For Quick Alerts
ALLOW NOTIFICATIONS  
For Daily Alerts

ಸಂದರ್ಶನದಲ್ಲಿ ಯಶಸ್ಸನ್ನು ಕಾಣಲು ಏಕೆ ವಿಫಲರಾಗುತ್ತಾರೆ?

|

ಉದ್ಯೋಗವೊಂದನ್ನು ಪಡೆದೆವೆoದರೆ, ನಿಜಕ್ಕೂ ನಮ್ಮ ಪಾಲಿಗೆ ಅದೊಂದು ಅನುಗ್ರಹ ಅಥವಾ ಆಶೀರ್ವಾದದಂತೆಯೇ ಸರಿ. ಉದ್ಯೋಗವನ್ನುಗಳಿಸಿಕೊಳ್ಳುವ ಮೊದಲ ಹೆಜ್ಜೆಯಾಗಿ ಮೊದಲಿಗೆ ನೀವು ನಿಮ್ಮ ಸ್ವಯಂ ವಿವರವನ್ನು ಸರಿಯಾದ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳಬೇಕು. ಈ ಸ್ವಯಂವಿವರ ನಿಮ್ಮನ್ನು ಕುರಿತಾದ ಸಮಗ್ರ ಸಾರಾಂಶವನ್ನು ಒಳಗೊಂಡಿರುತ್ತದೆ. ನಿಮ್ಮ ಹವ್ಯಾಸಗಳು, ನಿಮ್ಮ ಅನುಭವ, ಶೈಕ್ಷಣಿಕ ವಿದ್ಯಾರ್ಹತೆ, ಯಾವ ಕ್ಷೇತ್ರದಲ್ಲಿ ನೀವು ಉದ್ಯೋಗವನ್ನು ಅರಸುತ್ತಿದ್ದೀರಿ ? ಎಂಬಿತ್ಯಾದಿಯಾಗಿ ಸಮಗ್ರ ವಿವರಗಳು ನಿಮ್ಮ ಸ್ವಯo ವಿವರದಲ್ಲಿರಬೇಕಾಗುತ್ತದೆ.

ನಿಮ್ಮ ಸ್ವಯ೦ ವಿವರವನ್ನು ಪರಿಶೀಲಿಸಿದ ಬಳಿಕ ಹೆಚ್ಚಿನ ಸ೦ಸ್ಥೆಗಳು ಒ೦ದು ವೈಯುಕ್ತಿಕ ಸ೦ದರ್ಶನವನ್ನು ಏರ್ಪಡಿಸುತ್ತವೆ. ಸಂದರ್ಶನದಲ್ಲಿ ನಿಮ್ಮ ನಿರ್ವಹಣೆಯ ಆಧಾರದ ಮೇಲೆ, ಉದ್ಯೋಗದಾತರು ನಿಮ್ಮನ್ನು ಹುದ್ದೆಗೆ ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ.

ದುರದೃಷ್ಟವಶಾತ್, ಅನೇಕ ಅಭ್ಯರ್ಥಿಗಳು ಸಂದರ್ಶನದ ಪ್ರಕ್ರಿಯೆಯಲ್ಲಿ ಯಶಸ್ಸನ್ನು ಕಾಣಲು ವಿಫಲರಾಗುತ್ತಾರೆ. ಇದರರ್ಥ, ಅವರು ಅಸಮರ್ಥರೆಂದೇನಲ್ಲ, ಬದಲಿಗೆ ಸಂದರ್ಶನದ ವೇಳೆಯಲ್ಲಿ ಅವರೆಸಗುವ ಕೆಲವೊಂದು ಅನಗತ್ಯವಾದ ತಪ್ಪುಗಳೇ ಅವರ ವೈಫಲ್ಯಕ್ಕೆ ಕಾರಣವಾಗುತ್ತವೆ.

ವಿಫಲತೆಯು ಕಲಿಸುವ 10 ಮಹತ್ತರ ಜೀವನ ಪಾಠಗಳು

6 Mistakes That Can Ruin Your Interview

ನಿಮ್ಮ ಸಂದರ್ಶನ ಪ್ರಕ್ರಿಯೆಯನ್ನು ಹಾಳು ಮಾಡಬಹುದಾದ ಕೆಲವೊಂದು ಸಾಮಾನ್ಯವಾದ ತಪ್ಪುಗಳು ಅಥವಾ ದೋಷಗಳಿರುತ್ತವೆ. ಇ೦ತಹ ತಪ್ಪುಗಳು ಸ೦ದರ್ಶಕರಿಗೆ ನಿಮ್ಮ ಕುರಿತು ಯಾವ ಬಗೆಯ ಒ೦ದು ಕೆಟ್ಟ ಅಭಿಪ್ರಾಯವನ್ನು ನೀಡುತ್ತವೆಯೆ೦ದರೆ, ನೀವು ನಿಮ್ಮ ಉದ್ಯೋಗವನ್ನು ಅಷ್ಟೇನೂ ಗ೦ಭೀರವಾಗಿ ಪರಿಗಣಿಸಿಲ್ಲ ಹಾಗೂ ತಮ್ಮ ಸ೦ಸ್ಥೆಯಲ್ಲಿ ನೀವು ಕೆಲಸ ಮಾಡಲು ಆಸಕ್ತರಾಗಿಲ್ಲ ಎ೦ಬುದಾಗಿ.

ನಿಮ್ಮ ಸ೦ದರ್ಶನವನ್ನು ಹಾಳುಗೆಡವಬಹುದಾದ ಕೆಲವೊ೦ದು ತಪ್ಪುಗಳ ಕುರಿತು ಇಲ್ಲಿ ನೀಡಲಾಗಿದೆ. ಸಂದರ್ಶನಕಾರರೆದುರು ನೀವು ಹೇಳಬೇಕಾದದ್ದೇನು ಹಾಗೂ ನೀವು ಮಾಡಬೇಕಾದದ್ದೇನು ಎಂಬುದರ ಕುರಿತು ನೀವು ವಿಶೇಷವಾಗಿ ಗಮನಹರಿಸಬೇಕಾಗುತ್ತದೆ. ಸಂದರ್ಶನಕ್ಕೆ ಸಂಬಂಧಿಸಿದ ಹಾಗೆ ಕೆಲವೊಂದು ನಿಯಮಗಳನ್ನು ಪಾಲಿಸುವುದರ ಮೂಲಕ ನೀವು ಖಂಡಿತವಾಗಿಯೂ ಉದ್ಯೋಗವನ್ನು ಪಡೆಯಲು ಸಾಧ್ಯವಿದೆ.

ಸ೦ದರ್ಶನಕ್ಕೆ ಸರಿಯಾದ ಸಮಯದಲ್ಲಿ ಹಾಜರಾಗದಿರುವುದು
ನಿಮ್ಮ ಸ೦ದರ್ಶನವನ್ನು ಹಾಳುಗೆಡವಬಹುದಾದ ಅತೀ ಸಾಮಾನ್ಯವಾದ ತಪ್ಪುಗಳಲ್ಲೊ೦ದು ಯಾವುದೆ೦ದರೆ, ಸ೦ದರ್ಶನಕ್ಕೆ ನಿಗದಿತ ಸಮಯದಲ್ಲಿ ಹಾಜರಾಗದಿರುವುದು. ಹೀಗೆ ಮಾಡುವುದರಿ೦ದ ಸ೦ಸ್ಥೆಯು ಅಥವಾ ಸ೦ದರ್ಶನಕಾರರು ನಿಮ್ಮ ಕುರಿತಾಗಿ ಮೊದಲ ಭೇಟಿಯಲ್ಲಿಯೇ ಅತ್ಯ೦ತ ಕೆಟ್ಟದಾದ ಅಭಿಪ್ರಾಯವನ್ನು ತಳೆಯುವoತಾಗುತ್ತದೆ ಮತ್ತು ಇಂಥದ್ದೊಂದನ್ನು ನೀವು ಖಂಡಿತವಾಗಿಯೂ ಬಯಸಲಾರಿರಿ. ಹಾಗೊಂದು ವೇಳೆ ಸಂದರ್ಶನಕ್ಕೆ ಹಾಜರಾಗುವಾಗ ಹೊತ್ತು ಮೀರಬಹುದೆಂಬ ಅನುಮಾನವೇನಾದರೂ ನಿಮಗಿದ್ದಲ್ಲಿ, ಅದರ ಬಗ್ಗೆ ಸಂಬಂಧಿಸಿದ ವ್ಯಕ್ತಿಗೆ ನೀವು ಈಗಾಗಲೇ ಮನವರಿಕೆ ಮಾಡಿಕೊಟ್ಟಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಆದರೂ ಕೂಡ, ಸಾಧ್ಯವಾದಷ್ಟು ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಸಂದರ್ಶನದ ಸ್ಥಳವನ್ನು ತಲುಪುವಂತೆ ನೋಡಿಕೊಳ್ಳಿರಿ.

ವೇತನ ಹಾಗೂ ಸವಲತ್ತುಗಳ ಕುರಿತ ಚರ್ಚೆ
ಸಂದರ್ಶನಕ್ಕೆ ಸಂಬಂಧಿಸಿದ ಹಾಗೆ ಇರುವ ಅತ್ಯುಪಯುಕ್ತವಾದ ಒಂದು ಸೂತ್ರವೇನೆಂದರೆ, ನೀವು ಸಂದರ್ಶನವನ್ನು ನೀಡುತ್ತಿರುವ ಹುದ್ದೆಗೆ ದೊರಕಬಹುದಾದ ವೇತನ ಹಾಗೂ ಸವಲತ್ತುಗಳ ಕುರಿತು ಸರಿಯಾಗಿ ಅರ್ಥೈಸಿಕೊಂಡಿರುವುದು. ಇದಕ್ಕೆ ಸ೦ಬ೦ಧಿಸಿದ ಹಾಗೇ ಸ೦ದರ್ಶನಕಾರರೇನಾದರೂ ಪ್ರಶ್ನಿಸಿದಲ್ಲಿ, ಒಮ್ಮೆಲೇ ಯಾವುದೋ ಒ೦ದು ತೀರ್ಮಾನಕ್ಕೆ ಬ೦ದುಬಿಡಬೇಡಿರಿ. ಈ ವಿಚಾರದಲ್ಲಿ ಸ೦ಸ್ಥೆ ಹಾಗೂ ಸ೦ಸ್ಥೆಯ ನಿಯಮಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವುದು ಸಹಾಯಕವಾಗುತ್ತದೆ.

ಮೊಬೈಲ್ ಕರೆ
ನಿಮ್ಮ ಸಂದರ್ಶನವನ್ನು ಹಾಳು ಮಾಡಬಹುದಾದ ಅತೀ ಸಾಮಾನ್ಯವಾದ ತಪ್ಪುಗಳಲ್ಲಿ ಇದೂ ಒಂದು. ಸoದರ್ಶನಕ್ಕಿoತಲೂ ಮಿಗಿಲಾದದ್ದು ಬೇರೇನೂ ಇಲ್ಲವೆಂಬುದನ್ನು ಸಂದರ್ಶನಕಾರರಿಗೆ ನೀವು ಮೊದಲು ಮನವರಿಕೆ ಮಾಡಿಕೊಡಬೇಕು. ಸಂದರ್ಶನದ ಕೊಠಡಿಯನ್ನು ಪ್ರವೇಶಿಸುವುದಕ್ಕೆ ಮೊದಲು ನಿಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿರಿ. ಒಂದು ವೇಳೆ ನೀವೇನಾದರೂ ಈ ವಿಚಾರವನ್ನು ಮರೆತಿದ್ದು, ಸಂದರ್ಶನದ ವೇಳೆ ನಿಮ್ಮ ಮೊಬೈಲ್ ಫೋನ್ ರಿಂಗಣಿಸಿದರೆ, ಸಂದರ್ಶಕರಲ್ಲಿ ಅದರ ಬಗ್ಗೆ ಮನ್ನಿಸುವಂತೆ ಕೇಳಿಕೊಂಡು ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿರಿ.

ನೀವು ತಿಳಿದಿರದ ಫೇಸ್‌ಬುಕ್‌ನ 10 ಆಶ್ಚರ್ಯಕರ ಸಂಗತಿಗಳಿವು

ಹಿಂದಿನ ಅಥವಾ ಈಗಿನ ಉದ್ಯೋಗದಾತರ ಬಗ್ಗೆ ಕೆಟ್ಟದಾಗಿ ಮಾತನಾಡುವುದು
ನಿಮ್ಮ ಹಿಂದಿನ ಅಥವಾ ಈಗ ನಿಮಗೆ ಉದ್ಯೋಗ ನೀಡಿರುವ ಉದ್ಯೋಗದಾತರು ಅದೆಷ್ಟೇ ಕೆಟ್ಟವರು ಅಥವಾ ಒರಟರಾಗಿರಬಹುದು. ಆದರೆ, ಆ ನಿಮ್ಮ ಅನುಭವವನ್ನು ಸಂದರ್ಶನದ ವೇಳೆಯಲ್ಲಿ ಹಂಚಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಹಾಗೊಂದು ವೇಳೆ ನೀವೇನಾದರೂ ಅಂತಹ ಭಾವನೆಯನ್ನು ವ್ಯಕ್ತಪಡಿಸಿದಲ್ಲಿ, ನೀವು ಈ ಸಂಸ್ಥೆಯಲ್ಲಿಯೂ ಕೂಡ ಅಂತಹ ದುರ್ವರ್ತನೆಯನ್ನು ತೋರಿಸುವವರೋ ಏನೋ ಎಂಬ ಭಾವನೆಯನ್ನು ಸಂದರ್ಶಕರು ತಳೆಯುವಂತಾಗುತ್ತದೆ. ಉದ್ಯೋಗ ಸಂದರ್ಶನದ ಕುರಿತಂತೆ ಒಂದು ಉತ್ತಮವಾದ ಸೂತ್ರವೇನೆoದರೆ, ನಿಮ್ಮ ಹಿಂದಿನ ಉದ್ಯೋಗದಾತರ ಕುರಿತು ಮಾತನಾಡದೇ ಇರುವುದು ಅಥವಾ ಮಾತನಾಡಲೇ ಬೇಕೆಂದಿದ್ದರೆ ಅವರ ಕುರಿತಾದ ಒಳ್ಳೆಯ ಅಂಶಗಳ ಬಗ್ಗೆಯೇ ಹೇಳುವುದು.

ಅತಿಯಾಗಿ ಮಾತನಾಡುವುದು ಅಥವಾ ಅತೀ ಕಡಿಮೆ ಮಾತನಾಡುವುದು
ನಿಮ್ಮ ಸಂದರ್ಶನವನ್ನು ಹಾಳುಗೆಡವಬಹುದಾದ ಸಾಮಾನ್ಯವಾದ ಕಾರಣಗಳಲ್ಲೊಂದು ಯಾವುದೆಂದರೆ, ಸಂದರ್ಶನದ ಕೊಠಡಿಯಲ್ಲಿ ನಿಮ್ಮನ್ನು ಹೊರತಾಗಿ ಉಳಿದವರೆಲ್ಲರೂ ಮೌನವಾಗಿರುವಂತೆ ಆಗುವುದು. ಸಾಧ್ಯವಾದಷ್ಟು ಸಂತುಲಿತವಾದ ಸoಭಾಷಣೆಯಿರುವಂತೆ ನೋಡಿಕೊಳ್ಳಿರಿ. ಅದೇ ಕಾಲಕ್ಕೆ, ಏನನ್ನು ಕೇಳಿದಾಗಲೂ ತುಟಿ ಬಿಗಿದುಕೊoಡವರoತೆ ಮೌನವಾಗಿರುವುದೂ ಸಲ್ಲದು. ಹೀಗೆ ಮಾಡುವುದರಿಂದ, ನೀವು ನಿಮಗೆ ಒದಗಲಿರುವ ಉದ್ಯೋಗಾವಕಾಶದ ಬಗ್ಗೆ ಅoತಹ ಆಸಕ್ತಿಯನ್ನು ಹೊಂದಿಲ್ಲವೆಂಬ ಭಾವನೆಯನ್ನು ಸಂದರ್ಶಕರಲ್ಲಿ ಮೂಡಿಸುತ್ತದೆ.

ವೇಷಭೂಷಣ
ಸಂಸ್ಥೆಯ ಕಟ್ಟುಪಾಡುಗಳಿಗೆ ಯೋಗ್ಯವಾದ ರೀತಿಯಲ್ಲಿ ಶಿಸ್ತಿನ ಉಡುಗೆತೊಡುಗೆಗಳನ್ನು ಧರಿಸಿಕೊoಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ಇದರ ಕುರಿತಾದ ಮಾಹಿತಿಯು ನಿಮಗೆ ಸುಲಭವಾಗಿ ಅಂತರ್ಜಾಲದಲ್ಲಿಯೇ ದೊರೆಯುತ್ತದೆ. ಅತೀ ಗಾಢವಾದ ಬಣ್ಣಗಳುಳ್ಳ ಯಾವುದೇ ದಿರಿಸುಗಳನ್ನು ಧರಿಸಬೇಡಿರಿ. ಅದರ ಬದಲಿಗೆ ಕಣ್ಣುಗಳಿಗೆ ತಂಪೆರೆಯುವ ಉಡುಗೆಯನ್ನು ಧರಿಸಿರಿ. ನಿಮ್ಮ ಕೇಶರಾಶಿಯನ್ನು ಓರಣವಾಗಿರಿಸಿಕೊಳ್ಳುವುದೂ ಕೂಡ ವೇಷಭೂಷಣದ ಒಂದು ಭಾಗವಾಗಿದೆ ಹಾಗೂ ಸಂದರ್ಶಕರು ಇವೆಲ್ಲವನ್ನೂ ಗಮನಿಸುತ್ತಾರೆಂಬುದನ್ನು ಮರೆಯಬೇಡಿರಿ.

English summary

6 Mistakes That Can Ruin Your Interview

Getting a job is indeed a blessing. There are many factors that play a role here. Initially, you need to get your resume built; this contains a summary of you, your hobbies, experience, Unfortunately, there are many candidates who fail to make the interview session a success, not because they are incapable
Story first published: Tuesday, September 16, 2014, 10:35 [IST]
X
Desktop Bottom Promotion