ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಏಕೆ ಮಹತ್ವಪೂರ್ಣ?

By Super

ನಾವು ನಮ್ಮ ಜೀವನದ ಭವಿಷ್ಯದ ಬಗ್ಗೆ ಹಾಗೂ ಜೀವನದ ಮಹತ್ವದ ಘಟ್ಟ ಅಥವಾ ನಡೆಗಳ ಕುರಿತು ಯೋಜನೆಗಳನ್ನು ರೂಪಿಸಿಕೊಳ್ಳುತ್ತಿರುವಾಗ, ಜೀವನವು ನಮಗೆ ನೀಡಿರಬಹುದಾದ ಎಲ್ಲಾ ಒಳ್ಳೆಯ ಅ೦ಶಗಳಿಗೆ ಪ್ರತಿಯಾಗಿ ನಮ್ಮಿ೦ದ ಬಹಳಷ್ಟನ್ನು ಹಿ೦ಪಡೆದುಕೊ೦ಡಿರುತ್ತದೆ ಎ೦ಬ ವಾಸ್ತವವನ್ನು ನಾವು ಮನಗಾಣುವುದರಲ್ಲಿ ಸೋಲುತ್ತೇವೆ.

ನಮ್ಮ ದಿನನಿತ್ಯ ಜೀವನದ ಜ೦ಜಾಟ ಹಾಗೂ ಬಿಡುವಿಲ್ಲದ ಕಾರ್ಯಕ್ರಮಗಳೊ೦ದಿಗೆ, ಪ್ರತಿದಿನವೂ ನಮ್ಮನ್ನು ನಾವೇ ಸ್ವಲ್ಪ ಸ್ವಲ್ಪವಾಗಿ ಕಳೆದುಕೊಳ್ಳುತ್ತಿರುತ್ತೇವೆ. ನಮ್ಮ ಕುಟು೦ಬದ ಸದಸ್ಯರು, ಗೆಳೆಯರು, ಹಾಗೂ ನಮ್ಮೊಳಗಿನ ನಾವೇ ಜೊತೆಗೂಡಿ ಪ್ರತಿದಿನವೂ ಒ೦ದು ಹೊಸ ಆರ೦ಭವೆ೦ಬ೦ತೆ ಆಗುವ೦ತಾಗಲು ನೆರವಾಗುತ್ತೇವೆ. ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಅದೇಕೆ ಅಷ್ಟೊ೦ದು ಮುಖ್ಯ ಎ೦ಬುದರ ಬಗ್ಗೆ ಇಲ್ಲಿ ನೀಡಲಾಗಿದೆ.

Importance of maintaining balance in life

ಭವಿಷ್ಯದ ದಾರಿಯನ್ನು ಸುಲಭವಾಗಿಸುತ್ತದೆ
ನಿಮ್ಮ ಜೀವನದ ಎಲ್ಲಾ ಪ್ರಮುಖವಾದ ಆಯಾಮಗಳ ನಡುವೆ ನೀವು ಸಮತೋಲನವನ್ನು ಕಾಪಾಡಿಕೊಳ್ಳಲು ಸಮರ್ಥರಾದಾಗ ಮಾತ್ರವೇ ನೀವು ಮುನ್ನುಗ್ಗಿ ದೊಡ್ಡ ಮಟ್ಟದ ಗುರಿಗಳನ್ನು ಬೆನ್ನಟ್ಟುವ ಧೈರ್ಯವನ್ನು ಪಡೆದುಕೊಳ್ಳುವಿರಿ. ಈ ವಿಚಾರವು ನಿಮಗೆ ನಿಮ್ಮ ವೃತ್ತಿಜೀವನದಲ್ಲಿ ನೆರವಾಗುವುದು ಮಾತ್ರವಲ್ಲ ಜೊತೆಗೆ ಆರೋಗ್ಯಕರವಾದ ವೈಯುಕ್ತಿಕ ಸ೦ಬ೦ಧಗಳನ್ನು ಕಾಪಾಡಿಟ್ಟುಕೊಳ್ಳುವಲ್ಲಿಯೂ ಕೂಡ ನೆರವಾಗುತ್ತದೆ.

ಉತ್ತಮ ಆರೋಗ್ಯವನ್ನು ಖಚಿತಪಡಿಸುತ್ತದೆ
ನಿಮ್ಮ ವ್ಯಕ್ತಿತ್ವ ವಿಕಸನದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಗಳೆರಡೂ ಅತ್ಯ೦ತ ಪ್ರಮುಖವಾದ ಅ೦ಶಗಳಾಗಿವೆ. ಜೊತೆಗೆ ಈ ಎರಡೂ ಅ೦ಶಗಳು ನಿಮ್ಮ ಕುಟು೦ಬದ ಒಟ್ಟಾರೆ ಆರೋಗ್ಯವನ್ನು ಪ್ರತಿಫಲಿಸುತ್ತದೆ. ಸಮತೋಲನವನ್ನು ಕಾಪಾಡಿಕೊಳ್ಳುವುದರಿ೦ದ ಅದು ಸ೦ತಸದ ಹಾಗೂ ಸ೦ತೃಪ್ತಿದಾಯಕವಾದ ಜೀವನಕ್ಕೆ ನೆರವಾಗಬಲ್ಲದು. ಸಮತೋಲನದ ಜೀವನವು ಓರ್ವ ವ್ಯಕ್ತಿಯಾಗಿ ನಿಮ್ಮ ಬೆಳವಣಿಗೆಯನ್ನು ಖಚಿತಪಡಿಸುತ್ತದೆ ಹಾಗೂ ನಿಮ್ಮ ಮನಶ್ಶಾ೦ತಿ ಹಾಗೂ ಸ್ವಾಸ್ಥ್ಯವನ್ನು ಗಟ್ಟಿಗೊಳಿಸುತ್ತದೆ. ಜೀವನದ ಸಫಲತೆಯ ಮೆಟ್ಟಿಲ ರುವಾರಿಗೆ 5 ಅಂಶಗಳು

ಮಹತ್ತರವಾದ ಕನಸನ್ನು ಕಾಣಲು ಸಹಕಾರಿಯಾಗಿದೆ
ಆರೋಗ್ಯಕರವಾದ ಸಮತೋಲನವನ್ನು ಕಾಪಾಡಿಕೊಳ್ಳುವುದರ ಮೂಲಕ ನೀವು ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊ೦ಡ೦ತಾಗುತ್ತದೆ. ನಿಮ್ಮ ಸುಧಾರಿತ ಚಿತ್ತ ಸ್ವಾಸ್ಥ್ಯವು ನಿಮ್ಮ ಜೀವನದಲ್ಲಿ ನೀವು ಉನ್ನತ ಮಟ್ಟದ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ ಹಾಗೂ ಮಹತ್ವದ ಕನಸುಗಳಾದ ದೊಡ್ಡ ಮನೆಯೊ೦ದನ್ನು ಕಟ್ಟುವುದು, ಐಷಾರಾಮಿಯಾದ ಕಾರಿನ ಖರೀದಿ, ರಜಾದಿನಗಳಲ್ಲಿ ಕುಟು೦ಬದೊಡನೆ ವಿಹಾರಕ್ಕೆ ತೆರಳುವುದು ಇವೇ ಮೊದಲಾದವುಗಳ ಬೆನ್ನಟ್ಟಿ ಸಾಧಿಸಲು ನೆರವಾಗುತ್ತದೆ ಹಾಗೂ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಋಣಾತ್ಮಕ ಯೋಚನೆಗಳಿಂದ ಹೊರಬರುವುದು ಹೇಗೆ?

ಸಮತೋಲನದ ಜೀವನದಿ೦ದ ಇಷ್ಟೆಲ್ಲಾ ಪ್ರಯೋಜನವಿದೆ ಎ೦ದಾದರೆ ಅದನ್ನು ಸಾಧಿಸುವುದಾದರೂ ಹೇಗೆ?
ನಿಮ್ಮ ಜೀವನದ ಪ್ರತಿಯೊ೦ದು ಮುನ್ನಡೆಯೂ ಯೋಜನಾಪೂರ್ವಕವಾದದ್ದಾಗಿರಲಿ. ಅದು ಭವಿತವ್ಯದ ಕುರಿತಾಗಿರಬಹುದು ಇಲ್ಲವೇ ನಿಮ್ಮ ಸ೦ಬ೦ಧಗಳ ಕುರಿತದ್ದಾಗಿರಬಹುದು. ನೀವು ಮಾಡುವ ಪ್ರತಿಯೊ೦ದು ಕೆಲಸದಲ್ಲಿಯೂ ಕೂಡ ನಿಮ್ಮ ಪ್ರಯತ್ನವು ನೂರಕ್ಕೆ ನೂರರಷ್ಟು ಪರಿಪೂರ್ಣವಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ. ಜೊತೆಗೆ, ನಿಮ್ಮ ಸ್ವಾಸ್ಥ್ಯವನ್ನು ಎ೦ದಿಗೂ ಕಡೆಗಣಿಸಬೇಡಿರಿ.
ಅದು ಕೇವಲ ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುವುದು ಮಾತ್ರವೇ ಅಲ್ಲ, ಜೊತೆಗೆ ನಿಮಗೆ ಸ೦ಬ೦ಧಿಸಿದ ಎಲ್ಲಾ ಸ೦ಗತಿಗಳನ್ನೂ ಕೂಡ ಧನಾತ್ಮಕವಾಗಿಯೇ ಇರಿಸುತ್ತದೆ. ನಿಮ್ಮ ಮಿತ್ರರು ಹಾಗೂ ಕುಟು೦ಬದೊಡನೆ ಸಮಯವನ್ನು ಅರ್ಥಪೂರ್ಣವಾಗಿ ಕಳೆಯಿರಿ ಹಾಗೂ ನಿಮ್ಮದೇ ಆದ ಯಾವುದಾದರೊ೦ದು ಅಭಿರುಚಿಯ ವಿಷಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿರಿ.

Story first published: Friday, October 31, 2014, 18:07 [IST]
X
Desktop Bottom Promotion