For Quick Alerts
ALLOW NOTIFICATIONS  
For Daily Alerts

ಪ್ರಪಂಚದಲ್ಲಿನ 8 ಅತ್ಯಂತ ಅಪಾಯಕಾರಿ ನಗರಗಳು

By Deepak M
|

ಈ ಪ್ರಪಂಚದಲ್ಲಿ ಒಟ್ಟು 196 ದೇಶಗಳು ಇವೆ. ಅವುಗಳಲ್ಲಿ 193 ವಿಶ್ವಸಂಸ್ಥೆಯಿಂದ ಮಾನ್ಯತೆಯನ್ನು ಪಡೆದಿವೆ. ಇದರಲ್ಲಿನ ಪ್ರತಿಯೊಂದು ದೇಶವು ತನ್ನದೇ ಆದ ವಿಶೇಷತೆಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ.

ಇವುಗಳಲ್ಲಿ ಬಹುತೇಕ ದೇಶಗಳಲ್ಲಿ ವಾಸಿಸುವ ಜನರ ಕಾರಣದಿಂದಾಗಿ ವಿಶೇಷತೆಯನ್ನು ಪಡೆದಿವೆ. ಇನ್ನು ತನ್ನ ದೇಶದಲ್ಲಿನ ತಾಂತ್ರಿಕ ಅಭಿವೃದ್ಧಿ ಮತ್ತು ಶ್ರೀಮಂತಿಕೆಯ ಸಲುವಾಗಿ ಹಲವಾರು ದೇಶಗಳು ಖ್ಯಾತಿಗಳಿಸಿವೆ. ಇನ್ನೂ ಕೆಲವು ದೇಶಗಳು ತಮ್ಮ ಅಪಾಯಕಾರಿ ಪ್ರವೃತ್ತಿಯಿಂದ ಹೆಸರುವಾಸಿಯಾಗಿವೆ.

ಈ ಅಂಕಣದಲ್ಲಿ ನಾವಿಂದು ವಿಶ್ವದ ಅತ್ಯಂತ ಅಪಾಯಕಾರಿ ನಗರಗಳ ಬಗ್ಗೆ ತಿಳಿಸಲಿದ್ದೇವೆ. ಈ ನಗರಗಳನ್ನು ನಾವು ಅಪಾಯಕಾರಿ ಎಂಬ ಪಟ್ಟಿಗೆ ಸೇರಿಸಲು ಪ್ರಮುಖ ಮಾನದಂಡವಾಗಿ ನಾವು ಮಹಿಳೆಯರ ಮೇಲಿನ ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸಾಮಾನ್ಯ ಜನ ಜೀವನ (ಭಯಪೀಡಿತ ಬದುಕು)ವನ್ನು ತೆಗೆದುಕೊಂಡಿದ್ದೇವೆ.

ವಿಶ್ವದಲ್ಲಿ 8 ಅತ್ಯಂತ ಅಪಾಯಕಾರಿ ನಗರಗಳಿವೆ ಇವು ಮಹಿಳೆಯರಿಗೆ, ಮಕ್ಕಳಿಗೆ, ಪುರುಷರಿಗೆ, ಹಾಗು ಪ್ರತಿಯೊಬ್ಬರಿಗು ಅಪಾಯಕಾರಿಯಾಗಿವೆ. ಈ 8 ನಗರಗಳಲ್ಲಿ ವ್ಯಾಪಕವಾಗಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೆ ಇವೆ.

ನಿಮ್ಮ ವ್ಯಕ್ತಿತ್ವವನ್ನು ಉಗುರುಗಳ ಆಕಾರದ ಮೂಲಕ ತಿಳಿದುಕೊಳ್ಳಬಹುದೇ?

ಬೆಲೆಮ್, ಬ್ರೆಜಿಲ್

ಬೆಲೆಮ್, ಬ್ರೆಜಿಲ್

ಬ್ರೆಜಿಲ್ ದೇಶವು ಮೂರು ವಿಚಾರಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಬ್ರೆಜಿಲ್ ಸ್ವತಂತ್ರಗೊಂಡ ನಂತರ ಅದರ ಹೆಸರಿನೊಂದಿಗೆ ಕಾರ್ನಿವಲ್, ಫುಟ್‍ಬಾಲ್ ಮತ್ತು ಅಪರಾಧ ಪ್ರಕರಣಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಇತ್ತೀಚಿನ ದಿನಗಳಲ್ಲಿ ಈ ದೇಶವು ಗಣನೀಯವಾದ ಬೆಳವಣಿಗೆಯನ್ನು ಮತ್ತು ಅಭಿವೃದ್ಧಿಯನ್ನು ಕಂಡಿದೆ. ಆದರೂ ಸಹ ಅಪರಾಧ ಪ್ರಮಾಣಗಳು ಮಾತ್ರ ಇಲ್ಲಿ ಕಡಿಮೆಯಾಗಿಲ್ಲ. ಬ್ರೆಜಿಲ್‍ನ ಬೆಲೆಮ್ ವಿಶ್ವದ ಅತ್ಯಂತ ಅಪಾಯಕಾರಿ ನಗರವಾಗಿದೆ.

ಅಬುಜ, ನೈಜಿರಿಯಾ

ಅಬುಜ, ನೈಜಿರಿಯಾ

ನೈಜಿರಿಯಾದಲ್ಲಿ ಬೊಕೊ ಹರಮ್ ಬಂಡುಕೋರರ ಹಾವಳಿ ಇತ್ತೀಚೆಗೆ ಅಧಿಕವಾಗಿದೆ. ಈ ಮುಸಾಲ್ಮಾನ್ ಬಂಡುಕೋರರು ತಮ್ಮ ಸಾಂಪ್ರದಾಯಿಕ ಸಂಸ್ಕೃತಿಯ ಮೇಲೆ ಆಗುತ್ತಿರುವ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದ ವಿರುದ್ಧ ದಂಗೆಯೆದ್ದಿದ್ದಾರೆ. ಇಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಪ್ರತಿನಿತ್ಯ ಹತ್ತಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.

ಕ್ಯರಕಸ್, ವೆನಿಜುವೆಲಾ

ಕ್ಯರಕಸ್, ವೆನಿಜುವೆಲಾ

ವೆನಿಜುವೆಲಾ ಹೆಸರು ಮಾದಕವಸ್ತುಗಳ ಕಳ್ಳ ಸಾಗಾಣಿಕೆಯೊಂದಿಗೆ ಹಾಗೂ ಅದಕ್ಕೆ ಸಂಬಂಧಪಟ್ಟ ಹಿಂಸೆಗೆ ಕುಖ್ಯಾತಿಯನ್ನು ಪಡೆದಿದೆ. ಇಲ್ಲಿನ ಜನಸಂಖ್ಯೆಯಲ್ಲಿ ಪ್ರತಿ 1,00,00 ಲಕ್ಷ ಜನದಲ್ಲಿ ಕನಿಷ್ಟ 120 ಜನರ ಹತ್ಯೆಯಾಗುತ್ತದೆ. ಕಿತ್ತು ತಿನ್ನುವ ಬಡತನ ಮತ್ತು ನಿರುದ್ಯೋಗ ಸಮಸ್ಯೆಯು ಈ ನರಹತ್ಯೆಗಳ ಹಿಂದಿನ ಕಾರಣವಾಗಿದೆ.

ಕಾಬೂಲ್, ಅಪಘಾನಿಸ್ತಾನ್

ಕಾಬೂಲ್, ಅಪಘಾನಿಸ್ತಾನ್

ತಾಲಿಬಾನಿಗಳ ಪ್ರಮುಖ ನೆಲೆ ಮತ್ತು ಅಫಿಮು ಹಾಗೂ ಆಯುಧಗಳ ಪ್ರಮುಖ ಮಾರಾಟ ಕೇಂದ್ರವಾಗಿರುವ ಕಾಬೂಲ್ ವಿಶ್ವದಲ್ಲಿ ವಾಸಿಸಲು ಅಪಾಯಕಾರಿಯಾಗಿರುವ ನಗರಗಳಲ್ಲಿ ಒಂದಾಗಿದೆ. ಅದರಲ್ಲೂ ಹೆಂಗಸರಿಗೆ ಈ ನಗರವು ನರಕ ಸದೃಶ್ಯ. ಇಲ್ಲಿ ಮಹಿಳೆಯರ ಹಕ್ಕುಗಳನ್ನು ಭೂತ ಕನ್ನಡಿಯಲ್ಲಿ ಹುಡುಕಿದರು ಸಿಗುವುದಿಲ್ಲ ಬಿಡಿ. ಇಲ್ಲಿ ನಡೆಯುವ ಅಪರಾಧ ಚಟುವಟಿಕೆಗಳಿಗೆ ಕೊನೆ ಮೊದಲೆನ್ನುವುದೆ ಇಲ್ಲ. ಜನರಿಗೆ ಅದು ಬೇಕಾಗಿಯೂ ಇಲ್ಲ.

ಸಿಯುಡಡ್ ಜುವಾರೆಝ್, ಮೆಕ್ಸಿಕೊ

ಸಿಯುಡಡ್ ಜುವಾರೆಝ್, ಮೆಕ್ಸಿಕೊ

ಮೆಕ್ಸಿಕೊ ಎಂದರೆ ಸಾಕು ಮಾದಕ ವಸ್ತುಗಳ ಅಡ್ಡ ಹೆಸರು ಎಂಬಂತೆ ನೆನಪಿಗೆ ಬರುತ್ತದೆ. ಇಲ್ಲಿ ಪ್ರತಿದಿನ ಮಾದಕ ವಸ್ತುಗಳ ಕಳ್ಳ ಸಾಗಾಣೆ ಮತ್ತು ಅದಕ್ಕೆ ಸಂಬಂಧಪಟ್ಟ ಅಪರಾಧಗಳಿಗಾಗಿ ನೂರಾರು ಜನರು ಪ್ರಾಣವನ್ನು ತೆರುತ್ತಾರೆ. ಒಮ್ಮೊಮ್ಮೆ ಒಂದೆ ದಿನ ಸಾವಿರ ಜನ ಸತ್ತರು ಅಚ್ಚರಿಯಿಲ್ಲ. ಈ ಗಡಿನಾಡಿನ ನಗರದಲ್ಲಿ ಸುಪಾರಿ ಕೊಲೆಗಳು, ಅತ್ಯಾಚಾರ, ಕೊಲೆ, ಗುಂಪು ಘರ್ಷಣೆ, ಸುಲಿಗೆ ಇತ್ಯಾದಿಗಳು ಪ್ಲೇಗ್ ರೋಗದಂತೆ ಹಬ್ಬಿವೆ. ಈ ನಗರಕ್ಕೆ ಮಾತ್ರ ಕನಿಷ್ಟ ಮುಂದಿನ 10 ವರ್ಷದವರೆಗು ನೀವು ಭೇಟಿ ನೀಡದಿದ್ದರೆ ಉತ್ತಮ. ಮಾದಕ ವಸ್ತುಗಳ ಕಳ್ಳ ಸಾಗಾಣೆ ಮಾಡುವ ಮಾಫಿಯಾಗಳು ಇಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂದರೆ ಕೊಲೆಗಳು ಮತ್ತು ಅಪರಾಧಗಳು ಸುದ್ದಿಯೇ ಆಗುವುದಿಲ್ಲ.

ಸ್ಯಾನ್ ಪೆಡ್ರಾ ಸುಲ, ಹೊಂಡುರಾಸ್

ಸ್ಯಾನ್ ಪೆಡ್ರಾ ಸುಲ, ಹೊಂಡುರಾಸ್

ಹೊಂಡುರಾಸ್ ವಿಶ್ವದಲ್ಲಿ ನಡೆದ ನರಮೇಧಗಳ ಪಟ್ಟಿಯಲ್ಲಿ ಸತತ ಎರಡನೆಯ ವರ್ಷ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ ಎಂದರೆ ಉಳಿದ ವಿಚಾರ ನಿಮಗೆ ಅರ್ಥವಾಗಬಹುದು. ಇಲ್ಲಿ ಮಾದಕ ವಸ್ತುಗಳು ಮತ್ತು ವೇಶ್ಯಾವಾಟಿಕೆ ಸಾಮಾನ್ಯವಾಗಿಬಿಟ್ಟಿದೆ. ಈ ನಗರವು ಉತ್ತರ ಮತ್ತು ದಕ್ಷಿಣ ಅಮೇರಿಕಗಳ ನಡುವೆ ಅದೆಂತಹ ಆಯಕಟ್ಟಿನ ಸ್ಥಳದಲ್ಲಿ ನೆಲೆಗೊಂಡಿದೆ ಎಂದರೆ ಮಾದಕ ವಸ್ತುಗಳನ್ನು ಕಳ್ಳ ಸಾಗಾಣೆ ಮಾಡಲು ಬೇಕಾದ ಎಲ್ಲ ಅನುಕೂಲ ಇದಕ್ಕೆ ದಕ್ಕಿದೆ. ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಂಬ ಪದಗಳನ್ನು ಯಾರೂ ಕೇಳಿಲ್ಲ ಬಿಡಿ. ಇಲ್ಲಿ ಜನರನ್ನು ಅಕ್ಷರಶಃ ಕೋಳಿಗಳಿಗಿಂತ ಕಡೆಯಾಗಿ ಕೊಲ್ಲಲಾಗುತ್ತದೆ.

ಅಲೆಪ್ಪೊ, ಸಿರಿಯಾ

ಅಲೆಪ್ಪೊ, ಸಿರಿಯಾ

ಈ ನಗರದಲ್ಲಿ ಬೆಳಗ್ಗೆ ಮನೆಯಿಂದ ಹೊರಟರೆ ಮರಳಿ ಬರುವ ನಂಬಿಕೆ ಇಲ್ಲ. ಪ್ರತಿನಿತ್ಯ ಕಾಣೆಯಾಗುವವರ ಪ್ರಮಾಣವು ದಿನೇ ದಿನೇ ಏರುತ್ತಲೆ ಇರುತ್ತದೆ. ಹೀಗಾಗಿ ಅಲೆಪ್ಪೊಗೆ ವಿಶ್ವದ ಅತ್ಯಂತ ಅಪಾಯಕಾರಿ ನಗರಗಳ ಪಟ್ಟಿಯಲ್ಲಿ ಎರಡನೆ ಸ್ಥಾನ ದೊರೆತಿದೆ. ಸೈನ್ಯವು ಸರ್ಕಾರದ ವಿಶ್ವಾಸಕ್ಕೆ ಪಾತ್ರವಾಗಿದೆ. ಆದರೆ ಅದೇ ಸಮಯಕ್ಕೆ ಬಂಡುಕೋರರು ಇವರಿಗೆ ಸಡ್ಡು ಹೊಡೆಯುತ್ತಾರೆ. ಇಲ್ಲಿ ಹಿಂಸೆ, ನರಮೇಧ, ಅತ್ಯಾಚಾರ ಮತ್ತು ಕೊಲೆಗಳು ತೀರಾ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಆದ ಹಾನಿ ಅಷ್ಟಿಷ್ಟಲ್ಲ. 2011ರಲ್ಲಿ ಆರಂಭವಾದ ಕಲಹವು ಇನ್ನು ನಿಂತಿಲ್ಲ, ಇಲ್ಲಿ ಕನಿಷ್ಟ 80-100 ಜನ ಪ್ರತಿ ನಿತ್ಯ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.

ಬಾಗ್ದಾದ್, ಇರಾಕ್

ಬಾಗ್ದಾದ್, ಇರಾಕ್

ಇರಾಕಿನಲ್ಲಿರುವ ಬಾಗ್ದಾದ್ ನಗರವು ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿರುವ ನಗರವಾಗಿದೆ. ಇದರ ಜೊತೆಗೆ ಇದರ ಅಕ್ಕ ಪಕ್ಕದ ನಗರಗಳು ಸಹ ಅಷ್ಟೇ ಅಪಾಯಕಾರಿಯಾಗಿವೆ. ಇತ್ತೀಚೆಗೆ

ಆರಂಭವಾಗಿರುವ ಇಸ್ಲಾಂನ ಜನಾಂಗೀಯ ಕಲಹವು ಸಾವಿರಾರು ಜನರನ್ನು ಬಲಿ ಪಡೆದಿದೆ. ಇದುವರೆಗಿನ ಬೆಳವಣಿಗೆಗಳನ್ನು ನೋಡಿದರೆ ಈ ಹಿಂಸೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇಲ್ಲಿ ಕಳೆದ ಎರಡು ವರ್ಷಗಳಿಂದ ಪ್ರತಿನಿತ್ಯ ಕನಿಷ್ಟ ನೂರು ಜನರ ಹೆಣಗಳು ಉರುಳುತ್ತಿವೆ. ಇದನ್ನು ನೋಡಿದರೆ ದೇವರು ಸಹ ಈ ಯುದ್ಧ ಪೀಡಿತ ನಗರವನ್ನು ಉದ್ಧಾರ ಮಾಡಲಾರ ಎಂದೆನಿಸುತ್ತದೆ.


English summary

8 Most Dangerous Cities In The World

In this article, we look at the most dangerous cities in the world. These cities are classified as dangerous on the basis of popular parameters including crimes against women, crimes against humanity and the general way of life
X
Desktop Bottom Promotion