Latest Updates
-
ಬಿಸಿಲ ಬೇಗೆಯಿಂದ ಫಿಟ್ನೆಸ್ ಅಪಾಯದಲ್ಲಿ? ಹೀಟ್ ಸ್ಟ್ರೋಕ್ ತಪ್ಪಿಸಲು ಬೆಳಗಿನ ವ್ಯಾಯಾಮದ ಸಮಯ ಹೀಗಿರಲಿ! -
ಮದುವೆಗೆ ಮುಂಚಿನ ಲೈಂಗಿಕ ಸಂಬಂಧ: ಸುಪ್ರೀಂ ಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಮುಂಬೈ ನೀರಿನ ಸಮಸ್ಯೆ: ಮಳೆಗಾಲದ ಕೊರತೆ ನೀಗಿಸಲು ಇಲ್ಲಿವೆ 4 ಸ್ಮಾರ್ಟ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಆಹಾರಗಳೇ ಮದ್ದು: ಹೀಟ್ವೇವ್ಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಬಿಸಿಗಾಳಿ ಅಥವಾ ಭಾರೀ ಮಳೆ: ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ವ್ಯಾಯಾಮದ ನಿಯಮಗಳನ್ನು ಪಾಲಿಸಿ -
ಮಳೆಗಾಲದ ಕಿರಿಕಿರಿ ಬೇಡವೇ? ಫ್ರೆಶ್ ಆಗಿರಲು ಈ ಬಜೆಟ್ ಫ್ರೆಂಡ್ಲಿ ಬ್ಯೂಟಿ ಹ್ಯಾಕ್ಸ್ ಟ್ರೈ ಮಾಡಿ! -
ದೆಹಲಿ-ಎನ್ಸಿಆರ್ ಬಿರುಗಾಳಿ ಎಚ್ಚರಿಕೆ: ನಿಮ್ಮ ಬಾಲ್ಕನಿಯನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸಗಳನ್ನು ಮಾಡಿ! -
ಎನರ್ಜಿ ಡ್ರಿಂಕ್ಸ್ ಹೆಸರಲ್ಲಿ ವಿಷ ಕುಡಿತಿದ್ದೀರಾ? ಎಫ್ಎಸ್ಎಸ್ಎಐ ಎಚ್ಚರಿಕೆ ಮತ್ತು ಸುರಕ್ಷಿತ ಪಾನೀಯಗಳ ಮಾಹಿತಿ -
2026ರ ವಿಶ್ವ ಪರಿಸರ ದಿನ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಗ್ರೀನ್ ಚಾಲೆಂಜ್ಗಳು, ನೀವೂ ಭಾಗವಹಿಸಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಈ ಸರಳ ಟಿಪ್ಸ್ ಪಾಲಿಸಿ, ಆರೋಗ್ಯವಾಗಿರಿ!
ವ್ಯಾಲಂಟೇನ್ ದಿನಕ್ಕಾಗಿ ಪ್ರೀತಿಯ ಸಂಕೇತಗಳು
ಪ್ರೀತಿಯ ದಿನದಂದು, ಜಗತ್ತಿನಲ್ಲಿರುವ ಎಲ್ಲಾ ಪ್ರೇಮಿಗಳು ತಮ್ಮದೇ ರೀತಿಯಲ್ಲಿ ಈ ದಿನವನ್ನು ನೆನಪಿನಲ್ಲುಳಿಯುವಂತೆ ಆಚರಿಸುತ್ತಾರೆ. ಈ ದಿನವನ್ನು ಇನ್ನಷ್ಟು ವಿಶೇಷಗೊಳಿಸಲು ಸಂಗಾತಿಗಳು ಪರಸ್ಪರ ವಿಶೇಷ ಕೊಡುಗೆಗಳಾದ ಗುಲಾಬಿ ಹೂವಿನಿಂದ ಹಿಡಿದು ಟೆಡ್ಡಿಬೇರ್, ಹೃದಯಾದಾಕಾರದ ಚಿನ್ನದ ಪೆಂಡೆಂಟ್ ಹೀಗೆ ಬೆಲೆಬಾಳುವ ವಸ್ತುಗಳನ್ನು ಪ್ರೀತಿಯ ಸಂಕೇತವಾಗಿ ನೀಡುತ್ತಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಂಪ್ರದಾಯಿಕ ವ್ಯಾಲಂಟೇನ್ ಕೊಡುಗೆಯ ಮಹತ್ವ
ಈ ದಿನದಂದು ಪ್ರೀತಿ ಪಾತ್ರರನ್ನು ಸಂತಸದಿಂದಿರಿಸಬೇಕೆಂಬ ಬಯಕೆ ಪ್ರತಿಯೊಬ್ಬರದಾಗಿದೆ. ತಮ್ಮ ಪ್ರೀತಿಯ ಆಳ, ಅವರಗಿರುವ ಸ್ಥಾನ, ಜೀವನದಲ್ಲಿ ಆದ ಬದಲಾವಣೆ ಹೀಗೆ ಪ್ರತಿಯೊಂದನ್ನು ರಂಗು ರಂಗಾಗಿ ನಿವೇದಿಸಿಕೊಳ್ಳುವ ಉತ್ಕಟ ವಾಂಛೆ ಪ್ರೇಮಿಗಳಾದಾಗಿರುತ್ತದೆ.
ವ್ಯಾಲಂಟೇನ್ ದಿನದ ಮಹತ್ವವನ್ನು ಅರಿತುಕೊಂಡು ಈ ದಿನವನ್ನು ಆಚರಿಸುವುದು ಇನ್ನಷ್ಟು ಮಹತ್ವಪೂರ್ಣವಾಗಿರುತ್ತದೆ. ವ್ಯಾಲಂಟೇನ್ ದಿನದ ಮಹತ್ವವನ್ನು ಸಾರುವ ಸಂಕೇತಗಳು ಲೆಕ್ಕವಿಲ್ಲದಷ್ಟಿವೆ. ಗುಲಾಬಿ ಹೂವು ಮತ್ತು ಚಾಕಲೇಟ್ ಅನ್ನು ಕೊಡುಗೆಯಾಗಿ ನೀಡುವುದು ಮಾತ್ರ ವ್ಯಾಲಂಟೇನ್ ದಿನವೆಂದು ಹಲವರ ಅಭಿಪ್ರಾಯವಾಗಿದೆ.
ಬಾಯಲ್ಲಿ ನೀರೂರಿಸುವ ಚಾಕಲೇಟ್‌ಗಳನ್ನು ಹೊರತುಪಡಿಸಿ ವ್ಯಾಲಂಟೇನ್ ದಿನಕ್ಕಾಗಿ ಕೆಲವೊಂದು ಪ್ರೀತಿಯ ಸಂಕೇತಗಳಿವೆ. ಪ್ರೀತಿಯ ಈ ವಿಶೇಷ ದಿನಕ್ಕಾಗಿ ಈ ಸಂಕೇತಗಳು ವ್ಯಾಲಂಟೇನ್ ದಿನದ ಮಹತ್ವವನ್ನು ಸಾರುತ್ತವೆ.ಆದ್ದರಿಂದ ನಿಮ್ಮ ದಿನವನ್ನು ಇನ್ನಷ್ಟು ಅರ್ಥಗರ್ಭಿತಗೊಳಿಸಲು, ವ್ಯಾಲಂಟೇನ್ ದಿನಕ್ಕಾಗಿ ಕೆಲವೊಂದು ಪ್ರೀತಿಯ ಸಂಕೇತಗಳನ್ನು ಇಲ್ಲಿ ನೀಡಲಾಗಿದ್ದು ಅವುಗಳ ಬಳಕೆಯನ್ನು ಅರಿತುಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವ್ಯಾಲಂಟೇನ್ ದಿನಕ್ಕಾಗಿ ಬಾದಾಮಿ ಚಾಕಲೇಟ್ ರೆಸಿಪಿ

ಕ್ಯುಪಿಡ್
ವ್ಯಾಲಂಟೇನ್ ದಿನದ ಮಹತ್ವವನ್ನು ಸಾರುವ ಒಂದು ಸಂಕೇತವಾಗಿದೆ ಕ್ಯುಪಿಡ್. ಆತನ ಬಾಣಗಳು ಗೋಚರಿಸುವುದಿಲ್ಲ ಮತ್ತು ಪ್ರೀತಿಗೆ ಬೀಳುವವರೆಗೂ ಅವನ ಬಾಣಕ್ಕೆ ತುತ್ತಾಗುವ ಬಲಿಪಶುಗಳಿಗೆ ಅದರ ಅರಿವು ಇರುವುದೇ ಇಲ್ಲ.

ಗುಲಾಬಿ ಹೂವು
ಹೌದು ಕೆಂಪು ಗುಲಾಬಿಯು ಉತ್ಸಾಹ, ಬೆಚ್ಚಗೆ ಮತ್ತು ಮೃದುತ್ವದ ಸಂಕೇತವಾಗಿದೆ. ಮಾನವನ ಹೃದಯದ ಬಣ್ಣದೊಂದಿಗೆ ಗುಲಾಬಿಯ ಬಣ್ಣ ಸಂಯೋಜನೆಗೊಂಡಿರುವುದರಿಂದ ಗುಲಾಬಿ ಹೂವು ವ್ಯಾಲಂಟೇನ್ ದಿನದ ಸಂಕೇತವಾಗಿದೆ.

ಬಾಣದ ಗುರುತುಳ್ಳ ಹೃದಯ
ಈ ಪ್ರಿತಿಯ ದಿನದಂದು ಹಲವಾರು ಸಂಗಾತಿಗಳು ಕೆಂಪು ಹೃದಯವನ್ನು ಒಬ್ಬರಿಗೊಬ್ಬರು ಕೊಡುಗೆಯಾಗಿ ನೀಡುತ್ತಾರೆ. ಬಾಣದ ಗುರುತಿನ ಹೃದಯವು ಹೆಣ್ಣು ಮತ್ತು ಗಂಡಿನ ವಿಲೀನವನ್ನು ತೋರಿಸುತ್ತದೆ.

ಲೇಸ್
ಲೇಸ್ ರಿಬ್ಬನ್‌ನೊಂದಿಗೆ ಕಟ್ಟಿದ ಉಡುಗೊರೆಗಳನ್ನು ಈ ದಿನ ನೀಡುವುದರಿಂದ ಲೇಸ್ ಅನ್ನು ಪ್ರೀತಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ನೂರಾರು ವರ್ಷಗಳ ಹಿಂದೆ, ಮಹಿಳೆ ಈ ಮೃದುವಾದ ಲೇಸ್ ಕರವಸ್ತ್ರಗಳನ್ನು ತನ್ನೊಂದಿಗೆ ಒಯ್ಯುತ್ತಿದ್ದಳು ಮತ್ತು ಹಿಂದಿರುವ ಪುರುಷನು ಅದನ್ನು ಹೆಕ್ಕಲಿ ಎಂದು ಆಕೆ ಅದನ್ನು ಅಲ್ಲಿಯೇ ಬಿಟ್ಟರೆ, ಪ್ರಿತಿಯನ್ನು ಪ್ರಚೋದಿಸಲು ಆಕೆ ಅದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾಳೆ ಎಂದರ್ಥವಾಗಿದೆ.

ಪಾರಿವಾಳಗಳು
ವ್ಯಾಲಂಟೇನ್ ದಿನದ ಒಂದು ಸುಂದರ ಪ್ರೀತಿಯ ಸಂಕೇತವೆಂದರೆ ಪಾರಿವಾಳಗಳಾಗಿವೆ. ತಮ್ಮ ಜೀವನದುದ್ದಕ್ಕೂ ಈ ಸುಂದರ ಪಕ್ಷಿಗಳು ತಮ್ಮ ಸಂಗಾತಿಯೊಡನೇ ಜೀವಿಸುತ್ತವೆ. ನಿಷ್ಠೆ ಮತ್ತು ಪ್ರೀತಿಯನ್ನು ಪ್ರತಿನಿಧಿಸುವ ಪಾರಿವಾಳಗಳ ಪ್ರೀತಿಯು ವ್ಯಾಲಂಟೇನ್ ದಿನದ ಮಹತ್ವನ್ನು ಸಾರುತ್ತವೆ. ಆದ್ದರಿಂದ ಪ್ರೇಮಿಗಳು ಈ ಕೊಡುಗೆಯನ್ನು ಉಡುಗೊರೆಯಾಗಿ ನೀಡುತ್ತಾರೆ.

ಶುಭಾಶಯ ಪತ್ರಗಳು
ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದನ್ನು ತಿಳಿಸುವ ಒಂದು ವಿಧಾನ ಶುಭಾಶಯ ಪತ್ರವಾಗಿದೆ. ಆ ದಿನಗಳಲ್ಲಿ, ರೆಡ್ ವ್ಯಾಕ್ಸ್‌ನೊಂದಿಗೆ ಸೀಲ್ ಮಾಡಿದ ಶುಭಾಶಯ ಪತ್ರಗಳನ್ನು ಪ್ರೀತಿಪಾತ್ರರಿಗೆ ಅವರ ಮನೆಯ ಬಾಗಿಲಲ್ಲಿ ರಹಸ್ಯವಾಗಿ ಇಡಲಾಗುತ್ತಿತ್ತು. ವ್ಯಾಲಂಟೇನ್ ದಿನದ ಸಾಮಾನ್ಯ ಸಂಕೇತ ಇದಾಗಿದೆ.

ತೋಳಿನ ಮೇಲೆ ಹೃದಯದ ಚಿತ್ರಗಳು
ಯುವಕರು ತಮ್ಮ ತೋಳಿನ ಮೇಲೆ ಹೃದಯದ ಚಿತ್ರವನ್ನು ಬರೆಸಿಕೊಂಡು ಅದರಲ್ಲಿ ತನ್ನ ಮನದನ್ನೆಯ ಹೆಸರನ್ನು ಇರಿಸಿಕೊಳ್ಳುವುದು ನಿಮಗೆಲ್ಲಾ ತಿಳಿದ ವಿಷಯ. ತೋಳಿನ ಮೇಲೆ ಹೆಸರು ಬರೆಸಿಕೊಂಡವರು ಅವರಿಗೆ ಸೇರಿದವರು ಎಂಬ ಅರ್ಥವನ್ನು ಈ ವ್ಯಾಲಂಟೇನ್ ದಿನದ ಸಂಕೇತ ತಿಳಿಸುತ್ತದೆ.

ಲವ್ ಬರ್ಡ್ಸ್
ಪ್ರೆಮಿಗಳು ಒಬ್ಬರಿಗೊಬ್ಬರು ವ್ಯಾಲಂಟೇನ್ ದಿನದಂದು ಲವ್ ಬರ್ಡ್ಸ್ ಅನ್ನು ಕೊಡುಗೆಯಾಗಿ ನೀಡುವ ಹಿಂದಿರುವ ಉದ್ದೇಶ ಆಕರ್ಷಕವಾಗಿದೆ. ಈ ವಿಶೇಷ ದಿನದೊಂದಿಗೆ ಅವುಗಳು ಜೊತೆಯಾಗಿರುವುದರ ಕಾರಣ ಲವ್ ಬರ್ಡ್ಸ್‌ಗಳು ತಮ್ಮ ಜೋಡಿಯನ್ನು ಫೆಬ್ರವರಿ 14 ರಂದು ಆಯ್ದುಕೊಳ್ಳುತ್ತವೆ ಎಂದಾಗಿದೆ.



Click it and Unblock the Notifications