Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಕ್ಷಿಣದ ಹುಡುಗಿಯನ್ನು ಮೆಚ್ಚಲು ಹನ್ನೆರಡು ಕಾರಣಗಳು
ಭಾರತದಲ್ಲಿರುವ ಪ್ರತಿಯೊಂದು ಸಮುದಾಯಕ್ಕೆ ಅಡ್ಡ ಹೆಸರು ಸಾಮಾನ್ಯವಾಗಿರುತ್ತದೆ. ಬೆಂಗಾಳಿಗಳನ್ನು ಬೋಂಗ್ ಎಂದೂ, ತಮಿಳು ಬ್ರಾಹ್ಮಣರನ್ನು ಟಾಮ್ ಬ್ರಾಮ್ಸ್ ಎಂದೂ ಹೀಗೆ ಇದರ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ. ಇದೇ ರೀತಿ ಭಾರತದ ಸಮುದಾಯದಲ್ಲಿರುವ ಮಹಿಳೆಯರಿಗೂ ಇಂತಹುದೇ ಅನ್ವರ್ಥ ನಾಮಗಳಿವೆ.
ವಿವಿಧ ಸಮುದಾಯಗಳಿಂದ ಬಂದಿರುವಂತಹ ಹೆಣ್ಣುಮಕ್ಕಳಿಗೆ, ಆ ಸಮುದಾಯಕ್ಕೆ ಸಂಬಂಧಿಸಿದ ಹೆಸರನ್ನು ಇಡುತ್ತಾರೆ. ಅದರಲ್ಲೂ ದಕ್ಷಿಣದ ಮಹಿಳೆಯರಿಗೆ ಹೆಚ್ಚು ಆದ್ಯತೆ. ಆದ್ದರಿಂದಲೇ ದಕ್ಷಿಣದ ಮಹಿಳೆಯರನ್ನು ಪುರುಷರು ಮೆಚ್ಚಿಕೊಳ್ಳಲು ಬಹಳಷ್ಟು ಅಂಶಗಳಿವೆ.
ಸ೦ತಾನಹೀನತೆಯನ್ನು ಮೆಟ್ಟಿ ನಿ೦ತ 5 ಸೆಲೆಬ್ರಿಟಿಗಳು
ದಕ್ಷಿಣದ ಮಹಿಳೆಯರು ತುಂಬಾ ಅರ್ಪಣಾ ಸ್ವಭಾವದವರಾಗಿರುತ್ತಾರೆ. ತಮ್ಮ ಪತಿಯ ಸಂತೋಷದಲ್ಲೇ ತಮ್ಮ ಸಂತೋಷವನ್ನು ಕಾಣುವ ಮನೋಭಾವದವರು. ನಿಮ್ಮ ಮನಮೆಚ್ಚುವ ಮಡದಿಯಾಗಿ, ತುಂಟಾಟವಾಡುವ ಸ್ನೇಹಿತೆಯಾಗಿ, ಅಕ್ಕರೆಯ ಅಮ್ಮನಾಗಿ ಹೀಗೆ ಬಹಳಷ್ಟು ಜವಬ್ದಾರಿಗಳನ್ನು ನಿರ್ವಹಿಸುವಲ್ಲಿ ದಕ್ಷಿಣದ ಹುಡುಗಿಯದ್ದು ಎತ್ತಿದ ಕೈ. ನಿಮ್ಮ ಮನಸ್ಸನ್ನು ದಕ್ಷಿಣದ ಸುಂದರಿ ಏಕೆ ಕದಿಯುತ್ತಾಳೆ ಎಂಬುದು ಮನದಲ್ಲಿ ಪ್ರಶ್ನೆಯಾಗಿದ್ದಾರೆ ಅದಕ್ಕೆ ಸುಲಭವಾದ ಉತ್ತರವನ್ನು ನಮ್ಮ ಲೇಖನ ಒದಗಿಸುತ್ತದೆ.
ಅಡುಗೆ ಮಾಡುವುದರಲ್ಲೂ ಎತ್ತಿದ ಕೈಯಾಗಿರುವ ದಕ್ಷಿಣದ ಹುಡುಗಿಯರು ನಿಮ್ಮ ಡೇಟಿಂಗ್‌ಗಾಗಿ ಪರ್ಫೆಕ್ಟ್ ಮ್ಯಾಚ್ ಆಗಿದ್ದಾರೆ. ಇನ್ನಷ್ಟು ದಕ್ಷಿಣದ ಬೆಡಗಿಯರ ಕುರಿತಾದ ಸವಿಸ್ತಾರ ಮಾಹಿತಿಯನ್ನು ತಿಳಿದುಕೊಳ್ಳಲು ಮುಂದೆ ಓದಿ.

ಬುದ್ಧಿವಂತರು
ದಕ್ಷಿಣದ ಹುಡುಗಿಯರು ತುಂಬಾ ಬುದ್ಧಿವಂತರಾಗಿರುತ್ತಾರೆ ಮತ್ತು ಚಾಕಚಕ್ಯತೆಯುಳ್ಳವರಾಗಿರುತ್ತಾರೆ. ಡಂಬಾಚಾರಕ್ಕೆಲ್ಲಾ ಅವರು ಕಟ್ಟುಬೀಳುವುದಿಲ್ಲ. ಆಂತರಿಕವಾಗಿ ಸದೃಢವಾಗಿರುತ್ತಾರೆ ಮತ್ತು ಮೃದು ಮನಸ್ಸನ್ನೂ ಹೊಂದಿರುತ್ತಾರೆ.

ಕಡಿಮೆ ಬಜೆಟ್ ಗರ್ಲ್‌ಫ್ರೆಂಡ್
ನಿಜಕ್ಕೂ ದಕ್ಷಿಣದ ಗರ್ಲ್‌ಫ್ರೆಂಡ್‌ಗಳಿಗೆ ನೀವು ಜಾಸ್ತಿ ದುಡ್ಡು ಖರ್ಚು ಮಾಡಬೇಕಾಗಿಲ್ಲ. ಅವರು ಶಾಪಿಂಗ್ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುವುದರಲ್ಲಿ ಅಷ್ಟೊಂದು ಆಸಕ್ತರಾಗಿರುವುದಿಲ್ಲ.

ತೂಕಗಟ್ಟಲೆ ಚಿನ್ನ
ನಿಮಗೆ ದಕ್ಷಿಣದ ಹುಡುಗಿಯನ್ನು ವಿವಾಹವಾಗುವ ಸಮಯ ಒದಗಿಬಂದಿತೆಂದರೆ ನೀವು ಅದೃಷ್ಟವಂತರೇ ಸರಿ. ತನ್ನ ಮದುವೆಯ ಸಮಯದಲ್ಲಿ ಆಕೆ ಕೆಜಿಗಟ್ಟಲೆ ಬಂಗಾರವನ್ನು ಧರಿಸುತ್ತಾಳೆ. ನಿಮ್ಮ ಭವಿಷ್ಯ ಸುವರ್ಣಾಕ್ಷರಗಳಲ್ಲಿ ಬರೆದಂತೆಯೇ.

ಸಂಸ್ಕೃತಿಯ ಹರಿಕಾರೆ
ಹೆಚ್ಚಿನ ದಕ್ಷಿಣದ ಹುಡುಗಿಯರು ಸಂಪ್ರದಾಯ ಮತ್ತು ಮೌಲ್ಯಗಳಿಗೆ ಬೆಲೆ ನೀಡುತ್ತಾರೆ. ಮನೆಯ ಸಂಪ್ರದಾಯಗಳನ್ನು ಅವರು ಮುರಿಯುವುದಿಲ್ಲ. ಹೀಗೆ ಆಚಾರ ವಿಚಾರಗಳನ್ನು ಚಾಚು ತಪ್ಪದೇ ಪಾಲಿಸುವ ದಕ್ಷಿಣದ ಹುಡುಗಿಯನ್ನು ನಿಮ್ಮ ಬಾಳ ಸಂಗಾತಿಯನ್ನಾಗಿ ಆರಿಸಿ.

ನಿಮ್ಮನ್ನು ಸಾಂಬಾರ್‌ನಲ್ಲಿ ಅದ್ದಿಬಿಡುತ್ತಾರೆ!
ನಿಮ್ಮನ್ನು ಆಕೆಗೆ ಆಕರ್ಷಿಲು ಎರಡು ಕಾರಣಗಳಿವೆ. ಒಂದು ಸುಂದರವಾದ ಕಣ್ಣುಗಳು ಇನ್ನೊಂದು ಸಾಂಬಾರ್. ನಿಮ್ಮನ್ನು ಸಾಂಬಾರಿನಲ್ಲಿ ಅದ್ದಿಬಿಡುವಷ್ಟು ಸಾಂಬಾರು ಪ್ರಿಯೆರಾಗಿರುತ್ತಾರೆ ದಕ್ಷಿಣದ ಚೆಲುವೆಯರು.

ಸೀರೆಗಳಲ್ಲಿ ಅದ್ಭುತ
ಯಾವುದೇ ದಕ್ಷಿಣದ ಚೆಲುವೆಯರು ಕಾಂಜಿವರಂ ಸೀರೆಗಳಲ್ಲಿ ಇನ್ನಷ್ಟು ಸುಂದರಿಗಳಾಗಿ ಕಾಣುತ್ತಾರೆ. ಬೇರೆ ಡ್ರೆಸ್‌ಗಳು ಅವರಿಗೆ ಅಷ್ಟೊಂದು ಮ್ಯಾಚ್ ಆಗುವುದಿಲ್ಲ.

ಭಾರತೀಯ ದೇವತೆಯ ನೋಟ
ದಕ್ಷಿಣದ ಹುಡುಗಿಯರು ಚೆನ್ನಾಗಿ ಅಲಂಕಾರ ಮಾಡಿದರೆಂದರೆ ಭಾರತೀಯ ದೇವತೆಗಳನ್ನು ಕಂಡ ಅನುಭವ ನಿಮಗುಂಟಾಗುತ್ತದೆ. ದೊಡ್ಡದಾದ ಕಣ್ಣುಗಳು, ಉದ್ದನೆಯ ಕೂದಲು ಹಾಗೂ ಅವರ ಸಹಜ ಸೌಂದರ್ಯ ಅವರನ್ನು ಜೀವಂತ ದೇವತೆಯನ್ನಾಗಿ ಮಾಡುತ್ತದೆ.

ಅವರ ಹಿಂದಿ ಭಾಷೆ
ಹೆಚ್ಚಿನ ದಕ್ಷಿಣದ ಹುಡುಗಿಯರು ಬಹು ಭಾಷಿಗರಾಗಿರುತ್ತಾರೆ. ಅವರು ಮಾತನಾಡುವ ಪೆದ್ದು ಪೆದ್ದು ಹಿಂದಿ ನಿಜಕ್ಕೂ ನೇರವಾಗಿ ನಿಮ್ಮ ಹೃದಯವನ್ನು ತಟ್ಟುತ್ತದೆ.

ಇಂಗ್ಲೀಷ್ ಭಾಷಾ ರುಚಿ ಅದ್ಭುತ
ದಕ್ಷಿಣದ ಕೆಲವೊಂದು ಹುಡುಗಿಯರು ಅಷ್ಟೊಂದು ಚೆನ್ನಾಗಿ ಇಂಗ್ಲೀಷನ್ನು ಮಾತನಾಡಲಾರರು. ಆದರೆ ಇಂಗ್ಲೀಷ್ ಭಾಷೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ.

ಸಪೂರ ಮೈಕಟ್ಟು
ದಕ್ಷಿಣದ ಚೆಲುವೆಯರು ಸಪೂರ ಮೈಕಟ್ಟನ್ನು ಹೊಂದಿರುತ್ತಾರೆ ಮತ್ತು ತಮ್ಮ ದೇಹದ ಕಡೆಗೆ ಗಮನ ನೀಡುವವರಾಗಿರುತ್ತಾರೆ. ಅವರ ಚುರುಕುತನ ಈ ಸಪೂರ ಮೈಕಟ್ಟನ್ನು ಅವರಿಗೆ ನೀಡಿರುತ್ತದೆ. ಇದರಿಂದ ನಿಮ್ಮ ಸಂಗಾತಿ ನಿಮ್ಮನ್ನು ನಾನು ತುಂಬಾ ದಪ್ಪಗಿದ್ದೇನಾ ಎಂದು ಪ್ರಶ್ನೆ ಮಾಡುವಂತಿರುವುದಿಲ್ಲ.

ಸಂಗೀತ ಹಾಗೂ ನೃತ್ಯ ಆಸಕ್ತಿ
ದಕ್ಷಿಣದ ಹುಡುಗಿಯರು ಸಂಗೀತ ಮತ್ತು ನೃತ್ಯದಲ್ಲಿ ತುಂಬಾ ಆಸಕ್ತಿಯನ್ನು ವಹಿಸಿದವರಾಗಿರುತ್ತಾರೆ ಮತ್ತು ನೃತ್ಯ ಹಾಗೂ ಸಂಗೀತದಲ್ಲಿ ಪರಿಣಿತಿಯನ್ನು ಪಡೆದವರಾಗಿರುತ್ತಾರೆ.

ಹಳ್ಳಿಗಾಡಿನ ಸೊಬಗು
ಹಳ್ಳಿಗಾಡಿನ ಸೊಬಗು ಆಕೆಯ ಮೈ ಮನಗಳಲ್ಲಿ ಹಾಸು ಹೊಕ್ಕಂತೆ ಇರುತ್ತದೆ. ಸರಳ ಸುಂದರಿಯಾಗಿ ಸಂಸ್ಕೃತಿಗಳ ಭಂಡಾರವಾಗಿ ಅವರು ನಿಮಗೆ ಕಾಣಿಸಿಕೊಳ್ಳುತ್ತಾರೆ.



Click it and Unblock the Notifications