Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಶಸ್ವಿ ಮಹಿಳೆಯಾಗುವ ಅನನುಕೂಲಗಳು
ಇತಿಹಾಸ ಯಶಸ್ವಿ ಜನರ ಕಥೆ ಎನ್ನುವುದು ಸಾಮಾನ್ಯ ಮಾತು. ಪ್ರತಿಯೊಬ್ಬರು ವಿಜೇತರಾಗಲು ಬಯಸುತ್ತಾರೆ. ತಮ್ಮ ಪ್ರಯತ್ನಗಳಲ್ಲಿ ಯಾರೂ ಸೋಲಲು ಬಯಸುವುದಿಲ್ಲವೆನ್ನುವುದು ಸ್ವಾಭಾವಿಕ. ನಿಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಹಲವಾರು ಧನಾತ್ಮಕ ಪರಿಣಾಮ ಉಂಟುಮಾಡಬಹುದು.
ಯಶಸ್ಸು ಎನ್ನುವುದು ಯಾವುದೇ ವಿಧ ಅಥವಾ ರೀತಿಯಿಂದ ಆಗಿರಬಹುದು. ಆದರೆ ಅದು ನಿಮ್ಮನ್ನು ಜನಪ್ರಿಯಗೊಳಿಸುತ್ತದೆ ಮತ್ತು ನಿಮಗೆ ಭಡ್ತಿ ನೀಡಬಹುದು, ಸಂಪತ್ತು ಹಾಗೂ ಸಂತೋಷ ಅಥವಾ ಯಶಸ್ವಿ ವೈವಾಹಿಕ ಜೀವನ ತಂದುಕೊಡಬಲ್ಲದು.

ಅದು ಏನೇ ಆಗಿರಲಿ, ಆದರೆ ಯಶಸ್ಸಿನ ಸಾರ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಬಹುದು. ಯಶಸ್ವಿ ಮಹಿಳೆಯ ಹಿಂದೆ ಸಂಪೂರ್ಣ ವಿಶ್ವವೇ ಸುತ್ತುತ್ತಿರುತ್ತದೆ. ಆದರೆ ಯಶಸ್ವಿ ಮಹಿಳೆಯಾಗುವ ಹಿಂದೆ ಕೆಲವೊಂದು ಅನನುಕೂಲಗಳು ಇದೆಯೆಂದು ನಿಮಗೆ ತಿಳಿದದೆಯಾ? ನೀವು ಯಾವಾಗಲೂ ಯಶಸ್ಸನ್ನೇ ಪಡೆಯುತ್ತಿದ್ದರೆ ಆಗ ವೈಫಲ್ಯ ಏನೆಂಬುವುದು ನಿಮಗೆ ತಿಳಿಯುವುದಿಲ್ಲ. ವಿಫಲವಾಗಿರುವ ಜನರ ಮನಸ್ಥಿತಿ ತಿಳಿಯಲು ನಿಮಗೆ ಸಾಧ್ಯವಾಗಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಯಶಸ್ಸಿನ ಹಿಂದಿದೆ ಹಲವು ತೊಡಕುಗಳು
ಮನಸ್ಸಿನಲ್ಲಿ ಯಶಸ್ವಿಯಾಗಬೇಕೆಂದುಕೊಂಡು ಕಠಿಣವಾಗಿ ಕೆಲಸ ಮಾಡುತ್ತಿದ್ದರೆ ಅದು ಸಾಮಾಜಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇಲ್ಲಿ ಯಶಸ್ವಿ ಮಹಿಳೆಯರ ಮೇಲೆ ಪರಿಣಾಮ ಬೀರಬಲ್ಲ ಕೆಲವೊಂದು ನಕಾರಾತ್ಮಕ ವಿಷಯಗಳಿವೆ. ನೀವು ವೈಫಲ್ಯ ಎದುರಿಸುತ್ತಿದ್ದರೆ ನಿಮ್ಮ ಸಮಾಧಾನಕೋಸ್ಕರ ಇದನ್ನು ಬಳಸಬಹುದು. ನೀವು ಯಶಸ್ವಿ ಮಹಿಳೆಯಲ್ಲಿ ಒಬ್ಬರಾಗಿದ್ದರೆ ಈ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇರಿ.
ಅನುಭೂತಿ ಕೊರತೆ
ಯಶಸ್ವಿಯಾದರೆ ಆಗ ನಿಮ್ಮ ಕಡೆಗೆ ಏನೆಲ್ಲಾ ಆಗುತ್ತದೆ ಎಂದು ನೋಡಿ. ಯಶಸ್ವಿ ಮಹಿಳೆಗೆ ಇದು ಅತ್ಯಂತ ಸಾಮಾನ್ಯ ಅನನುಕೂಲವಾಗಿದೆ. ನಿಮಗೆ ಅನುಭೂತಿಯ ಭಾವನೆ ಏನೆಂದೇ ತಿಳಿಯುವುದಿಲ್ಲ.
ಸಾಮಾಜಿಕ ಸಾಮರ್ಥ್ಯದ ಕೊರತೆ
ನಿಮ್ಮ ಸಾಮಾಜಿಕ ಸಾಮರ್ಥ್ಯವನ್ನು ಪರಿಗಣಿಸಿದರೆ ಆಗ ನೀವು ಅದರಲ್ಲಿ ವಿಫಲರಾಗಿರುವುದು ಯಶಸ್ವಿ ಮಹಿಳೆಯ ಅತ್ಯಂತ ದೊಡ್ಡ ಅನನುಕೂಲಗಳಲ್ಲಿ ಒಂದಾಗಿದೆ.
ಕಠಿಣ ಪರಿಸ್ಥಿತಿ ನಿಭಾಯಿಸಲು ವಿಫಲ
ನೀವು ಯಶಸ್ಸನ್ನು ಎಂಜಾಯ್ ಮಾಡುತ್ತಿರುವಾಗ ನಿಮಗೆ ಪ್ರತಿಯೊಂದು ಕಡೆಯು ಸಿಹಿಯೇ ಸಿಗುತ್ತದೆ. ಆಗ ನೀವು ಹಿತಕರ ವಾತಾವರಣದಲ್ಲಿರುತ್ತೀರಿ. ಆದರೆ ಕಠಿಣ ಪರಿಸ್ಥಿತಿ ನಿಭಾಯಿಸಲು ಯಶಸ್ವಿ ಮಹಿಳೆಯರು ವಿಫಲರಾಗುತ್ತಾರೆ ಎನ್ನುವುದು ಸಾಮಾನ್ಯ ಅನನುಕೂಲವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಹಿಳೆಯರ ದೇಹದ ಬಗ್ಗೆ ಇರುವ 5 ನಂಬಿಕೆಗಳು
ಒತ್ತಡ
ಯಶಸ್ಸು ನಿಮಗೆ ಯಾವುದೇ ಮಟ್ಟದ ಒತ್ತಡ ಉಂಟುಮಾಡುತ್ತಿದೆಯಾ? ಇದು ಭವಿಷ್ಯದಲ್ಲಿ ನಿಮಗೆ ಯಶಸ್ಸಿನತ್ತ ದೃಷ್ಟಿಹರಿಸುವಂತೆ ಮಾಡಲಿದೆ. ನಿಮ್ಮ ಜೀವನದ ಯಾವುದೇ ಹಂತದಲ್ಲಿ ವಿಫಲರಾಗಬಾರದೆಂದು ನಿಮ್ಮ ಸುತ್ತಲಿನ ಸಮಾಜ ಬಯಸುತ್ತಿರುತ್ತದೆ. ಇದು ಯಶಸ್ವಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಒಂದು ಕೆಟ್ಟ ವಿಷಯ.
ಜವಾಬ್ದಾರಿ
ಯಶಸ್ವಿ ಮಹಿಳೆಯಾಗಿರುವ ಕಾರಣ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಗಳು ಬೀಳುತ್ತದೆ. ನೀವು ಯಶಸ್ವಿಯಾಗುತ್ತೀರಿ ಎನ್ನುವ ಕಾರಣದಿಂದ ಜನರು ನಿಮಗೆ ಕೆಲಸಗಳನ್ನು ನೀಡುತ್ತಾರೆ. ನಿಮ್ಮ ಹೆಸರನ್ನು ಉಳಿಸಿಕೊಳ್ಳಲು ಕಠಿಣ ಪರಿಶ್ರಮಪಡಬೇಕಾಗುತ್ತದೆ. ಯಶಸ್ವಿ ಮಹಿಳೆಯ ಅನನುಕೂಲಗಳಲ್ಲಿ ಇದು ಒಂದಾಗಿದೆ.
ಮಿತ್ರರು ಮತ್ತು ಶತ್ರುಗಳು
ಯಶಸ್ವಿಯಾಗುವ ಅತ್ಯಂತ ಪ್ರಮುಖ ಅನನುಕೂಲಗಳಲ್ಲಿ ಒಂದೆಂದರೆ ನಿಮಗೆ ಮಿತ್ರರು ಮತ್ತು ಶತ್ರುಗಳನ್ನು ಗುರುತಿಸಲು ಕಷ್ಟವಾಗಬಹುದು. ನಿಮ್ಮ ಯಶಸ್ಸನ್ನು ಸಂಭ್ರಮಿಸಲು ಸುತ್ತಲು ತುಂಬಾ ಜನರು ನೆರೆದಿರಬಹುದು.
ನಿರೀಕ್ಷೆಗಳನ್ನು ಇರಿಸಿಕೊಳ್ಳುವ ಅಪೇಕ್ಷೆ
ನೀವು ಯಶಸ್ವಿ ಮಹಿಳೆಯೆಂದು ಒಮ್ಮೆ ಬ್ರಾಂಡ್ ಆದರೆ ಆಗ ನಿಮ್ಮ ಸುತ್ತಲಿನ ಜಗತ್ತಿನ ನಿರೀಕ್ಷೆಗಳನ್ನು ಉಳಿಸಿಕೊಳ್ಳಲು ನೀವು ತುಂಬಾ ಶ್ರಮ ವಹಿಸಬೇಕಾಗುತ್ತದೆ. ನೀವು ಯಾವಾಗಲೂ ಯಶಸ್ವಿಯಾಗುವ ಮಹಿಳೆಯೆಂದು ಬಿಂಬಿಸಲ್ಪಟ್ಟಿರುತ್ತೀರಿ.
ಪ್ರಚಾರದಲ್ಲಿರಲು ಪ್ರಯತ್ನ
ಯಶಸ್ಸು ನಿಮಗೆ ಜನಪ್ರಿಯತೆ ತಂದುಕೊಟ್ಟಿದ್ದರೆ ಆಗ ನೀವು ಜನಪ್ರಿಯತೆ ಉಳಿಸಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಜಗತ್ತು ಬದಲಾಗುತ್ತಾ ಇರುತ್ತದೆ ಮತ್ತು ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಸ್ಪರ್ಧಿಸಲು ನೀವು ತುಂಬಾ ಕಠಿಣ ಪ್ರಯತ್ನ ಮಾಡಬೇಕು.



Click it and Unblock the Notifications


