For Quick Alerts
ALLOW NOTIFICATIONS  
For Daily Alerts

ನೀವು ನಕಾರಾತ್ಮಕ ಚಿಂತನೆಗಳಿಂದ ಬಳಲುತ್ತಿದ್ದೀರಾ?

|

ನೀವು ಯಾವಾಗಲು ನಿಮ್ಮ ಕುರಿತಾಗಿ ಬರುವ ಟೀಕೆ ಟಿಪ್ಪಣಿ ಮತ್ತು ವಿಮರ್ಶೆಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದೀರಾ? ಯಾವಾಗಲು ವಿಮರ್ಶೆಯನ್ನು ನೆನಪಿಸಿಕೊಳ್ಳುತ್ತಿರುತ್ತೀರಾ? ನಿಮಗೆ ಸಿಗಬೇಕಾದ ಹೆಸರು, ಗೌರವ ನಿಮಗೆ ಇನ್ನೂ ದೊರೆತಿಲ್ಲವೆ? ಈ ಎಲ್ಲಾ ವಿಚಾರಗಳು ನಿಮ್ಮ ತಲೆಯನ್ನು ತುಂಬಿ ಹೋಗಿವೆಯೇ? ಎಚ್ಚರ! ಇವೆಲ್ಲವು ನಕಾರಾತ್ಮಕ ಮನೋಭಾವನೆಗಳು. ನೀವು ಅದಕ್ಕೆ ಬಲಿಯಾಗಿದ್ದೀರಿ ಎಂದು ಸೂಚಿಸುತ್ತಿವೆ ನಿಮ್ಮ ಭಾವನೆಗಳು.

ಗಂಡಸರು ಮಾಡುವ 10 ಅಸಮಾಧಾನಕರ ಕಾರ್ಯಗಳು!

ನಕಾರಾತ್ಮಕ ಮನೋಭಾವನೆಗಳು ನಿಮ್ಮನ್ನು ಭಯ, ಒತ್ತಡ ಮತ್ತು ಅಸುರಕ್ಷತೆಯೆನ್ನುವ ವೃತ್ತದಲ್ಲಿ ಸಿಲುಕಿಸಿ, ನಲುಗಿಸುತ್ತವೆ. ಜೊತೆಗೆ ಇವು ನಿಮಗೆ ಸೋಲಿನ ಮನೋಭಾವ ಸಹ ಕಾಡುವಂತೆ ಮಾಡುತ್ತವೆ.

ಇದರಿಂದ ಪಾರಾಗಲು ಇರುವ ಒಂದೇ ಒಂದು ಮಾರ್ಗ ಇಂತಹ ಆಲೋಚನೆಗಳನ್ನು ಮನಸ್ಸಿನಿಂದ ತೊಡೆದು ಹಾಕುವುದು. ಇಲ್ಲಿ ನಾವು ನಿಮಗಾಗಿ ಕೆಲವೊಂದು ಮಾರ್ಗೋಪಾಯಗಳನ್ನು ಸೂಚಿಸಿದ್ದೇವೆ. ಓದಿ ನಕಾರಾತ್ಮಕ ಮನೋಭಾವನೆಯಿಂದ ಪಾರಾಗಿ.

ವಾರಾಂತ್ಯದಲ್ಲಿ ಕೆಲಸದಿಂದ ಜಾರಿಕೊಳ್ಳುವುದು ಹೇಗೆ?

ನಿಮ್ಮ ಆಲೋಚನೆಗಳನ್ನು ಗಮನಿಸಿ:

ನಿಮ್ಮ ಆಲೋಚನೆಗಳನ್ನು ಗಮನಿಸಿ:

ನಕಾರಾತ್ಮಕ ಮನೋಭಾವನೆಗಳಿಂದ ಪಾರಾಗಲು ಮೊದಲು ನಿಮ್ಮ ಆಲೋಚನೆಗಳ ಮೇಲೆ ಒಂದು ಕಣ್ಣಿಡಿ. ಜೊತೆಗೆ ಆ ಭಾವನೆಗಳ ಮೇಲೆ ನಿಯಂತ್ರಣವನ್ನು ಇಡಿ. ನಿಮ್ಮ ಭಾವನೆಗಳನ್ನು ಒಂದು ಅಂತರದಿಂದ ನೋಡಿ, ಅವುಗಳು ನಿಮ್ಮ ಮೇಲೆ ಬೀರುತ್ತಿರುವ ಪ್ರಭಾವವನ್ನು ಅರ್ಥ ಮಾಡಿಕೊಳ್ಳಿ. ಒಂದು ವೇಳೆ ನಕಾರಾತ್ಮಕ ಭಾವನೆಗಳು ನಿಮ್ಮ ಮೇಲೆ ದುಷ್ಪರಿಣಾಮವನ್ನು ಬೀರಲು ಆರಂಭಿಸುತ್ತಿವೆ ನಿಮ್ಮ ಗಮನಕ್ಕೆ ಬಂದ ಕೂಡಲೆ ಅದರ ಬಗ್ಗೆ ಆಲೋಚಿಸುವುದನ್ನು ತಕ್ಷಣ ನಿಲ್ಲಿಸಿ. ಸಾಧ್ಯವಾದಷ್ಟು ಧನಾತ್ಮಕವಾಗಿ ಯೋಚಿಸಲು ಪ್ರಯತ್ನಿಸಿ.

ಬರವಣಿಗೆಯನ್ನು ಅಭ್ಯಾಸ ಮಾಡಿಕೊಳ್ಳಿ:

ಬರವಣಿಗೆಯನ್ನು ಅಭ್ಯಾಸ ಮಾಡಿಕೊಳ್ಳಿ:

ಯಾವಾಗ ಒಂದು ನಕಾರಾತ್ಮಕ ಮನೋಭಾವನೆಯನ್ನು ಗುರುತಿಸುತ್ತೀರೋ, ಆಗ ನೀವು ಮಾಡಬೇಕಾದ ಮೊದಲ ಕೆಲಸ ಅದನ್ನು ತಡೆಯುವುದು. ಅದನ್ನು ತಡೆಯಲು ಇರುವ ಅತ್ಯುತ್ತಮ ಮಾರ್ಗ ಬರವಣಿಗೆಯನ್ನು ಅಭ್ಯಸಿಸುವುದು. ನಿಮ್ಮ ಮನಸ್ಸಿಗೆ ಬರುವ ಎಲ್ಲ ಆಲೋಚನೆಗಳನ್ನು ಅಕ್ಷರ ರೂಪಕ್ಕೆ ತನ್ನಿ. ಮೊದಲು ನಿಮ್ಮ ಭಾವನೆಗಳನ್ನು ನೈಜವಾಗಿ ಬರೆದಿಡಿ, ನಂತರ ಅವುಗಳನ್ನು ವಸ್ತು ನಿಷ್ಠವಾಗಿ ವಿಶ್ಲೇಷಣೆ ಮಾಡಿ.

ಸದಾ ಚಟುವಟಿಕೆಯಿಂದಿರಿ.

ಸದಾ ಚಟುವಟಿಕೆಯಿಂದಿರಿ.

ನಕಾರಾತ್ಮಕ ಮನೋಭಾವನೆಗಳನ್ನು ಹತೋಟಿಯಲ್ಲಿಡಲು ಇರುವ ಅತ್ಯುತ್ತಮ ಉಪಾಯ ಚಟುವಟಿಕೆಯಿಂದಿರುವುದು. ಜಡವಾಗಿ ಕುಳಿತುಕೊಳ್ಳ ಬೇಡಿ! ಸದಾ ಚಟುವಟಿಕೆಯಿಂದ ಇರಲು ಪ್ರಯತ್ನಿಸಿ.

ನಿಮಗೆ ಆಸಕ್ತಿ ಇರುವ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ.

ನಿಮಗೆ ಆಸಕ್ತಿ ಇರುವ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ.

ನಿಮಗೆ ಮಾಡಲು ಯಾವ ಕೆಲಸವು ಇಲ್ಲವಾದಲ್ಲಿ, ಯಾವುದಾದರು ಆಸಕ್ತಿಕರ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಬಿಡುವಿನ ವೇಳೆಯಲ್ಲಿ ಕಾಲ ಕಳೆಯಲು ಬಳಕೆಯಾಗುವುದರ ಜೊತೆಗೆ, ನಕಾರಾತ್ಮಕ ಮನೋಭಾವನೆಗಳನ್ನು ಕೊಲ್ಲಲು ಸಹ ಬಳಕೆಯಾಗುತ್ತದೆ. ಅದಕ್ಕಾಗಿ ಪೆಯಿಂಟಿಗ್, ಗಾರ್ಡೆನಿಂಗ್, ಹೆಣಿಗೆ ಅಥವಾ ಹೊಸ ರುಚಿ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಿ.

ವಾಯು ವಿಹಾರ ಮಾಡಿ:

ವಾಯು ವಿಹಾರ ಮಾಡಿ:

ನಮ್ಮ ಸ್ನೇಹಿತರು ಅಥವಾ ಸಂಗಾತಿಯ ಜೊತೆಗೆ ಒಂದು ಧೀರ್ಘ ನಡಿಗೆಯನ್ನು ಸಂಜೆಗಳಲ್ಲಿ ಕೈಗೊಳ್ಳಿರಿ. ಆದರೆ ನೆನಪಿರಲಿ ಅವರು ಸಕಾರಾತ್ಮಕ ಮನೋಭಾವದವರಾಗಿರಬೇಕಾದುದು ಅತ್ಯಾವಶ್ಯಕ. ಅವರ ಜೊತೆಗೆ ನಿಮ್ಮ ಸಮಸ್ಯೆಗಳನ್ನು ಚರ್ಚಿಸಿ.

ಅಚ್ಚರಿಗೊಳಗಾಗುವ ಕಲೆಯನ್ನು ಕರಗತ ಮಾಡಿಕೊಳ್ಳಿ:

ಅಚ್ಚರಿಗೊಳಗಾಗುವ ಕಲೆಯನ್ನು ಕರಗತ ಮಾಡಿಕೊಳ್ಳಿ:

ಒಂದು ವೇಳೆ ನಿಮಗೆ ನಕಾರಾತ್ಮಕ ಮನೋಭಾವನೆಯೆಂಬುದು ಕಾಡುತ್ತಿದ್ದರೆ, ಅದರಿಂದ ಪಾರಾಗಲು ಒಂದು ಮಾರ್ಗವಿದೆ. ಅದು ನವೀನ ಮಾರ್ಗ, ನಿಮ್ಮ ಮನಸ್ಸನ್ನು ತುಂಬಾ ಕಾಲದಿಂದ ಕಾಡುತ್ತಿರುವ ಕೆಲವು ವಿಚಾರಗಳನ್ನು ಅಸ್ತಿತ್ವಕ್ಕೆ ತನ್ನಿ. ಸಂಗೀತ ಕಲಿಯುವುದು, ಪುಸ್ತಕ ಓದುವುದು, ಸುತ್ತಾಡುವುದು ಅಥವಾ ಯಾವುದಾದರು ಸರಿ ಒಟ್ಟಿನಲ್ಲಿ ನೀವು ಇಷ್ಟಪಟ್ಟಿದ್ದನ್ನು ಪೂರೈಸಿಕೊಳ್ಳಿ ಸಾಕು.

ಕೃತಙ್ಞತಾ ಮನೋಭಾವ ಕೀಲಿ ಕೈ:

ಕೃತಙ್ಞತಾ ಮನೋಭಾವ ಕೀಲಿ ಕೈ:

ನಕಾರಾತ್ಮಕ ಮನೋಭಾವನೆಯನ್ನು ತಡೆಯಲು ಮತ್ತೊಂದು ಉಪಾಯವಿದೆ. ಅದು ಕೃತಙ್ಞತಾ ಮನೋಭಾವ. ಯಾವಾಗ ನಿಮ್ಮ ಮನದಲ್ಲಿ ಒಂದು ನಕಾರಾತ್ಮಕ ಮನೋಭಾವನೆಯು ಸುಳಿಯುತ್ತದೊ, ಆಗ ಅದರ ಜಾಗದಲ್ಲಿ ಧನ್ಯತಾ ಮನೋಭಾವವನ್ನು ತುಂಬಿ. ಅದಕ್ಕೆ ಮಾಡಬೇಕಾದುದು ಏನೂ ಇಲ್ಲ. ಸುಮ್ಮನೆ ಒಂದು ಕಾಗದ ತೆಗೆದುಕೊಳ್ಳಿ. ನೀವು ನಿಮ್ಮ ಜೀವನದಲ್ಲಿ ಯಾರು ಯಾರಿಗೆ ಕೃತಙ್ಞರಾಗಿದ್ದೀರಿ, ಎಂಬ ಪಟ್ಟಿಯನ್ನು ತಯಾರಿಸಿ. ಅವರಿಗೆ ಮನದಲ್ಲಿಯೇ ಒಂದು ಕೃತಙ್ಞತೆಯನ್ನು ಅರ್ಪಿಸಿ. ಅದನ್ನು ಮತ್ತೆ, ಮತ್ತೊಮ್ಮೆ, ಮಗದೊಮ್ಮೆ ಓದಿ. ಆ ನಕಾರಾತ್ಮಕ ಮನೋಭಾವನೆಯನ್ನು ಮರೆತು ಬಿಡಿ, ಜೀವನ ಸುಂದರ ಮತ್ತು ಅದ್ಭುತವೆಂಬುದನ್ನು ಮನಗಾಣಿ.

ನಿಮ್ಮ ಸಂತಸದ ಗುಟ್ಟನ್ನು ಅರಿಯಿರಿ:

ನಿಮ್ಮ ಸಂತಸದ ಗುಟ್ಟನ್ನು ಅರಿಯಿರಿ:

ನಿಮಗೆ ಯಾವುದರಲ್ಲಿ ಸಂತೋಷ ಸಿಗುತ್ತದೆ ಎಂಬುದನ್ನು ಮೊದಲು ತಿಳಿಯಿರಿ. ಕೆಲವೊಮ್ಮೆ ಇವು ನಿಮಗೇ ನಗು ತರಿಸುವಷ್ಟು ಕ್ಷುಲ್ಲಕವಾಗಿರಬಹುದು. ಆದರೆ ಅದು ಇಲ್ಲಿ ಮುಖ್ಯವಲ್ಲ, ಒಟ್ಟಿನಲ್ಲಿ ನಿಮಗೆ ನಗು ತರಿಸಬೇಕು ಅಷ್ಟೇ. ಅದು ಒಂದು ನಾಯಿಯನ್ನೊ ಅಥವಾ ಬೆಕ್ಕನ್ನೊ ಆಟವಾಡಿಸುವುದಾಗಿರಬಹುದು. ಇಲ್ಲವೇ ಒಂದು ಕಪ್ ಐಸ್ ಕ್ರೀಮ್ ತಿನ್ನುವುದಾಗಿರಬಹುದು. ಯಾವುದಾದರು ಸರಿ ಒಟ್ಟಿನಲ್ಲಿ ನಿಮಗೆ ಆನಂದ ಕೊಡಬೇಕು ಅಷ್ಟೇ, ಮೊದಲು ಅದನ್ನು ಮಾಡಿ.


English summary

How to kill that negative attitude?

Are you constantly worried about the criticisms you receive? Is criticisms are all that you remember? Negative thoughts brings in a feeling that the whole world is against us and that we are left alone. Watch your thoughts! This is something you need to do. 
Story first published: Monday, May 12, 2014, 16:13 [IST]
X
Desktop Bottom Promotion