Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಪುರುಷರ ಕಣ್ಣಿಗೆ ಮಹಿಳೆಯರನ್ನು ಆಕರ್ಷಕವನ್ನಾಗಿಸುವ ಕೆಲವು ಆಸಕ್ತಿಗಳು
ಮಹಿಳೆಯರು ಪುರುಷರ ಮೇಲೆ ಬಹಳ ಪ್ರಭಾವ ಬೀರುತ್ತಾರೆ ಎಂಬುದೇನೋ ನಿಜ. ಇದು ಅವರ ಬಾಹ್ಯ ಸೌಂದರ್ಯದಿಂದ ಎನ್ನುವುದು ನಮ್ಮ ಕಲ್ಪನೆ ಆಗಿರಬಹುದು ಆದರೆ ಇದು ನಿಜವೇ? ಸುಂದರವಾದ, ಬಹಳ ಚೆನ್ನಾಗಿ ತಯಾರಾದ ಮಹಿಳೆಯನ್ನು ನೋಡಿ ನಾವು ಆಹಾ ಎನ್ನಬಹುದು ಆದರೆ ಅವಳಿಗೆ ಮನಸೋಲಲು ಇಷ್ಟೇ ಸಾಕೆ ? ಖಂಡಿತ ಇಲ್ಲ.
ಸೌಂದರ್ಯ ಮಹಿಳೆಯನ್ನು ಮೊದಲ ನೋಟಕ್ಕೆ ಆಕರ್ಷಕವನ್ನಾಗಿಸಲು ಸಾಕು. ಆದರೆ ಆಕೆಯ ಮೇಲೆ ಮನಸೋಲಲು ಬೇಕಾದ ಗುಣಗಳೇ ಬೇರೆ. ಪುರುಷರಲ್ಲಿ ಆಕರ್ಷಣೆ ಕೆರಳಿಸಬೇಕಾದರೆ ಮಹಿಳೆಯರಲ್ಲಿ ಕೆಲವು ಸಾಮಾನ್ಯ ಗುಣಗಳು ಇರಬೇಕಾಗುತ್ತವೆ. ಅವುಗಳಲ್ಲಿ ಪ್ರಮುಖ ಹದಿಮೂರನ್ನು ಇಲ್ಲಿ ನೀಡಲಾಗಿದೆ.
ನೀವು ಉದ್ಯೋಗ ಇಷ್ಟಪಡುವುದಿಲ್ಲವೆನ್ನುವ ಐದು ಚಿಹ್ನೆಗಳು

ಕ್ರೀಡೆಗಳನ್ನು ನೋಡುವುದು:
ಒಬ್ಬ ಮಹಿಳೆ ನಾನು ಫುಟ್ ಬಾಲ್ ಆಟವನ್ನು ನೋಡುತ್ತೇನೆ ಎಂದಾಗ ಪುರುಷರ ಮನದಲ್ಲಿ ಆಕೆಯ ಬಗೆಗಿನ ಭಾವನೆಗಳೇ ಬೇರೆಯಾಗುತ್ತವೆ. ಕೂತಲ್ಲಿಂದ ಏಳದೇ ಫುಟ್ ಬಾಲ್ ಅಥವಾ ಕ್ರಿಕೆಟ್ ನೋಡುವ ಹುಡುಗಿಯನ್ನು ಯಾವ ಹುಡುಗನೂ ಕಡೆಗಣಿಸಲಾರನು.

ಕ್ರೀಡಾಪಟು:
ಕ್ರೀಡೆಯನ್ನು ನೋಡುವುದು ಒಂದು ಮಾತಾದರೆ ಕ್ರೀಡಾಪಟು ಆಗುವುದು ಇನ್ನೊಂದು ಮಾತು. ಇದರ ಪ್ರಭಾವವೂ ಹೆಚ್ಚು. ಅವಳಲ್ಲಿನ ಪುರುಷತ್ವ ಇಲ್ಲಿ ಹೊರಬಂದತೆ ಕೆಲವರಿಗೆ ಕಂಡರೆ, ಕೆಲವರು ಆಕೆ ಒಳ್ಳೆಯ ಸಂಗಾತಿ ಆಗುವ ಲಕ್ಷಣವನ್ನು ಕಾಣುತ್ತಾರೆ. ಕ್ರೀಡೆಯೂ ಆಯಿತು ಡೇಟಿಂಗ್ ಕೂಡ ಆಯಿತು ಎಂದಾದರೆ ಅಂತಹ ಅವಕಾಶ ಯಾರಿಗೆ ತಾನೇ ಬೇಡ.

ಖುಲ್ಲಂ ಖುಲ್ಲಾ ನಗು:
ಮಹಿಳೆಯ ನಗು ಆಕೆಯ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳುತ್ತದೆ. ಜೋರಾಗಿ ನಗುವುದು ಆಕೆಯ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಕದ್ದು ಮುಚ್ಚಿ ನಗುವ ಮಹಿಳೆಗೆ ಹೇಗೆ ಆನಂದಿಸುವ ಸನ್ನಿವೇಶಗಳನ್ನು ಅನುಭವಿಸಬೇಕು ಎಂದು ತಿಳಿದಿಲ್ಲ ಎಂದು ಅರ್ಥ.

ಮೇಕಪ್ ಇಲ್ಲದೆ ಹೊರಹೋಗುವುದು:
ಕೆಲವು ಮಹಿಳೆಯರಿಗೆ ಬಾಹ್ಯ ಸೌಂದರ್ಯ ಜೀವನದಲ್ಲಿ ಅತ್ಯಂತ ಮುಖ್ಯವಾಗಿರುತ್ತದೆ. ಯಾವುದೇ ಸೌಂದರ್ಯವರ್ಧಕಗಳನ್ನೂ ಬಳಸದೇ ಹೊರಹೋಗುವ ಮಹಿಳೆಯರು ಬಹಳ ಅಪರೂಪ. ಯಾವ ಮಹಿಳೆ ತನ್ನ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಗಮನವನ್ನು ನೀಡುವುದಿಲ್ಲವೋ ಆಕೆ ಆತ್ಮವಿಶ್ವಾಸ, ಭಾವನಾತ್ಮಕ ಸುರಕ್ಷತೆಯನ್ನು ಅಳವಡಿಸಿಕೊಂಡು ವಿಶ್ವದ ಯಾವುದೇ ಆಡಂಬರಗಳಿಗೆ ಹೆಚ್ಚು ಗಮನ ನೀಡುವುದಿಲ್ಲ ಎಂದರ್ಥ.

ಆಟಗಳು:
ನಿಮ್ಮ ಇಷ್ಟದ ಆಟ ನಿಮ್ಮ ಸಂಗಾತಿಯ ಮೆಚ್ಚಿನ ಆಟವೂ ಆಗಿದ್ದರೆ ಎಷ್ಟು ಮಜವಾಗಿರುತ್ತದೆ ಅಲ್ಲವೇ ಜೀವನ. ಸಾಮಾನ್ಯವಾಗಿ ಹುಡುಗರ ಮತ್ತು ಹುಡುಗಿಯರ ಇಷ್ಟದ ಆಟಗಳು ಬೇರೆಯಾಗಿರುತ್ತವೆ. ಆದರೆ ನಮ್ಮ ಇಷ್ಟದ ಆಟದಲ್ಲಿ ನಮ್ಮ ಸ್ಕೋರ್ ಗಿಂತಲೂ ಹೆಚ್ಚಿನ ಸ್ಕೋರ್ ಮಾಡುವ ಹುಡುಗಿ ಸಿಕ್ಕಿದರೆ ಎಷ್ಟು ಮೋಜಿರುತ್ತದೆ ಅಲ್ಲವೇ?

ಸೇರಿಗೆ ಸವ್ವಾ ಸೇರು:
ಯಾರಾದರೂ ತಮಾಷೆ ಮಾಡಿದರೆ ಅಥವಾ ದಾರಿಯಲ್ಲಿ ಕಾಡಿದರೆ ಸುಮ್ಮನೆ ಮಾತನಾಡದೆ ತಲೆ ತಗ್ಗಿಸಿ ಬರುವ ಹುಡುಗಿಯರು ಅದೆಷ್ಟೋ ಆದರೆ ಮಾತನಾಡಿದವರು ಬೆವತು ಹೋಗುವಂತೆ ಎದುರು ಮಾತನಾಡಿದರೆ, ಕೀಟಲೆ ಮಾಡುವ ಹುಡುಗರಿಗೆ ಜೀವನವಿಡಿ ನೆನಪಿಡುವ ಪಾಠ ಕಲಿಸಿದರೆ ಅಂತಹ ಹುಡುಗಿಯನ್ನು ಯಾವ ಹುಡುಗ ತಾನೇ ಮೆಚ್ಚುವುದಿಲ್ಲ.

ಬೈಕ್ ಸವಾರಿ:
ಸಾಮಾನ್ಯವಾಗಿ ಎಲ್ಲಾ ಮಹಿಳೆಯರಿಗೂ ಬೈಕ್ ಸವಾರಿ ಇಷ್ಟ. ನಿಮ್ಮ ಸ್ನೇಹಿತೆಯೊಂದಿಗೆ, ಅವರನ್ನು ನಿಮ್ಮ ಬೈಕ್ ನಲ್ಲಿ ಕೂರಿಸಿಕೊಳ್ಳುವುದಕ್ಕಿಂತ ಅವರ ಬೈಕ್ ನಲ್ಲಿ ಹಿಂದೆ ಕೂತು ಪ್ರಯಾಣ ಮಾಡುವುದು ರೋಮಾಂಚಕವಾಗಿರುತ್ತದೆ. ಆಕೆಯಲ್ಲಿನ ಆತ್ಮವಿಶ್ವಾಸ ತಿಳಿಯುತ್ತದೆ ಹಾಗೂ ಆಕೆಯ ಬಗ್ಗೆ ಹೆಮ್ಮೆಯನ್ನುಂಟುಮಾಡುತ್ತದೆ.

ಜೊತೆಗೆ ಚಿಯರ್ಸ್ ಎನ್ನುವ ಖುಷಿ:
ವೊಡ್ಕಾ ಕುಡಿಯುವ ಹುಡುಗಿಯರು ಸಿಗುತ್ತಾರೆ, ಸಾಮಾನ್ಯ, ಅದರಲ್ಲೂ ಅದನ್ನು ಹಣ್ಣಿನ ಜ್ಯೂಸ್ ಜೊತೆ ಸೇರಿಸಿ ಕುಡಿದರೆ ಏನೂ ರೋಮಾಂಚಕ ಅಲ್ಲ. ಅದೇ ಒಂದು ಹುಡುಗಿ ನಿಮ್ಮ ಜೊತೆ ಬಿಯರ್ ಬಾಟಲಿ ಹಿಡಿದು ಚಿಯರ್ಸ್ ಎಂದರೆ ಹೇಗಿರುತ್ತದೆ. ಕಲ್ಪಿಸಿಕೊಂಡರೇನೇ ಮತ್ತೇರುತ್ತದೆ ಅಲ್ಲವೇ? ಇನ್ನು ಇದೇ ನಿಜವಾದರೆ ಜೀವನ ಪಾವನ.

ನನ್ನ ದಾರಿ ನನ್ನದು:
ಒಂದು ಭಾನುವಾರ ನೀವು ಏಳುವಾಗ ನಿಮ್ಮ ಸಂಗಾತಿ ನಿಮ್ಮ ಜೊತೆ ಇಲ್ಲ. ಒಂದು ಚೀಟಿಯಲ್ಲಿ ನಾನು ಸಮೀಪವೇ ಇರುವ ಗುಡ್ಡಕ್ಕೆ ಒಬ್ಬಳೇ ಟ್ರಕ್ಕಿಂಗ್ ಗೆ ಹೋಗುತ್ತಿದ್ದೇನೆ ಎಂದು ಬರೆದಿಟ್ಟು ಹೋಗಿದ್ದರೆ ಅಂತಹ ಹುಡುಗಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಇದು ಅವಳಲ್ಲಿನ ಸಾಹಸಿ ಪ್ರವೃತ್ತಿಯನ್ನು ತೋರಿಸುತ್ತದೆ ಜೊತೆಗೆ ಆಕೆಯ ಬಗ್ಗೆ ನಿಮ್ಮಲ್ಲಿ ಗೌರವವೂ ಮೂಡುತ್ತದೆ.

’ಅ’ ಸಾಮಾನ್ಯ ಜ್ಞಾನ:
ಜ್ಞಾನ ಇದ್ದರೆ ಹುಡುಗನಾಗಲಿ ಹುಡುಗಿಯಾಗಲಿ ಆದರ ಇದ್ದೇ ಇರುತ್ತದೆ. ಪುಸ್ತಕದ ಬದನೇಕಾಯಿ ಬಿಟ್ಟು ನಮ್ಮ ದೇಶದ ರಾಜಕೀಯದ ಬಗ್ಗೆ, ಶೇರು ಮಾರುಕಟ್ಟೆಯ ಹೊಸ ಟ್ರೆಂಡ್ ನ ಬಗ್ಗೆ ಅಥವಾ ವಿಜ್ಞಾನದ ಹೊಸ ಸಂಶೋಧನೆಯ ಬಗ್ಗೆ ನಿಮಗಿಂತ ಹೆಚ್ಚು ಆಸಕ್ತಿ ಇರುವ ಮಹಿಳೆ ಸಿಕ್ಕರೆ ಹೇಗಿರಬೇಡ.

ಜಿಮ್ :
ಗಟ್ಟಿ ಮುಟ್ಟಾದ ಮಹಿಳೆ, ಜಿಮ್ ನಲ್ಲಿ ನಿಮಗೆ ಸಾಥ್ ನೀಡುವ ಮಹಿಳೆ ಎಂದಿಗೂ ಹುಡುಗರ ಆಸಕ್ತಿಯೇ. ದೇಹ ದಾಢ್ಯತೆ ಬಗ್ಗೆ ಗಮನ ಕೊಡುವ ಫಿಟ್ ನೆಸ್ ಬಗ್ಗೆ ನಿಮ್ಮಷ್ಟೇ ಆಸಕ್ತಿ ಹೊಂದುವ ಮಹಿಳೆ ಬೇಕು.

ಆಕ್ಶನ್ ಚಲನಚಿತ್ರಗಳು:
ಸಾಸ್ ಬಹು ಸೀರಿಯಲ್ ನೋಡುವ ಹುಡುಗಿಯರು ಅದೆಷ್ಟೋ ಆದರೆ ಹುಡುಗರು ಸಾಮಾನ್ಯವಾಗಿ ಇಷ್ಟಪಡುವ ಫೈಟ್ ಇರುವ ಚಲನಚಿತ್ರಗಳನ್ನು ನೋಡುವ ಹುಡುಗಿ ಇದ್ದರೆ ರಿಮೋಟ್ ಗಾಗಿ ಜಗಳಗಳೇ ಆಗುವುದಿಲ್ಲ.

ತಂತ್ರಜ್ಞಾನ ಪ್ರಿಯೆ:
ಸಾಮಾನ್ಯವಾಗಿ ಹುಡುಗಿಯರಿಗೆ ಹೊಸ ಮಾದರಿಯ ಫೋನ್ ಗಳು ಕೇವಲ ಶೊಕಿಗಾಗಿ ಆದರೆ ಕೆಲವು ಹುಡುಗಿಯರಿಗೆ ಹೊಸ ತಂತ್ರಜ್ಞಾನಗಳು ಹೊಸ ಆಪ್ ಗಳ ಬಗ್ಗೆ ಬಹಳ ಆಸಕ್ತಿ ಇರುತ್ತದೆ. ಇಂತಹ ಹುಡುಗಿ ಸಿಕ್ಕರೆ ಇಬ್ಬರಿಗೆ ಹರಟೆ ಹೊಡೆಯಲು ಹೊಸ ವಿಷಯವೊಂದು ಸಿಕ್ಕ ಹಾಗೆ ಆಯ್ತು.



Click it and Unblock the Notifications