವಾತನ ಕೈಚಳಕ ನೋಡಿ ತಿಂದರೆ! ಆ ರುಚಿಯೇ ಬೇರೆ. ಇದು ಸಹ ಭಾರತದ ಎಲ್ಲೆಡೆ ದೊರೆಯುತ್ತದೆ.

ಚಾಟ್‍ಗಳು
ಚಾಟ್‍ಗಳಲ್ಲಿ ಹಲವಾರು ಬಗೆಗಳಿವೆ. ದಹಿ ಚಾಟ್, ಪಾಪ್ಡಿ ಚಾಟ್ ಮತ್ತು ಇತ್ಯಾದಿ ಬಗೆಯ ಚಾಟ್‍ಗಳನ್ನು ನೀವು ರುಚಿ ನೋಡಬಹುದು. ಇವು ಮುಖ್ಯವಾಗಿ ಉತ್ತರ ಭಾರತದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ.

ಚೋಲೆ ಭಟೂರಾ
ಚೋಲೆ ಭಟೂರಾ ದೆಹಲಿಯ ಅಚ್ಚುಮೆಚ್ಚಿನ ಬೀದಿ ಬದಿಯ ತಿಂಡಿಯಾಗಿದೆ. ಇದು ಕಾಬೂಲ್ ಕಡಲೆಕಾಳುಗಳು, ಮಸಾಲೆ ಸಾರು ಮತ್ತು ಕರಿದ ಪೂರಿಗಳನ್ನು ಒಳಗೊಂಡಿರುತ್ತದೆ. ದೆಹಲಿಯಲ್ಲಿ ಇದು ಭಾನುವಾರದ ವಿಶೇಷ ತಿಂಡಿಯಾಗಿ ಸೇವಿಸಲಾಗುತ್ತದೆ.

ಕಬಾಬ್‍ಗಳು
ಭಾರತದ ಅತ್ಯುತ್ತಮ ಕಬಾಬ್‍ಗಳನ್ನು ಸೇವಿಸಬೇಕೆಂದರೆ ರಸ್ತೆ ಬದಿಯಲ್ಲಿರುವ ಅಂಗಡಿಗಳಿಗೆ ಬೇಟಿ ನೀಡಬೇಕು. ಮಸೀದಿಗಳ ಪಕ್ಕದಲ್ಲಿ ನಿಮಗೆ ಗ್ರಿಲ್ ಮಾಡಲಾದ, ರೋಸ್ಟ್ ಮಾಡಲಾದ ಮಾಂಸವನ್ನು ತೆಗೆದುಕೊಳ್ಳುವ ಆಯ್ಕೆ ಇರುತ್ತದೆ. ದೆಹಲಿಯ ಜಾಮ ಮಸೀದಿಯ ಹಿಂಬದಿಯಲ್ಲಿರುವ ರಸ್ತೆಗಳಲ್ಲಿ ನಿಮಗೆ ಅತ್ಯಂತ ರುಚಿಕರವಾದ ಕಬಾಬ್‍ಗಳು ದೊರೆಯುತ್ತವೆ.

ಆಲೂ ಟಿಕ್ಕಿ
ಟಿಕ್ಕಿ ಎಂಬುದು ಉತ್ತರ ಭಾರತದ ಮತ್ತೊಂದು ತಿಂಡಿಯಾಗಿದೆ. ಆಲೂ ಟಿಕ್ಕಿಯನ್ನು ಆಲೂಗಡ್ಡೆಗಳಿಂದ ತಯಾರಿಸಲಾಗುತ್ತದೆ. ಹಲವು ಬಗೆಗಳ ಟಿಕ್ಕಿಗಳಿದ್ದರು, ಆಲೂ ಟಿಕ್ಕಿಗೆ ಇರುವ ಖ್ಯಾತಿ ಯಾವುದಕ್ಕು ಇಲ್ಲ.

ಪಾವ್ ಬಾಜಿ
ನೀವೇನಾದರು ಮುಂಬೈ ವಾಸಿಗಳಾಗಿದ್ದಲ್ಲಿ, ನಿಮಗೆ ಪರಿಚಯವಿರುತ್ತದೆ. ಆ ದೈನಂದಿನ ಜಂಜಡಗಳಿಂದ ಕೂಡಿದ ತರಾತುರಿಯ ನಗರದಲ್ಲಿ ಪಾವ್ ಬಾಜಿ ಎಷ್ಟು ಮುಖ್ಯವೆಂದು!. ಇದು ಹಲವಾರು ತರಕಾರಿಗಳನ್ನು ಒಟ್ಟಿಗೆ ಸೇರಿಸಿ, ಹೆಂಚಿನ ಮೇಲೆ ಕುಟ್ಟಿ, ಕುಟ್ಟಿ ತಯಾರಿಸಿದ ಗಟ್ಟಿಯಾದ ಸಾರಿನಂತಿರುತ್ತದೆ. ಇದರ ಜೊತೆಗೆ ಬೆಣ್ಣೆ ಹಾಕಿದ ಬ್ರೆಡ್ ನೀಡಲಾಗುತ್ತದೆ. ನೆಂಜಿಕೊಳ್ಳಲು ಈರುಳ್ಳಿ ಸಹ ನೀಡುತ್ತಾರೆ.

ಮ್ಯಾಗಿ
ಭಾರತದ ಬಹುತೇಕ ಗಿರಿಧಾಮಗಳಲ್ಲಿ ನೂಡಲ್‍ಗಳನ್ನು ವಿವಿಧ ಬಗೆಯ ಆವೃತ್ತಿಗಳಲ್ಲಿ, ರುಚಿಗಳಲ್ಲಿ ಮಾರುತ್ತಾರೆ. ಕೆಲವು ಕಡೆ ಇವುಗಳನ್ನು ತರಕಾರಿಗಳ ಜೊತೆಗೆ ಪಲಾವ್‍ನಂತೆ ಕೊಟ್ಟರೆ, ಇನ್ನೂ ಕೆಲವು ಕಡೆ ಒಡೆದ ಮೊಟ್ಟೆಗಳ ಜೊತೆಗೆ ಬೆರೆಸಿ ನೀಡುತ್ತಾರೆ.

ಶಾವರ್ಮ ರೋಲ್
ಅರಬ್ ದೇಶಗಳ ಬೀದಿ ಬದಿಯ ಆಹಾರವು ಈಗ ಭಾರತಕ್ಕೆ ಕೂಡ ಅಡಿಯಿಟ್ಟು, ದಿನೇ ದಿನೇ ಜನಪ್ರಿಯಗೊಳ್ಳುತ್ತಿದೆ. ಪ್ರತಿ ನಗರದಲ್ಲೂ ಸಹ ನಿಮಗೆ ಶಾವರ್ಮ ರೋಲ್‍ಗಳು ಈಗ ದೊರೆಯುತ್ತವೆ. ಈ ರೋಲ್‍ಗಳನ್ನು ಮಯೊನ್ನೈಸ್, ವಿನೆಗರ್ ಮತ್ತು ಗ್ರಿಲ್‍ಡ್ ಚಿಕನ್‍ಗಳನ್ನು ರುಮಾಲಿ ರೋಟಿಗಳ ಜೊತೆಗೆ ನೀಡಲಾಗುತ್ತದೆ.

ಪರೋಟಾಗಳು
ಭಾರತದ ಉತ್ತರ ಭಾಗದಲ್ಲಿ ವಿವಿಧ ಬಗೆಯ ಪರೋಟಾಗಳು ಚಾಲ್ತಿಯಲ್ಲಿವೆ. ಅದು ಆಲೂ ಪರೋಟಾ, ಗೋಬಿ ಪರೋಟಾ, ಮಶ್ರೂಮ್ ಪರೋಟಾ ಇತ್ಯಾದಿಗಳಾಗಿ ಗ್ರಾಹಕರ ಹೊಟ್ಟೆ ತುಂಬುತ್ತವೆ. ಇದು ಸಾಮಾನ್ಯವಾಗಿ ಉಪಾಹಾರವಾಗಿ ಸೇವಿಸಲಾಗುತ್ತದೆ. ಆದರೆ ಈಗ ಈ ಅಂಗಡಿಗಳ ಭರಾಟೆಯಿಂದ ಯಾವಾಗ ಬೇಕಾದರು ಸೇವಿಸಬಹುದಾಗಿದೆ.

ರಬ್ರಿ
ಪವಿತ್ರ ನಗರಿ ವಾರಾಣಸಿಗೆ ನೀವು ಭೇಟಿ ನೀಡಿದ್ದಲ್ಲಿ, ರಬ್ರಿಯ ರುಚಿ ನೋಡಿರುತ್ತೀರಿ. ರಬ್ರಿಯ ಸೇವಿಸುತ್ತ ಗಂಗಾ ನದಿಯ ದಂಡೆಯಲ್ಲಿ ನಡೆದು ಹೋಗುವ ಅನುಭವ ಅಮೋಘ. ಗಟ್ಟಿಯಾದ ಹಾಲಿನೊಂದಿಗೆ ಮಾಡಿದ ಈ ಸಿಹಿ ತಿಂಡಿ ಭಾರತದ ಬೀದಿಗಳಲ್ಲಿ ದೊರೆಯುವ ಪ್ರಸಿದ್ಧ ಸಿಹಿ ತಿಂಡಿಯಾಗಿದೆ.

ಚಾಪ್ಸ್
ಚಾಪ್ಸ್ ಅನ್ನು ಆಲೂಗಡ್ಡೆ, ಮೊಟ್ಟೆ, ಕೋಳಿ ಮಾಂಸ, ಮೀನು ಅಥವಾ ಇತ್ಯಾದಿ ತರಕಾರಿಗಳೊಂದಿಗೆ ಮಾಡಬಹುದು. ಈ ಕರಿದ ಚಾಪ್ಸ್‌ಗಳು ಕೊಲ್ಕಟಾದ ಪ್ರಸಿದ್ಧ ತಿಂಡಿಯಾಗಿದೆ. ಆದರೆ ಇದರ ವಿವಿಧ ಬಗೆಯ ರುಚಿಗಳನ್ನು ನೀವು ಭಾರತದಲ್ಲಿ ಬಹುತೇಕ ಎಲ್ಲಾ ಕಡೆಯಲ್ಲಿಯೂ ಸವಿಯಬಹುದು.
ಇವುಗಳ ಜೊತೆಗೆ ಇನ್ನೂ ಹಲವಾರು ತಿಂಡಿ ತಿನಿಸುಗಳು ಭಾರತದ ಬೀದಿ ಬದಿಯಲ್ಲಿ ಮಾರಾಟಗೊಳ್ಳುತ್ತವೆ, ನಮ್ಮ ಚುರುಮುರಿ, ಮಂಡಕ್ಕಿ, ಪಡ್ಡು ಮುಂತಾದವು ಸಹ ಜನರ ನಾಲಿಗೆಗಳನ್ನು ತಣಿಸಿ, ಹೊಟ್ಟೆಯನ್ನು ಸಹ ತುಂಬಿಸುತ್ತವೆ.

ಎಲ್ಲಾ ಕಾಲಕ್ಕೂ ಒಗ್ಗುವ ಮೆಚ್ಚಿನ ತಿನಿಸು ಚಿತ್ರಾನ್ನ
ಬೀದಿ ಬದಿಯಲ್ಲಿ ಮಾರಾಟವಾಗುವ ಹೆಚ್ಚಿನ ತಿನಿಸುಗಳಲ್ಲಿ ಚಿತ್ರಾನ್ನ ಕೂಡ ಒಂದು. ಅತಿ ಸರಳವಾಗಿ ಮಾಡಬಹುದಾದ ಈ ತಿನಿಸು ಬೀದಿ ಬದಿಯ ಆಹಾರಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇದನ್ನು ಹೆಚ್ಚಿನ ಜನರು ಇಷ್ಟಪಡುತ್ತಿದ್ದು ಬಾಯಲ್ಲಿ ನೀರೂರಿಸುವ ಸಾಮರ್ಥ್ಯ ಇದಕ್ಕಿದೆ ಎಂದರೆ ಅದು ಅಚ್ಚರಿಯ ಮಾತೇ ತಾನೇ? ಉದುರುದಾಗಿರುವ ಅನ್ನದೊಂದಿಗೆ ಬೆರೆಸಲಾಗುವ ಈರುಳ್ಳಿ, ಟೊಮೇಟೊ, ತೆಂಗಿನ ತುರಿ ಕರಿಬೇವಿನ ಒಗ್ಗರಣೆ ಚಿತ್ರಾನ್ನದ ಸವಿಯನ್ನು ಹೆಚ್ಚಿಸುತ್ತದೆ ಮತ್ತು ಅಸದಳ ಸ್ವಾದವನ್ನು ನೀಡುತ್ತದೆ.



Click it and Unblock the Notifications