Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾವು ನಿದ್ರೆಯಲ್ಲಿ ಮಾಡುವ ಕೆಲವೊಂದು ವಿಚಿತ್ರ ವಿಷಯಗಳು!
ಕೆಲವರಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿರುತ್ತದೆ. ನಡುರಾತ್ರಿ ನಿದ್ದೆಯಲ್ಲಿದ್ದಂತೆಯೇ ಹಗಲಿನಲ್ಲಿ ನಡೆಯುವಷ್ಟೇ ಸರಾಗವಾಗಿ ಮನೆಯಲ್ಲೆಲ್ಲಾ ಓಡಾಡಿ, ಕೆಲವೊಮ್ಮೆ ಮನೆಯಿಂದ ಹೊರಗೆ ರಸ್ತೆ, ಉದ್ಯಾನಗಳಲ್ಲೂ ಓಡಾಡಿ ಮತ್ತೆ ಮೊದಲಿದ್ದ ಸ್ಥಳಕ್ಕೇ ಬಂದು ಮಲಗಿಬಿಡುತ್ತಾರೆ. ಮರುದಿನ ಬೆಳಿಗ್ಗೆ ಈ ಬಗ್ಗೆ ಕೇಳಿದರೆ ಇವೆಲ್ಲಾ ಅವರಿಗೆ ನೆನಪಿರುವುದೇ ಇಲ್ಲ. somnambulism ಎಂಬು ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುವ ಈ ತೊಂದರೆ ಮೆದುಳಿಗೆ ಸಂಬಂಧಪಟ್ಟಿದೆ. ಚಿಕ್ಕಂದಿನಲ್ಲಿ ಕಂಡುಬರುವ ಈ ಅಭ್ಯಾಸ ಹತ್ತು ವರ್ಷ ವಯಸ್ಸಾದಂತೆ ತನ್ನಿಂತಾನಾಗಿಯೇ ಕೊನೆಗೊಳ್ಳುತ್ತದೆ.
ಸಾಮಾನ್ಯವಾಗಿ ನಿದ್ದೆಯಲ್ಲಿ ನಡೆಯುವ ಅಭ್ಯಾಸ ನೇರವಾಗಿ ಅಪಾಯಕರವಲ್ಲದಿದ್ದರೂ ಹೊಸ ಸ್ಥಳಕ್ಕೆ ಹೋದಾಗ ಅಥವಾ ಮನೆಯ ಹೊರಗೇ ರಸ್ತೆಯಿದ್ದು ವಾಹನಗಳು ಓಡಾಡುತ್ತಿರುವಾಗ, ಮಲಗುವ ಕೋಣೆ ಮೇಲಂತಸ್ತಿನಲ್ಲಿದ್ದು ಕೆಳಕ್ಕೆ ಬೀಳುವ ಸಂಭವವಿದ್ದಾಗ ಪರೋಕ್ಷವಾಗಿ ಮಾರಣಾಂತಿಕವಾಗಿ ಪರಿಣಮಿಸಬಹುದು. ಹೆಚ್ಚಿನ ಪಕ್ಷದಲ್ಲಿ ಇದು ವಂಶಪಾರಂಪರಿಕವಾಗಿಯೂ ಬಂದಿರಬಹುದು. ಕೆಲವರು ಕಣ್ಣು ಬಿಟ್ಟುಕೊಂಡು ಎಚ್ಚರವಿದ್ದಂತೆಯೇ ವರ್ತಿಸುತ್ತಿದ್ದರೆ ಕೆಲವರು ಕಣ್ಣು ಮುಚ್ಚಿಕೊಂಡೇ ನಡೆಯುತ್ತಾರೆ. ಕೆಲವರಂತೂ ಯಾವುದೋ ಭೂತ ಅಥವಾ ಕಾಡುಪ್ರಾಣಿ ಅಟ್ಟಿಸಿಕೊಂಡು ಬಂದರೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವಂತೆ ಓಡುತ್ತಾರೆ.
ಇನ್ನೂ ಕೆಲವರು ಆರಾಮವಾಗಿ ಊಟದ ಮೇಜಿನ ಮೇಲೆ ಕುಳಿತು ಊಟ ಮಾಡಿ ಕೈತೊಳೆದು ಬಂದು ಮಲಗುತ್ತಾರೆ. ಹೆಚ್ಚಾಗಿ ಇದು ವಂಶಪಾರಂಪರ್ಯವಾಗಿ ಬರುವ ಕಾರಣವೆಂದು ತಜ್ಞರು ತಿಳಿಸಿದರೂ ದೈನಂದಿನ ಕೆಲಸದ ಅಥವಾ ಯಾವುದೋ ಒಂದು ವಿಷಯದ ಒತ್ತಡ ಮೆದುಳಿನ ಮೇಲೆ ಪ್ರಭಾವ ಬೀರಿ ನಿದ್ದೆಯಲ್ಲಿ ನಡೆಯುವ ಮತ್ತು ಇತರ ಘಟನೆಗಳಿಗೆ ಕಾರಣವಾಗಿದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ.

ವಿಶ್ವದಲ್ಲಿ ಅತಿಸಾಮಾನ್ಯವಾದ ನಡವಳಿಕೆ ಎಂದರೆ ನಿದ್ದೆಯಲ್ಲಿ ನಡೆಯುವುದು (somnambulism). ಸಾಮಾನ್ಯವಾಗಿ ನಾಲ್ಕರಿಂದ ಎಂಟು ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಈ ನಡವಳಿಕೆ ವಯಸ್ಸಾದಂತೆ ತನ್ನಿಂತಾನೇ ಕಡಿಮೆಯಾಗುತ್ತಾ ಹೋಗುತ್ತದೆ. ಕೆಲವೇ ಜನರಲ್ಲಿ ಈ ಗೀಳು ಹದಿಹರೆಯದವರೆಗೂ ಮುಂದುವರೆಯುತ್ತದೆ. ಈ ನಡಿಗೆ ನಿಧಾನದಿಂದ ಹಿಡಿದು ವೇಗದ ನಡೆಗೆಯವರೆಗೂ ಇರುತ್ತದೆ. ವಿಚಿತ್ರವೆಂದರೆ ಸಾಮಾನ್ಯವಾಗಿ ಅವರು ಓಡಾಡುವ ಸ್ಥಳಗಳಲ್ಲಿ ಯಾವ ಅಡೆತಡೆಗೂ ಒಳಗಾಗದೇ, ಬಾಗಿಲು ಮುಚ್ಚಿದ್ದರೆ ತೆರೆದು, ಬೆಳಕು ಹೊತ್ತಿಸಿ,
ಸ್ನಾನಗೃಹದಲ್ಲಿ ಮೂತ್ರ ವಿಸರ್ಜಿಸಿ, ಬಳಿಕ ಬೆಳಕು ನಂದಿಸಿ ತಮ್ಮ ಯಥಾಸ್ಥಾನಕ್ಕೆ ಮರಳಿ ಮಲಗುತ್ತಾರೆ. ಇದನ್ನು ನೋಡಿದ ಮನೆಯ ಸದಸ್ಯರು ಇವರು ಎಚ್ಚರವಾಗಿದ್ದುಕೊಂಡೇ ಈ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಭಾವಿಸಿ ಬೆಳಿಗ್ಗೆ ಈ ಬಗ್ಗೆ ಹೇಳಿದರೆ ನಿದ್ದೆಯಲ್ಲಿ ನಡೆದವರು ಚಕಿತರಾಗುತ್ತಾರೆ. ಈ ವಿದ್ಯಮಾನದ ಬಗ್ಗೆ ಖಚಿತವಾಗಿ ತಿಳಿಯವರುವುದು ಬೇರೆ ಸ್ಥಳದಲ್ಲಿ ಮಲಗಿದಾಗ ಮಾತ್ರ. ಅಲ್ಲಿ ಎಚ್ಚರಾದಾಗ ಬಾಗಿಲಿರುವ ಕಡೆ ಸ್ವಾಭಾವಿಕವಾಗಿ ನಡೆದು ಬಂದು ಗೋಡೆಗೆ ಢಿಕ್ಕಿ ಹೊಡೆದಾಗ ಎಚ್ಚರಾದಾಕ್ಷಣ ಈ ಗೀಳು ಅರಿವಿಗೆ ಬರುತ್ತದೆ.
ನಿದ್ದೆಯಲ್ಲಿ ಮರಗಟ್ಟುವುದು!
ಕೆಲವರಿಗೆ ತಾವು ಸಾಯುತ್ತಿದ್ದೇವೆಂಬ ಭಾವನೆ ಬಲವಾಗುತ್ತಾ ನಿದ್ದೆಯಲ್ಲಿ ತಾವು ಸತ್ತೇಹೋಗಿದ್ದೇವೆ ಎಂಬ ಭ್ರಮೆ ಮೂಡುತ್ತದೆ. ಈ ಭ್ರಮೆಯಲ್ಲಿ ಒಂದು ಬೆರಳನ್ನೂ ಅಲುಗಿಸಲು ಅಥವಾ ಒಂದು ಪದವನ್ನು ಮಾತನಾಡಲೂ ಅವರಿಗೆ ಸಾಧ್ಯವಾಗುವುದಿಲ್ಲ. ಇಡಿಯ ಮೈ ಮರಗಟ್ಟಿದಂತೆ ಭಾಸವಾಗುತ್ತದೆ. sleep paralysis ಎಂದು ಮನಃಶಾಸ್ತ್ರಜ್ಞರು ಕರೆಯುವ ಈ ವಿದ್ಯಮಾನ ಕೆಲವು ಸೆಕೆಂಡುಗಳಿಂದ ಕೆಲವು ನಿಮಿಷಗಳವರೆಗೆ ಅನುಭವಕ್ಕೆ ಬರಬಹುದು. ಈ ಅವಧಿಯಲ್ಲಿ ಉಸಿರಾಟ ಕಷ್ಟಕರವಾಗುವುದು ಮಾತ್ರ ಹೊರಗಿನವರ ಅನುಭವಕ್ಕೆ ಬರುತ್ತದೆ. ಆದರೆ ಕೆಲಹೊತ್ತಿನಲ್ಲಿಯೇ ಉಸಿರಾಟ ನಿರಾಳವಾಗುತ್ತದೆ. ಒಂದು ವೇಳೆ ಉಸಿರಾಟದ ತೊಂದರೆ ಹೆಚ್ಚಾದಾಗ ಮಾತ್ರ ವೈದ್ಯರ ಸಲಹೆ ಪಡೆಯುವುದು ಅಗತ್ಯ.
ನಿದ್ದೆಯಲ್ಲಿಯೇ ತಿನ್ನುವುದು
ನಿದ್ದೆಯಲ್ಲಿ ತಿನ್ನುವ ಕಾಯಿಲೆ ಬೆರಳೆಣಿಕೆಯಷ್ಟು ಜನರಲ್ಲಿ ಮಾತ್ರ ಕಂಡುಬರುತ್ತದೆ, ಆದರೆ ವಿಚಿತ್ರವೆಂದರೆ ಸಾಮಾನ್ಯವಾಗಿ ನಾವು ಆಹಾರವನ್ನು ಗಂಟಲಿನ ಮೂಲಕ ನುಂಗುವಾಗ ನಮ್ಮ ಕಿರುನಾಲಿಗೆ ಶ್ವಾಸನಾಳವನ್ನು ಮುಚ್ಚಿ ಅನ್ನನಾಳವನ್ನು ತೆರೆಯಬೇಕು ಹಾಗೂ ಉಸಿರಾಟದ ಹೊತ್ತಿನಲ್ಲಿ ಅನ್ನನಾಳವನ್ನು ಮುಚ್ಚಿ ಶ್ವಾಸನಾಳವನ್ನು ಮುಚ್ಚಬೇಕು. ನಿದ್ದೆಯ ಹೊತ್ತಿನಲ್ಲಿ ಈ ಕಿರುನಾಲಿಗೆ ಚಟುವಟಿಕೆ ಇಲ್ಲದೇ ಇರುತ್ತದೆ. ಅಂದರೆ ಕಿರುನಾಲಿಗೆಯ ಚಟುವಟಿಕೆಗೆ ಮೆದುಳು ಜಾಗೃತವಾಗಿರುವುದು ಅಗತ್ಯ.
ಆದರೆ ಈ ವ್ಯಾಧಿ ಇರುವವರ ಕಿರುನಾಲಿಗೆ ನಿದ್ದೆಯಲ್ಲಿಯೂ ಎಚ್ಚರವಾಗಿದ್ದಷ್ಟೇ ಸಕ್ಷಮವಾಗಿ ಕಾರ್ಯನಿರ್ವಹಿಸುವುದು ಸಂಶೋಧಕರಿಗೆ ಸವಾಲಾಗಿ ಪರಿಣಮಿಸಿದೆ. ತಿನ್ನುತ್ತಿದ್ದ ವೇಳೆ ಎಚ್ಚರವಾಗಿಸಿದ ಕೂಡಲೇ ಆಹಾರ ನೆತ್ತಿಗೇರಿ ವ್ಯಕ್ತಿ ಉಸಿರಿಗಾಗಿ ತಡಬಡಿಸುವುದು ಕಂಡುಬಂದಿದೆ. ಆದ್ದರಿಂದ ನಿದ್ದೆಯಲ್ಲಿ ತಿನ್ನುತ್ತಿದ್ದವರನ್ನು ತಿನ್ನುತ್ತಿದ್ದಾಗ ಯಾವುದೇ ಅಡಚಣೆ ನೀಡಬಾರದು. ಒಂದೇ ಆಹಾರ ಸ್ವೀಕರಿಸಲು ಪ್ರಾರಂಭವಾಗುವ ಮುನ್ನ ಅಥವಾ ಪೂರ್ಣಗೊಂಡ ನಂತರವೇ ಎಚ್ಚರಗೊಳಿಸಬೇಕು.



Click it and Unblock the Notifications


