For Quick Alerts
ALLOW NOTIFICATIONS  
For Daily Alerts

ಜಗತ್ತಿನ ಪ್ರಾಣಾಂತಿಕ ಮಾದಕ ದ್ರವ್ಯಗಳ ಬಗ್ಗೆ ಗೊತ್ತೇ?

|

ಮಾದಕ ದ್ರವ್ಯಗಳೆಂದರೆ ಒಂದು ರೀತಿಯಲ್ಲಿ ನಿಧಾನವಾಗಿರುವ ವಿಷದಂತೆ. ಈ ದ್ರವ್ಯಗಳು ಸುಖವನ್ನು ನೀಡುವುದರ ಜೊತೆಗೆ ಇಂಚಿಂಚಾಗಿ ಪ್ರಾಣವನ್ನು ಹೀರಿಕೊಳ್ಳುತ್ತಿರುತ್ತವೆ. ಒಮ್ಮೆ ಈ ಚಟಕ್ಕೆ ಬಲಿಯಾಗಿಬಿಟ್ಟರೆ ಇದರಿಂದ ಸುಲಭವಾಗಿ ಮುಕ್ತಿ ಸಿಗುವುದಿಲ್ಲ. ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುವ ಈ ವ್ಯಸನ ಪ್ರಾಣಕ್ಕೆ ಸಂಚಕಾರಿ ಎಂಬುದನ್ನು ತಿಳಿಯುವುದರ ಹೊತ್ತಿಗೆ ಅಪಾಯದ ಮಟ್ಟವನ್ನು ನೀವು ತಲುಪಿರುತ್ತೀರಿ.

ಕೆಲವೊಂದು ಮಾದಕ ದ್ರವ್ಯಗಳು ವಿಪರೀತ ಹಾನಿಕಾರಕವಾಗಿದ್ದು ಇದು ಮಾನವನ ದೇಹದಲ್ಲಿ ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡುತ್ತವೆ. ಈ ಮಾದಕ ದ್ರವ್ಯಗಳಿಗೆ ಒಳಗಾಗುವುದೆಂದರೆ ಒಂದು ರೀತಿಯಲ್ಲಿ ಮಾನಸಿಕ ರೋಗವಿದ್ದಂತೆ. ಕೆಲವೊಂದು ಮಾದಕ ದ್ರವ್ಯಗಳಾದ ಹೆರೋಯಿನ್ ಮತ್ತು ಮೆತಾಂಪೆಟಮಿನ್ ಇದು ಮಾನಸಿಕವಾಗಿ ಹಾನಿಮಾಡುವುದಲ್ಲದೆ ದೈಹಿಕವಾಗಿ ಕೂಡ ಹಾನಿಯನ್ನು ಉಂಟುಮಾಡುತ್ತದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಜಗತ್ತಿನಲ್ಲಿರುವ ಅತ್ಯಂತ ಮಾರಕ ಮಾದಕ ದ್ರವ್ಯಗಳು ಎಂದೇ ಪರಿಗಣಿತವಾಗಿರುವ ಡ್ರಗ್ಸ್‌ಗಳನ್ನು ಕುರಿತು ತಿಳಿದುಕೊಳ್ಳಿ. ಇವುಗಳು ಹೆಚ್ಚು ದುಷ್ಪರಿಣಾಮವನ್ನು ಬೀರಿದ್ದು ಇದು ಮನುಷ್ಯನ ಆರೋಗ್ಯದ ಮೇಲೆ ಹಾನಿಯನ್ನು ಉಂಟುಮಾಡುತ್ತವೆ. ಕೆಲವೊಂದು ದೇಶಗಳಲ್ಲಿ ಈ ಮಾದಕ ದ್ರವ್ಯಗಳನ್ನು ನಿಷೇಧಿಸಲಾಗಿದ್ದ ಇವುಗಳನ್ನು ಸಂಪೂರ್ಣ ಬಹಿಷ್ಕರಿಸಲಾಗಿದೆ. ಹಾಗಿದ್ದರೆ ಜಗತ್ತಿನಲ್ಲಿರುವ ಈ ಅಪಾಯಕಾರಿ ಮಾದಕ ದ್ರವ್ಯಗಳು ಯಾವುವು ಮತ್ತು ಅವುಗಳು ದೇಹದಲ್ಲಿ ಉಂಟುಮಾಡುವ ಪರಿಣಾಮಗಳನ್ನು ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಹಾಗಿದ್ದರೆ ಆ ಮಾದಕ ದ್ರವ್ಯಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ಬದಲಾಗದ ದೇಶ; ನೋಡಿ ಸ್ವಾಮಿ ನಾವ್ ಇರೋದೇ ಹೀಗೆ!

ಎಮ್‌ಡಿಎಮ್‌ಎ

ಎಮ್‌ಡಿಎಮ್‌ಎ

ಸಾಮಾನ್ಯವಾಗಿ ಭಾವಪರವಶತೆ ಎಂದು ಕರೆಯಲಾಗುವ ಎಮ್‌ಡಿಎಮ್‌ಎ ನಿರ್ದಿಷ್ಟ ಪರಿಧಿಯವೆರೆಗೆ ಅಷ್ಟೊಂದು ಅಪಾಯಕಾರಿಯಾಗಿರುವುದಿಲ್ಲ. ಇದರ ದೀರ್ಘ ಬಳಕೆಯು ಕೇಂದ್ರ ನರಮಂಡಲದ ಮೇಲೆ ಪರಿಣಾಮವನ್ನು ಬೀರಬಹುದು ಆದ್ದರಿಂದ ಹಲವಾರು ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಇದು ನಿಕಟತೆಯ ಭಾವನೆಯನ್ನು ಹೆಚ್ಚಿಸುವ ಮತ್ತು ಯುಪೋರಿಯಾವನ್ನು ಪ್ರೇರೇಪಿಸುವ ಮಾದಕ ದ್ರವ್ಯವಾಗಿದೆ. ಇದು ಮದ್ಯದೊಂದಿಗೆ ಸೇರಿದಾಗ ಹಾನಿಕಾರಕವಾಗಿರುತ್ತದೆ.

ಕೆಟಾಮಿನ್

ಕೆಟಾಮಿನ್

ಅತ್ಯಂತ ಅಪಾಯಕಾರಿ ಮಾದಕ ದ್ರವ್ಯಗಳಲ್ಲಿ ಮೊದಲನೆಯ ಸ್ಥಾನವನ್ನು ಈ ದ್ರವ್ಯ ಪಡೆದಿದೆ. ಕೆಲವೇ ಕೆಲವು ದಿನಗಳು ಇದನ್ನು ಸೇವಿಸಿದಾಗ ಕೂಡ ಮತಿವಿಕಲ್ಪ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಭ್ರಮೆಗಳನ್ನು ಈ ಮಾದಕ ದ್ರವ್ಯದ ಸೇವನೆಯು ಒಳಗೊಂಡಿದೆ ಎಂದೇ ಹೇಳಬಹುದು.

ಕ್ರಿಸ್ಟಲ್ ಮೆತ್

ಕ್ರಿಸ್ಟಲ್ ಮೆತ್

ಇದು ಗಂಭೀರವಾಗಿ ಮೆದುಳಿನ ಕಾರ್ಯಾಚರಣೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಇದನ್ನು ಆಗಾಗ್ಗೆ ಬಳಸಿದಾಗ ಭ್ರಮೆಗಳು, ಮರೆಗುಳಿತನ ಮತ್ತು ಇತರ ಪರಿಣಾಮಗಳು ಉಂಟಾಗಬಹುದು. ಇಂತಹ ಪರಿಣಾಮಗಳು ಒಮ್ಮೊಮ್ಮೆ ಹೆಚ್ಚಾಗಿ ದೇಹದಲ್ಲಿ ವ್ಯತ್ಯಾಸಗಳು ತಲೆದೋರಬಹುದು.

ಕೊಕೇನ್

ಕೊಕೇನ್

ಇದನ್ನು ಅತಿ ಮಾರಣಾಂತಿಕ ಮಾದಕ ದ್ರವ್ಯವೆಂದು ಪರಿಗಣಿಸಲಾಗುತ್ತದೆ. ಜಗತ್ತಿನಲ್ಲಿರುವ ಅತ್ಯಂತ ಪರಿಣಾಮಕಾರಿ ಮಾದಕ ದ್ರವ್ಯಗಳಲ್ಲಿ ಇದೂ ಕೂಡ ಒಂದಾಗಿದೆ. ಇದರಲ್ಲಿನ ವಿಷಕಾರಿ ಅಂಶಗಳು ನೇರವಾಗಿ ಮೆದುಳಿಗೆ ದಾಳಿಯನ್ನು ಮಾಡುತ್ತವೆ. ಇದು ಮಾನಸಿಕವಾಗಿ ಮತ್ತು ದೈಹಿಕವಾಗಿ ನ್ಯೂನತೆಯನ್ನು ಉಂಟುಮಾಡುತ್ತದೆ. ಮತ್ತು ಇದರ ಪರಿಣಾಮ ಅತ್ಯಂತ ಕೆಟ್ಟದಾಗಿರುತ್ತದೆ.

ಮದ್ಯಪಾನ

ಮದ್ಯಪಾನ

ಮರಣಕ್ಕೆ ಕಾರಣವಾಗಿರುವ ಅಪಘಾತಗಳಿಗೆ ಕಾರಣವಾಗಿರುವ ಮದ್ಯಪಾನವು ಪಟ್ಟಿಯಲ್ಲಿರುವ ಇತರ ಮಾದಕ ದ್ರವ್ಯಗಳಿಗಿಂತ ಹೆಚ್ಚು ಮಾರಣಾಂತಿಕವಾಗಿದೆ.

ತಂಬಾಕು

ತಂಬಾಕು

ಹೆಚ್ಚಿನ ಜೀವಗಳನ್ನು ಆಹುತಿ ತೆಗೆದುಕೊಂಡಿರುವ ತಂಬಾಕು ಅತ್ಯಂತ ಮಾರಣಾಂತಿಕ ಮಾದಕ ದ್ರವ್ಯವೆಂದು ಪರಿಗಣಿಸಲಾಗಿದೆ. ಇತರ ಮಾದಕ ದ್ರವ್ಯಗಳಿಗೆ ಹೋಲಿಸಿದಾಗ ಇದು ಹೆಚ್ಚುವರಿ ಪರಿಣಾಮವನ್ನು ಬೀರುತ್ತದೆ. ಸರಕಾರದ ಬೊಕ್ಕಸವನ್ನು ತುಂಬುವುದರಲ್ಲದೆ ಸಾಕಷ್ಟು ಆದಾಯವನ್ನು ತರುವುದರಿಂದ ಇದನ್ನು ಇನ್ನೂ ಕಾನೂನು ಬಾಹಿರವೆಂದು ಪರಿಗಣಿಸಿಲ್ಲ.

ಎಲ್‌ಎಸ್‌ಡಿ

ಎಲ್‌ಎಸ್‌ಡಿ

ಪ್ರಬಲ ಭ್ರಮಾಜನಕ ದ್ರವ್ಯವೆಂದು ಪರಿಗಣಿತವಾಗಿರುವ ಎಲ್‌ಎಸ್‌ಡಿ ಒಂದು ಶಕ್ತಿಯುತ ಭ್ರಾಂತಿಜನಕ ಮಾದಕ ದ್ರವ್ಯವಾಗಿದೆ. ಇದರ ದೀರ್ಘಕಾಲದ ಬಳಕೆಯು ಮತಿವಿಕಲ್ಪ ಮೊದಲಾದ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಈ ಮಾದಕ ದ್ರವ್ಯದ ಅಮಲ 12 ಗಂಟೆಗಳವರೆಗೆ ಇರುತ್ತದೆ.

ಹೆರಾಯಿನ್

ಹೆರಾಯಿನ್

ಮಾದಕ ದ್ರವ್ಯಗಳ ರಾಣಿಯೆಂದೇ ಕರೆಯಲಾಗುವ ಹೆರಾಯಿನ್ ಹೆಚ್ಚು ಹಾನಿಕಾರಕ ಮಾದಕ ದ್ರವ್ಯವೆಂದು ಪರಿಗಣಿತವಾಗಿದೆ. ಇದು ಹೆಚ್ಚು ಪರಿಣಾಮಕಾರಿಯಾಗಿ ದೇಹ ಮತ್ತು ಮಿದುಳಿನ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತದೆ ಇದನ್ನು ದೀರ್ಘ ಕಾಲ ಬಳಸುವುದು ಪ್ರಾಣಕ್ಕೆ ಅಪಾಯವನ್ನು ತರುತ್ತದೆ.

ಸ್ಪೀಡ್‌ಬಾಲ್

ಸ್ಪೀಡ್‌ಬಾಲ್

ಹೆರಾಯಿನ್ ಮತ್ತು ಕೊಕೇನ್‌ನ ಮಿಶ್ರಣವು ಪ್ರಾಣಕ್ಕೆ ದುಪ್ಪಟ್ಟು ಅಪಾಯವನ್ನು ತಂದೊಡ್ಡುವುದರಲ್ಲಿ ಸಂಶಯವೇ ಇಲ್ಲ. ಹೆರಾಯಿನ್ ಕಡಿಮೆ ಪ್ರಮಾಣದಲ್ಲಿ ದೊರಕಿತೆಂದರೆ ಅದನ್ನು ಬಳಸುವವರು ಸ್ಪೀಡ್‌ಬಾಲ್ ಎಂಬ ಈ ಮಿಶ್ರಣವಿರುವ ಮಾದಕ ದ್ರವ್ಯವನ್ನು ತೆಗೆದುಕೊಳ್ಳುತ್ತಾರೆ. ಇದನ್ನು ಸೇವಿಸುವುದು ಪ್ರಾಣಕ್ಕೆ ಖಂಡಿತ ಕುತ್ತನ್ನು ತರುತ್ತದೆ.

English summary

Most Dangerous Drugs In The World

Numerous scientific studies have confirmed that certain drugs have extremely harmful and destructive effects on the human body. Here are the 10 most harmful drugs in the world. Read on... The drugs in the list are ranked in ascending order of their deadly quotient.
X
Desktop Bottom Promotion