Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ಸಾಯುವ ಮುನ್ನ ಮಾಡಬೇಕಾದ ಸಾಹಸಕ್ರೀಡೆಗಳು
ಕೆಲವು ಪುರುಷರಿಗೆ ರೋಚಕತೆ ಮತ್ತು ಸಾಹಸ ಕ್ರೀಡೆಯೆಂದರೆ ಪಂಚಪ್ರಾಣ. ಸಾಯುವ ಮೊದಲು ಒಮ್ಮೆ ಪ್ರಯತ್ನಿಸಬಹುದಾದ ಹಲವಾರು ರೀತಿಯ ಸಾಹಸಕ್ರೀಡೆಗಳು ವಿಶ್ವದೆಲ್ಲೆಡೆಯಿದೆ. ಇಂತಹ ಕೆಲವೊಂದು ಕ್ರೀಡೆಗಳಿಗೆ ಒಳ್ಳೆಯ ದೈಹಿಕ ಸಾಮರ್ಥ್ಯ ಮತ್ತು ಗಟ್ಟಿ ಹೃದಯ ಬೇಕಾಗಿರುವ ಕಾರಣ ವಯಸ್ಸಾಗುದಕ್ಕಿಂತ ಮೊದಲು ನೀವು ಈ ಕ್ರೀಡೆಗಳ ಆನಂದ ಪಡೆಯಬೇಕು. ನಿಮಗೆ ಕ್ರೀಡೆಯ ಬಗ್ಗೆ ಆಸಕ್ತಿಯಿಲ್ಲದಿದ್ದರೂ ಸಾಹಸ ಕ್ರೀಡೆಯಲ್ಲಿ ಸರಳವಾಗಿರುವಂತಹ ಕೆಲವೊಂದು ಕ್ರೀಡೆಗಳನ್ನು ಆಯ್ಕೆ ಮಾಡಿ ಇತರರಂತೆ ರೋಚಕತೆ ಅನುಭವಿಸಬಹುದು.
ವೃತ್ತಿಪರರೇ ಮಾಡುವಂತಹ ಇಂತಹ ಸಾಹಸ ಕ್ರೀಡೆಗಳು ಈಗ ರೋಚಕತೆ ಬಯಸುವವರಿಗೆ ಲಭ್ಯವಿದ್ದು, ಸುರಕ್ಷತೆಯ ಮುನ್ನೆಚ್ಚರಿಕೆ ಹಾಗೂ ತರಬೇತಿ ಕಾರ್ಯಕ್ರಮದೊಂದಿಗೆ ಸಾಹಸ ಕ್ರೀಡೆಗಳ ರೋಚಕತೆಯನ್ನು ನೀವು ಪಡೆಯಬಹುದಾಗಿದೆ. ಸಾಹಸ ಕ್ರೀಡೆಯ ರೋಚಕತೆ ಪಡೆಯಲು ಹೃದಯ ಬಲವಾಗಿರಬೇಕು ಮತ್ತು ಕೆಲವೊಂದು ಸಲ ನಿಮ್ಮ ಕಿಸೆಯು ತುಂಬಿರಬೇಕಾಗುತ್ತದೆ.
ನಿಮಗಿದು ಮೊದಲ ಸಲವಾದರೆ ಹೈಕಿಂಗ್ ನ್ನು ಆಯ್ಕೆ ಮಾಡಬಹುದು. ನಿಮ್ಮ ಸಾಮರ್ಥ್ಯ ಮತ್ತು ಹಿಂದಿನ ಅನುಭವಕ್ಕೆ ಅನುಗುಣವಾಗಿ ವಿವಿಧ ಮಟ್ಟದ ಹೈಕಿಂಗ್ ನ್ನು ಆಯೋಜಿಸುವ ಪರ್ವತಾರೋಹಣ ಕ್ಲಬ್ ಗಳಿವೆ. ಇಂತಹ ಸಣ್ಣ ಮಟ್ಟದ ಸಾಹಸದೊಂದಿಗೆ ನೀವು ಹೆಚ್ಚು ರೋಚಕತೆ ನೀಡುವಂತಹ ಬಂಗೀ ಜಂಪಿಂಗ್, ಪ್ಯಾರಾಗ್ಲೈಡಿಂಗ್, ಸರ್ಫಿಂಗ್, ಡೈವಿಂಗ್ ಇತ್ಯಾದಿ ಪ್ರಯತ್ನಿಸಬಹುದು. ಇದು ದುರ್ಬಲ ಹೃದಯದವರಿಗಲ್ಲ ಎನ್ನುವುದು ನೆನಪಿರಲಿ.

1. ಹೈಕಿಂಗ್
ನೀವು ಮೊದಲ ಸಲ ಆರಂಭಿಸುವುದಾದರೆ ಸರಳ ಸಾಹಸಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ಎತ್ತರ ಪ್ರದೇಶಗಳಲ್ಲಿ ಹೈಕಿಂಗ್ ಮಾಡಬಹುದು. ಇದು ಮೊದಲ ಸಲ ಆರಂಭಿಸುವವರಿಗೆ ಒಳ್ಳೆಯ ಸಾಹಸ ಕ್ರೀಡೆ.
2. ಪ್ಯಾರಾಸೈಲಿಂಗ್ ಮತ್ತು ಪ್ಯಾರಾಗ್ಲೈಡಿಂಗ್
ಹಾರುವ ಅತ್ಯಂತ ಸರಳ ಕ್ರೀಡೆಯೆಂದರೆ ಪ್ಯಾರಾಸೈಲಿಂಗ್. ಇಲ್ಲಿ ಗಾಳಿಪಟದಂತೆ ಹಾರಿಸಲಾಗುವ ಮೋಟಾರ್ ಬೋಟ್ ಗೆ ನಿಮ್ಮನ್ನು ಕಟ್ಟಲಾಗಿರುತ್ತದೆ. ಇದರಲ್ಲಿ ನೀವು ಪ್ಯಾರಾಸೈಲಿಂಗ್ ನಂತೆ ಮೇಲಕ್ಕೆ ಹೋಗಿ ಅಂತಿಮವಾಗಿ ಪ್ಯಾರಚೂಟ್ ನಿಂದ ಇಳಿಯಬಹುದು.
3. ಬಂಗೀ ಜಂಪಿಂಗ್
ಈ ಸಾಹಸ ಕ್ರೀಡೆಗೆ ತುಂಬಾ ಗಟ್ಟಿ ಹೃದಯ ಬೇಕು ಮತ್ತು ನೆಲಕ್ಕೆ ತಲೆ ಬಡಿಯುವುದನ್ನು ತಪ್ಪಿಸಲು ಬಲವಾದ ಹಗ್ಗವು ಬೇಕಾಗುತ್ತದೆ. ಬಂಗೀ ಜಂಪ್ ಗೆ ಅತ್ಯಂತ ಎತ್ತರದ ಪ್ರದೇಶವೆಂದರೆ ಚೀನಾದ ಮಕಾವ್ ಗೋಪುರ 760 ಅಡಿ ಮತ್ತು ಅಮೆರಿಕಾದ ಕೊಲೊರ್ಡೊದಲ್ಲಿರುವ ರಾಯಲ್ ಜಾರ್ಜ್ ಬ್ರಿಡ್ಜ್ 1053 ಅಡಿ.
4. ಸ್ಕೂಬಾ ಡೈವಿಂಗ್
ಎತ್ತರವು ನಿಮ್ಮನ್ನು ಹರಿದಾಡುವಂತೆ ಮಾಡಿದರೆ, ಆಳವು ಪರಿಶೋಧಿಸುವಂತೆ ಮಾಡುತ್ತದೆ. ಸ್ಕೂಬಾ ಡೈವಿಂಗ್ ವೃತ್ತಿಪರರು ಮಾಡುವಂತಹದ್ದು, ಇದು ಸಮುದ್ರದ ಆಳದಲ್ಲಿರುವ ಪ್ರದೇಶಗಳಿಗೆ ಹೋಗುವಂತದ್ದಾಗಿದೆ. ಇಂತಹ ದೃಶ್ಯಗಳನ್ನು ನೀವು ನ್ಯಾಶನಲ್ ಜಿಯೋಗ್ರಾಪಿ ಚಾನೆಲ್ ನಲ್ಲಿ ನೋಡಿರಬಹುದು.
5. ಕಯಾಕಿಂಗ್ ಮತ್ತು ರಾಫ್ಟಿಂಗ್
ಇದೊಂದು ನೀರಿನ ಕ್ರೀಡೆಯಾಗಿದ್ದು, ಇದನ್ನು ಒಬ್ಬ, ಇಬ್ಬರು ಅಥವಾ ಗುಂಪಿನಲ್ಲಿ ವೇಗವಾಗಿ ಹರಿಯುವ ನದಿಯಲ್ಲಿ ಅಥವಾ ಸರೋವರದಲ್ಲಿ ಆನಂದಿಸಬಹುದು. ನದಿಯ ವೇಗ ಮತ್ತು ಅಬ್ಬರ ಹೆಚ್ಚಿನ ರೋಚಕತೆ ಉಂಟುಮಾಡುತ್ತದೆ.
6. ಪರ್ವತಾರೋಹಣ
ಕೆಲವೊಂದು ಕಠಿಣ ಮತ್ತು ಎತ್ತರದ ಪರ್ವತಗಳನ್ನು ಬರಿಗೈಯಲ್ಲಿ ಹತ್ತಲು ನಿಮಗೆ ಬಲಶಾಲಿ ತೋಳುಗಳು ಮತ್ತು ಇಚ್ಛೆ ಬೇಕಾಗುತ್ತದೆ. ಸುರಕ್ಷತೆಗಾಗಿ ಹಗ್ಗವು ನಿಮ್ಮ ಜತೆಗಿರುತ್ತದೆ. ಕೆಲವರು ಸುರಕ್ಷತೆಗಾಗಿ ಹಗ್ಗವನ್ನು ಉಪಯೋಗಿಸದೆ ತಮ್ಮ ಸಾಮರ್ಥ್ಯವನ್ನು ಅವಲಂಬಿಸಿರುತ್ತಾರೆ.
7. ಜೊರ್ಬಿಂಗ್
ಗಾಳಿತುಂಬಿರುವ ಬಲೂನಿನ ಒಳಗಡೆ ಕುಳಿತುಕೊಂಡು ಅದನ್ನು ಇಳಿಜಾರಿನಲ್ಲಿ ಉರುಳಿಸಿ ಬಿಡುವ ಅನುಭವವನ್ನು ಜೊರ್ಬಿಂಗ್ ನೀಡುತ್ತದೆ. ಇದು ತುಂಬಾ ರೋಮಾಂಚಕ ಮತ್ತು ಎದೆಬಡಿತ ಹೆಚ್ಚಿಸುವಂತಹ ಅನುಭವ. ಇದು ತುಂಬಾ ಅಸಾಮಾನ್ಯವೆನಿಸುವಂತಹದ್ದಾಗಿದೆ.
8. ಸ್ಕೀಯಿಂಗ್
ನೀವು ಎಷ್ಟು ಮಟ್ಟದಲ್ಲಿ ಬಯಸುತ್ತೀರಿ ಎನ್ನುವುದರ ಮೇಲೆ ಈ ಮಂಜಿನ ಕ್ರೀಡೆಯನ್ನು ಆನಂದಿಸಬಹುದು. ಸಮತಟ್ಟಾದ ಪ್ರದೇಶದಲ್ಲಿ ಸ್ಕೀಯಿಂಗ್ ಮಾಡುವುದಕ್ಕಿಂತಲೂ ಮಂಜಿನ ಬೆಟ್ಟದಲ್ಲಿ ಇದನ್ನು ಮಾಡುವುದು ತುಂಬಾ ರೋಚಕತೆ ಉಂಟುಮಾಡುತ್ತದೆ.
9. ಮೌಂಟೇನ್ ಬೈಕಿಂಗ್
ಪರ್ವತದಲ್ಲಿ ಕೆಳಮುಖವಾಗಿ ಬೈಕ್ ಚಲಾಯಿಸುವುದು ಒಂದು ರೀತಿಯ ಸಾಹಸಕ್ರೀಡೆ. ಅತ್ಯಂತ ವೇಗವಾಗಿರುವ ಈ ಸಾಹಸ ಕ್ರೀಡೆಯಲ್ಲಿ ಬೀಳುವುದಕ್ಕೂ ನೀವು ತಯಾರಾಗಿರಬೇಕು.
10. ಸರ್ಫಿಂಗ್
ಸರ್ಫಿಂಗ್ ನಲ್ಲಿ ಅಲೆಗಳು ಪ್ರಮುಖ ಪಾತ್ರ ವಹಿಸುವ ಕಾರಣ ಈಜಿನಲ್ಲಿ ನಿಮಗೆ ಹೆಚ್ಚಿನ ಅಭ್ಯಾಸ ಮತ್ತು ಅನುಭವ ಬೇಕಾಗುತ್ತದೆ. ಒಂದು ಮೀಟರ್ ಎತ್ತರದ ಅಲೆಗಳೊಂದಿಗೆ ನೀವು ಸರ್ಫಿಂಗ್ ಆರಂಭಿಸಬಹುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಲೆಗಳ ಎತ್ತರ ಹೆಚ್ಚಿಸಬಹುದು.



Click it and Unblock the Notifications