For Quick Alerts
ALLOW NOTIFICATIONS  
For Daily Alerts

ಉಗುರುಗಳ ಕುರಿತಾದ ಆಸಕ್ತಿಕರ ಅಂಶಗಳು

|

ನಿಮ್ಮ ಉಗುರುಗಳ ಅಂದ ನಿಮ್ಮ ಅಂದಕ್ಕೆ ಭೂಷಣವಿದ್ದಂತೆ. ಕೊಳಕಾದ ಶಿಥಿಲವಾದ ಉಗುರು ನಿಮ್ಮ ಸಂಪೂರ್ಣ ಸೌಂದರ್ಯಕ್ಕೆ ಕಪ್ಪುಚುಕ್ಕೆಯಿದ್ದಂತೆ. ನಿಮ್ಮ ಉಗುರುಗಳ ಬೆಳವಣಿಗೆಗೆ 80 ಶೇಕಡಾ ಪ್ರೋಟೀನ್‌ಗಳು, 2 ಶೇಕಡಾ ಮಿನರಲ್ ಸಾಲ್ಟ್ ಮತ್ತು 18 ಶೇಕಡಾ ಹೈಡ್ರೇಟಿಂಗ್ ಫ್ಲೂಯಿಡ್‌ನ ಅಗತ್ಯವಿದೆ.

ಉಗುರುಗಳನ್ನು ಬೆಳೆಸುವುದರೊಂದಿಗೆ ಅದರ ಸ್ವಚ್ಛತೆಗೂ ಗಮನ ನೀಡಬೇಕು. ಅವುಗಳನ್ನು ಚೂಪಾಗಿ ಇರಿಸಿಕೊಳ್ಳದೆ ಸಪಾಟಾಗಿಸಿ. ಉಗುರುಗಳನ್ನು ಸೌಂದರ್ಯಕ್ಕಾಗಿ ಬೆಳೆಸುವುದರೊಂದಿಗೆ ಅವುಗಳ ಕುರಿತಾದ ಕೆಲವು ಆಸಕ್ತಿಕರ ಅಂಶಗಳನ್ನು ತಿಳಿದುಕೊಳ್ಳಿ.

Interesting Facts About Nails

1.ಬೆರಳುಗಳು ಉದ್ದವಿದ್ದಂತೆ ಉಗುರುಗಳು ವೇಗವಾಗಿ ಬೆಳೆಯುತ್ತವೆ. ಯಾರ ಬೆರಳುಗಳು ತೆಳ್ಳಗಿರುತ್ತವೋ ಅವರ ಉಗುರುಗಳು ದಪ್ಪಗಿರುತ್ತವೆ ಎಂಬ ನಂಬಿಕೆಯೂ ಇದೆ.

2.ಈ ಪ್ರಶ್ನೆಗೆ ಉತ್ತರಿಸಿ - ಯಾವ ಕೈಯನ್ನು ನೀವು ಹೆಚ್ಚು ಬಳಸುತ್ತೀರಿ? ಇದು ಹೌದಾಗಿದ್ದರೆ ನೀವು ಹೆಚ್ಚು ಬಳಸುವ ಕೈಯ ಉಗುರುಗಳು ಮತ್ತೊಂದು ಕೈಯ ಉಗುರುಗಳಿಗಿಂತ ವೇಗವಾಗಿ ಬೆಳೆಯುತ್ತವೆ.

3.ಇತರ ಮಹಿಳೆಯರಿಗಿಂತ ಗರ್ಭಿಣಿ ಸ್ತ್ರೀಯರ ಉಗುರುಗಳು ವೇಗವಾಗಿ ಬೆಳೆಯುತ್ತವೆ. ಉಗುರುಗಳ ಕುರಿತಾದ ಹೆಚ್ಚು ಆಸಕ್ತಿಕರ ಸಂಗತಿ ಇದಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೂಸು ನಿಲ್ಲಿಸುವುದು ಹೇಗೆ?

4.ಅನಾರೋಗ್ಯದಿಂದ ವ್ಯಕ್ತಿ ಚೇತರಿಸಿಕೊಂಡರೆ, ಅವರ ಕೈ ಉಗುರುಗಳು ವೇಗವಾಗಿ ಬೆಳೆಯುವ ಪ್ರವೃತ್ತಿಯನ್ನು ಹೊಂದಿರುತ್ತವೆ.

5.ಹೆಬ್ಬೆರಳ ಉಗುರುಗಿಂತ ಮಧ್ಯ ಬೆರಳಿನ ಉಗುರು ವೇಗವಾಗಿ ಬೆಳೆಯುತ್ತವೆ. ಹೆಚ್ಚಿನ ಜನರು ತಿಳಿಯದಿರುವ ಉಗುರಿನ ಕುರಿತಾದ ಆಸಕ್ತಿಕರ ಅಂಶ ಇದಾಗಿದೆ.

6.ಉಗುರಿನ ಬಗ್ಗೆ ಇರುವ ಇನ್ನೊಂದು ಮಹತ್ವದ ಸಂಗತಿಯೆಂದರೆ ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಉಗುರುಗಳು ವೇಗವಾಗಿ ಬೆಳೆಯುತ್ತವೆ ಎಂಬುದಾಗಿದೆ. ಬೆಳಗ್ಗಿನ ಜಾವದಲ್ಲಿ ನಿಮ್ಮ ಕೈಗಳೊಂದಿಗೆ ಕೆಲಸ ಮಾಡುತ್ತಿರುವ ಸಮಯಕ್ಕಿಂತಲೂ ರಾತ್ರಿ ನೀವು ಮಲಗಿರುವ ಸಮದಲ್ಲಿ ಉಗುರುಗಳು ವೇಗವಾಗಿ ಬೆಳೆಯುತ್ತವೆ.

7.ನಿಮ್ಮ ಉಗುರುಗಳಲ್ಲಿ ಬಿಳಿ ಕಲೆಯನ್ನು ನೀವು ಹೊಂದಿರುವಿರಾ? ಕ್ಯಾಲ್ಶಿಯಂ ಕೊರತೆಯಿಂದ ಈ ಬಿಳಿ ಕಲೆಗಳು ಉಂಟಾಗುತ್ತವೆ ಎಂಬ ನಂಬಿಕೆ ಇದೆ. ಆದರೆ ಈ ಬಿಳಿ ಕಲೆ ಉಂಟಾಗಲು ಮುಖ್ಯ ಕಾರಣ ನಿಮ್ಮ ಉಗುರುಗಳ ಮೇಲ್ಭಾಗದಲ್ಲಿ ಉಂಟಾಗುವ ಗಾಯಗಳಾಗಿವೆ.

8.ಉಗುರಿನ ಕುರಿತಾದ ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಉಗುರುಗಳು ಬೆಳೆಯಲು ಮತ್ತು ಬದುಕಲು ಅವುಗಳಿಗೆ ರಕ್ತದ ಅವಶ್ಯಕತೆ ಎಂಬುದಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಯುವ ಮುನ್ನ ಮಾಡಬೇಕಾದ ಸಾಹಸಕ್ರೀಡೆಗಳು

9.ನೀವು ಹೆಚ್ಚಿನ ಒತ್ತಡದಿಂದ ಬಳಲುತ್ತಿದ್ದರೆ, ಅದನ್ನು ನಿಯಂತ್ರಿಸಲು ಉಪಾಯವನ್ನು ನೀವು ಕಂಡುಹುಡಬೇಕಿದೆ. ಉಗುರುಗಳು ಬೆಳೆಯದಿರಲು ಮುಖ್ಯ ಕಾರಣ ಒತ್ತಡ ಎಂಬ ನಂಬಿಕೆ ಇದೆ. ಉಗುರುಗಳು ಶಿಥಿಲಗೊಳ್ಳಲು ಒತ್ತಡವೇ ಮುಖ್ಯ ಕಾರಣ ಎಂಬ ಮಾತೂ ಇದೆ.

ಉಗುರಿನ ಕುರಿತಾದ ಈ ಆಶ್ಚರ್ಯಕರ ಸಂಗತಿಗಳು ಉಗುರಿನ ಕುರಿತಾದ ನಿಮ್ಮ ಕಾಳಜಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನಾವು ತಿಳಿಯುತ್ತೇವೆ

English summary

Interesting Facts About Nails

When was the last time you took a look at your nails. These little white areas at the end of your fingers have a lot of interesting facts about them. One of the known interesting facts about your fingernails is that they are made out of 80 percent proteins, 2 percent of mineral salt and 18 percent of hydrating fluid. Read on to know more.
X
Desktop Bottom Promotion