Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
7 ವಿಚಾರಗಳ ಸಂದರ್ಭದಲ್ಲಿ ನಾವು ಸ್ವಾರ್ಥಿಗಳಾಗಿದ್ದರು ಪರವಾಗಿಲ್ಲ!
ಸ್ವಾರ್ಥಿಗಳಾಗಿರುವುದು ಒಳ್ಳೆಯದಲ್ಲ ಎಂದೇ ಎಲ್ಲರೂ ಹೇಳುತ್ತಾರೆ. ಆದರೆ ಕೆಲವೊಮ್ಮೆ ನಾವು ಸ್ವಾರ್ಥಿಗಳಾಗುವುದು ಸಹ ಒಳ್ಳೆಯದು ಎಂದು ನಿಮಗೆ ಗೊತ್ತೆ. ಕೆಲವೊಮ್ಮೆ ನೀವು ನಿಮ್ಮ ಬಗ್ಗೆಯೇ ಆಲೋಚನೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.
ಜನರು ಇದರ ಬಗ್ಗೆ ನಿಮ್ಮ ಬಳಿ ವಿಮರ್ಶೆ ಮಾಡಬಹುದು.ಆದರೆ ನಿಮ್ಮ ಅಗತ್ಯತೆಗಳ ಬಗ್ಗೆ ನೀವು ಆಲೋಚಿಸಿದಾಗ ಸ್ವಾರ್ಥ ಅತ್ಯಗತ್ಯವಾಗಿ ಬೇಕಾಗುತ್ತದೆ. ಹಾಗಾದರೆ ಯಾವ ಯಾವ ಸಂದರ್ಭಗಳಲ್ಲಿ ನಾವು ಸ್ವಾರ್ಥಿಗಳಾದರೆ ತಪ್ಪಿಲ್ಲ ಎಂಬುದು ನಿಮ್ಮ ಪ್ರಶ್ನೆಯೇ ಮುಂದೆ ಓದಿ...

ನಿಮ್ಮನ್ನು ಸರಿಯಾಗಿ ಉಪಚರಿಸದಿದ್ದಾಗ
ನಿಮ್ಮನ್ನು ಯಾರಾದರು ಸರಿಯಾಗಿ ಉಪಚರಿಸದಿದ್ದಾಗ ಅವರ ವಿಚಾರದಲ್ಲಿ ನೀವು ಸ್ಪಾರ್ಥಿಗಳಾಗುವುದರಲ್ಲಿ ತಪ್ಪೇನಿಲ್ಲ. ಮನೆಯಲ್ಲಿ ಎಲ್ಲಾ ಕೆಲಸವನ್ನು ನೀವೇ ಹೆಗಲ ಮೇಲೆ ಹಾಕಿಕೊಂಡು ಮಾಡುವಾಗ, ಯಾರಾದರು ನಿಮ್ಮ ಮನೆಯ ಸದಸ್ಯರು ಯಾವಾಗಲು ನಿಮಗೆ ಸಹಾಯ ಮಾಡದಿದ್ದರೆ, ಅಥವಾ ಕೆಲಸ ಸ್ಥಳದಲ್ಲಿ ಸಹ ನಿಮ್ಮ ಸಹಾಯಕ್ಕೆ ಯಾರೂ ಬಾರದಿದ್ದಾಗ ನೀವು ಸಹ ಅವರಿಗೆ ಅಗತ್ಯವಿದ್ದಾಗ ಅಸಹಕಾರ ಚಳುವಳಿ ಮಾಡಿ ಸ್ವಾರ್ಥವನ್ನು ಪ್ರದರ್ಶಿಸಿ. ಮುಯ್ಯಿಗೆ ಮುಯ್ಯಿ ಎನ್ನುವಂತೆ ಸ್ವಾರ್ಥಕ್ಕೆ ಸ್ವಾರ್ಥವೇ ಉತ್ತರ, ಔಷಧ. ಇದನ್ನು ಇತರರಿಗೆ ಮನದಟ್ಟು ಮಾಡುವ ಸಂದರ್ಭ ಬಂದಾಗ ಹಿಂದೆ ಸರಿಯಬೇಡಿ.
ನಿಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಹೊರಟಾಗ
ನಿಮ್ಮ ಕನಸುಗಳನ್ನು ಯಾರಾದರು ತುಳಿದು ಹಾಕಲು ಪ್ರಯತ್ನಿಸುತ್ತಿದ್ದಾರೆಯೇ? ಬಿಡಬೇಡಿ ಅವರನ್ನು. ನಿಮ್ಮ ಕನಸುಗಳು ಅದು ಯಾವುದೇ ಆಗಿರಲಿ, ಅದು ವಾಸ್ತವಿಕವಾಗಿರಬಹುದು, ಸಾಧಿಸಬಹುದಾದಂತಹವಾಗಿರಬಹುದು ಮತ್ತು ಅದು ನಿಮ್ಮಲ್ಲಿ ಅದೇಷ್ಟೊ ಭಾವನೆಗಳನ್ನು ಹುಟ್ಟುಹಾಕುವಂತಿರಬಹುದು. ಏನೇ ಇರಲಿ ಅದನ್ನು ಬಿಡಬೇಡಿ ಸಾಧಿಸಲು ಹೊರಡಿ. ಇತರರು ನಿಮ್ಮನ್ನು ನಿರುತ್ಸಾಹಪಡಿಸಬಹುದು. ಏಕೆಂದರೆ ಅದರಿಂದ ನಿಮಗೆ ಸಮಯ ವ್ಯರ್ಥವಾಗಬಹುದು ಮತ್ತು ನಿಮ್ಮ ಕುಟುಂಬಕ್ಕೆ ಅದರಿಂದ ಬರುವ ಆದಾಯ ಕಡಿಮೆಯಿರಬಹುದು. ಏನಾದರಾಗಲಿ ಅದು ಎಷ್ಟಾದರು ನಿಮ್ಮ ಕನಸು, ನಿಮ್ಮ ತುಡಿತ. ನೀವು ಮಲಗಿದಾಗ, ಎದ್ದಾಗ ಅದರ ಕುರಿತು ನೀವು ಆಲೋಚಿಸಿದ್ದೀರಿ. ನಿಮ್ಮನ್ನು ನೀವು ಖುಷಿಪಡಿಸಿಕೊಳ್ಳಬೇಕು ಎಂದರೆ ಮೊದಲು ಕನಸು ನನಸು ಮಾಡಿಕೊಳ್ಳಿ.
ಉದ್ಯೋಗದಲ್ಲಿ ಸಂತೋಷವಾಗಿರಲು ಕೆಲವು ಮಾರ್ಗಗಳು
ನಿಮ್ಮ ಸತ್ಯಸಂಧರಾಗಿರಿ
ಕೆಲವೊಮ್ಮೆ ಜನರು ಅವರ ನಿರೀಕ್ಷೆಗೆ ತಕ್ಕಂತೆ ನೀವು ಇಲ್ಲ ಎಂಬ ಕಾರಣಕ್ಕೆ ನಿಮ್ಮನ್ನು ಸ್ವಾರ್ಥಿ ಎಂದು ಹೇಳುತ್ತಿರುತ್ತಾರೆ. ಅವರ ನಿರೀಕ್ಷೆಗಳು ಇರಲಿ ಬಿಡಲಿ ಅದು ಬೇರೆ ವಿಚಾರ. ಆದರೆ ನಾವು ನಮ್ಮ ಮಟ್ಟಿಗೆ ಸತ್ಯ ಸಂಧರಾಗಿಲ್ಲದಿದ್ದಲ್ಲಿ ನಮಗೆ ಸಂತೋಷ ಸಿಗಲಾರದು. ಪ್ರತಿಯೊಬ್ಬರು ತಮ್ಮದೆ ಆದ ಆಲೋಚನೆಗಳನ್ನು ಮತ್ತು ನಂಬಿಕೆಗಳನ್ನು ಹೊಂದಿರುತ್ತಾರೆ. ಅದು ಅವರ ಹಕ್ಕು ಸಹ ಹೌದು. ಹೀಗಿರುವಾಗ ಯಾರಾದರು ನಿಮ್ಮನ್ನು ಕೇವಲವಾಗಿ ನೋಡಿದಾಗ, ಅಥವಾ ನಿಮ್ಮ ಬಗ್ಗೆ ಮಾತನಾಡಿದಾಗ ಅವರು ಸ್ವಾರ್ಥಿಗಳಾಗುತ್ತರೆಯೇ ಹೊರತು ನೀವಲ್ಲ.
ತೀರಾ ಕೇಳಲು ತೊಡಗಿದಾಗ
ಕುಟುಂಬದ ಹಾಗು ಹೋಗುಗಳನ್ನು ಮತ್ತು ಸದಸ್ಯರ ಕಷ್ಟ -ಸುಖಗಳನ್ನು ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿಯು ಹೆಂಗಸರ ಮೇಲೆ ಇರುತ್ತದೆ. ಅದು ಮಕ್ಕಳಾಗಿರಬಹುದು ಅಥವಾ ಹಿರಿಯ ಬಂಧುಗಳಾಗಿರಬಹುದು ಎಲ್ಲರನ್ನು ನೋಡಿಕೊಳ್ಳುವುದು ಹೆಂಗಸರು. ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗು ಮನೆಯೊಡತಿ ದುಡಿಯುತ್ತಲೆ ಇರುತ್ತಾಳೆ. ಇದಕ್ಕೂ ಮೇಲಾಗಿ ಆ ಮನೆಯ ಸದಸ್ಯರು ಆಕೆಯಿಂದ ಹೆಚ್ಚಿನದನ್ನು ನಿರೀಕ್ಷಿಸಿದರೆ, ಆಗ ನೀವು ಸ್ವಾರ್ಥಿಯಾಗುವುದರಲ್ಲಿ ತಪ್ಪೇನಿಲ್ಲ. ನಿಮ್ಮಿಂದ ಎಷ್ಟು ಸಾಧ್ಯವೋ, ಅಷ್ಟು ಮಾತ್ರ ಸೇವೆಯನ್ನು ಮಾಡಿ. ಏಕೆಂದರೆ ನಾಳೆ ನಿಮಗಾಗಿ ಸೇವೆ ಮಾಡಲು ಮತ್ತೊಬ್ಬರು ಬೇಕಾಗುವಷ್ಟು ಸವೆದು ಹೋಗಬೇಡಿ.
ಮೊದಲು ನೀವು ನಂತರ ಎಲ್ಲವು
ಮೊದಲು ನಿಮ್ಮನ್ನು ನೀವು ನೋಡಿಕೊಳ್ಳುವುದು ನಿಮ್ಮ ಆಧ್ಯತೆಯಾಗಿರಬೇಕು. ನಿಮ್ಮನ್ನೆ ನೀವು ಸರಿಯಾಗಿ ನೋಡಿಕೊಳ್ಳಲಿಲ್ಲವೆಂದಾದಲ್ಲಿ, ಇತರರನ್ನು ನೀವು ಹೇಗೆ ತಾನೇ ಚೆನ್ನಾಗಿ ನೋಡಿಕೊಳ್ಳುವಿರಿ? ಹಾಗಾಗಿ ನಿಮ್ಮನ್ನು ನೀವು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ ಮೊದಲು ಅದನ್ನು ನಿಲ್ಲಿಸಿ. ಆ ಗುಣವನ್ನು ಮುಂದೆ ಬಳಸಬೇಕಾದ ಸಂದರ್ಭ ಬಂದಾಗ ಬಳಸುವಿರಂತೆ. ನಿಮ್ಮ ಕೆಲಸ ಮತ್ತು ಇತರ ಜವಾಬ್ದಾರಿಗಳನ್ನು ಸಮತೋಲನ ಮಾಡಲು ಮೊದಲು ನಿಮಗಾಗಿ ಕೆಲಸಮಯವನ್ನು ಮೀಸಲಾಗಿಡಿ.
ಅತಿಯಾಗಿ ಮಾಡುವುದು
ಮಾಡಬೇಕು ನಾವು ಇತರರಿಗೆ ಒಂದಷ್ಟು ಕೆಲಸ. ಆದರೆ ಆ ಕೆಲಸ ಮಾಡುವಾಗ ಪಾತ್ರರು ಮತ್ತು ಅಪಾತ್ರರು ಎಂಬುದನ್ನು ನೋಡಿಕೊಂಡು ಮಾಡುವುದು ಉತ್ತಮ. ಸುಮಾರು ಜನ ನಿಮ್ಮನ್ನು ತಮ್ಮ ಕೆಲಸಕ್ಕೆ ಬಳಸಿಕೊಂಡು ನಂತರ ಕಾಲಕಸದಂತೆ ಜಾಡಿಸಿ ಬಿಸಾಕುತ್ತಾರೆ. ಆಗ ಬಳಸಿ ಬಿಸಾಡಿದ ಅನುಭವ ನಿಮಗಾಗುತ್ತಲ್ಲವೆ. ಅದಕ್ಕೆ ಹೇಳುವುದು ಅತಿಯಾಗಿ ಯಾವುದನ್ನು ಮಾಡಬೇಡಿ. ನಿಮಗಾಗಿ ವ್ಯಾಯಾಮ ಮತ್ತು ಧ್ಯಾನ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಬಳಸಿ ಬಿಸಾಡುವ ಅವಕಾಶವನ್ನು ನೀಡದೆ "ಆಗೋಲ್ಲ" ಎಂಬ ಪದವನ್ನು ಬಳಸಿ ಯಾವುದೇ ದಯಾ ದಾಕ್ಷಿಣ್ಯವಿಲ್ಲದೆ.
ಆನ್‍ಲೈನ್‍ನಲ್ಲಿ ನೀವು ಖರೀದಿಸಬಹುದಾದ 20 ವಸ್ತುಗಳು
ಆದ್ಯತೆಗಳು
ನಿಮ್ಮ ಆದ್ಯತೆಗಳನ್ನು ಸರಿಯಾದ ಕ್ರಮದಲ್ಲಿ ಗುರುತಿಸಿ. ನಿಮಗೆ ಕೆಲಸಕ್ಕೆ ಸಂಬಂಧಿಸಿದ ತೊಂದರೆಗಳು ಇರಬಹುದು ಅಥವಾ ಓದಿಗೆ ಸಂಬಂಧಿಸಿದ ತೊಂದರೆಗಳು ಇರಬಹುದು. ಇಲ್ಲವೆ ಮಕ್ಕಳನ್ನು ನೋಡಿಕೊಳ್ಳುವ ಕೆಲಸವಿರಬಹುದು. ಆದರೆ ಇವೆಲ್ಲಕ್ಕು ಹೊರತಾದ ಕೆಲವೊಂದು ಕೆಲಸಗಳು ಇರುತ್ತವೆ. ಅವು ನಿಮ್ಮ ಬದುಕಿನ ದೃಷ್ಟಿಯಲ್ಲಿ ಅಷ್ಟೇನು ಮಹತ್ವಕರವಲ್ಲದ ವಿಚಾರಗಳಾಗಿರಬಹುದು, ಅಂತಹವನ್ನು ಎತ್ತಿ ಪಕ್ಕಕ್ಕಿಡಿ. ಅಂದರೆ ನಿಮ್ಮ ಗಂಡನ ತಂಡದ ಸ್ಪೋರ್ಟ್ಸ್ ಕಿಟ್ ತೊಳೆದು ಒಣ ಹಾಕುವ ಕೆಲಸ ನೀವು ಮಾಡಬೇಕೆ?, ಅಥವಾ ನಿಮಗೆ ಇಷ್ಟವಿಲ್ಲದ ಸಂಬಂಧಿಕರ ಮನೆಯಲ್ಲಿ ಒಂದಿಡೀ ಭಾನುವಾರವನ್ನು ನೀವು ಕಳೆಯಬೇಕೆ? ನಿಮಗೆ ಎಷ್ಟು ಸಂಬಂಧಿಸಿದೆಯೋ, ಅಷ್ಟನ್ನು ಮಾತ್ರ ಮಾಡಿ.



Click it and Unblock the Notifications


