Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಫಿಲ್ಮ್‌ಫೇರ್‌ನಲ್ಲಿ ಅದ್ಭುತವಾಗಿ ಕಂಡುಬಂದ ವಾಣಿ ಕಪೂರ್
ಇದೇ ಜನವರಿ 24 ರಂದು ನಡೆದ 59 ನೇ ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಎಲ್ಲಾ ಸೆಲೆಬ್ರಿಟಿಗಳು ಸಖತ್ ಹಾಟ್ ಆಗಿ ಕಂಡುಬಂದರು . 1954 ರಲ್ಲಿ ಪ್ರಾರಂಭಗೊಂಡಿರುವ ಫಿಲ್ಮ್‌ಫೇರ್ ಅವಾರ್ಡ್ ಪುರಾತನ ಹಾಗೂ ಗೌರವಯುತವಾದ ಪ್ರಶಸ್ತಿಯಾಗಿದೆ .
ಪ್ರತೀ ವರ್ಷದಂತೆ ಈ ಬಾರಿಯೂ ಮನಸೂರೆಗೊಳ್ಳುವ ಕಣ್ಮನಸೆಳೆಯುವ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಅನ್ನು ಅಲಂಕರಿಸಲಿದ್ದಾರೆ. ಒಂದು ರೀತಿಯಲ್ಲಿ ಈ ರೆಡ್ ಕಾರ್ಪೆಟ್ ಫ್ಯಾಶನ್ ಲೋಕದ ಹೊಸ ಹೊಸ ಮೈಲುಗಲ್ಲನ್ನು ಪ್ರತೀ ವರ್ಷ ತೋರಿಸುತ್ತಿದೆ.

ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಇಷ್ಟು ಧೈರ್ಯಶಾಲಿಯಾಗಿ ಯಾರೂ ಕಂಡುಬರಲಿಕ್ಕಿಲ್ಲ! ಹೌದು 2014 ರ ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ನಮ್ಮನ್ನು ಅವಕ್ಕಾಗುವಂತೆ ಮಾಡಿರುವ ನಟಿ ಬೇರೆ ಯಾರೂ ಅಲ್ಲ ಅವರೇ ವಾಣಿ ಕಪೂರ್.
ನೀವು ಎಲ್ಲಿಯಾದರೂ ಫಿಲ್ಮ್‌ಫೇರ್‌ನ ರೆಡ್ ಕಾರ್ಪೆಟ್‌ನಲ್ಲಿ ಹಾಜರಿದ್ದಲ್ಲಿ ಆಕೆಯನ್ನು ಅಡಿಯಿಂದ ಮುಡಿಯವರೆಗೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುವಿರಿ. ಭಾರೀ ಸುದ್ದಿ ಮಾಡಿರುವ ನಿಕಿಲ್ ಥಾಂಪಿ ವಿನ್ಯಾಸದ ಧಿರಿಸನ್ನು ವಾಣಿ ತೊಟ್ಟಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫಿಲ್ಮ್ ಫೇರ್ ಅವಾರ್ಡ್‌ನಲ್ಲಿ ಕಣ್ಮನ ಸೆಳೆದ ಉಡುಗೆಗಳು
ಇದು ಸ್ಟೈಲಿಶ್ ಆಗಿದ್ದು, ಅತ್ಯದ್ಭುತವಾಗಿತ್ತು. ರೆಡ್ ಕಾರ್ಪೆಟ್‌ನಲ್ಲಿ ಸುರಸುಂದರಿಯಾಗಿ ಕಣ್ಣುಕೋರೈಸಿದ ವಾಣಿ ಕಪೂರ್ ಅಪ್ಸರೆಯಂತೆ ಕಂಡುಬಂದರು. ಆಕೆಯ ಬಳ್ಳಿಯಂತಿರುವ ಮೈಮಾಟ ಮತ್ತು ನಿಕಿಲ್ ಥಾಂಪಿ ವಿನ್ಯಾಸದ ಉಡುಗೆ ಎಲ್ಲರೂ ವಾಣಿಯನ್ನೇ ನೋಡುವಂತೆ ಮಾಡಿತ್ತು.
ನಿಕಿಲ್ ಥಾಂಪಿ ವಿನ್ಯಾಸದ ಕೋಬಾಲ್ಟ್‌ನಲ್ಲಿರುವ ಸುಂದರ ಕಟ್ ಚಿತ್ತಾಕರ್ಷಕವಾಗಿತ್ತು! ನೀವು ಉಡುಗೆಯನ್ನು ಸರಿಯಾಗಿ ಗಮನಿಸಿದರೆ, ಗೌನ್‌ನ ಮಧ್ಯಭಾಗದ ಸ್ಲಿಟ್ ಹೊಂದಿಕೊಂಡಂತಿದೆ. ಗೌನ್‌ನ ಒಂದು ಭಾಗ ತೆರೆದಿದ್ದು ಇನ್ನೊಂದು ಭಾಗ ಸ್ಟ್ರಿಪ್ಸ್‌ನಿಂದ ಕೂಡಿದೆ. ಗೌನ್‌ನ ಕುತ್ತಿಗೆಯ ವಿನ್ಯಾಸವೂ ಸರಳ ಸುಂದರವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫಿಲ್ಮ್ ಫೇರ್ ಅವಾರ್ಡ್ಸ್ ಮಿಂಚಿದ ಸೆಲೆಬ್ರಿಟಿಗಳು
ನೇರಳೆ ಬಣ್ಣದ ಒನ್ ಸೈಡ್ ಕಟ್ಟೆಡ್ ಗೌನ್ ವಾಣಿಯ ಸುಂದರ ಮೈಮಾಟಕ್ಕೆ ತಕ್ಕಂತಿದೆ. ವಾಣಿ ಕಪೂರ್‌ನ ಆಯ್ಕೆ ಮೆಚ್ಚುವಂಥದ್ದು. ಗೋಲ್ಡನ್ ತೋಂಗ್ ರೋಮನ್ ಸ್ಯಾಂಡಲ್ಸ್, ಚಿನ್ನದ ಆಭರಣಗಳು ಮತ್ತು ಸುಂದರ ನಗು ಮನಮೋಹಕವಾಗಿತ್ತು. ಆಕೆಯ ಸರಳ ಮೇಕಪ್ ಸುಂದರ ಕೇಶವಿನ್ಯಾಸ ಆಕೆಯ ನೋಟಕ್ಕೆ ಇಂಬುಕೊಡುವಂತಿತ್ತು.
ಒಟ್ಟಾರೆ ವಾಣಿ ಕಪೂರ್ 2014 ರ ಫಿಲ್ಮ್‌ಫೇರ್‌ನಲ್ಲಿ ಸಂಪೂರ್ಣ ಸುಂದರಿಯಾಗಿದ್ದರು. ಆಕೆ ಧರಿಸಿದ್ದನ್ನು ಬೋಲ್ಡ್ ಸ್ಕೈ ನಿಜವಾಗಿ ಮೆಚ್ಚಿದೆ. ನಿಮ್ಮ ಅನಿಸಿಕೆಯೂ ಇದೇ ಅಲ್ಲವೇ?



Click it and Unblock the Notifications
