Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಖಾದ್ಯದ ಶ್ರೀಮಂತಿಕೆಯನ್ನು ಅದ್ಭುತಗೊಳಿಸುವ ಬಾರ್ಬೆಕ್ಯು ರಸಾನುಭವ!
ಭಾರತದಲ್ಲಿ ಅತ್ಯ೦ತ ಯಶಸ್ಸನ್ನು ಕ೦ಡ ಊಟದ ರೆಸ್ಟೋರೆ೦ಟ್‌ಗಳ ಸರಣಿಯಾದ ಬಾರ್ಬೆಕ್ಯು ನೇಷನ್ (Barbeque Nation), ಇದೀಗ ಯು.ಕೆಯ, ಮೇಲೋಗರಗಳ ವಿಚಾರದಲ್ಲಿ ಅಗ್ರಪ೦ಕ್ತಿಯಲ್ಲಿರುವ ಪ್ಯಾಟ್ ಚಾಪ್‌ಮನ್‌ರೊ೦ದಿಗೆ ಪಾಲುದಾರಿಕೆಗೆ ಮು೦ದಾಗಿದ್ದು, ದೇಶದಾದ್ಯ೦ತ ಅಕ್ಟೋಬರ್ ತಿ೦ಗಳ ಈ ಹಬ್ಬಗಳ ಸ೦ಭ್ರಮದ ಸ೦ದರ್ಭದಲ್ಲಿ ವಿನೂತನವಾದ ಬಾರ್ಬೆಕ್ಯು ಅನುಭವವನ್ನು ಜನತೆಗೆ ಉಣಬಡಿಸಲಿದೆ.
ಪಾಟ್ರಿಕ್ ಲಾರೆನ್ಸ್ ಚಾಪ್‌ಮನ್ ಅವರು ‘ಭಾರತೀಯ ಆಹಾರದ ರಾಯಭಾರಿ' ಬ್ರಿಟನ್‍ನ ಹೆಸರಾಂತ ಆಹಾರ ವಿಮರ್ಶಕರಿಂದ ‘ಭಾರತೀಯ ಶೈಲಿಯ ಅಡುಗೆಯ ರಾಯಭಾರಿ" ಹಾಗೂ ಮೇಲೋಗರಗಳ ದಿಗ್ಗಜ. ಎ೦ದು ಬ್ರಿಟನ್‌ನ ಸುಪ್ರಸಿದ್ದ ಆಹಾರ ತಜ್ಞರಿ೦ದ ಹಾಡಿ ಹೊಗಳಲ್ಪಟ್ಟ, ಬಾಣಸಿಗ ಇವರು ರಚಿಸಿದ 36 ರೆಸಿಪಿ ಪುಸ್ತಕಗಳ ಪೈಕಿ ಅತ್ಯಂತ ಜನಪ್ರಿಯ ಪುಸ್ತಕ 1.5 ದಶಲಕ್ಷ ಪ್ರತಿಗಳು ಒಟ್ಟಿಗೇ ಮಾರಾಟವಾಗಿದ್ದು, ಈ ಹಿನ್ನೆಲೆಯಲ್ಲಿ ಡೈಲಿ ಮೈಲ್ ಪತ್ರಿಕೆ ‘ಬಾಲ್ಟಿಫೈಯಿಂಗ್ ಬ್ರಿಟನ್' ಎಂದು ಇವರನ್ನು ಬಣ್ಣಿಸಿದೆ.

ಇವರು ಹಿಲ್ಟನ್ ಮತ್ತು ತಾಜ್ ಐಷಾರಾಮಿ ರೆಸ್ಟೋರೆಂಟ್ ಮತ್ತು ಪ್ರಖ್ಯಾತ ಐಷಾರಾಮಿ ಹಡಗು ಕ್ಯೂಇ2 ನಲ್ಲಿ ಅತಿಥಿ ಪಾಕಶಾಸ್ತ್ರಜ್ಞ ಕೂಡ ಆಗಿದ್ದಾರೆ. ಕೇರಳದಲ್ಲಿ ಮಸಾಲೆ ಬಗ್ಗೆ ಭಾಷಣ ನೀಡಲು ಭಾರತ ಸರ್ಕಾರ ಅವರನ್ನು ಆಹ್ವಾನಿಸಿರುವುದೇ ಮಸಾಲೆ ಪದಾರ್ಥಗಳ ಅತಿ ಸೂಕ್ಷ್ಮ ವ್ಯತ್ಯಾಸಗಳನ್ನು ಅವರು ಹೇಗೆ ತಿಳಿದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ!
ಈ ಅಕ್ಟೋಬರ್ ತಿಂಗಳ ಹಬ್ಬಗಳ ದಿನಗಳಲ್ಲಿ ಪ್ಯಾಟ್ ಚಾಪ್‍ಮನ್ ಮಾರಿನೇಡ್‍ಗಳು ಭಾರತೀಯ ಗ್ರಾಹಕರಿಗೆ ಗ್ರಿಲ್‍ಗಳ ರುಚಿಯನ್ನು ಆಸ್ವಾದಿಸುವ ಅವಕಾಶವನ್ನು ನೀಡಿದೆ. ಜಗತ್ತಿನೆಲ್ಲೆಡೆಯ ಪಾಕಶಾಲೆಗಳಿಗೆ ಪ್ರವಾಸ ಮಾಡಿರುವ ಅದ್ಭುತ ಅನುಭವವನ್ನು ಪಡೆಯುವುದಕ್ಕಾಗಿ ಬೆಂಗಳೂರಿನ 6 ಬಾರ್ಬೆಕ್ಯು ಮಳಿಗೆಗಳಿಗೆ (ಇಂದಿರಾನಗರ, ಕೋರಮಂಗಲ, ಜೆಪಿ ನಗರ, ಲಿಡೊ ಮಾಲ್, ವೈಟ್‍ಫೀಲ್ಡ್ ರೋಡ್ ಮತ್ತು ಕಮ್ಮನಹಳ್ಳಿ) ಅಕ್ಟೋಬರ್ 3 ರಿಂದ 31ರವರೆಗೆ ಭೇಟಿ ನೀಡಬಹುದು.
ದೇಶದಲ್ಲೇ ಇಂದು ಅತಿದೊಡ್ಡ ಡೈನಿಂಗ್ ಬ್ರ್ಯಾಂಡ್ ಆಗಿ ಗುರುತಿಸಲ್ಪಟ್ಟಿರುವ ಬಾರ್ಬೆಕ್ಯು ನೇಷನ್ ಭಾರತದಲ್ಲಿ ಲಿವ್ ಆನ್ ದ ಟೇಬಲ್ ಗ್ರಿಲ್ ಎಂಬ ಪರಿಕಲ್ಪನೆಯೊಂದಿಗೆ ‘ನೀವೇ ಅಡುಗೆ ಸಿದ್ಧಪಡಿಸಿ' (do-it-yourself) ಪಾಕಪದ್ಧತಿ ಉತ್ತೇಜಿಸುವ ನಿಟ್ಟಿನಲ್ಲಿ ಆದ್ಯಪ್ರವರ್ತಕವಾಗಿದೆ. ಮೊದಲೇ ನಿಗದಿಪಡಿಸಿದ ಮೆನುವನ್ನು ನಿರ್ದಿಷ್ಟ ದರದಲ್ಲಿ ನೀಡಲಿದೆ.
ಚಾಪ್‌ಮನ್‌ರವರು ವಿಶೇಷವಾದ ತನ್ನ ವಿವಿಧ ಅನೂಹ್ಯವಾದ ತಿನಿಸುಗಳ ಪ್ರದರ್ಶನವನ್ನು ಏರ್ಪಡಿಸಲಿದ್ದು, ಆ ದಿನಗಳಲ್ಲಿ ಅವರು ಗ್ರಾಹಕ ಕೌ೦ಟರ್‌ನ ಮರೆಯಲ್ಲಿದ್ದು, ತನ್ನ ಅನುಸರಿಸಲಸಾಧ್ಯವಾದ ಶೈಲಿಯ ತಯಾರಿಗಳ ಬಿರುಗಾಳಿಯನ್ನೆಬ್ಬಿಸುವ ಭರವಸೆಯನ್ನು ನೀಡುತ್ತಾರೆ. ‘Pat Chapman Grills The World' ನ ಸ೦ದರ್ಭದಲ್ಲಿ ಬಾರ್ಬೆಕ್ಯು ರೆಸ್ಟೋರೆ೦ಟ್ ಪ್ರಿಯ ಭಾರತೀಯ ಗ್ರಾಹಕರಿಗಾಗಿ, ದ೦ತಕಥೆಯೆ೦ದೆನಿಸಿಕೊ೦ಡಿರುವ ಬಾಣಸಿಗ ಪ್ಯಾಟ್ ಚಾಪ್‌ಮನ್ ರವರಿ೦ದ ಜೀವಮಾನವಿಡೀ ನೆನಪಿನಲ್ಲಿರಿಸಿಕೊಳ್ಳಬಹುದಾದ ರಸಾನುನುಭವವು೦ಟಾಗಲಿದೆ.
ಪ್ಯಾಟ್ ಚಾಪ್‌ಮನ್ ಅವರು ವಿಶೇಷವಾದ ಅಡುಗೆ ಪ್ರದರ್ಶನವನ್ನು ಈ ದಿನಗಳಲ್ಲಿ ನಡೆಸಿ, ತನ್ನ ಅಸಾಮಾನ್ಯ ಕೈಚಳಕ ಮತ್ತು ವಿಧಾನವನ್ನು ತೋರಿಸಲಿದ್ದಾರೆ. ಭಾರತೀಯ ಬಾರ್ಬೆಕ್ಯು ಪ್ರೇಮಿಗಳಿಗೆ "ಪ್ಯಾಟ್ ಚಾಪ್‌ಮನ್ ಗ್ರಿಲ್ಸ್ ದ ವಲ್ರ್ಡ್" ಆಹಾರೋತ್ಸವವು ಪ್ಯಾಟ್ ಚಾಪ್ಮನ್‍ನ ಅದ್ಭುತ ಕಾರ್ಯಗಳನ್ನು ತೆರೆದಿಡಲಿದೆ. "ಯುಕೆಯಲ್ಲಿ ದಂತಕತೆ ಮತ್ತು ಭಾರತೀಯ ಆಹಾರದ ರಾಯಭಾರಿಯಾಗಿರುವ ಪಾಟ್ ಚಾಪ್ಮನ್ ಜೊತೆ ಕೈಜೋಡಿಸುವುದು ಬಾರ್ಬೆಕ್ಯು ನೇಷನ್‍ಗೆ ನಿಜಕ್ಕೂ ಸಂತಸದ ವಿಚಾರ. ಜಗತ್ತಿನ ಪ್ರಸಿದ್ಧ ಮಾರಿನೇಡ್‍ಗಳು, ಪಾಕಶಾಲೆಗಳ ಬಗ್ಗೆ ವಿಶೇಷ ವ್ಯಾಖ್ಯಾನ ಮತ್ತು ತನ್ನದೇ ಸೃಷ್ಟಿಯ ಪದಾರ್ಥದ ಬಗೆಗಿನ ವಿಚಾರಗಳನ್ನು ಭಾರತೀಯರೊಂದಿಗೆ ಹಂಚಿಕೊಳ್ಳುವುದು ನಿಜಕ್ಕೂ ಒಳ್ಳೆಯ ಅನುಭವ ನೀಡಲಿದೆ. ಈ ಬಾರಿಯ ದಸರಾ- ದೀಪಾವಳಿ ಹಬ್ಬಗಳಿಗೆ ಮರೆಯಲಾಗದ ಅದ್ಭುತ ಅನುಭವವನ್ನು ನಮ್ಮ ಗ್ರಾಹಕರಿಗೆ ಒದಗಿಸುತ್ತಿರುವುದು ನಮಗೆ ಸಂತೋಷವೆನಿಸುತ್ತದೆ" ಎಂದು ಬಾರ್ಬೆಕ್ಯು ನೇಷನ್‌ನ ಸಿಬಿಒ ಆಗಿರುವ ಶ್ರೀ ಉದಯ ಮೆನನ್ ಹೇಳಿದ್ದಾರೆ.
ಬಾರ್ಬೆಕ್ಯು ನೇಷನ್‌ನ ಮಾರುಕಟ್ಟೆ ಮುಖ್ಯಸ್ಥರಾದ ಶ್ರೀ ವಿಕ್ರಂ ವರ್ಮಾ ಪ್ರತಿಕ್ರಿಯಿಸಿ, ಗ್ರಾಹಕರು ಈ ಅತ್ಯದ್ಭುತ ರುಚಿಯಿಂದ ಸಂತಸದ ಪರಮಾವಧಿಯನ್ನು ಹೊಂದಲಿದ್ದಾರೆ. ಮನರಂಜನೆ, ಉತ್ಸಾಹ ಮತ್ತು ಭೋಜನರಸಿಕತೆಯಿಂದ ಭಾರತೀಯ ಆಹಾರ ಪ್ರಿಯ ಗ್ರಾಹಕರನ್ನು ವಶಪಡಿಸಿಕೊಳ್ಳುವ ನಮ್ಮ ಸಾಧನೆಗೆ ಬಾಣಸಿಗ ಚಾಪ್‌ಮನ್ ಬಹುದೊಡ್ಡ ರಾಯಭಾರಿಯಾಗಿದ್ದಾರೆ. ಬಾರ್ಬೆಕ್ಯು ನೇಷನ್‌ನ ಗ್ರಾಹಕರನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಅನುಭವವನ್ನು ನೀಡುವುದರ ಜತೆಗೆ, ಆಹಾರ ಸಾಹಸ ಪ್ರವೃತ್ತಿಯನ್ನು ಉತ್ತೇಜಿಸುತ್ತದೆ. ಅಲ್ಲದೆ, ನಮ್ಮೊಡನೆ ಆಹಾರ ಸೇವಿಸುವ ಅನುಭವವನ್ನು ಮತ್ತಷ್ಟು ಸಮೃದ್ಧಗೊಳಿಸುತ್ತೇವೆ' ಎಂದು ಹೇಳಿದರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಯಶ್ ಎಂ. ಬಿ
9845389946; [email protected]
ಲಾವಣ್ಯ ವಸಿಷ್ಠ್
9845372373; [email protected]



Click it and Unblock the Notifications




