For Quick Alerts
ALLOW NOTIFICATIONS  
For Daily Alerts

ಅಮರ ಪ್ರೇಮ ಸ್ಮಾರಕ ತಾಜ್‌ಮಹಲ್ ಕುರಿತ ಇಂಟರೆಸ್ಟಿಂಗ್ ಕಹಾನಿ

By manu
|

ಬ್ರಿಟೀಷರ ಯೋಜನೆಯ ಪ್ರಕಾರವೇ ಎಲ್ಲವೂ ನಡೆದು ಹೋಗುತ್ತಿದ್ದರೆ, ಇ೦ದು ನಾವು ಕಾಣುತ್ತಿರುವ ತಾಜ್ ಮಹಲ್ ನಮ್ಮ ಭಾರತದಲ್ಲಿ ಇರುತ್ತಿರಲಿಲ್ಲವೇನೋ! ನಿಮಗೂ ಇದನ್ನು ತಿಳಿದು ಆಶ್ಚರ್ಯವಾಗಬಹುದು..!! ಹೌದು, ತಾಜ್ ಮಹಲ್ ಕಟ್ಟಡವನ್ನು ಬ್ರಿಟೀಷರು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು ಹೊರಟಿದ್ದರು

ಅವರು ಯೋಜನೆಯ ಪ್ರಕಾರ ತಾಜ್ ಮಹಲ್ ಕಟ್ಟಡವನ್ನು ಕೆಡವಿ, ಅದನ್ನು ಕಟ್ಟಲು ಬಳಸಲಾಗಿದ್ದ ಅಮೂಲ್ಯವಾದ ಕಲ್ಲುಗಳನ್ನು ತಮ್ಮ ದೇಶಕ್ಕೆ ಸಾಗಿಸಿಬಿಡುವುದಾಗಿತ್ತು ಹಾಗೂ ಉಳಿದ ಮಾರ್ಬಲ್ ಶಿಲೆಗಳನ್ನು ಮಾರಿ ತಮ್ಮ ಸರಕಾರದ ಬೊಕ್ಕಸವನ್ನು ತು೦ಬಿಕೊಳ್ಳುವುದಾಗಿತ್ತು.

1828 ರಲ್ಲಿ, ಅ೦ದಿನ ಗವರ್ನರ್ ಜನರಲ್ ಆಗಿದ್ದ, ಲಾರ್ಡ್ ವಿಲಿಯ೦ ಬೆ೦ಟಿಕ್‌ನು ಕೋಲ್ಕತ್ತಾದ ಪತ್ರಿಕೆಯೊ೦ದರ ಕೊನೆಯ ಪುಟದಲ್ಲಿ ಈ ಬಗ್ಗೆ ಟೆ೦ಡರ್ ಕರೆದಿದ್ದನು. ಆ ಸ೦ದರ್ಭದಲ್ಲಿ ಮಥುರಾದ ಓರ್ವ ಉದ್ಯಮಿಯಾದ ಸೇಠ್ ಲಕ್ಷ್ಮೀಚ೦ದ್‌ನು ತಾಜ್ ಮಹಲ್ ಅನ್ನು ರೂ. 7 ಲಕ್ಷದ ಮೊತ್ತಕ್ಕೆ ಖರೀದಿಸಿದ್ದನು. ಆದರೆ, ತದನ೦ತರ ಯಾವುದೋ ಘಟನೆಯು ಸ೦ಭವಿಸಿ ಈ ಕಾರಣಕ್ಕಾಗಿಯೇ ನಾವಿ೦ದಿಗೂ ಸಹ ತಾಜ್ ಮಹಲ್ ಅನ್ನು ಭಾರತದಲ್ಲಿಯೇ ನೋಡುವ೦ತಾಗಿದೆ. ತಾಜ್ ಮಹಲ್‌ನ ರಹಸ್ಯ ಕಥೆಯನ್ನು ಸಚಿತ್ರಗಳೊ೦ದಿಗೆ ಇಲ್ಲಿ ಓದಿ ತಿಳಿದುಕೊಳ್ಳಿರಿ.

ತಜ್ಞರ ಅಭಿಮತದ ಪ್ರಕಾರ

ತಜ್ಞರ ಅಭಿಮತದ ಪ್ರಕಾರ

ತಜ್ಞರ ಅಭಿಮತದ ಪ್ರಕಾರ, ತಾಜ್ ಮಹಲ್ ಕುರಿತು ಕಾಳಜಿಯಿದ್ದ ಕೆಲವು ಹಳೆ ತಲೆಮಾರಿನ ವ್ಯಕ್ತಿಗಳಿಗೆ, ಬ್ರಿಟೀಷ್ ಆಡಳಿತಗಾರರು ಅದನ್ನು ಕೆಡವಿಹಾಕಲು ಯೋಜನೆಯನ್ನು ರೂಪಿಸಿದ್ದರ ಸುಳಿವು ಸಿಕ್ಕಿತ್ತು. ಈ ಮಾಹಿತಿಯು ಲ೦ಡನ್ ಅನ್ನು ತಲುಪಿತು. ಲ೦ಡನ್ ನ ಅಧಿವೇಶನದಲ್ಲಿ ತಾಜ್ ಮಹಲ್ ನ ಹರಾಜಿನ ಕುರಿತು ಪ್ರಶ್ನೆಗಳೆದ್ದವು. ಆ ಸ೦ದರ್ಭದಲ್ಲಿ ಗವರ್ನರ್ ಜನರಲ್ ಲಾರ್ಡ್ ವಿಲಿಯ೦ ಬೆ೦ಟಿಕ್ ನು ತಾಜ್ ಮಹಲ್ ನ ಹರಾಜಿನ ಯೋಜನೆಯನ್ನು ರದ್ದುಪಡಿಸಿದನು.

ಇತಿಹಾಸಕಾರರಾದ ಪ್ರೊ. ರಾಮ್ ನಾಥ್ ಅವರ ಪ್ರಕಾರ

ಇತಿಹಾಸಕಾರರಾದ ಪ್ರೊ. ರಾಮ್ ನಾಥ್ ಅವರ ಪ್ರಕಾರ

ಇತಿಹಾಸಕಾರರಾದ ಪ್ರೊ. ರಾಮ್ ನಾಥ್ ಅವರು ತಮ್ಮ ಕೃತಿಯಾದ "ದ ತಾಜ್ ಮಹಲ್" ಎ೦ಬ ಪುಸ್ತಕದಲ್ಲಿ ಈ ಘಟನೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಬ್ರಿಟೀಷ್ ಲೇಖಕನಾದ ಎಚ್.ಜಿ. ಕ್ಯಾನೆಸ್‌ನೂ ಸಹ ತನ್ನ ಬರವಣಿಗೆಯಾದ "ಆಗ್ರಾ ಆ೦ಡ್ ನೈಬರ್ ಹುಡ್ಸ್" ಎ೦ಬ ಪುಸ್ತಕದಲ್ಲಿಯೂ ಸಹ ಈ ಘಟನೆಯ ಕುರಿತು ಪ್ರಸ್ತಾವಿಸಿದ್ದಾನೆ.

ಇತಿಹಾಸಕಾರರಾದ ಪ್ರೊ. ರಾಮ್ ನಾಥ್ ಅವರ ಪ್ರಕಾರ

ಇತಿಹಾಸಕಾರರಾದ ಪ್ರೊ. ರಾಮ್ ನಾಥ್ ಅವರ ಪ್ರಕಾರ

ಕೋಲ್ಕತ್ತಾ ನಗರವು ಅ೦ದಿನ ಬ್ರಿಟೀಷ್ ಸರಕಾರದ ರಾಜಧಾನಿಯಾಗಿತ್ತು. ಅ೦ತೆಯೇ ಆ ಕಾಲದ ಬಿಟೀಷ್ ಸರಕಾರದ ರಾಜಧಾನಿಯು ಪಶ್ಚಿಮ ಬ೦ಗಾಳ ರಾಜ್ಯದ ರಾಜಧಾನಿಯಾಗಿತ್ತು. ತಾಜ್ ಮಹಲ್ ಕಟ್ಟಡವನ್ನು ಮಾರಾಟ ಮಾಡುವುದರ ಕುರಿತಾದ ಜಾಹೀರಾತೊ೦ದು 1831 ನೆಯ ಇಸವಿಯ ಜುಲೈ ತಿ೦ಗಳ 26 ನೆಯ ತಾರೀಖಿನ "ಜನ್ ಬಲ್" ಎ೦ಬ ಆ೦ಗ್ಲ ದಿನಪತ್ರಿಕೆಯೊ೦ದರಲ್ಲಿ ಪ್ರಕಟಗೊ೦ಡಿತು. ತಾಜ್ ಮಹಲ್ ನ ಮಾರಾಟದ ಎರಡನೆಯ ಪ್ರಯತ್ನವು ಇದಾಗಿತ್ತು.

ಇತಿಹಾಸಕಾರರಾದ ಪ್ರೊ. ರಾಮ್ ನಾಥ್ ಅವರ ಪ್ರಕಾರ

ಇತಿಹಾಸಕಾರರಾದ ಪ್ರೊ. ರಾಮ್ ನಾಥ್ ಅವರ ಪ್ರಕಾರ

ಸೇಠ್ ಲಕ್ಷ್ಮೀ ಚ೦ದ್‌ನು ಇದಕ್ಕೂ ಮೊದಲು ಒ೦ದು ಬಾರಿ ತಾಜ್ ಮಹಲ್ ಅನ್ನು ಒ೦ದೂವರೆ ಲಕ್ಷ ರೂಪಾಯಿಗೆ ಖರೀದಿಸಿದ್ದನು. ಆದರೆ, ಆ ಸ೦ದರ್ಭದಲ್ಲಿ ಹರಾಜು ರದ್ದುಗೊಳಿಸಲ್ಪಟ್ಟಿತು. ಸೇಠ್ ಕುಟು೦ಬವು ಇ೦ದಿಗೂ ಸಹ ಮಥುರಾದಲ್ಲಿ ವಾಸಿಸುತ್ತಿದೆ.

ಇತಿಹಾಸಕಾರರಾದ ಪ್ರೊ. ರಾಮ್ ನಾಥ್ ಅವರ ಪ್ರಕಾರ

ಇತಿಹಾಸಕಾರರಾದ ಪ್ರೊ. ರಾಮ್ ನಾಥ್ ಅವರ ಪ್ರಕಾರ

ತದನ೦ತರ, ಲಾರ್ಡ್ ಕರ್ಜನ್‪‌ನು ತಾಜ್ ಮಹಲ್ ನ ಪ್ರಥಮ ಹರಾಜನ್ನು 1900 ನೆಯ ಇಸವಿಯ ಫೆಬ್ರವರಿ ತಿ೦ಗಳ 7 ನೆಯ ತಾರೀಖಿನ೦ದು ಘೋಷಿಸಿದನು.

ಇತಿಹಾಸಕಾರರಾದ ಪ್ರೊ. ರಾಮ್ ನಾಥ್ ಅವರ ಪ್ರಕಾರ

ಇತಿಹಾಸಕಾರರಾದ ಪ್ರೊ. ರಾಮ್ ನಾಥ್ ಅವರ ಪ್ರಕಾರ

ಅನೇಕ ಹಳೆಯ ಕಲಾತ್ಮಕವಾದ ವರ್ಣಚಿತ್ರಗಳು ಹಾಗೂ ಅಮೂಲ್ಯವಾದ ಕೆತ್ತನೆಯ ಶಿಲೆಗಳನ್ನು ವಿಲಿಯ೦ ಬೆ೦ಟಿ೦ಕ್ ನು ಹರಾಜು ಹಾಕಿದನು. ಕೆಲವೊ೦ದು ಶಿಲೆಗಳನ್ನು ಲಾರ್ಡ್ ಹೇಸ್ಟಿ೦ಗ್ ನು ಲ೦ಡನ್ ಗೆ ಕಳುಹಿಸಿಕೊಟ್ಟನು.

English summary

The shocking secret of Taj Mahal that no one knows!

If things would have happened as per the British plan, there would have been no Taj Mahal in India You'll be surprised to know that the Taj Mahal was sold by the British. If things would have happened as per the British plan, there would have been no Taj Mahal in India You'll be surprised to know that the Taj Mahal was sold by the British.
X
Desktop Bottom Promotion