Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಬಿಡುವಿನ ವೇಳೆಯಲ್ಲಿ ನೀವು ಮಾಡಬೇಕಾದ ಕೆಲಸಗಳು
ನೀವು, ನಿಮ್ಮ ಬಿಡುವಿನ ವೇಳೆಯನ್ನು ನಿಜವಾಗಿ ಹೇಗೆ ಕಳೆಯುತ್ತೀರಿ ಎಂಬುದನ್ನು ಎಂದಾದರೂ ಗಮನಿಸಿದ್ದೀರಾ? ನೀವು ಈ ಸಮಯವನ್ನು ಫಲಪ್ರದವನ್ನಾಗಿಸಲು ಎಂದಾದರೂ ಪ್ರಯತ್ನಿಸಿದ್ದೀರಾ? ನಾವು ಸಾಮಾನ್ಯವಾಗಿ ಕೇಳಿತ್ತಲೇ ಇರುತ್ತೇವೆ 'ಯಾವುದು ಬಿಡುವಿನ ಸಮಯ' ಎಂಬುದಾಗಿ. ಆದರೆ, ವಾಸ್ತವವಾಗಿ ಜನರು ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡುತ್ತಾರೆ ಎಂದು ಅರ್ಥವೇನು ? ನಮಗೆ ಯಾವಾಗ ಬಿಡುವಿನ ವೇಳೆಯನ್ನು ಸಿಗುತ್ತದೆಯೋ ಆ ಸಮಯದಲ್ಲಿ ನಾವು ಸಾಮಾನ್ಯವಾಗಿ ಬಾಕಿ ಇರುವ ಕೆಲಸವನ್ನೇ ಮಾಡುತ್ತಿರುತ್ತೇವೆ ಮತ್ತು ನಾವು ಕಾರ್ಯನಿರತವಾಗಿವೆ ಎಂದು ಭಾವಿಸುತ್ತೇವೆ.
ನೀವು ವಾಸ್ತವವಾಗಿ, ವಿಶ್ರಾಂತಿ ಸಮಯವನ್ನು ಹೊಂದಲು ಸಾಧ್ಯವಿಲ್ಲ ಮತ್ತು ನಾನು ಕೆಲಸದ ನಡುವೆ ಆನಂದಿಸುವುದು ಯಾವಾಗ ಎನ್ನುವುದೇ ನಿಮಲ್ಲಿ ಆಶ್ಚರ್ಯವನ್ನುಂಟುಮಾಡಬಹುದು. ಆದರೆ ವಿಷಯ ಇದಲ್ಲ; ನೀವು ವಾಸ್ತವವಾಗಿ ನಿಮ್ಮ ಕೆಲಸವನ್ನೂ ಲೆಕ್ಕಿಸದೆ ನಿಮ್ಮ ಬಿಡುವಿನ ವೇಳೆಯನ್ನು ಕಂಡುಕೊಳ್ಳಬಹುದು! ಇದು ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿದೆ ಮತ್ತು ನೀವು ಈ ಕೆಲಸವನ್ನು ಮಾಡಲು ತುಸು ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ಸಂತೋಷದಿಂದ ಮನೆಗೆಲಸ ಮಾಡುವುದು
ನಿಮ್ಮ ದೈನಂದಿನ ಮನೆಗೆಲಸವನ್ನು ನೀವು ಖಚಿತವಾಗಿ ತಪ್ಪಿಸಲು ಸಾಧ್ಯವಿಲ್ಲ. ಅಡುಗೆ ಮಾಡುವುದು, ತೋಟಗಾರಿಕೆ ಮತ್ತು ಮನೆಗೆಲಸ ಇವುಗಳಲ್ಲಿ ಕೆಲವು. ನೀವು ಮಾಡಬಹುದಾದ ಒಂದು ಸರಳ ವಿಷಯವೆಂದರೆ ನೀವು ಈ ಮನೆಗೆಲಸಗಳನ್ನು ಸಂತೋಷದ ಸಮಯವನ್ನಾಗಿ ತಿರುಗಿಸಬಹುದು. ನಿಮ್ಮ ಬಿಡುವಿನ ವೇಳೆಯಲ್ಲಿ ಕೆಲವು ಹೊಸ ಪಾಕವಿಧಾನಗಳನ್ನು ಪ್ರಯತ್ನಿಸಿ ಅಥವಾ ಒಂದು ಹೊಸ ಸಸ್ಯಗಳನ್ನು ಬೆಳೆಸಲು ಪ್ರಯತ್ನಿಸಿ. ನಿಮ್ಮ ಮನೆಗೆ ಹೊಸ ಗಿಡಗಳನ್ನು ತರುವುದು ಅಥವಾ ಕೆಲವು ಹೊಸ ಕರ್ಟನ್ ಗಳನ್ನು ಹೊಲಿಯುವುದು ಇಂತಹ ನೂತನ ಕೆಲಸಗಳನ್ನು ಮಾಡಿ. ಇದು ನಿಮ್ಮ ಮನೆ ಮತ್ತು ಸುತ್ತಲಿನ ಜಾಗವನ್ನು ಸುಂದರವಾಗಿ ಮಾಡುತ್ತದೆ ಮತ್ತು ನಿಮ್ಮ ಬಿಡುವಿನ ಸಮಯವನ್ನು ವಿಶ್ರಾಂತಿಯಿಂದ ಕಳೆಯುವಂತೆ ಮಾಡುತ್ತದೆ. ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ಮರುಜೋಡಿಸಿ. ಮತ್ತು ನಿಮ್ಮ ಮನೆಗೆ ಒಂದು ಹೊಸ ನೋಟವನ್ನು ನೀಡಿ. ಇದು ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಮಾಡಬಹುದಾದ ಮೊದಲ 10 ವಿಷಯಗಳಲ್ಲಿ ಒಂದು.

ಸಾಕುಪ್ರಾಣಿಗಳನ್ನು ಮುದ್ದಿಸಿ
ನಿಮ್ಮ ಬಿಡುವಿನ ಸಮಯದಲ್ಲಿ ಮಾಡಲು 10 ವಿಷಯಗಳನ್ನು ತೆಗೆದುಕೊಂಡರೆ, ಅದರಲ್ಲಿ ಸಾಕುಪ್ರಾಣಿಗಳ ಜಗತ್ತೂ ಒಂದು! ನಿಮ್ಮ ಸಾಕು ಪ್ರಾಣಿಗಳು ಮನುಷ್ಯರಂತೆ, ಮತ್ತು ಅವುಗಳಿಗೆ ನಿಮ್ಮ ಆರೈಕೆಯ ಮತ್ತು ನಿಮ್ಮ ಕೆಲವು ಸಮಯವನ್ನು ನೀಡುವ ಅಗತ್ಯವಿದೆ. ನೀವು ಅವರಿಗೆ ಸ್ವಲ್ಪ ಸಮಯ ನೀಡಿ, ಮತ್ತು ಒತ್ತಡದ ಚಿಹ್ನೆಯೂ ಸಹ ನಿಮ್ಮ ಬಳಿ ಸುಳಿಯುವುದಿಲ್ಲ ಗಮನಿಸಿ! ನೀವು ನಿಮ್ಮ ಬಿಡುವಿನ ಸಮಯದಲ್ಲಿ ಕೇವಲ 10 ವಿಷಯಗಳನ್ನು ಮಾತ್ರವಲ್ಲ, ಇನ್ನೂ ಹಲವಾರು ಕೆಲಸಗಳನ್ನು ಮಾಡಬಹುದು. ಅವುಗಳಲ್ಲಿ ಸಾಕುಪ್ರಾಣಿಗಳ ಆರೈಕೆಯೂ ಅವುಗಳಲ್ಲಿ ಒಂದಾಗಿದೆ.

ಓದು ನಿಮ್ಮನ್ನು ರೂಪಿಸುತ್ತದೆ
ನಿಮ್ಮ ಬಿಡುವಿನ ವೇಳೆಯಲ್ಲಿ ಓದುವ ಹವ್ಯಾಸ, ನಿಮ್ಮ ಬಿಡುವಿನ ವೇಳೆಯನ್ನು ಉತ್ತಮವನ್ನಾಗಿಸುತ್ತದೆ. ನೀವು ದೀರ್ಘಕಾಲದಿಂದ ಓದಲು ಬಯಸಿದ ಒಂದು ಪುಸ್ತಕವನ್ನು ಓದಿ. ಪುಸ್ತಕ ಓದುವುದು ನಿಮ್ಮ ಐಪ್ಯಾಡ್ ಅಥವಾ ಐಫೋನ್ ಬಳಸುವುದಕ್ಕಿಂತ ಹೆಚ್ಚು ಆಸಕ್ತಿದಾಯಕವಾಗಿದೆ.

ಸುತ್ತಾಡುವುದು
ನೀವು ಸ್ನೇಹಿತರನ್ನು ಹೊಂದಿದ್ದರೆ, ನೀವು ಇದಕ್ಕಾಗಿ ಸ್ವಲ್ಪ ಸಮಯ ನೀಡುವುದು ಕಡ್ಡಾಯವಾಗಿದೆ. ನಿಮ್ಮ ಬಿಡುವಿನ ಸಮಯದಲ್ಲಿ ಮಾಡಬೇಕಾದ 10 ಕೆಲಸದಲ್ಲಿ ನಿಮ್ಮ ಸ್ನೇಹಿತರನ್ನು ಭೇಟಿ ಮಾಡುವುದೂ ಒಂದು. ಅವರೊಂದಿಗೆ ಸ್ವಲ್ಪ ಸುತ್ತಾಡಿಕೊಂಡು, ಕೆಲವು ಸಮಯ ಹಾಗೂ ಹಣವನ್ನು ವ್ಯಯಿಸಿ, ನಿಮ್ಮ ಮನಸ್ಸನ್ನು ಪ್ರಶಾಂತವಾಗಿಡಬಹುದು ! ನೀವು ಮತ್ತೆ ಖರ್ಚು ಮಾಡಿದ ಹಣವನ್ನು ಗಳಿಸಬಲ್ಲಿರಾದರೆ ಯಾವಾಗಲಾದರೊಮ್ಮೆ ಸ್ವಲ್ಪ ಹಣ ಖರ್ಚು ಮಾಡುವುದರಲ್ಲಿ ಯಾವುದೇ ಹಾನಿಯಿಲ್ಲ !

ನಿದ್ದೆಗಿಂತ ಆನಂದ ಇನ್ನೇನಿದೆ?
ನೀವು ಏನನ್ನು ಮಾಡಲು ಮೂಡ್ ಇಲ್ಲದಿದ್ದರೆ, ನಂತರ ಒಂದು ಸಣ್ಣ ನಿದ್ದೆ ಮಾಡುವ ಮೂಲಕ ನಿಮ್ಮ ಬಿಡುವಿನ ಸಮಯದಲ್ಲಿ ವಿಶ್ರಾಂತಿ ಪಡೆಯಬಹುದು. ಇದು ಕೂಡ ನಿಮ್ಮ ಉಚಿತ ಸಮಯದಲ್ಲಿ ಮಾಡಬೇಕಾದ 10 ವಿಷಯಗಳಲ್ಲಿ ಒಂದು.

ಮೌನವಾಗಿ ಕುಳಿತುಕೊಳ್ಳುವುದು
ನೀವು ಬಿಡುವಿನ ಸಮಯವನ್ನು ಪಡೆಯುವುದು ಯಾವಗಲಾದರೂ ಒಮ್ಮೆ ಆಗಿರಬಹುದು. ಮತ್ತು ನೀವು ನಿಮ್ಮೊಂದಿಗೆ ಕೆಲವು ಸಮಯವನ್ನು ಕಳೆಯುವುದು ಅವಶ್ಯಕ. ಸದ್ದಿಲ್ಲದೆ ಕುಳಿತು ನೀವು ನಿಮ್ಮೊಳಗೆ ಏನಾಗುತ್ತಿದೆ ಎಂಬುದನ್ನು ವಿಶ್ಲೇಷಿಸಲು ಇದೇ ಸರಿಯಾದ ಸಮಯ. ಇದೂ ಕೂಡ ನಿಮ್ಮ ಬಿಡುವಿನ ಸಮಯದಲ್ಲಿ ಮಾಡಬಹುದಾದ 10 ವಿಷಯಗಳ ಪೈಕಿ ಒಂದು. ನಿಮ್ಮ ಬಿಡುವಿನ ಸಮಯವನ್ನು ಉಪಯುಕ್ತವನ್ನಾಗಿಸುವುದು ನಿಮ್ಮ ಕೈಯಲ್ಲಿಯೇ ಇದೆ. ನಿಮ್ಮಗಿಷ್ಟವಾದ, ಹಾಗೆಯೇ ಮಾಡಲೇಬೇಕೆಂದುಕೊಂಡ ವಿಷಯವನ್ನು ಮಾಡಲು ಇದೇ ಸರಿಯಾದ ಸಮಯ!



Click it and Unblock the Notifications











