Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ವೆಡ್ಡಿಂಗ್ ಅಫೇರ್ ನಿಯತಕಾಲಿಕೆಯಲ್ಲಿ ಸೋನಾಕ್ಷಿ
ಹೊಸ ವರ್ಷದ ಆರಂಭದಲ್ಲೇ ಸೋನಾಕ್ಷಿ ತಮ್ಮ ಪ್ರಸ್ತುತಿಯನ್ನು ಅದ್ಭುತವಾಗಿ ಆರಂಭಿಸಿದ್ದಾರೆ. ಜನವರಿ 2014 ರ ವೆಡ್ಡಿಂಗ್ ಅಫೇರ್ ನಿಯತಕಾಲಿಕೆಯ ಮುಖಪುಟದಲ್ಲಿ, ಸೋನಾಕ್ಷಿ ಸುಂದರ ವಧುವಾಗಿ ಕಾಣಿಸಿಕೊಂಡಿದ್ದಾರೆ.
ಸೌಂದರ್ಯರಾಣಿಯಾಗಿ ಮಿಂಚುತ್ತಿರುವ ನವವಧುವಿನಂತೆ ಸೋನಾಕ್ಷಿ ಈ ಮಾಸಪತ್ರಿಕೆಯ ಮುಖಪುಟವನ್ನು ಅಲಂಕರಿಸಿದ್ದಾರೆ. ಕೆಂಪು ಮತ್ತು ಚಿನ್ನದ ಬಣ್ಣದ ಲೆಹಂಗವನ್ನು ಸೋನಾಕ್ಷಿ ಧರಿಸಿದ್ದು ಆಕೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ವೆಡ್ಡಿಂಗ್ ಅಫೇರ್ ನಿಯತಕಾಲಿಕೆಯ ಮುಖಪುಟದಲ್ಲಿರುವ ಸೋನಾಕ್ಷಿಯ ಕ್ಲೋಸಪ್ ಚಿತ್ರವು ಆಕೆಯು ಚಿನ್ನದ ಬಣ್ಣದ ದುಪ್ಪಟ್ಟಾವನ್ನು ಒಂದು ಬದಿಗೆ ಮಡಚಿ ಧರಿಸಿರುವುದನ್ನು ತೋರಿಸುತ್ತಿದೆ. ದುಪ್ಪಟ್ಟಾ ಮತ್ತು ಆಕೆ ಧರಿಸಿದ ರವಿಕೆಯು ಚಿನ್ನದ ಮೆರುಗಿನಿಂದ ಮಿಂಚುತ್ತಿದ್ದು ಸ್ಟೋನ್‌ಗಳಿಂದ ಇನ್ನಷ್ಟು ಕಣ್ಣುಕೋರೈಸುವಂತಿದೆ.

ಸೋನಾಕ್ಷಿಯ ಗುಂಗುರು ಕೂದಲನ್ನು ಸಡಿಲವಾಗಿ ಇಳಿಬಿಡಲಾಗಿದ್ದು ಅವರು ನೋಡುತ್ತಿರುವ ನೋಟಕ್ಕೆ ಸೊಗಸನ್ನುಂಟು ಮಾಡಿದೆ. ಒಂದು ಭಾಗದಲ್ಲಿ ಇಳಿಬಿಟ್ಟ ಕೂದಲು ಅವರ ವಿಶಾಲವಾದ ಹಣೆಯನ್ನು ಆವರಿಸಿಕೊಂಡಿದೆ. ಈ ವಧುವಿನ ವೇಷದಲ್ಲಿ ನಮ್ಮ ಗಮನವನ್ನು ಹೆಚ್ಚು ಸೆಳೆಯುವುದು ಸೋನಾಕ್ಷಿ ಧರಿಸಿರುವ ಆಭರಣಗಳು. ಪದರಗಳುಳ್ಳ ಕುಂದನ್ ನೆಕ್ಲೇಸ್ ಅನ್ನು ಆಕೆ ತೊಟ್ಟಿದ್ದು, ಅದಕ್ಕೆ ಸರಿಹೊಂದುವ ಜಾದೂ ರಿಂಗ್ ಬ್ರೇಸ್‌ಲೆಟ್ ಅನ್ನು ತೊಟ್ಟಿದ್ದಾರೆ.
ಭಾರವಾದ ಸಿಲ್ವರ್ ಜುಮುಕಿಗಳನ್ನು ಸೋನಾಕ್ಷಿ ತೊಟ್ಟಿದ್ದು ಅವರಿಗೆ ವಧುವಿನ ನೋಟವನ್ನು ನೀಡಿದೆ. ಕಿವಿಯಾಭರಣಗಳ ಪ್ರತಿಬಿಂಬವೇನೋ ಎಂಬಂತೆ ಸೂಕ್ತವಾದ ಹೇರ್ ಪಿನ್ ಅನ್ನು ಮುಡಿಗೆ ಅಲಂಕರಿಸಿಕೊಂಡಿದ್ದಾರೆ. ಸೋನಾಕ್ಷಿ ತಮ್ಮ ಸಾಂಪ್ರದಾಯಿಕ ದೊಡ್ಡದಾದ ಸುಂದರ ಕಪ್ಪು ಕಣ್ಣಿನ ಅಲಂಕಾರದಿಂದ ವೆಡ್ಡಿಂಗ್ ಅಫೇರ್ ನಿಯತಕಾಲಿಕೆಯು ಏಷ್ಯಾ ಆವೃತ್ತಿಯ ಮುಖಪುಟದ ವಧುವಿನ ಸಿಂಗಾರವನ್ನು ಪೂರ್ಣಗೊಳಿಸಿದ್ದಾರೆ. ಕೆಂಪು ಬಣ್ಣದ ಲಿಪ್‌ಸ್ಟಿಕ್‌ಗಳು ಮತ್ತು ತೀಡಿದ ಹುಬ್ಬುಗಳು ಅವರಿಗೆ ಸುಂದರವಾಗಿ ಕಾಣುತ್ತಿವೆ.
ವೆಡ್ಡಿಂಗ್ ಅಫೇರ್ 2014 ರ ನಿಯತಕಾಲಿಕೆಯು ದೊಡ್ಡದಾದ ಕಪ್ಪು ಕಣ್ಣಿರುವ ಸೌಂದರ್ಯವತಿಯರನ್ನು ಕುರಿತು ಚರ್ಚೆ ಮಾಡಿದ್ದು ಆ ಸಾಲಿಗೆ ಸೋನಾಕ್ಷಿ ಕೂಡ ಸೇರ್ಪಡೆಗೊಳ್ಳುತ್ತಾರೆ. ಮಾಜಿ ಫೆಮಿನಾ ಮಿಸ್ ಇಂಡಿಯಾ ಅರ್ಥ್ ಹಸ್ಲೀನ್ ಕೌರ್ ಕುರಿತ ಸುದ್ದಿಯನ್ನು ಕೂಡ ನಿಯತಕಾಲಿಕೆ ಒಳಗೊಂಡಿದೆ.
ನಿಯತಕಾಲಿಕೆಯು ಚಳಿಗಾಲದ ಸಮಾರಂಭಕ್ಕಾಗಿ ಲೆಹಂಗಾ ಶಾಲ್‌ಗಳ ಶಾಪಿಂಗ್ ಸೂಚನೆಗಳು ಮತ್ತು ವಿವರಗಳನ್ನು ನೀಡಿದೆ. ಹೊಸ ಜೋಡಿಗಳಿಗೆ ವಿವಾಹವಾಗಲು ಮೆಚ್ಚಿನ ಸ್ಥಳಗಳನ್ನು ಆರಿಸುವ ಪಟ್ಟಿಯಲ್ಲಿ - ಭಾರತ ಅಥವಾ ಯುರೋಪ್‌ನ ಸ್ಥಳವನ್ನು ಸೂಚಿಸಿದೆ ಅಲ್ಲದೆ ಮುಂತಾದ ಲೇಖನಗಳನ್ನು ಕೂಡ ಒಳಗೊಂಡಿದೆ.



Click it and Unblock the Notifications
