Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅoತರ್ಮುಖಿಗಳ ಕುರಿತ 8 ಸಾಮಾನ್ಯ ತಪ್ಪು ಕಲ್ಪನೆಗಳು
ಅಂತರ್ಮುಖಿ ವ್ಯಕ್ತಿಗಳ ಕುರಿತು ಅನೇಕರಲ್ಲಿ ಕೆಲವೊಂದು ಸಾಮಾನ್ಯವಾದ ತಪ್ಪು ಕಲ್ಪನೆಗಳಿರುತ್ತವೆ. ಅನೇಕರ ನಂಬುಗೆಯ ಪ್ರಕಾರ ಅಂತರ್ಮುಖಿ ವ್ಯಕ್ತಿಗಳು ಬಹಳ ನಾಚಿಕೆ ಅಥವಾ ಸಂಕೋಚದ ಸ್ವಭಾವವುಳ್ಳವರು, ಒರಟು ವರ್ತನೆಯುಳ್ಳವರು, ಅವರು ಔತಣಕೂಟದoತಹ (parties) ಕಾರ್ಯಕ್ರಮಗಳನ್ನು ದ್ವೇಷಿಸುತ್ತಾರೆ ಹಾಗೂ ಜನರನ್ನು ಹೆಚ್ಚಾಗಿ ಇಷ್ಟಪಡುವುದಿಲ್ಲ ಎಂಬುದು. ಆದರೆ, ವಾಸ್ತವವಾಗಿ ಇಂತಹ ನoಬುಗೆಗಳು ಶುದ್ಧ ತಪ್ಪು ಅಭಿಪ್ರಾಯಗಳಾಗಿವೆ.
ಅಂತರ್ಮುಖಿ ವ್ಯಕ್ತಿಗಳು ಪುನಷ್ಚೇತನಕ್ಕಾಗಿ ಸ್ವಲ್ಪ ಕಾಲ ಏಕಾಂತಕ್ಕೆ ಮೊರೆಹೋಗುತ್ತಾರೆ. ಅದೇ ಸಮಯದಲ್ಲಿ ಬಹಿರ್ಮುಖಿಗಳು ಇತರರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ. ಏಕೆಂದರೆ ಅವರು ಏಕಾಂತವನ್ನು ದ್ವೇಷಿಸುತ್ತಾರೆ.
ಅಂತರ್ಮುಖಿಗಳು ಆತ್ಮಾವಲೋಕನ, ಬೇರೆ ಬೇರೆ ಮಾರ್ಗೋಪಾಯಗಳ ಕುರಿತು ಚಿಂತನೆ/ವಿಶ್ಲೇಷಣೆ ಇಂತಹ ಚಟುವಟಿಕೆಗಳನ್ನು ಕೈಗೊಳ್ಳಲು ಬಯಸುತ್ತಾರೆ ಹಾಗೂ ಸಾಮಾಜಿಕ ನಡಾವಳಿಗಳಿಗಿoತಲೂ ಹೆಚ್ಚಾಗಿ ಇಂತಹ ಏಕಾಂತದ ಚಟುವಟಿಕೆಗಳ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆ.
ಇದಕ್ಕೆ ತದ್ವಿರುದ್ಧವಾಗಿ, ಬಹಿರ್ಮುಖಿಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹೆಚ್ಚಾಗಿ ಬಯಸುತ್ತಾರೆ ಹಾಗೂ ಬಹಿರಂಗವಾಗಿ ಮಾತುಕತೆಯ ಮೂಲಕ ತಮ್ಮನ್ನು ಅಭಿವ್ಯಕ್ತಿಗೊಳಿಸುತ್ತಾರೆ. ಅಂತರ್ಮುಖಿಗಳ ಕುರಿತಾದ ಹಲವು ಜನಪ್ರಿಯ ಹುಸಿನoಬಿಕೆಗಳ ಬಗ್ಗೆ ಈ ಕೆಳಗಿನ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇವುಗಳನ್ನು ಅರ್ಥೈಸಿಕೊಳ್ಳುವುದರ ಮೂಲಕ ನೀವು ಅಂತರ್ಮುಖಿಗಳನ್ನು ಹೆಚ್ಚು ಸಮಂಜಸವಾಗಿ ಅರ್ಥೈಸಿಕೊಳ್ಳಬಹುದು.

ಅಂತರ್ಮುಖಿಗಳು ನಾಚಿಕೆಯ ಸ್ವಭಾವದವರು:
ಅಂತರ್ಮುಖತ್ವ ಎಂಬುದು ನಾಚಿಕೆ ಎಂಬುದಕ್ಕೆ ಪರ್ಯಾಯವಲ್ಲ. ಅಪವಾದವೆಂಬಂತೆ ಕೆಲವೊಬ್ಬರು ಅಂತರ್ಮುಖಿಗಳು ಸ್ವಲ್ಪಪ್ರಮಾಣದಲ್ಲಿ ನಾಚಿಕೆಯ ಸ್ವಭಾವದವರಾಗಿರಬಹುದು ಆದರೆ ವಾಸ್ತವವಾಗಿ ಹೆಚ್ಚಿನ ಅಂತರ್ಮುಖಿಗಳು ನಾಚಿಕೆ ಅಥವಾ ಸಂಕೋಚದ ಸ್ವಭಾವದವರಲ್ಲ. ನಾಚಿಕೆಯ ಸ್ವಭಾವವುಳ್ಳವರು ಭಯದ ಕಾರಣದಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಅಂತರ್ಮುಖಿಗಳು ಹೆಚ್ಚು ಪ್ರಚೋದನಕಾರಿಯಲ್ಲದ,
ವಿವೇಕಯುತ ವಾತಾವರಣಗಳನ್ನು ಬಯಸುತ್ತಾರೆ. ನಾಚಿಕೆಯ ಸ್ವಭಾವದವರು ಅಕ್ಷರಶಃ ಜನರ ಕುರಿತು ಭಯವುಳ್ಳವರಾಗಿರುತ್ತಾರೆ ಹಾಗೂ ಅಂಥವರು ಯಾವುದೇ ಗೆಳೆಯರ ಕೂಟ ಅಥವಾ ಸಾಮಾಜಿಕ ಒಗ್ಗೂಡುವಿಕೆಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಅಂತರ್ಮುಖಿಗಳು ಖಂಡಿತವಾಗಿಯೂ ಜನರಿಂದ ಭೀತರಾಗಿರುವುದಿಲ್ಲ ಬದಲಾಗಿ ಅವರು ತಾವೇ ಸ್ವತಹ ಕೈಗೊಳ್ಳಬಹುದಾದ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ ಅಥವಾ ಕೆಲವೊಮ್ಮೆ ಕೆಲವೇ ಕೆಲವು ಅತ್ಮಿಯರೊಂದಿಗಿನ ಚಟುವಟಿಕೆಗಳಲ್ಲಿ ಆಸಕ್ತರಾಗಿರುತ್ತಾರೆ.

ಅಂತರ್ಮುಖಿಗಳು ಒರಟು ಸ್ವಭಾವದವರು:
ದುರದೃಷ್ಟವಶಾತ್, ಹೆಚ್ಚಿನವರ ನಂಬುಗೆಯ ಪ್ರಕಾರ, ಅಂತರ್ಮುಖಿಗಳು ದುರಹಂಕಾರಿಗಳು ಮತ್ತು ಒರಟರು. ಇದಕ್ಕೆ ಅವರು ನೀಡುವ ಸಮರ್ಥನೆಯೇನೆಂದರೆ ಅಂತರ್ಮುಖಿಗಳು ನೇರವಾದಿಗಳು, ಪ್ರಾಮಾಣಿಕರು, ಮತ್ತು ಸ್ವಲ್ಪ ಮೊಂಡುಸ್ವಭಾವದವರು. ಅಂತರ್ಮುಖಿಗಳು ಹಾಳು ಹರಟೆಗೆ ಬದಲಾಗಿ ಹೆಚ್ಚು ಅರ್ಥಪೂರ್ಣ ಸಂಭಾಷಣೆಯಲ್ಲಿ ಆಸಕ್ತರಾಗಿರುತ್ತಾರೆ.
ಕೆಲವೊಮ್ಮೆ ಅಲ್ಪಕಾಲದ ಕುಶಲೋಪರಿಯಲ್ಲಿ ಪಾಲ್ಗೊಳ್ಳಬಹುದು. ಒಂದು ವೇಳೆ ನೀವು ಓರ್ವ ಅಂತರ್ಮುಖಿಯನ್ನು ಸoತೋಷಕೂಟವೊoದಕ್ಕೆ ಆಹ್ವಾನಿಸಿ ಅವರೊಂದು ವೇಳೆ ಬಾರದೆ ಹೋದರೆ, ಅವರು ಒರಟರು, ಅಹಂಕಾರಿಗಳು ಎಂದು ತಿಳಿಯಬೇಡಿರಿ. ನಿಮಗೆ ಬೇಸರವನ್ನುಂಟು ಮಾಡುವುದು ಅವರ ಉದ್ದೇಶವಲ್ಲ. ಪ್ರಾಯಶಃ ಅವರು ಬಳಲಿರಬಹುದು ಮತ್ತು ನಿಜಕ್ಕೂ ಅವರಿಗೆ ವಿಶ್ರಾಂತಿಯ ಅಗತ್ಯವಿರಬಹುದು. ಅಂತರ್ಮುಖಿಗಳು ನಿಜಕ್ಕೂ ಒಳ್ಳೆಯ ಸ್ವಭಾವದ ವ್ಯಕ್ತಿಗಳಾಗಿದ್ದು, ಅವರು ಯಾವಾಗಲೂ ಅರ್ಥಪೂರ್ಣವಾದ ಸಂಬಂಧಗಳನ್ನು ಹೊಂದಿರಲು ಬಯಸುತ್ತಾರೆ ಹಾಗೂ ಅವರು ಯಾರಿಗೂ ಕೂಡ ನೋವನ್ನುಂಟು ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ.

ಅವರು ಮಾತನಾಡಲು ಇಚ್ಚಿಸುವುದಿಲ್ಲ:
ನಮ್ಮಲ್ಲಿ ಹೆಚ್ಚಿನವರ ನಂಬಿಕೆಯ ಪ್ರಕಾರ ಅಂತರ್ಮುಖಿಗಳು ಪರಸ್ಪರ ಮಾತುಕತೆಯನ್ನು ದ್ವೇಷಿಸುತ್ತಾರೆ. ಇದೊಂದು ತಪ್ಪು ಕಲ್ಪನೆ. ಹೌದು, ಅಂತರ್ಮುಖಿಗಳು ಹೆಚ್ಚಿನ ಸಮಯವನ್ನು ಆಲೋಚಿಸುವುದರಲ್ಲಿ ಮತ್ತು ವಿಷಯಗಳ ವಿಶ್ಲೇಷಣೆಯಲ್ಲಿ, ಒಂದು ಸಮಸ್ಯೆಯ ಸುತ್ತಮುತ್ತಲಿನ ಎಲ್ಲಾ ಮಾಹಿತಿಯನ್ನು ಕಲೆ ಹಾಕುವಲ್ಲಿ ಕಳೆಯುತ್ತಾರೆ ಹಾಗೂ ಅವರು ಅವಸರದಲ್ಲಿ ಯಾವುದೇ ತೀರ್ಮಾನವನ್ನು ಕೈಗೊಳ್ಳಲು ಬಯಸುವುದಿಲ್ಲ. ಈಗಾಗಲೇ ತಿಳಿಸಿರುವಂತೆ, ಕೆಲವು ಅಂತರ್ಮುಖಿಗಳು ಅನವಶ್ಯಕವಾದ ಹರಟೆಯನ್ನು ಬಯಸುವುದಿಲ್ಲ. ಆದರೆ, ಅವರಿಗೆ ಆಸಕ್ತಿಯುಳ್ಳ ಯಾವುದಾದರೊಂದು ವಿಷಯದ ಕುರಿತು ಮಾತಿಗಿಳಿದರೆ, ಅವರು ಅಂತರ್ಮುಖಿಗಳು ಎಂಬ ಒಂದು ಸಣ್ಣ ಸಂದೇಹವೂ ಕೂಡ ನಿಮಗುಂಟಾಗದಂತೆ ಸಂಭಾಷಿಸುತ್ತಾರೆ.

ಅಂತರ್ಮುಖಿಗಳಿಗೆ ವಿಹರಿಸಲು ಮತ್ತು ಅನಂದವಾಗಿರಲು ಬರುವುದಿಲ್ಲ.
ನೀವಿದನ್ನು ನಿಜವಾಗಿಯೂ ನಂಬಲೇಬೇಕು. ಅಂತರ್ಮುಖಿಗಳಿಗೆ ಅರಾಮವಾಗಿರಲು ಮತ್ತು ಆನಂದದಿಂದ ಉಲ್ಲಸಿತರಾಗಿರಲು ಖಂಡಿತವಾಗಿಯೂ ತಿಳಿದಿದೆ. ಆದರೆ, ಅದನ್ನು ಹೊಂದಲು ಅವರು ಅನುಸರಿಸುವ ಮಾರ್ಗ ಮಾತ್ರ ಬೇರೆಯಾಗಿರುತ್ತದೆ ಅಷ್ಟೇ. ಉಲ್ಲಸಿತರಾಗುವುದಕ್ಕೋಸ್ಕರ, ಅವರು ಹೊರಹೋಗಿ ರಾತ್ರಿಯಿಡಿ ಯಾವುದಾದರೂ ಒಂದು ಪಾರ್ಟಿಯಲ್ಲಿ ಭಾಗವಹಿಸಲು ಬಯಸುವುದಿಲ್ಲ.
ಬದಲಾಗಿ ಅವರು ಬಹಳ ಸುಲಭವಾಗಿ ಮನೆಯಲ್ಲಿಯೇ ಅವರಿಗಿಷ್ಟವಾದ ಯಾವುದೋ ಸಿನೆಮಾವನ್ನು ನೋಡುತ್ತಾ ಅಥವಾ ಪುಸ್ತಕವನ್ನು ಓದುತ್ತಲೋ ವಿರಮಿಸುತ್ತಾರೆ. ದಿನದ ಅಥವಾ ಸಂಜೆಯ ವೇಳೆ ಮನೆಯಲ್ಲಿಯೇ ಇದ್ದು ಅವರಿಗೆ ಖುಷಿ ಕೊಡುವ ಚಟುವಟಿಕೆ ಅಥವಾ ಅವರದ್ದೇ ಅದ ಸ್ನೇಹಿತರ ಅಥವಾ ಬಂಧುಗಳೊಂದಿಗೆ ಕಳೆಯುವ ಸಮಯಕ್ಕಿಂತಲೂ ಅಂತರ್ಮುಖಿಗಳಿಗೆ ಬೇರಾವ ಮನರಂಜನೆಯ ಅಗತ್ಯವೂ ಇರುವುದಿಲ್ಲ.

ಅಂತರ್ಮುಖಿಗಳು ಜನರನ್ನು ದ್ವೇಷಿಸುತ್ತಾರೆ:
ಅಂತರ್ಮುಖಿಗಳ ಕುರಿತಾದ ಅತ್ಯಂತ ಜನಪ್ರಿಯ ನಂಬಿಕೆಗಳಲ್ಲೊಂದು ಯಾವುದೆಂದರೆ, ಅಂತರ್ಮುಖಿಗಳು ಜನರನ್ನು ದ್ವೇಷಿಸುತ್ತಾರೆ ಮತ್ತು ಸಾಧ್ಯವಿದ್ದಷ್ಟೂ ಅವರಿಂದ ದೂರವಿರಲು ಬಯಸುತ್ತಾರೆ ಎಂಬುದು. ಹೌದು, ಅಂತರ್ಮುಖಿಗಳಿಗೆ ಸಾಮಾನ್ಯವಾಗಿ ಸ್ನೇಹಿತರ ಸಂಖ್ಯೆಯು ಕಡಿಮೆಯೇ. ಆದರೆ, ಅವರ ಸಂಬಂಧಗಳು ಹೆಚ್ಚು ಅರ್ಥಪೂರ್ಣವಾಗಿರುತ್ತವೆ. ಖಂಡಿತವಾಗಿಯೂ ಬಹಿರ್ಮುಖಿಗಳು ಈ ವಿಚಾರದಲ್ಲಿ ತಪ್ಪಿರುತ್ತಾರೆ ಎಂದರ್ಥವಲ್ಲ. ಆದರೂ ಕೂಡ, ಬಹಿರ್ಮುಖಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರಿದ್ದರೂ ಕೂಡ,
ಅವರಿಗೆ "ನಿಜವಾದ" ಸ್ನೇಹಿತರ ಕೊರತೆಯಿರುತ್ತದೆ. ಒಂದು ವೇಳೆ ನಿಮಗೆ ಯಾರದರೂ ಅಂತರ್ಮುಖತ್ವವುಳ್ಳ ಸ್ನೇಹಿತರಿದ್ದರೆ, ನೀವು ನಿಜಕ್ಕೂ ತುಂಬಾ ಅದೃಷ್ಟವಂತರು. ಯಾಕೆಂದರೆ, ಅಂತರ್ಮುಖಿಗಳು ಯಾವಾಗಲೂ ನಿಜವಾದ ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ ಮತ್ತು ಅವರು ಯಾವಾಗಲೂ ನಿಷ್ಠಾವoತರಾಗಿರುತ್ತಾರೆ. ನಿಮ್ಮ ಅoತರ್ಮುಖೀ ಸ್ನೇಹಿತನನ್ನು ಯಾವಾಗಲೂ ನಂಬಬಹುದು ಮತ್ತು ಅವರು ನಿಮ್ಮ ಯಾವುದೇ ಕಠಿಣತಮ ಪರಿಸ್ಥಿತಿಯಲ್ಲಿ ನಿಮಗೆ ಆಧಾರವಾಗಿ, ಬೆನ್ನೆಲುಬಾಗಿ ನಿಮ್ಮ ಪರ ನಿಲ್ಲುತ್ತಾರೆ.

ಅಂತರ್ಮುಖಿಗಳು ಉತ್ತಮ ಸಾರ್ವಜನಿಕ ಭಾಷಣಕಾರರು ಆಗಲು ಸಾಧ್ಯವೇ ಇಲ್ಲ:
ಅಂಕಿ ಅಂಶಗಳ ಪ್ರಕಾರ ಅಂತರ್ಮುಖಿಗಳು ನಂಬಲಸ್ಸಾಧ್ಯ ರೀತಿಯಲ್ಲಿ ಅತೀ ಸಮರ್ಥ ಸಾರ್ವಜನಿಕ ಭಾಷಣಕಾರರು ಹಾಗೂ ಕೇಳುಗರನ್ನು ತಮ್ಮ ಹಾಸ್ಯಶೈಲಿಯ ಮಾತುಗಳಿಂದ ನಗೆಗಡಲಲ್ಲಿ ತೇಲಿಸಬಲ್ಲವರಾಗಿರುತ್ತಾರೆ. ವಿಷಯವೇನೆಂದರೆ, ಅಂತರ್ಮುಖಿಗಳಿಗೆ ಜನಸಮುದಾಯದ ಮುಂದೆ ನಿಂತು ಆತ್ಮವಿಶ್ವಾಸದಿಂದ ಮಾತನಾಡಲು ಪೂರ್ವತಯಾರಿಗಾಗಿ ಸ್ವಲ್ಪ ಹೆಚ್ಚಿನ ಸಮಯ ಬೇಕಾಗುತ್ತದೆ ಹಾಗೂ ಅವರು ಭಾಷಣಕ್ಕೂ ಮೊದಲು ಸಾಕಷ್ಟು ಪೂರ್ವತಯಾರಿ ನಡೆಸುತ್ತಾರೆ.
ಏನೆಂದರೆ, ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಓರ್ವ ಒಳ್ಳೆಯ ಸಾರ್ವಜನಿಕ ಭಾಷಣಕಾರನಾಗಬಹುದು. ಮಾಡಬೇಕಾದುದೇನೆoದರೆ, ಅoಥವರಿಗೆ ಸಾಕಷ್ಟು ತಾಳ್ಮೆ ಇರಬೇಕು ಮತ್ತು ಅವರು ತಮ್ಮ ಸಾರ್ವಜನಿಕ ಭಾಷಣಾ ಕೌಶಲ್ಯವನ್ನು ಹೆಚ್ಚಿಸಿ ಕೊಳ್ಳಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ.

ಅಂತರ್ಮುಖಿಗಳು ಎಲ್ಲಾ ಕಾಲದಲ್ಲಿಯೂ ಒಂಟಿಯಾಗಿರಲು ಬಯಸುತ್ತಾರೆ:
ಅಂತರ್ಮುಖಿಗಳು ಒಂಟಿಯಾಗಿರಲು ಬಯಸುತ್ತಾರೆ ಅಂದ ಮಾತ್ರಕ್ಕೆ ಅವರು ಯಾವಾಗಲೂ ಒoಟಿತನವನ್ನೇ ಬಯಸುತ್ತಾರೆ ಎಂದರ್ಥವಲ್ಲ. ಅಂತರ್ಮುಖಿಗಳು ಹೆಚ್ಚಾಗಿ ಚಿoತನಾಶೀಲರು, ಕನಸುಗಾರರು, ಹಾಗೂ ಯಾವುದಾದರೂ ಸಮಸ್ಯೆಯೊಂದರ ಪರಿಹಾರದ ಕುರಿತು ಚಿಂತಿಸುತ್ತಿರಬಹುದು. ಆದರೆ, ಅವರೂ ಸಹ ತಮ್ಮ ಭಾವನೆಗಳು, ಸಂಶೋಧನೆಗಳು, ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಜೊತೆಗಾರರು ದೊರೆಯದಿದ್ದರೆ ತೀವ್ರ ಒಂಟಿತನವನ್ನು ಅನುಭವಿಸುತ್ತಾರೆ.

ಅಂತರ್ಮುಖಿಗಳು ಕೇವಲ ಅದೃಷ್ಟದಲ್ಲಿ ನಂಬಿಕೆಯುಳ್ಳವರು.:
ಅಂತರ್ಮುಖಿಗಳು ಎಂದಿಗೂ ಗುಂಪಿನಲ್ಲಿ ಗೋವಿಂದರಾಗಲು ಬಯಸುವವರಲ್ಲ. ಅವರು ಸಾಮಾನ್ಯವಾಗಿ ಪ್ರತ್ಯೇಕಿಗಳಾಗಿದ್ದು ತಮ್ಮ ಜೀವನವನ್ನು ತಮ್ಮದೇ ಅದ ರೀತಿಯಲ್ಲಿ ಬಾಳಲು ಬಯಸುವವರು. ಅಂತರ್ಮುಖಿಗಳು ಎಂದಿಗೂ ಜನಪ್ರಿಯತೆಯ ಮೇಲೆ ಅಥವಾ ಪ್ರಚಲಿತ ಆಚರಣೆ ಅಥವಾ ಆಯ್ಕೆಯ ಮೇಲೆ ತಮ್ಮ ನಿರ್ಧಾರಗಳನ್ನು ತಳೆಯುವುದಿಲ್ಲ. ಅವರು ಯಾವಾಗಲೂ ತಾವು ಬಯಸಿದ್ದನ್ನೇ ಮಾಡುವವರು ಮತ್ತು ಅವರು ಎಂದಿಗೂ ತಮ್ಮನ್ನು ಇನ್ನೊಬ್ಬರ ಜೊತೆಗೆ ಹೋಲಿಸಿಕೊಳ್ಳಲು ಹೋಗುವುದಿಲ್ಲ.
ಅಂತರ್ಮುಖಿಗಳು ನಿಜಕ್ಕೂ ಸದ್ಗುಣಶಾಲಿಗಳಾಗಿದ್ದು ನಾವು ಅವರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನೆಲ್ಲಾ ನಂಬಬೇಕಿಲ್ಲ. ಒಂದು ವೇಳೆ ನಿಮಗೆ ಯಾರಾದರೂ ಕೆಲವರು ಅoತ ರ್ಮುಖಿಗಳ ಪರಿಚಯವಿದ್ದರೆ ಅಥವಾ ನೀವೇ ಸ್ವತಹ ಅಂತರ್ಮುಖಿಯಾಗಿದ್ದರೆ, ನೀವು ಖಂಡಿತಾ ಈ ಲೇಖನದಲ್ಲಿರುವ ವಿಚಾರಗಳನ್ನು ಒಪ್ಪಿಕೊಳ್ಳುತ್ತೀರಿ ಎಂಬುದು ನನ್ನ ನಂಬಿಕೆ. ಅಂದ ಹಾಗೆ ನಿಮಗೇನಾದರೂ ಅoತರ್ಮುಖಿಗಳ ಬಗ್ಗೆ ಬೇರೆ ವಿಚಾರಗಳೇನಾದರೂ ತಿಳಿದಿವೆಯೇ..?!



Click it and Unblock the Notifications


