Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಸ್ನೇಹಿತನಿಗೆ ಸಾಲ ನೀಡುವ ಮೊದಲು ಸ್ವಲ್ಪ ಆಲೋಚಿಸಿ!
ಸಾಲವೇ ಸ್ನೇಹಕ್ಕೆ ಕತ್ತರಿ ಎನ್ನುವ ಗಾದೆಯಿದೆ. ಅದೇ ಹಣ ಸಾಲ ಕೊಡುವ ಮೊದಲು ಹಲವಾರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ನಿಮ್ಮ ಗೆಳೆಯನಿಗೆ ಆರ್ಥಿಕ ನೆರವು ಬೇಕೆಂದಾಗ ನೀವು ತಕ್ಷಣ ಆತನಿಗೆ ನೆರವು ನೀಡಲು ಧಾವಿಸುತ್ತೀರಿ. ನಿಮ್ಮಲ್ಲಿ ಹೆಚ್ಚಿನ ಹಣವಿದ್ದರೆ ಇದು ಸತ್ಯ. ಆದರೆ ಕೆಲವು ಸಲ ಸಾಲ ನೀಡಿದ ಬಳಿಕ ಸಾಲ ಪಡೆದುಕೊಂಡ ವ್ಯಕ್ತಿಯೊಂದಿಗೆ ಸಮಸ್ಯೆಯನ್ನು ಉಂಟುಮಾಡಬಹುದು. ಇಂತಹ ಸಮಸ್ಯೆಯನ್ನು ತಡೆಯಲು ಸ್ನೇಹಿತರಿಗೆ ಸಾಲ ಕೊಡುವ ಮೊದಲು ಏಳು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.
1. ಹಣ ಯಾಕಾಗಿ?
ಹಣವನ್ನು ಸಾಲ ನೀಡುವ ಮೊದಲು ಕೇಳುವ ಮೊದಲ ಪ್ರಶ್ನೆಯೆಂದರೆ ಹಣ ಯಾಕಾಗಿ ಎನ್ನುವುದು? ಈ ಪ್ರಶ್ನೆ ಕೇಳಲು ನೀವು ಹಿಂಜರಿಯಬೇಡಿ. ಯಾವುದೇ ಮುಜುಗರವಿಲ್ಲದೆ ಆತ ಅಥವಾ ಆಕೆ ಹಣವನ್ನು ಕೇಳುತ್ತಿದ್ದರೆ ಆಗ ಈ ಪ್ರಶ್ನೆಗೆ ಉತ್ತರಿಸಲು ಅವರು ತಯಾರಾಗಿರಬೇಕು. ನೀವು ಸಾಲ ನೀಡುತ್ತಿರುವವರಾಗಿರುವ ಕಾರಣ ಆ ವ್ಯಕ್ತಿ ಹಣವನ್ನು ಯಾವುದಕ್ಕೆ ಬಳಸಿಕೊಳ್ಳುತ್ತಾನೆ ಎಂದು ತಿಳಿದುಕೊಳ್ಳುವುದು ಅಗತ್ಯ.

2. ನಿಮ್ಮ ಸ್ನೇಹಿತ ಹಣ ಪಡೆದು ಮರಳಿಸದಿರುವ ಅಭ್ಯಾಸ ಹೊಂದಿದ್ದಾನೆಯಾ?
ಹಣ ಸಾಲ ಕೊಡಲು ನಿರ್ಧರಿಸುವಾಗ ವ್ಯಕ್ತಿಯ ಆರ್ಥಿಕ ವ್ಯವಹಾರದ ಖ್ಯಾತಿಯನ್ನು ಗಮನಿಸಬೇಕು. ತನ್ನ ಹಣದ ಬಗ್ಗೆ ವ್ಯಕ್ತಿಯ ಜವಾಬ್ದಾರಿಯಿದೆಯಾ? ಈ ವ್ಯಕ್ತಿ ಸಾಲ ಪಡೆದು ಅದನ್ನು ಮರಳಿಸದಿರುವ ಖ್ಯಾತಿ ಹೊಂದಿದ್ದಾನೆಯಾ? ವ್ಯಕ್ತಿಯ ಆರ್ಥಿಕ ಖ್ಯಾತಿಯನ್ನು ವಿಶ್ಲೇಷಣೆ ಮಾಡಿ ಕಠಿಣ ದುಡಿಮೆಯ ಹಣವನ್ನು ಸಾಲ ನೀಡಬಹುದೇ ಎಂದು ನಿರ್ಧರಿಸಿ. ಸ್ನೇಹ ಅಮೂಲ್ಯ ಮತ್ತು ನಿಸ್ವಾರ್ಥ
3. ನಿಮ್ಮ ಸ್ನೇಹಿತ ಹಿಂದೆ ನಿಮಗೆ ನೆರವಾಗಿದ್ದಾನೆಯಾ?
ನಿಮ್ಮ ಸ್ನೇಹಿತರಿಗೆ ಸಾಲ ನೀಡಲು ತಯಾರಿಲ್ಲವೆಂದಾದರೆ ಹಿಂದೆ ಈ ವ್ಯಕ್ತಿ ನಿಮಗೆ ನೆರವಾಗಿದ್ದಾನೆಯಾ ಎಂದು ಗಮನಿಸಿ. ಇದು ಆರ್ಥಿಕ ಅಥವಾ ಬೇರೆ ವಿಷಯದಲ್ಲೂ ಆಗಿರಬಹುದು. ಕೆಲವು ಸಲ ಮತ್ತೊಬ್ಬ ವ್ಯಕ್ತಿಯಿಂದ ಹಣ ಸಾಲ ಕೇಳಲು ತುಂಬಾ ಧೈರ್ಯ ಮತ್ತು ಶಕ್ತಿ ಬೇಕಾಗುತ್ತದೆ. ಈ ವ್ಯಕ್ತಿ ಯಾವಾಗಲೂ ತನ್ನ ಸಾಲವನ್ನು ಮರುಪಾವತಿಸುತ್ತಿದ್ದರೆ ಆಗ ಹಣ ಸಾಲ ನೀಡಲು ಯಾವುದೇ ಸಮಸ್ಯೆಯಿಲ್ಲ.
4. ನಿಮ್ಮಲ್ಲಿ ಹಣವಿದೆಯಾ?
ದಿನದ ಅಂತ್ಯಕ್ಕೆ ನಿಮ್ಮಲ್ಲಿ ಇಲ್ಲದೆ ಇರುವ ಹಣವನ್ನು ಸಾಲ ನೀಡಲು ಹೋಗಬೇಡಿ. ಯಾರಾದರೂ ಸಾಲ ಕೇಳಿದರೆ ಆಗ ತಕ್ಷಣಕ್ಕೆ ಉತ್ತರ ನೀಡಬೇಡಿ. ನಿಮ್ಮ ಪ್ರಸಕ್ತ ಆರ್ಥಿಕ ಪರಿಸ್ಥಿತಿಯನ್ನು ನೋಡಿ ಮತ್ತು ಎಷ್ಟು ಹಣ ನೀಡಬಹುದು ಎಂದು ಯೋಚಿಸಿ. ಬಾಡಿಗೆ ಕಟ್ಟಲು, ಕಾರಿನ ಲೋನ್ ಮತ್ತು ಇತರ ಸಾಲಗಳನ್ನು ನೀವು ಕಟ್ಟಬೇಕಿದ್ದರೆ ಆಗ ಇನ್ನೊಬ್ಬರಿಗೆ ಸಾಲ ನೀಡಲು ಹೋಗಬೇಡಿ.
5. ಹಣ ಕಳ್ಳಕೊಳ್ಳುವ ಶಕ್ತಿ ನಿಮ್ಮಲ್ಲಿದೆಯಾ?
ನಿಮ್ಮ ಸ್ನೇಹಿತ ಎಷ್ಟೇ ಒಳ್ಳೆಯವನಾಗಿದ್ದರೂ ಕೆಲವು ಸಲ ಹಣವನ್ನು ಮರುಪಾವತಿಸಲು ಆತನಿಗೆ ಸಾಧ್ಯವಾಗದೆ ಇರಬಹುದು. ಇಂತಹ ಸಂದರ್ಭದಲ್ಲಿ ಹಣವನ್ನು ಕಳಕೊಳ್ಳುವುದನ್ನು ಪರಿಗಣಿಸಿ. ಕೆಲವೊಮ್ಮೆ ನೀವು ಆರ್ಥಿಕವಾಗಿ ಇನ್ನೊಬ್ಬರಿಗೆ ನೆರವಾಗಲು ಬಯಸಬಹುದು. ಆದರೆ ನಿಮ್ಮ ಬಿಲ್‌ಗಳನ್ನು ಬಾಕಿ ಇಟ್ಟುಕೊಂಡು ಸಾಲ ನೀಡುವುದು ಒಳ್ಳೆಯದಲ್ಲ. ಬಾಡಿಗೆ ಕಟ್ಟಲು ಇಟ್ಟಿರುವ ಹಣದ ಅರ್ಧ ಭಾಗವನ್ನು ನಿಮ್ಮ ಗೆಳೆಯನಿಗೆ ನೀಡಿದರೆ ಬಾಡಿಗೆ ಕಟ್ಟಬೇಕಾದ ಸಮಯದಲ್ಲಿ ಆತ ಹಣ ಮರಳಿಸದೇ ಇದ್ದರೆ ಸಮಸ್ಯೆಯಾಗಬಹುದು. ಕೆಟ್ಟ ಗೆಳೆಯರನ್ನು ಗುರುತಿಸುವ ವಿಧಾನಗಳು
6. ಈ ಸ್ನೇಹ ಎಷ್ಟು ಮುಖ್ಯ?
ವ್ಯಕ್ತಿಯು ಹಣವನ್ನು ಮರಳಿ ನೀಡದೇ ಇರುವಂತಹ ಅವಕಾಶಗಳು ಹೆಚ್ಚಿಗೆ ಇರುತ್ತದೆ. ಸ್ನೇಹವು ಎಷ್ಟು ಮುಖ್ಯ ಎನ್ನುವುದನ್ನು ನೀವು ಪರಿಗಣಿಸಬೇಕಾಗುತ್ತದೆ. ಸ್ನೇಹ ಮತ್ತು ಹಣವನ್ನು ಯಾವತ್ತೂ ಮಿಶ್ರಣ ಮಾಡಬಾರದು. ನಿಮ್ಮ ಆಪ್ತ ಸ್ನೇಹಿತನನ್ನು ಆಪ್ತನಾಗಿಯೇ ಉಳಿಸಿಕೊಳ್ಳಲು ಬಯಸುವುದಾದರೆ ಆಗ ನಿಮ್ಮ ಮಧ್ಯೆ ಹಣದ ವಿಚಾರ ಬರಬಾರದು. ನಿಮ್ಮ ಗೆಳೆಯನಿಗೆ ಸಾಲ ನೀಡಿದ್ದರೆ, ಆತ ಅದನ್ನು ಮರಳಿಸದರೆ ಇದ್ದರೆ ಆಗ ಸಾಲದೊಂದಿಗೆ ಸಂಬಂಧವು ಒಳ್ಳೆಯ ರೀತಿಯಲ್ಲಿ ಮುಂದುವರಿಯುವುದು ಕಷ್ಟ.
7. ನೀವು ಲಿಖಿತ ಒಪ್ಪಂದ ಮಾಡಿಕೊಂಡಿದ್ದೀರಾ?
ನೀವು ಸ್ನೇಹಿತನಿಗೆ ಹಣ ಸಾಲ ನೀಡುವುದಿದ್ದರೆ ಆಗ ಒಂದು ಲಿಖಿತ ಒಪ್ಪಂದ ಮಾಡಿಕೊಳ್ಳಿ. ಇದರಲ್ಲಿ ಸಾಲ ನೀಡಿದ ಎಲ್ಲಾ ದಾಖಲೆಗಳಾದ ಸಾಲದ ಮೊತ್ತ, ಬಡ್ಡಿ ಮತ್ತು ಮರುಪಾವತಿಯ ಅವಧಿ ಇದೆಲ್ಲವೂ ದಾಖಲಾಗಲಿ. ಲಿಖಿತ ಒಪ್ಪಂದವು ಸಾಲದ ಬಗ್ಗೆ ಯಾವುದೇ ರೀತಿಯ ಗೊಂದಲ ಅಥವಾ ತಪ್ಪು ಗ್ರಹಿಕೆಯನ್ನು ನಿವಾರಿಸುತ್ತದೆ.



Click it and Unblock the Notifications











