Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ನಿಮ್ಮ ಮಕ್ಕಳು ಮಾಡುವ ತುಂಟಾಟಗಳಿವು!
ಮಕ್ಕಳು ಅನೇಕ ಕೆಲಸಗಳನ್ನು ಮಾಡುತ್ತಾರೆ. ಅವರು ಮಾಡುವ ಕೆಲಸದಲ್ಲಿ ಮುಗ್ಧತೆ ಅತ್ಯಂತ ಶುದ್ಧ ರೂಪದಲ್ಲಿ ಕಾಣಿಸುತ್ತದೆ. ತುಂಟಾಟ ಮಾಡುವ ಮಕ್ಕಳು ನಮ್ಮ ಜೀವನವನ್ನೇ ಬದಲಾಯಿಸಿಬಿಡುತ್ತಾರೆ. ಅಲ್ಲದೇ ಕೆಲವು ಮಕ್ಕಳು ಅವರ ಆಟಗಳಿಂದಾಗಿ ನಿಮಗೆ ಆಘಾತವನ್ನೂ ನೀಡಬಹುದು. ಅಥವಾ ನಿಮ್ಮನ್ನು ಇನ್ನಷ್ಟು ರಂಜಿಸಿ ವಿಶೇಶವಾದವರೆನಿಸಿಕೊಳ್ಳಬಹುದು . ಇಂತಹ ಮಕ್ಕಳು ನಿಮ್ಮ ಸ್ವಂತ ಮಕ್ಕಳೇ ಆಗಬೇಕೆಂದಿಲ್ಲ. ನಿಮ್ಮ ನೆರೆಹೊರೆಯ ಮಕ್ಕಳೂ ಕೂಡ ನಿಮ್ಮ ಸ್ಪೂರ್ತಿಗೆ ನಿಮ್ಮ ಸಂತೋಷಕ್ಕೆ ಕಾರಣವಾಗಬಲ್ಲರು. ಅವರು ತಮ್ಮ ಕಿರುನಗೆಯ ಮೂಲಕ ನಿಮ್ಮನ್ನು ನಗಿಸುವ ಮನಮೋಹಕ ಸ್ವಭಾವವನ್ನು ಹೊಂದಿದವರು.
ನಿಮ್ಮ ಮಕ್ಕಳು ನಿಮ್ಮೊಂದಿಗೆ ತಮಾಷೆ ಮಾಡುತ್ತಾ ಮತ್ತು ಮೋಹಕವಾಗಿ ನಗುತ್ತಾ ಕಳೆಯುವ ಕ್ಷಣಗಳು ನಿಮ್ಮ ಜೀವನದ ಅತ್ಯಂತ ಸಂತೋಷಕರ ಅನುಭವಗಳಲ್ಲಿ ಒಂದು ಎಂಬುದನ್ನು ಒಪ್ಪುತ್ತೀರಿ ತಾನೇ? ಕೆಲವೊಮ್ಮೆ ಮಕ್ಕಳು ನಿಜವಾಗಿಯೂ ಕಾಟ ಕೊಡುತ್ತಿರುವಂತೆ ಅನ್ನಿಸಬಹುದು. ಆದರೆ ಅವರು ಕಿಡಿಗೇಡಿತನ, ತುಂಟತನ ಅವರ ಬಗ್ಗೆ ಇನ್ನಷ್ಟು ಒಳ್ಳೆಯ ಭಾವನೆಗಳನ್ನೇ ಮೂಡಿಸಬಹುದು. ಇಲ್ಲಿ ಮಕ್ಕಳು ಮಾಡುವ ತುಂಟಾಟಗಳು ಮತ್ತು ಅವರ ಈ ಗುಣಗಳಿಂದಾಗಿ ನೀವು ಅವರನ್ನು ಇನ್ನಷ್ಟು ಪ್ರೀತಿಸುವಂತಹ ಕೆಲವು ವಿಷಯಗಳನ್ನು ಹೇಳಲಾಗಿದೆ.
ಮಕ್ಕಳು ಎಲ್ಲಾ ವಿಷಯಗಳ ಬಗ್ಗೆ ಕುತೂಹಲವನ್ನಿಟ್ಟುಕೊಂಡಿರುತ್ತಾರೆ. ಅವರು ಅಸಾಧಾರಣ ಮಟ್ಟದಲ್ಲಿ ವಿಷಯಗಳನ್ನು ಅನ್ವೇಷಿಸಲು ಮತ್ತು ವೀಕ್ಷಿಸಲು ಬಯಸುತ್ತಲೇ ಇರುತ್ತಾರೆ. ಪುಟ್ಟ ಮಕ್ಕಳು ಯಾವಾಗಲೂ ಅವರು ಪರೀಕ್ಷಿಸಿದ ವಸ್ತುಗಳ ಬಗ್ಗೆ ನಿಮ್ಮ ಬಳಿ ಕೇಳಲು ಸಾವಿರ ಪ್ರಶ್ನೆಗಳನ್ನು ಹೊಂದಿರುತ್ತಾರೆ.

ಮುಸುಮುಸು ನಗು
ಮಕ್ಕಳು ಸಾಮಾನ್ಯವಾಗಿ ತಾವು ಯಾವುದೇ ವಸ್ತುವನ್ನು ನೋಡಿದರು ಮುಸುಮುಸು ನಗುವ ಪ್ರವೃತ್ತಿಯನ್ನು ಹೊಂದಿರುತ್ತವೆ. ಅವರು ಏನಾದರೂ ಚೇಷ್ಟೆಯನ್ನು ಮಾಡಿದಾಗ ವಿಶಿಷ್ಟ ರೀತಿಯಲ್ಲಿ ನಗುವುದನ್ನು ನೋಡುವುದೇ ಚಂದ. ತಮ್ಮ ಹೊಳೆಯುವ ಕಣ್ಣುಗಳನ್ನು ಮಿಟುಕಿಸುತ್ತಾ ಬರುವ ನಿಮ್ಮ ಅಂಬೆಗಾಲಿಡುವ ಮಗುವನ್ನು ನೋಡಿದರೆ ಯಾರು ತಾನೇ ಸಂತೋಷಪಡುವುದಿಲ್ಲ ಹೇಳಿ?

ಎಲ್ಲಾ ವಿಷಯಗಳ ಮೇಲೂ ಗಮನ
ಮಕ್ಕಳು ತಮ್ಮನ್ನು ಎಲ್ಲರೂ ಮುದ್ದು ಮಾಡುವಂತೆ ಮತ್ತು ಅವರ ಬಗ್ಗೆ ಹೆಚ್ಚಿನ ಗಮನ ವಹಿಸುವುದನ್ನು ಅಪೇಕ್ಷಿಸುತ್ತಾರೆ. ಅವರು ಮಾಡುವ ಕೆಲಸದಲ್ಲಿ ಪಾಲ್ಗೋಂಡು ಅವರ ಬಗ್ಗೆ ಗಮನಿಸದಿದ್ದಲ್ಲಿ ನಿರಾಸೆ ವ್ಯಕ್ತಪಡಿಸುತ್ತಾರೆ. ಪುಟ್ಟ ವಿಷಯಗಳ ಬಗ್ಗೆ ಪೊಸೆಸಿವ್ ಆಗಿರುವ ಮಕ್ಕಳು ತಮಗಿಂತ ಹೆಚ್ವಾಗಿ ತಮ್ಮ ಸಹೋದರರನ್ನು ಹೆಚ್ಚು ಪ್ರೀತಿ ಅಥವಾ ಮುದ್ದಿನಿಂದ ನೋಡಿದರೆ ಅವರಲ್ಲಿ ಅಸೂಯೆ ಮೂಡಬಹುದು.

ಕೋಪ
ಪ್ರತಿ ಮಗುವು ಒಂದಿಲ್ಲೊಂದು ಕಾರಣಕ್ಕೆ ಕೋಪ ಮಾಡಿಕೊಳ್ಳುತ್ತದೆ. ಇರು ಅತಿರೇಕಕ್ಕೆ ಹೋಗದಿದ್ದರೆ, ಅವರ ಕೋಪವನ್ನು ನೋಡಲು ಮಜವಾಗಿರುತ್ತದೆ! ಕೆಲವೊಮ್ಮೆ ಅವರು ಕೋಪೋದ್ರೇಕ ಹೆಚ್ಚಾಗಿ ಕೋಪವನ್ನು ನಿಲ್ಲಿಸುವುದೇ ಇಲ್ಲ. ಮಕ್ಕಳು ಕೋಪಗೊಳ್ಳುವ ಕಾರಣಗಳು ಅತ್ಯಂತ ಸಾಮಾನ್ಯವಾಗಿರುತ್ತವೆ. ಉದಾಹರಣೆಗೆ, ತಮಗಿಷ್ಟದ ತರಕಾರಿಗಳನ್ನು ತಿನ್ನಬೇಕು ಎಂಬ ಕಾರಣಕ್ಕೋ, ಅಥವಾ ಶಾಲೆಗೆ ಹೋಗುವುದಿಲ್ಲ ಎಂಬ ಕಾರಣಕ್ಕೋ ಇರಬಹುದು. ಆದರೆ ಇಂತಹ ಕೋಪ ಮಕ್ಕಳಮುಗ್ಧ ಮುಖವನ್ನು ಪ್ರತಿಬಿಂಬಿಸುತ್ತದೆ.

ಚಲಿಸುವ ಕಾರಿನಲ್ಲಿ ಎದ್ದು ನಿಲ್ಲುವುದು
ಮಕ್ಕಳು ಯಾವಾಗಲೂ ಕಾರು ಚಲನೆಯಲ್ಲಿರುವಾಗ ಮುಂದೆ ಅಥವಾ ಹಿಂದಕ್ಕೆ ನಿಂತುಕೊಳ್ಳಲು ಪ್ರಯತ್ನಿಸುತ್ತಾರೆ.. ಅವರು ಬಕೆಟ್ ಆಸನಗಳ ಮಧ್ಯ ನಿಲ್ಲುವುದನ್ನು ಇಷ್ಟಪಡುತ್ತಾರೆ. ಅವರು ಹೀಗೆ ನಿಂತುಕೊಳ್ಳಲು ಏಕೆ ಪ್ರಯತ್ನಿಸುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಮಕ್ಕಳ ಗಮನವಂತೂ ತಿರುಗುವ ಚಕ್ರದ ಮೇಲೆಯೇ ಇರುತ್ತದೆ. ಮಕ್ಕಳ ಈ ವರ್ತನೆಯನ್ನು ಒಂದಿಲ್ಲೊಮ್ಮೊ ನೀವು ಗಮನಿಸಿದ್ದೀರಿ ತಾನೇ?

ಅನುಕರಣೆ
ಮಕ್ಕಳು ಮಹಾನ್ ಅನುಕರಣೆ ಮಾಡುವ ಶಕ್ತಿಯುಳ್ಳವರು ಮತ್ತು ತಮ್ಮ ಪೋಷಕರನ್ನು ಪ್ರತಿ ಹಂತದಲ್ಲಿಯೂ ಅನುಕರಿಸಿ ಆನಂದಿಸುತ್ತಾರೆ. ಅವರು ಈ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಪೋಷಕರ ಪ್ರತಿ ನಡೆಯನ್ನು ಮತ್ತು ವರ್ತನೆಯನ್ನು ಗಮನಿಸುವುದರಲ್ಲೇ ತಮ್ಮ ಸಮಯವನ್ನು ಕಳೆಯುತ್ತಾರೆ. ನೀವು ಫೋನಿನಲ್ಲಿ ಮಾತನಾಡಿದ್ದನ್ನು ಅನುಕರಿಸಬಹುದು. ಅಥವಾ ನಿಮ್ಮ ಲಿಫ್ಸ್ಟ್ಕ್ ಗಳನ್ನು ಹಚ್ಚಬಹುದು. ಅನುಕರಿಸುವ ಗುಣ ಅವರಲ್ಲಿ ಮೊದಲೇ ಬಂದಿರುತ್ತದೆ ಮತ್ತು ನಿಮ್ಮನ್ನು ನೋಡಿ ಇನ್ನಷ್ಟು ಈ ಕಲೆಯಲ್ಲಿ ಪಳಗುತ್ತಾರೆ.

ಪ್ರಾಣಿಗಳೊಂದಿಗೆ ಆಟ
ನಾಯಿ ಸದಾ ಮುದ್ದಿನ ಪ್ರಾಣಿ. ಆದ್ದರಿಂದ ಮಕ್ಕಳೂ ಸಹ ಸದಾ ಅದನ್ನು ತಬ್ಬಿಕೊಳ್ಳುವ ಕೆಲಸವನ್ನು ಮಾಡುತ್ತಿರುತ್ತಾರೆ. ಮಕ್ಕಳು ಸಾಮಾನ್ಯವಾಗಿ ನಾಯಿಯ ಬಾಲಗಳನ್ನು ಎಳೆದು ಅವುಗಳ ಜೊತೆಗೆ ಆಡಲು ಉತ್ಸುಕರಾಗಿರುತ್ತಾರೆ. ಬಹುತೇಕ ಮಕ್ಕಳು ಸಾಕುಪ್ರಾಣಿಗಳ ಜೊತೆ ಆರಾಮವಾಗಿ ಆಟವಾಡಿಕೊಂಡಿರುತ್ತಾರೆ. ನಾಯಿ ಬಾಲ ಅಲ್ಲಾಡಿಸುತ್ತಾ ತನ್ನನ್ನು ಆಡಲು ಕರೆಯುತ್ತಿದೆ ಎನ್ನುವಂತೆ ಮಕ್ಕಳು ಅವುಗಳೊಂದಿಗೆ ಆಟವಾಡುತ್ತಾರೆ. ಜೊತೆಗೆ ಮಕ್ಕಳು ಈ ಸಾಕು ಪ್ರಾಣಿಗಳ ಜೊತೆ ಸಂವಹನ ನಡೆಸುವುದನ್ನೂ ಸಹ ನೀವು ನೋಡಬಹುದು. ಇದು ಅತ್ಯಂತ ಆಸಕ್ತಿದಾಯಕ ವಿಷಯ.

ಮುದ್ದು ಮುಖ/ಪಪ್ಪಿ ಮುಖ
ಮಕ್ಕಳು ಅವರು ಬಯಸಿದ ವಸ್ತುಗಳನ್ನು ನೀವು ತರದಿದ್ದರೆ, ಮುಖವನ್ನು ಸಪ್ಪೆಮಾಡುವುದನ್ನು ನೀವು ನೋಡಬಹುದು. ಅಥವಾ ನೀವು ಅವರನ್ನು ಬೈದಾಗಲೂ ಅವರ ಮುಖದಲ್ಲಿ ಇದೇ ಪಪ್ಪಿ ಮುಖಭಾವವನ್ನು ನೋಡಬಹುದು. ಇವರ ಈ ನೈಸರ್ಗಿಕ ಸ್ವಭಾವ ನಿಮಗೆ ಇನ್ನಷ್ಟು ಸಂತೋಷವನ್ನು ನೀಡಬಹುದು.



Click it and Unblock the Notifications











