Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನೀವು ಕಾರ್ಯವ್ಯಸನಿ ಎಂದು ಸಾರುವ ಎಂಟು ಲಕ್ಷಣಗಳು
ನನ್ನ ಹಳೆಯ ಆಫೀಸಿನ ಬಾಸ್ ನಾನು ಆಫೀಸಿನಲ್ಲಿ ಕುಳಿತಿದ್ದನ್ನು ನೋಡಿ 'ನೀನು ಮನೆಗೆ ಹೋಗುವ ಸಮಯ ಆಯಿತಲ್ಲವೇ' ಎಂದದ್ದು ನನಗೆ ಇನ್ನೂ ನನಪಿದೆ. ಆದರೆ ಆ ಸಮಯದಲ್ಲಿ ನಾನು ಕಾಳಜಿ ವಹಿಸಬೇಕಿತ್ತು ಎಂದು ಅನ್ನಿಸಿದ್ದು ಎರಡು ಬಾರಿ ಗಂಟಲೂತ ಎಂದು ಆಸ್ಪತ್ರೆ ಸೇರಿದ ಬಳಿಕ.
ನೀವೂ ಕೂಡ ನನ್ನ ಹಾಗೆ ಕೆಲಸವನ್ನು ಬಹಳವಾಗಿ ಹಚ್ಚಿಕೊಂಡಿದ್ದೀರಾ ? ಹಾಗಿದ್ದಲ್ಲಿ ಇಲ್ಲಿ ಎಂಟು ಸೂಚನೆಗಳನ್ನು ನೀಡಲಾಗಿದೆ ಇವುಗಳನ್ನು ನೀವು ಮಾಡುತ್ತೀರಿ ಎಂದಾದರೆ ನೀವೂ ಕೆಲಸವನ್ನು ಬಹಳ ಹಚ್ಚಿಕೊಂಡಿದ್ದೀರಿ (ಕಾರ್ಯವ್ಯಸನಿ) ಎಂದು ಅರ್ಥ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹತ್ತು ಸಾಮಾನ್ಯ ಕನಸುಗಳು ಮತ್ತು ಅವುಗಳ ಅರ್ಥ

1.ಕುಟುಂಬಕ್ಕೆ ಶೂನ್ಯ ವೇಳೆ:
ನಿಮ್ಮ ಕುಟುಂಬದ ಮಂದಿ ನೀವು ಅವರಿಗೆ ಸಮಯವನ್ನೇ ಕೊಡುತ್ತಿಲ್ಲ ಅವರ ಬಗ್ಗೆ ನಿಮಗೆ ಕಾಳಜಿಯೇ ಇಲ್ಲ ಎಂದು ಹೇಳುತ್ತಿದ್ದಾರೆಯೇ? ನೀವು ನಾನು ಬಹಳ ಒತ್ತಡದಲ್ಲಿದ್ದೇನೆ ಕೆಲಸದ ಒತ್ತಡ ಬಹಳ ಎಂದು ಉತ್ತರ ನೀಡಬಹುದು. ಆದರೆ ನೀವು ನಿಮ್ಮ ಕುಟುಂಬವನ್ನು ಹಾಗೂ ಅವರ ಜೊತೆ ಸಮಯ ಕಳೆಯುವ ಸದವಕಾಶವನ್ನು ಕಳೆದುಕೊಳ್ಳುತ್ತಿದ್ದೀರಿ.

2.ನೀವು ನಿಮ್ಮ ವ್ಯಸನದ ಬಗ್ಗೆ ಬಹಳ ಕಾಳಜಿ ವಹಿಸುತ್ತಿಲ್ಲ:
ಇಲ್ಲಿ ವ್ಯಸನ ಯಾವುದು ಎಂದು ನಿಮ್ಮ ಪ್ರಶ್ನೆಯೇ? ಅತಿಯಾದ ಕೆಲಸವೇ ನಿಮ್ಮ ವ್ಯಸನ. ಮಲಗಿರುವಾಗ ಅಥವಾ ಸ್ನಾನಗೃಹದಲ್ಲಿರುವಾಗ ಮೇಲ್ ಗಳನ್ನು ನೋಡುತ್ತೀರಾ ವ್ಯವಹಾರದ ವಿಷಯಗಳನ್ನೇ ತಲೆಯಲ್ಲಿಟ್ಟುಕೊಂಡು ಊಟ ಮಾಡುತ್ತೀರಾ ಇವೆಲ್ಲವೂ ವ್ಯಸನದ ಸೂಚನೆಗಳೇ. ಮನಶಾಸ್ತ್ರಜ್ಞ ಬ್ರ್ಯಾನ್ ರಾಬಿನ್ ಸನ್ ತನ್ನ ಚೈನ್ದ್ ಟು ಡೆಸ್ಕ್ ಎಂಬ ಪುಸ್ತಕದಲ್ಲಿ ಕೆಲಸ ನಿಮ್ಮನ್ನು ಆವರಿಸುತ್ತದೆ ಹಾಗೂ ನೀವು ಅದರಿಂದ ಬಿಡುಗಡೆ ಪಡೆಯಲು ಆಗುವುದಿಲ್ಲ ಎಂದಿದ್ದಾನೆ.

3.ನಿಲ್ಲದ ಕೆಲಸ:
ನೀವು ಬಹಳ ಹೊತ್ತು ಕೆಲಸ ಮಾಡುತ್ತೀರಿ ಆಫಿಸಿನಲ್ಲೇ ಇಡಿ ದಿನ ಕಳೆಯುತ್ತೀರಿ ಎಂದಲ್ಲ. ಆದರೆ ನೀವು ಮನೆಗೆ ಬಂದ ಮೇಲೂ ಈ ಬಂಧನದಿಂದ ಬಿಡಿಸಿಕೊಳ್ಳಲು ಆಗುವುದಿಲ್ಲ. ಈಗಿನ ಆಧುನಿಕ ಯುಗದಲ್ಲಿ ನಿಮ್ಮನ್ನು ಕೆಲಸಕ್ಕೆ ಕಟ್ಟಿ ಹಾಕುವ ಸಾಧನಗಳೂ ಹೆಚ್ಚಾಗಿವೆ. ಅದೂ ನೀವು ಮ್ಯಾನೇಜರ್ ಮಟ್ಟದಲ್ಲಿದ್ದರೆ ಈ ಬಂಧ ಮತ್ತಷ್ಟು ಗಟ್ಟಿಯಾಗಿರುತ್ತದೆ.

4.ಕೆಲಸ ಮತ್ತು ಬದುಕಿನ ನಡುವಿನ ಸಮತೋಲನ ಇಲ್ಲ:
ಮಾನಸಿಕ ಬಳಲಿಕೆಯ ಜೊತೆಗೆ ಮತ್ತಷ್ಟು ಸಮಸ್ಯೆಗಳು ನಿಮ್ಮನ್ನು ಕಾಡಲಿವೆ. ನೀವು ಒಂದೇ ಕೋಣೆಯಲ್ಲಿ ಕುಳಿತು ಆಫೀಸಿನ ಕೆಲಸ ಮಾಡುವಾಗ ಸಾಮಾನ್ಯ ಜೀವನ ಮತ್ತು ಕೆಲಸದ ನಡುವಿನ ಸಮತೋಲನ ಕಳೆದುಕೊಂಡಂತಾಗುತ್ತದೆ.

5.ನಿದ್ರಾಭಂಗ:
ಮಲಗಿರುವಾಗಲೂ ನೀವು ಫೋನನ್ನು ಬಿಟ್ಟು ಮಲಗುವುದಿಲ್ಲ ಏನಾದರೂ ಸಂದೇಶ ಅಥವಾ ಮೇಲ್ ಬಂದಾಗ ಆಗುವ ಬೆಳಕು ನಿಮ್ಮನ್ನು ಎಚ್ಚರಿಸದೇ ಇರದು. ಹಾಗೂ ನಿಮ್ಮ ನಿದ್ದೆ ನಿಯಮಿತವಾಗಿ ಇರದು ಇದು ನಿಮ್ಮ ಸಾಮಾನ್ಯ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಸರಿಯಾಗಿ ಕೆಲಸ ಮಾಡಬೇಕಾದರೆ ಸರಿಯಾದ ವಿಶ್ರಾಂತಿಯೂ ಅಗತ್ಯ. ಇದಕ್ಕಾಗಿ ಸರಿಯಾದ ನಿದ್ದೆ ಬೇಕು. ಯಾವುದೇ ಎಲೆಕ್ಟ್ರಾನಿಕ್ ಸಲಕರಣೆಗಳಿಲ್ಲದೆ ಮಲಗುವ ಅಭ್ಯಾಸ ಮಾಡಿಕೊಳ್ಳಿ.

6.ರಜೆಯನ್ನೇ ತೆಗೆದುಕೊಳ್ಳದಿರುವುದು:
ರಜೆ ಇಲ್ಲದೆ ಕೆಲಸ ಮಾಡುವುದು ಇನ್ನೊಂದು ಪ್ರಮುಖ ಲಕ್ಷಣ. ರಜೆ ಮಾಡಿದರೂ ರಜೆಯ ದಿನವೂ ನಿಮ್ಮ ಫೋನ್ ಆಫ್ ಆಗಿರುವುದಿಲ್ಲ ಹಾಗೂ ಅದು ನಿಮ್ಮನ್ನು ಕೆಲಸದ ಬಗ್ಗೆ ಚಿಂತನೆಯಲ್ಲೇ ಇರುವಂತೆ ಮಾಡುತ್ತದೆ. ಕೆಲಸದ ಜವಾಬ್ದಾರಿ ಇದ್ದೇ ಇರುತ್ತದೆ ಆದರೆ ಕೆಲವು ಸಂದರ್ಭಗಳಲ್ಲಾದರೂ ಇದನ್ನು ಬೇರೆಯವರ ಮೇಲೆ ಬಿಟ್ಟು ಸ್ವಲ್ಪ ಆರಾಮವಾಗಿ ಇರುವ ಅಭ್ಯಾಸವನ್ನು ಮಾಡಿಕೊಳ್ಳಿ.

7.ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸದೇ ಇರುವುದು:
ಹೀಗೆಯೇ ಕೆಲಸ್ ಮುಂದುವರೆಸಿದರೆ ಇಂದಲ್ಲ ನಾಳೆ ನಿಮ್ಮ ಆರೋಗ್ಯ ನಿಮಗೆ ಕೈ ಕೊಡುವುದರಲ್ಲಿ ಅನುಮಾನವಿಲ್ಲ. ಬಹಳವಾಗಿ ಕೆಲಸ ಮಾಡುವ ಪರಿಣಾಮ ಹೃದಯ ಸಂಬಂಧೀ ಸಮಸ್ಯೆಗಳು, ಡ್ರಗ್ ಸೇವನೆ, ಆತಂಕ, ದೇಹ ತೂಕ ಹೆಚ್ಚಳ, ನಿದ್ರಾಹೀನತೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ.

8.ಸಾಮಾಜಿಕವಾಗಿ ಬೆರೆಯುವ ಸಂದರ್ಭಗಳು ನಿಮಗೆ ಬೇಡವಾಗುತ್ತವೆ:
ಸಾಮಾಜಿಕ ಕಾರ್ಯಕ್ರಮಗಳು ನಿಮ್ಮ ಆದ್ಯತೆಯ ಪಟ್ಟಿಯ ಕೊನೆಗೆ ಸೇರಿಕೊಳ್ಳುತ್ತವೆ. ನಿಮಗೆ ಅಂತಹ ಸನ್ನಿವೇಶಗಳಲ್ಲಿ ಪಾಲ್ಗೊಂಡಾಗಲೂ ಏನೋ ಕಸಿವಿಸಿ ಇರುತ್ತದೆ ಹಾಗೂ ಏನೋ ಅಸಮಾಧಾನ ಮನೆ ಮಾಡಿರುತ್ತದೆ. ಈ ಎಲ್ಲಾ ಸೂಚನೆಗಳು ನಿಮ್ಮನ್ನು ಕಾಡುತ್ತಿವೆಯೇ? ಹೆಚ್ಚಾಗಿ ಕೆಲಸ ಮಾಡುವ ಭರದಲ್ಲಿ ನೀವು ನಿಮ್ಮ ಕೆರಿಯರ್ ಅನ್ನೇ ನಾಶ ಮಾಡುತ್ತಿದ್ದೀರಿ ಎಂದು ನೆನಪಿಡಿ. ಸುಸ್ತು ಹೆಚ್ಚಾಗಿ ನೀವು ತಪ್ಪುಗಳನ್ನು ಹೆಚ್ಚು ಮಾಡಬಹುದು, ನಿಮ್ಮ ಯೋಚನೆಯ ದಾರಿ ಬದಲಾಗಿ ನಿಮ್ಮ ನಿರ್ಧಾರಗಳು ಬದಲಾಗಬಹುದು. ಅಥವಾ ತಪ್ಪು ನಿರ್ಧಾರಗಳಾಗಬಹುದು. ಇದರಿಂದಾಗಿ ನಿಮ್ಮ ಸಹೊದ್ಯೋಗಿಗಳ ಜೊತೆ ನಿಮ್ಮ ಸಂಬಂಧವೂ ಹಾಳಾಗಬಹುದು. ಹೀಗಾಗಿ ಇಂದೇ ನಿಮ್ಮ ಸಮಯವನ್ನು ಕೆಲಸ ಮತ್ತು ಖಾಸಗಿ ಜೀವನದ ನಡುವೆ ಸರಿಯಾಗಿ ವಿಂಗಡಿಸಿಕೊಳ್ಳಿ. ಮುಂದೆ ಬರಬಹುದಾದ ಹೆಚ್ಚಿನ ಸಮಸ್ಯೆಗಳಿಗೆ ಇಂದೇ ಪೂರ್ಣವಿರಾಮ ಹಾಕಿ.



Click it and Unblock the Notifications











