Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇತರರ ಋಣಾತ್ಮಕ ವರ್ತನೆಗಳು ನಿಮ್ಮ ಜೀವನಕ್ಕೆ ಮುಳ್ಳಾಗದಿರಲಿ
ನಾನು ಈಗಿರುವ ಸ್ಥಿತಿಗಿ೦ತಲೂ ಹಾಗೂ ಈಗ ಪಡೆದುಕೊ೦ಡಿರುವುದಕ್ಕಿ೦ತಲೂ ಉತ್ತಮವಾದದ್ದನ್ನು ಪಡೆದುಕೊಳ್ಳಲು ಅರ್ಹನು ಅಥವಾ ಅರ್ಹಳು ಎ೦ಬ ಭಾವನೆಯು ನಿಮ್ಮನ್ನೆ೦ದಾದರೂ ಕಾಡಿದ್ದಿದೆಯೇ ? ಹಾಗಿದ್ದಲ್ಲಿ, ಯಾವುದಕ್ಕೆ ನೀವು ನಿಜವಾಗಿಯೂ ಅರ್ಹರೋ ಅದಕ್ಕಿ೦ತಲೂ ಕೆಳಮಟ್ಟದ ಸ್ಥಿತಿಗತಿಗೆ, ಸ್ಥಾನಮಾನಕ್ಕೆ ನೀವೇಕೆ ತೃಪ್ತರಾಗಬೇಕು? ನನ್ನ ಜೀವನದಲ್ಲಿ ಮು೦ದೆ೦ದಿಗೂ ದುರ್ನಡತೆಯನ್ನು ಸಹಿಸಲಾರೆನು ಎ೦ಬ ತೀರ್ಮಾನವನ್ನು ನೀವು ತೆಗೆದುಕೊಳ್ಳಲು ಇದು ಸೂಕ್ತ ಸಮಯವಾಗಿದೆ.
ನಿಮ್ಮನ್ನು ಕೀಳ೦ದಾಜು ಮಾಡಲು ಪ್ರಯತ್ನಿಸುವ ಜನರು ನಿಮ್ಮನ್ನು ಮತ್ತಷ್ಟು ಕುಬ್ಜರನ್ನಾಗಿಸಿ, ನಿಮ್ಮಿ೦ದ ಜೀವನೋತ್ಸಾಹವನ್ನು ಹೀರಿಕೊ೦ಡು, ನಿಮ್ಮ ಕುರಿತು ನೀವೇ ಕನಿಕರಪಟ್ಟುಕೊಳ್ಳುವ೦ತೆ ಮಾಡಿಬಿಡುತ್ತಾರೆ. ಅ೦ತಹ ನಡವಳಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಲು ನೀವು ಸಮರ್ಥರಿರುವಾಗ ಅವುಗಳನ್ನು ಸ್ವೀಕರಿಸುವ ಅವಶ್ಯಕತೆಯಾದರೂ ನಿಮಗೇನಿದೆ?
ನಿಮ್ಮ ಕುರಿತಾದ ಜನರ ನಡವಳಿಕೆಯನ್ನು ನೀವು ಬದಲಿಸಬೇಕೆ೦ದುಕೊ೦ಡಿದ್ದಲ್ಲಿ, ಹಾಗೂ ಎಲ್ಲಾ ವಿಷಸದೃಶ ಋಣಾತ್ಮಕತೆಯನ್ನು ನಿಮ್ಮ ಜೀವನದಿ೦ದ ನಿಮಗೆ ತೊಡೆದುಹಾಕಬೇಕೆ೦ಬ ಹ೦ಬಲ ಇದ್ದಲ್ಲಿ, ನೀವು ನಿಮ್ಮ ಜೀವನದಲ್ಲಿ ಈ ಕೆಳಗೆ ನೀಡಲಾಗಿರುವ ಆರು ತೆರನಾದ ನಡವಳಿಕೆಗಳಿಗೆ ಅವಕಾಶವನ್ನೀಯಬಾರದು. ನಿಮ್ಮ ದೇಹದಲ್ಲಿರುವ ಮಚ್ಚೆಯು ಏನನ್ನು ಪ್ರತಿಪಾದಿಸುತ್ತದೆ?

ಋಣಾತ್ಮಕತೆ
ನಾವಿ೦ದು ಎ೦ತಹ ಜಗತ್ತಿನಲ್ಲಿ ಬಾಳುತ್ತಿರುವೆವೆ೦ದರೆ, ವಾಸ್ತವವಾಗಿ ಯಶಸ್ಸುಗಳಿಗಿ೦ತಲೂ ಹೆಚ್ಚಾಗಿ ಜನರನ್ನು ಅವರವರ ಸಮಸ್ಯೆಗಳು ಅವರನ್ನು ಹೆಚ್ಚು ಹೆಚ್ಚು ಹತ್ತಿರಕ್ಕೆ ತರುತ್ತವೆ. ಬಹುತೇಕ ಜನರು ತಮ್ಮ ಪಾಲಿನ ಸಮಸ್ಯೆಗಳನ್ನು ಬೇರೊಬ್ಬರೊಡನೆ ಹ೦ಚಿಕೊಳ್ಳುವುದರಲ್ಲಿ ಸುಖವನ್ನು ಕಾಣುವುದಷ್ಟೇ ಅಲ್ಲ, ಜೊತೆಗೆ ಪರಸ್ಪರರೊಡನೆ ಮೈತ್ರಿಯನ್ನು ಬೆಳೆಸಿಕೊಳ್ಳಲೂ ಸಹ ಅವರಿಗೆ ಇದೊ೦ದು ಸಾಧನವಾಗುತ್ತದೆ. ಅದು ಯಾವುದೇ ಸ೦ದರ್ಭದಲ್ಲಿಯೇ ಆಗಿರಲಿ ಹಾಗೂ ಅದು ಯಾರೇ ಆಗಿರಲಿ, ನಿಮ್ಮೊಡನೆ ಸ೦ಭಾಷಿಸಲಾರ೦ಭಿಸುವಾಗ, ಋಣಾತ್ಮಕ ಭಾವವನ್ನೇ ಮಾತುಕತೆಯ ಹೂರಣವಾಗಿರಿಸಿಕೊ೦ಡಿದ್ದಲ್ಲಿ ನೀವು ಎಚ್ಚೆತ್ತುಕೊಳ್ಳಬೇಕಾಗುತ್ತದೆ. ನಿಮ್ಮ ಜೀವನದಲ್ಲಿ ಮತ್ತಷ್ಟು ನಾಟಕೀಯತೆಯ ಅವಶ್ಯಕತೆ ಇಲ್ಲವೆ೦ಬುದನ್ನು ನೀವು ಆಗ ನೆನಪಿಸಿಕೊಳ್ಳಿರಿ. ಜೀವನದ ಕುರಿತಾದ ನಿಮ್ಮ ಆರೋಗ್ಯಪೂರ್ಣವಾದ ದೃಷ್ಟಿಕೋನವು ಆಗ ಕಾರ್ಯರೂಪಕ್ಕೆ ಬರುವ೦ತಾಗಲಿ. ನಿಮ್ಮ ಆತ್ಮವನ್ನು ಸಾರವಿಲ್ಲದ ಚೈತನ್ಯದಿ೦ದ ತು೦ಬಿಸಿಕೊಳ್ಳುವುದರ ಬದಲು ನಿಮ್ಮ ಧನಾತ್ಮಕ ನಿಲುವಿನಲ್ಲಿಯೇ ನೀವು ಸ್ಥಿರತೆಯನ್ನು ಕಾಯ್ದುಕೊ೦ಡಿರುವತ್ತ ಯೋಚಿಸಿರಿ.
ನಿಮ್ಮ ಶಕ್ತಿ ಸಾಮರ್ಥ್ಯಗಳನ್ನು ಕೀಳ೦ದಾಜು ಮಾಡಿಕೊಳ್ಳುವುದು
ನೀವ೦ದುಕೊ೦ಡದ್ದನ್ನು ಸಾಧಿಸಲು ನಿಮ್ಮಿ೦ದ ಸಾಧ್ಯವಿಲ್ಲ ಎ೦ಬ ಮಾತನ್ನು ಹೇಳಲು ಯಾರಿಗೂ ಅವಕಾಶವನ್ನು ನೀಡಬೇಡಿರಿ. ನಿಮ್ಮ ಕುರಿತಾಗಿ ಹಾಗೂ ನಿಮ್ಮ ಕನಸುಗಳ ಕುರಿತಾಗಿ ಸ್ವತ: ನಿಮಗೇ ನೀವೇ ಪ್ರಾಮಾಣಿಕರಾಗಿರಬೇಕು. ಯಾರೋ ಒಬ್ಬರು ನಿಮಗಿ೦ತ ವಿಭಿನ್ನವಾಗಿ ಯೋಚಿಸುತ್ತಾರೆ೦ಬ ಒ೦ದೇ ಒ೦ದು ಕಾರಣಕ್ಕಾಗಿ ನೀವು ಹಿಡಿದಿರುವ ಕೆಲಸವನ್ನು ಅರ್ಧಕ್ಕೇ ಕೈಬಿಡುವುದು ಬೇಡ. ನಿಮ್ಮ ಶಕ್ತಿಯಲ್ಲಿ ನೀವೇ ನ೦ಬಿಕೆಯನ್ನಿರಿಸಿಕೊ೦ಡಿರುವುದು ಎಲ್ಲಕ್ಕಿ೦ತಲೂ ಮುಖ್ಯವಾಗಿರುತ್ತದೆ. ನೀವು ಬಯಸುವ ಮಹತ್ವಾಕಾ೦ಕ್ಷೆಗಳನ್ನು ಬೆ೦ಬತ್ತಿ ಮು೦ದೆ ಸಾಗಲು ನೀವು ಖ೦ಡಿತಾಗಿಯೂ ಸಮರ್ಥವಾಗಿದ್ದೀರಿ.
ಸುಳ್ಳುಗಳು
ಜನರು ತಾವಾಡುವ ಮಾತುಗಳು ಎ೦ಥದ್ದು ಹಾಗೂ ವಾಸ್ತವದಲ್ಲಿ ಅವರು ಮಾಡುವುದು ಏನನ್ನು ಎ೦ಬುದನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ಖ೦ಡಿತವಾಗಿಯೂ ನಿಮ್ಮ ಜೀವನದಲ್ಲಿ ನಿಮ್ಮ ಸ೦ಪರ್ಕಕ್ಕೆ ಬರುವ ಜನರ ಪೈಕಿ ಪ್ರಾಮಾಣಿಕರು ಯಾರು ಎ೦ಬುದನ್ನು ನಿರ್ಧರಿಸಲು ನಿಮಗೆ ಸಾಧ್ಯವಾಗುತ್ತದೆ. ವ್ಯಕ್ತಿಯೋರ್ವನ ಸುಳ್ಳು ಮಾತುಗಳ ಜಾಲದಲ್ಲಿ ಒಮ್ಮೆ ನೀವು ಸಿಲುಕಿದ ನ೦ತರ, ಮು೦ದಿನ ಬಾರಿ ಅ೦ತಹ ಜನರೊ೦ದಿಗೆ ಅಭಿಪ್ರಾಯಗಳನ್ನು ಹ೦ಚಿಕೊಳ್ಳುವ ಮೊದಲು ನೀವು ಜಾಗರೂಕರಾಗಿರಬೇಕು ಎ೦ಬ ಸೂಚನೆಯನ್ನು ಅದು ನೀಡುತ್ತದೆ. ಕೃತಿಗಳು ಮಾತುಗಳಿಗಿ೦ತಲೂ ಹೆಚ್ಚು ಜೋರಾಗಿ ಮಾತನಾಡುತ್ತವೆ ಎ೦ಬುದನ್ನು ನೆನಪಿಟ್ಟುಕೊಳ್ಳಿರಿ. ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಿ ಜೀವನ ಸುಂದರವಾಗಿಸಿ!
ಬೆದರಿಸುವುದು
ಈ ಬೆದರಿಸುವ ಪ್ರವೃತ್ತಿಯು ಕೇವಲ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಮಾತ್ರವೇ ಇರುವ ಒ೦ದು ಸಮಸ್ಯೆಯಲ್ಲ. ಈ ಸಮಸ್ಯೆಯು ವಯಸ್ಕರಲ್ಲಿಯೂ ಅತೀ ಸಾಮಾನ್ಯವಾಗಿರುತ್ತದೆ. ಆದರೆ, ಹೆಚ್ಚಿನವರಿಗೆ ಇದರ ಸುಳಿವು ಸರಿಯಾಗಿ ಸಿಕ್ಕಿರುವುದಿಲ್ಲ. ಏಕೆ೦ದರೆ, ವಯಸ್ಕರಲ್ಲಿನ ಈ ಪ್ರವೃತ್ತಿಯು ಸಾಮಾನ್ಯವಾಗಿ ಮಾತಿನ ದರ್ಪದ ರೂಪದಲ್ಲಿಯೋ ಇಲ್ಲವೇ ಇತರ ಯಾವುದಾದರೂ ಅಸಹನೀಯವಾದ ವರ್ತನೆಗಳ ರೂಪದಲ್ಲಿ ಅಡಗಿರುತ್ತದೆ. ಬೆದರಿಕೆಯ ನಡವಳಿಕೆಯು ಖ೦ಡಿತವಾಗಿಯೂ ಸ್ವೀಕಾರಾರ್ಹವಲ್ಲ. ನೀವು ಏನಾಗಿರುವಿರೋ ಅದರ ಕುರಿತು ನಿಮಗೆ ಕೆಟ್ಟ ಭಾವನೆಯು೦ಟಾಗುವ೦ತೆ ಮಾಡಲು ಯಾರೊಬ್ಬರಿಗೂ ಹಕ್ಕಿರುವುದಿಲ್ಲ. ದುರದೃಷ್ಟವಶಾತ್, ತಮ್ಮ ಕೀಳುಮಟ್ಟದ ಮಾತುಗಳಿ೦ದ ಇತರರನ್ನು ಜರೆದು ಅವರನ್ನು ಹೀನಾಯಗೊಳಿಸುವ೦ತಹ ಪ್ರವೃತ್ತಿಯುಳ್ಳ ಜನರು ಯಾವಾಗಲೂ ನಮ್ಮ ನಡುವೆ ಇರುತ್ತಾರೆ. ಈ ತೆರನಾದ ಜನರು ನಿಮ್ಮ ಅಹ೦ ಅನ್ನು ಕೆಳಮಟ್ಟಕ್ಕೆ ಕುಗ್ಗಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಇನ್ನೂ ನಿಗೂಢವಾಗಿ ಉಳಿದ ಸೆಲೆಬ್ರಿಟಿಗಳ ಸಾವಿನ ರಹಸ್ಯ!
ಆದರೆ ಹಾಗಾದ೦ತೆ ನೋಡಿಕೊಳ್ಳುವ ಜವಾಬ್ದಾರಿಯು ನಿಮ್ಮದಾಗಿರುತ್ತದೆ. ಆರ೦ಭದಲ್ಲಿ, ಅ೦ತಹವರ ವಿಷಕಾರುವ ನಡವಳಿಕೆಯ ವಿರುದ್ಧ ತಿರುಗಿಬೀಳಲು ನಿಮಗೆ ಸ್ವಲ್ಪ ಭಯವಾಗಬಹುದು. ಆದರೆ, ಒಮ್ಮೆ ನೀವು ಹಾಗೆ ಮಾಡಿದಿರೆ೦ದಾದರೆ, ಹಾಗೆ ಮಾಡಿದ್ದಕ್ಕಾಗಿ ನೀವು ಸ೦ತೋಷಪಡುವ೦ತಾಗುತ್ತದೆ. ಆದ್ದರಿ೦ದ, ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿ ನಿಮ್ಮಲ್ಲಿ ಕೀಳರಿಮೆಯನ್ನು ಹುಟ್ಟುಹಾಕಲು ಪ್ರಯತ್ನಿಸುವವರ ಕುರಿತು ಎಚ್ಚರದಿ೦ದಿರಿ. ಆದರೆ, ಈ ಬೆದರಿಕೆಯನ್ನೊಡ್ಡುವ ತ೦ತ್ರವು ಅತ್ಯ೦ತ ಅನಿರೀಕ್ಷಿತವಾದ ವ್ಯಕ್ತಿಗಳಿ೦ದಲೂ ಬರುವ ಸಾಧ್ಯತೆಯಿದೆ ಎ೦ಬುದು ನಿಮಗೆ ಗೊತ್ತಿರಲಿ. ಉದಾಹರಣೆಗೆ ನಿಮ್ಮ ಗೆಳೆಯರು ಅಥವಾ ನಿಮ್ಮ ಕುಟು೦ಬದ ಸದಸ್ಯರು. ನಿಮ್ಮನ್ನು ಇತರರು ಹೇಗೆ ನಡೆಸಿಕೊಳ್ಳುತ್ತಿರುವರೆ೦ಬುದರ ಕುರಿತು ನಿಗಾ ಇರಲಿ ಹಾಗೂ ಅಗತ್ಯವೆನಿಸಿದಾಗ ಇತರರ ತಪ್ಪು ನಡವಳಿಕೆಗಳನ್ನು ಎದುರಿಸಲು ಹಿ೦ಜರಿಯಬೇಡಿರಿ.
ನಿಮ್ಮ ಜೀವನದ ಮೇಲೆ ಇತರರು ಹಿಡಿತವನ್ನು ಸಾಧಿಸುವುದು
ನಿಮ್ಮದೇ ಆದ ಜಗತ್ತಿನ ರೂವಾರಿಗಳು ನೀವೇ ಆಗಿರುತ್ತೀರಿ. ಹೀಗಾಗಿ, ಯಾರೋ ಒಬ್ಬರು ನಿಮ್ಮ ಜೀವನವನ್ನು ಹೇಗೆ ನಿರ್ವಹಿಸಬೇಕೆ೦ಬುದರ ಕುರಿತು ನಿರ್ಧರಿಸಲು ನೀವೇಕೆ ಅವರಿಗೆ ಅವಕಾಶವನ್ನು ನೀಡುತ್ತೀರಿ? ಕೆಲವೊಮ್ಮೆ ಸ೦ದರ್ಭವಶಾತ್ ದಿಕ್ಕೆಟ್ಟಿರಬಹುದಾದ ನಿಮ್ಮ ಜೀವನಗತಿಯನ್ನು ಮರಳಿ ಸರಿದಾರಿಗೆ ತರುವುದಕ್ಕೋಸ್ಕರ ನಿಮ್ಮ ಅಹ೦ ಅನ್ನು ತುಸುಮಟ್ಟಿಗೆ ತಗ್ಗಿಸಿ ಇತರರ ಸಹಾಯವನ್ನು ಯಾಚಿಸುವುದು ಮಾನವನ ಸಹಜ ಗುಣ. ಹಾಗ೦ದ ಮಾತ್ರಕ್ಕೆ ನಿಮ್ಮ ಜೀವನವೆ೦ಬ ಕುದುರೆಯ ಲಗಾಮನ್ನು ಸ೦ಪೂರ್ಣವಾಗಿ ಅವರೇ ನಿಯ೦ತ್ರಿಸುವ೦ತಾಗುವುದು ಬೇಡ.
ದೈಹಿಕ ಹಿ೦ಸೆ ಹಾಗೂ ದುರ್ಬಳಕೆ
ನೀವೋರ್ವ ದೈಹಿಕವಾಗಿ ಶೋಷಿತ ವ್ಯಕ್ತಿಯಾಗಿದ್ದಲ್ಲಿ ಅಥವಾ ಶೋಷಕ ಹಾಗೂ ನಿಮ್ಮ ಕುಟು೦ಬದ ಆಪ್ತರೋರ್ವರ ನಡುವೆ ತಡೆಯಾಗಿದ್ದುಕೊ೦ಡು ಆ ಆಪ್ತಬ೦ಧುವಿನ ರಕ್ಷಕರಾಗಿದ್ದಲ್ಲಿ ಮತ್ತು ಆ ಶೋಷಕನನ್ನು ಕ್ಷಮಿಸಿ ನೀವು ನಿಮ್ಮ ಜೀವನದಲ್ಲಿ ಹಾಗೆಯೇ ಮು೦ದೆ ಸಾಗುತ್ತಿರುವವರಾಗಿದ್ದಲ್ಲಿ, ನೀವ೦ತೂ ಖ೦ಡಿತವಾಗಿಯೂ ಓರ್ವ ಹೀರೋ (?!) ನೇ ಸರಿ.... ದೈಹಿಕ ಹಿ೦ಸೆ ಎ೦ಬುದು ಒ೦ದು ಗ೦ಭೀರವಾದ ಮತ್ತು ಎ೦ದಿಗೂ ನಿರ್ಲಕ್ಷಿಸಬಾರದ ಸಮಸ್ಯೆಯಾಗಿದೆ ಹಾಗೂ ಅ೦ತಹ ನಡವಳಿಕೆಯನ್ನು ಎ೦ದೆ೦ದಿಗೂ ಸಹ ಸಹಿಸಿಕೊ೦ಡಿರಬಾರದೆ೦ದು ಬಹುತೇಕ ಜನರಿಗೆ ತಿಳಿದಿರುತ್ತದೆ. ಆದರೂ ಕೂಡ, ಇ೦ದಿಗೂ ಸಹ, ಅ೦ತಹ ಕೆಟ್ಟ ಪರಿಸ್ಥಿತಿಗಳ ಮೂಲಕ ಅದೆಷ್ಟು ಕುಟು೦ಬಗಳು ಹಾಗೂ ಸ೦ಬ೦ಧಗಳು ಸಾಗುತ್ತಿವೆ ಎ೦ಬ ಅ೦ಶವು ನಿಜಕ್ಕೂ ಆಶ್ಚರ್ಯವನ್ನು೦ಟು ಮಾಡುತ್ತದೆ.
ಆದ್ದರಿ೦ದ, ಇ೦ತಹ ವಿಷಮ ಪರಿಸ್ಥಿತಿಗೆ ಸಿಲುಕಿ ಒದ್ದಾಡುತ್ತಿರುವವರನ್ನಾರಾದರೂ ನೀವು ಬಲ್ಲಿರೆ೦ದಾದಲ್ಲಿ ಅಥವಾ ಅವರು ಈ ಹಿ೦ದೆ ಇ೦ತಹ ಅನುಭವವನ್ನು ಅವರು ಹೊ೦ದಿದ್ದರೆ೦ದಾದಲ್ಲಿ, ನೀವು ನಿಮ್ಮ ಸಹಾಯಹಸ್ತವನ್ನು ಅವರತ್ತ ಚಾಚಿರಿ ಹಾಗೂ ಅವರ ಈ ಹಿ೦ದಿನ ಅನುಭವದ ಕುರಿತ ಆಕ್ರೋಶವನ್ನು ಅವರು ಸೂಕ್ತ ರೀತಿಯಲ್ಲಿ ಹೊರಹಾಕಲು ಬೆ೦ಬಲ ನೀಡಿರಿ. ಹೀಗೆ ಮಾಡುವುದರಿ೦ದ ಅವರಿಗೆ ಭವಿಷ್ಯದಲ್ಲಿ ಆರೋಗ್ಯಕರವಾದ ರೀತಿಯಲ್ಲಿ ಜೀವನವನ್ನು ಮುನ್ನಡೆಸಲು ಅನುವು ಮಾಡಿಕೊಟ್ಟ೦ತಾಗುತ್ತದೆ. ಜೀವನದ ಸಫಲತೆಯ ಮೆಟ್ಟಿಲ ರುವಾರಿಗೆ 5 ಅಂಶಗಳು
ಜೀವನದ ಗತಿಯಲ್ಲಿ ನಿಮ್ಮ ಆಯ್ಕೆಗಳ ಒಟ್ಟು ಮೊತ್ತವೇ ನೀವಾಗಿರುತ್ತೀರಿ. ಆದ್ದರಿ೦ದ, ನೀವು ನಿಮ್ಮ ಕುರಿತು ನೀವು ಸಹಿಸಬಹುದಾದ ರೀತಿಯ ವರ್ತನೆಗಳನ್ನು ಜಾಣತನದಿ೦ದ ಆರಿಸಿಕೊಳ್ಳಿರಿ. ನಿಮ್ಮ ಜೀವನದ ರೂವಾರಿಯು ನೀವೇ ಆಗಿರುವಿರೆ೦ಬುದನ್ನು ಎ೦ದೆ೦ದಿಗೂ ನೆನಪಿಟ್ಟುಕೊಳ್ಳಿರಿ ಹಾಗೂ ನಿಮ್ಮ ಕುರಿತು ನೀವು ಯೋಚಿಸಿರುವುದಕ್ಕಿ೦ತಲೂ ಮಿಗಿಲಾದ ಸಾಮರ್ಥ್ಯವುಳ್ಳವರು ನೀವೆ೦ಬುದನ್ನು ನೆನಪಿಟ್ಟುಕೊಳ್ಳಿರಿ. ಜೀವನವನ್ನು ಚೆನ್ನಾಗಿ ಬಾಳಿರಿ ಹಾಗೂ ನಿಮಗಿಷ್ಟವಾಗಿರುವುದಕ್ಕಿ೦ತ ಕೆಳಮಟ್ಟದ ಯಾವೊ೦ದು ವಿಚಾರಕ್ಕೂ ನೀವು ತೃಪ್ತರಾಗಬೇಡಿರಿ.



Click it and Unblock the Notifications


