ಪುರುಷರನ್ನು ಆಕರ್ಷವಾಗಿಸುವ ಸಾಂಪ್ರದಾಯಿಕ ಅಂಶಗಳು

ಪುರುಷರನ್ನು ಆಕರ್ಷವಾಗಿ ಹಾಗೂ ಇಷ್ಟಪಡುವಂತೆ ಮಾಡುವುದು ಏನು? ಶರೀರ ಮತ್ತು ನಡತೆ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಕರ್ಷಕ ನೋಟ, ನಗು ಅಥವಾ ಸಂಪೂರ್ಣ ವ್ಯಕ್ತಿತ್ವ ಆಕರ್ಷಕವಾಗುವಂತೆ ಮಾಡುತ್ತದೆಯಾ? ಹಲವಾರು ಗುಣಗಳು ಪುರುಷರನ್ನು ಆಕರ್ಷವಾಗಿಸುತ್ತದೆ. ಕೆಲವೊಂದು ವಿಷಯಗಳು ಮಹಿಳೆಯರನ್ನು ಮೂರ್ಛೆ ಹೋಗುವಂತೆ ಮಾಡಬಹುದು ಎಂದು ಪುರುಷರಿಗೆ ತಿಳಿದಿರುವುದಿಲ್ಲ. ಮಹಿಳೆಯರು ಯಾವುದರಿಂದ ಆಕರ್ಷಿತರಾಗುತ್ತಾರೆ ಎನ್ನುವುದು ಕೆಲವು ಪುರುಷರಿಗೆ ಸ್ವಲ್ಪವೂ ಜ್ಞಾನ ಇರುವುದಿಲ್ಲ.

ಐಷಾರಾಮಿ ಕಾರು ಮತ್ತು ಆಕರ್ಷಕ ನೋಟ ಮಾತ್ರ ಮಹಿಳೆಯರನ್ನು ಆಕರ್ಷಿಸುವುದಿಲ್ಲ. ಇತರ ಕೆಲವೊಂದು ವಿಷಯಗಳು ಮಹಿಳೆಯರು ನಿಮ್ಮ ಹಿಂದೆ ಬೀಳುವಂತೆ ಮಾಡುತ್ತದೆ. ಪುರುಷರನ್ನು ವಿವರಿಸಲು ಹಲವಾರು ಮಾರ್ಗಗಳಿವೆ ಮತ್ತು ಹೆಚ್ಚಿನವರಿಗೆ ತಮ್ಮದೇ ಆದ ವಿವರಣೆಗಳಿರುತ್ತದೆ. ಕೇವಲ ಆಕರ್ಷಕ ನೋಟ ಮಾತ್ರ ಪುರುಷರನ್ನು ಆಕರ್ಷಣೀಯವಾಗಿಸುವುದಿಲ್ಲ, ಇತರ ಕೆಲವೊಂದು ಗುಣಗಳಾದ ಹಾಸ್ಯ, ಶೌರ್ಯ, ವಿಶ್ವಾಸ, ಶೈಲಿ, ಪುರುಷತ್ವದ ಲಕ್ಷಣ ಮತ್ತು ನಗು ಪುರುಷರನ್ನು ಆಕರ್ಷಣೀಯವಾಗಿಸುತ್ತದೆ. ಈ ಕೆಲವೊಂದು ಗುಣಗಳು ಪುರುಷರನ್ನು ತುಂಬಾ ಆಕರ್ಷಕವಾಗಿ ಮಾಡುತ್ತದೆ. ಇದು ನಿಮ್ಮನ್ನು ಆಕರ್ಷಣೆಯನ್ನು ಮೇಲಿನ ಹಂತಕ್ಕೇರಿಸುತ್ತದೆ.

ನಿಮ್ಮಲ್ಲಿರುವ ಕೆಲವೊಂದು ಗುಣಗಳನ್ನು ಗುರುತಿಸಿಕೊಂಡು ಅದನ್ನು ತುಂಬಾ ಪ್ರಾಮುಖ್ಯ ಮತ್ತು ಆಕರ್ಷಣೀಯವಾಗುವಂತೆ ಮಾಡಬೇಕು. ಇಲ್ಲಿ ಕೊಟ್ಟಿರುವ ಕೆಲವೊಂದು ಪುರುಷ ಗುಣಗಳು ನಿಮ್ಮನ್ನು ಆಕರ್ಷಣೀಯವಾಗಿಸುವ ಪಟ್ಟಿಯಲ್ಲಿ ಖಂಡಿತವಾಗಿಯೂ ಅಗ್ರ ಸ್ಥಾನವನ್ನು ಪಡೆಯಲಿದೆ.

ಮನೋರಂಜಕರಾಗಿ

ಮನೋರಂಜಕರಾಗಿ

ಪ್ರತಿಯೊಬ್ಬ ಮಹಿಳೆಯು ತುಂಬಾ ಮನೋರಂಜಕ ಮತ್ತು ತಮಾಷೆಯ ವ್ಯಕ್ತಿಯನ್ನು ಇಷ್ಟಪಡುತ್ತಾಳೆ. ತಮಾಷೆಯ ಮಿತಿ ಗೊತ್ತಿರುವ ವ್ಯಕ್ತಿಯು ಖಂಡಿತವಾಗಿಯೂ ಯಾವುದೇ ವ್ಯಕ್ತಿಯನ್ನು ತಮ್ಮತ್ತ ಸೆಳೆಯಬಹುದು ಮತ್ತು ಅವರಲ್ಲಿ ಸಂಬಂಧವನ್ನು ಗಟ್ಟಿಗೊಳಿಸುವ ಸಾಮರ್ಥ್ಯವು ಇರುತ್ತದೆ. ಮೋಜನ್ನು ಇಷ್ಟಪಡುವ ವ್ಯಕ್ತಿಗಳು ಜೀವವನ್ನು ತುಂಬಾ ತಮಾಷೆಯಾಗಿ ತೆಗೆದುಕೊಳ್ಳುತ್ತಾರೆ ಮತ್ತು ಇದರಿಂದ ಅವರು ಎಲ್ಲಾ ಸಮಯದಲ್ಲಿ ಆಶಾವಾದಿಯಾಗಿರುತ್ತಾರೆ.

ಆತ್ಮವಿಶ್ವಾಸ

ಆತ್ಮವಿಶ್ವಾಸ

ತುಂಬಾ ಆತ್ಮವಿಶ್ವಾಶ ತೋರಿಸುವ ಮತ್ತು ಆತ್ಮವಿಶ್ವಾಸದಿಂದ ಮಾತನಾಡುವ ವ್ಯಕ್ತಿ ಕಡೆ ಪ್ರತಿಯೊಬ್ಬರು ಆಕರ್ಷಿತರಾಗುತ್ತಾರೆ. ನೀವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯೂ ನಿಮ್ಮ ಈ ಗುಣಕ್ಕೆ ಮರುಳಾಗಬಹುದು. ಆತ್ಮವಿಶ್ವಾಸದಿಂದ ತಲೆಯೆತ್ತಿ ಯಾವುದೇ ಕೆಲಸ ಮಾಡಲು ಆರಂಭಿಸಿದರೆ ಆಗ ವಿಶ್ವವೇ ನಿಮ್ಮದಾಗುತ್ತದೆ. ಆತ್ಮವಿಶ್ವಾಸದಲ್ಲಿರುವ ವ್ಯಕ್ತಿಯ ಬಗ್ಗೆ ಧನಾತ್ಮಕ ಅಭಿಪ್ರಾಯ ಮೂಡುವುದರಿಂದ ಮಹಿಳೆ ಆತನನ್ನು ಇಷ್ಟಪಡುತ್ತಾಳೆ.

ಶೌರ್ಯ

ಶೌರ್ಯ

ಶೌರ್ಯವಿರುವ ಪುರುಷರು ಈಗಲೂ ಇದ್ದಾರೆಯಾ? ಶೌರ್ಯವಂತರನ್ನು ಯಾವಾಗಲೂ ಸೈನಿಕರೆಂದು ಗುರುತಿಸಲಾಗುತ್ತದೆ. ಇದರ ಅರ್ಥ ಆ ವ್ಯಕ್ತಿ ಮಹಿಳೆಯ ಕಡೆಗೆ ವಿನಯಶೀಲ ಮತ್ತು ಉದಾತ್ತನಾಗಿರುತ್ತಾನೆ. ಇದು ತುಂಬಾ ಹಳೆಯದ್ದಾಗಿರಬಹುದು. ಆದರೆ ಪ್ರತಿಯೊಬ್ಬ ಮಹಿಳೆಯರು ಪುರುಷರಲ್ಲಿ ಈ ಗುಣವನ್ನು ಹುಡುಕುತ್ತಾಳೆ. ಶೌರ್ಯವಂತನಾಗಿರುವ ಕಾರಣ ನೀವು ಮಹಿಳೆ ಬಗ್ಗೆ ಗೌರವ ತೋರಿಸಿದಂತೆ ಮತ್ತು ಇದು ಖಂಡಿತವಾಗಿಯೂ ದೌರ್ಬಲ್ಯದ ಅಂಶವಲ್ಲ.

ಕಣ್ಣುಗಳು

ಕಣ್ಣುಗಳು

ಪುರುಷರಲ್ಲಿ ಕಣ್ಣುಗಳು ಮತ್ತು ನಗು ದೇಹದ ಅತ್ಯಂತ ಸೆಕ್ಸಿ ಭಾಗಗಳು. ಕಣ್ಣುಗಳು ಆತ್ಮಕ್ಕೆ ಬಾಗಿಗಳಿದ್ದಂತೆ ಮತ್ತು ಕಣ್ಣ ದೃಷ್ಟಿಯನ್ನು ಹೇಗೆ ಇಟ್ಟುಕೊಳ್ಳಬೇಕೆಂದು ತಿಳಿದಿರುವ ಪುರುಷರು ತುಂಬಾ ಆತ್ಮವಿಶ್ವಾಸ ಮತ್ತು ಸುಲಭವಾಗಿ ಸಂವಹನ ಮಾಡಬಹುದು. ಕಣ್ಣಿನ ದೃಷ್ಟಿಯಿಂದ ಮಹಿಳೆಯನ್ನು ವಿಶೇಷ ಮತ್ತು ಕಾಳಜಿ ವಹಿಸುತ್ತಿದ್ದೇವೆಂಬ ಭಾವನೆ ಮೂಡುತ್ತದೆ.

ನಗು

ನಗು

ಸ್ವಾಭಾವಿಕ ನಗುವಿನಿಂದ ಯಾರನ್ನೂ ಕರಗಿಸಬಹುದು. ಸುಂದರ ನಗು ಪುರುಷ ಆಕರ್ಷಣೆಯ ಪ್ರಮುಖ ಅಂಶ. ಸ್ವಾಭಾವಿಕ ನಗುವಿನಿಂದ ನೀವು ಯಾವುದನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲವೆಂದು ತೋರಿಸುತ್ತದೆ.

ಪುರುಷ ಲಕ್ಷಣಗಳು

ಪುರುಷ ಲಕ್ಷಣಗಳು

ಸಿಕ್ಸ ಪ್ಯಾಕ್ ಆಬ್ಸ್ ಮಾತ್ರ ಒಬ್ಬ ಪುರುಷನ ಲಕ್ಷಣವೇ ಅಥವಾ ಹಾಗೆಂದು ನಂಬಲಾಗಿದೆಯಾ? ಆದರೆ ಪುರುಷತ್ವದ ಲಕ್ಷಣವೆಂದರೆ ದೃಢಕಾಯವಾದ ದೇಹವನ್ನು ಹೊಂದಿರುವುದು ಮಾತ್ರವಲ್ಲ. ಆತ್ಮವಿಶ್ವಾಸ ಮತ್ತು ಸಾಮರ್ಥ್ಯ ತೋರಿಸುವುದು ಇದರಲ್ಲಿ ಪ್ರಮುಖ. ಪುರುಷ ಯಾವ ವಿಧದಲ್ಲಿ ಮಾತನಾಡುತ್ತಾನೆ ಎನ್ನುವುದನ್ನು ನೋಡಿ ಪ್ರತಿಯೊಬ್ಬರು ಆತನ ಕಡೆಗೆ ಆಕರ್ಷಿತರಾಗುತ್ತಾರೆ.

ನೀವು ಆಲ್ಫಾ ಪುರುಷ ಆಗಿ

ನೀವು ಆಲ್ಫಾ ಪುರುಷ ಆಗಿ

ಆಲ್ಫಾ ಪುರುಷ ತನ್ನಲ್ಲಿ ತಾನು ತುಂಬಾ ಹೊಂದಿಕೊಂಡಿರುತ್ತಾನೆ ಮತ್ತು ಜನರ ಗುಂಪನ್ನು ಹೇಗೆ ಮನರಂಜಿಸಬೇಕೆಂದು ಆತನಿಗೆ ತಿಳಿದಿರುತ್ತದೆ. ಆತನಲ್ಲಿ ಆತ್ಮವಿಶ್ವಾಸ ತುಂಬಿರುತ್ತದೆ. ಆತನ ಪ್ರತಿಯೊಂದು ಮಾತನ್ನು ಜನರು ಹೇಗೆ ಕೇಳುವಂತೆ ಮಾಡಬೇಕೆಂದು ಆತನಿಗೆ ತಿಳಿದಿರುತ್ತದೆ. ಆಲ್ಫಾ ಪುರುಷನಿಗೆ ಜೀವನದ ಬಗ್ಗೆ ತುಂಬಾ ಉತ್ಸಾಹವಿರುತ್ತದೆ. ಆಲ್ಫಾ ಪುರುಷ ತುಂಬಾ ಶೌರ್ಯವಂತನಾಗಿದ್ದು, ಜೀವನದಲ್ಲಿ ಬರುವ ಯಾವುದೇ ಸವಾಲುಗಳನ್ನು ಎದುರಿಸಲು ಹೆದರುವುದಿಲ್ಲ. ಪುರುಷರನ್ನು ಆಕರ್ಷಣೀಯವಾಗಿಸಲು ಇದು ಕೆಲವೊಂದು ಸಾಂಪ್ರದಾಯಿಕ ಗುಣಗಳು. ಇದನ್ನು ಅಭ್ಯಾಸ ಮಾಡಿ ಮತ್ತು ಮಹಿಳೆಯರನ್ನು ಮಾತ್ರವಲ್ಲದೆ ನೀವು ಭೇಟಿಯಾಗುವ ಪ್ರತಿಯೊಬ್ಬರನ್ನು ಆಕರ್ಷಿಸಿ.

Story first published: Thursday, June 26, 2014, 10:51 [IST]
X
Desktop Bottom Promotion