For Quick Alerts
ALLOW NOTIFICATIONS  
For Daily Alerts

ಮಲೇಶಿಯಾ ವಿಮಾನದಂತೆ ಸುಳಿವೇ ಸಿಕ್ಕದ 6 ಕಾಣೆಯಾದ ವಿಮಾನಗಳು!

|

ಮಾರ್ಚ್ 8 ರಂದು ಕಣ್ಮರೆಯಾಗಿ ಜಗತ್ತನ್ನೇ ಬೆಚ್ಚಿ ಬೀಳಿಸಿದ ಮಲೇಶಿಯಾ ವಿಮಾನದಂತೆ ಕೆಲವೊಂದು ಇಂತಹ ಘಟನೆಗಳೇ ಜಗತ್ತಿನಾದ್ಯಂತ ನಡೆದಿದೆ. ಮಲೇಶಿಯಾ ವಿಮಾನದಂತೆ ಸುಳಿವೇ ಸಿಕ್ಕದೆ ಕಣ್ಮರೆಯಾದ ವಿಮಾನಗಳ ದೃಷ್ಟಾಂತಗಳು ನಮ್ಮ ಕಣ್ಣೆದುರೇ ಇದೆ. ಇಂದು ಬೋಲ್ಡ್ ಸ್ಕೈ ಇತಿಹಾಸದ ಆಳಕ್ಕೆ ಇಳಿದು ಮಿಸ್ಸಿಂಗ್ ಪ್ಲೇನ್‌ಗಳ ಪಟ್ಟಿ ಮಾಡಲು ಹೊರಟಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮನುಷ್ಯನ ಮರಣಾನಂತರ ನಡೆಯುವ 5 ವಿಚಿತ್ರಗಳು

ಮಲೇಶಿಯಾ ಏರ್‌ಲೈನ್ಸ್ ಫ್ಲೈಟ್ ಎಮ್‌ಎಚ್ 370 ಈಗ ಕಾಣೆಯಾದ ವಿಮಾನಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ಶನಿವಾರ ಕೌಲಾಲಂಪುರದಿಂದ ಹೊರಟ ಮಲೇಶಿಯಾ ಏರ್‌ಲೈನ್ಸ್‌ಗೆ ನಂತರ ಏನು ಸಂಭವಿಸಿತೆಂಬುದು ಇಂದಿಗೂ ಯಕ್ಷ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.:

ಕೆಲವೊಂದು ಕಾಣೆಯಾಗಿರುವ ವಿಮಾನಗಳು ಇಲ್ಲಿದೆ

ಅಮೇಲಿಯಾ ಇಯರ್‌ಹಾರ್ಟ್:

ಅಮೇಲಿಯಾ ಇಯರ್‌ಹಾರ್ಟ್:

ಈಕೆ ಸಾಹಸಿ ಪೈಲಟ್ ಆಗಿದ್ದರು. ಆಕೆ ಪೆಸಿಫಿಕ್ ಸಮುದ್ರದ ಮೇಲೆ ವಿಮಾನ ಚಲಾಯಿಸುತ್ತಿರುವಾಗ ಗಾಳಿಯಲ್ಲಿ ಒಮ್ಮೆಲೆ ವಿಮಾನ ಮರೆಯಾಯಿತು. ಇದುವರೆಗೂ ಆಕೆಯ ಯವುದೇ ಸುಳಿವಿಲ್ಲ ಮತ್ತು ಏರ್‌ಕ್ರ್ಯಾಶ್ ಆದ ಯಾವುದೇ ಮಾಹಿತಿ ದೊರಕಿಲ್ಲ.

ಟೈಗರ್ ಲೈನ್ ಫ್ಲೈಟ್:

ಟೈಗರ್ ಲೈನ್ ಫ್ಲೈಟ್:

ಟೈಗರ್ ಲೈನ್ ಫ್ಲೈಟ್‌ಗೂ ಇದೇ ದುರ್ಗತಿ ಸಂಭವಿಸಿತ್ತು. 93 ಸೇನಾ ಸಿಬ್ಬಂದಿಗಳು ಹಾಗೂ 3 ದಕ್ಷಿಣ ವಿಯೇಟ್ನಾಮೀಸ್ ಅನ್ನು ಹೊತ್ತುಯ್ಯುತ್ತಾ ಪೆಸಿಫಿಕ್ ಓಶಿಯನ್ ಮೇಲೆ ಹಾರುತ್ತಿದ್ದ ಈ ವಿಮಾನ ಒಮ್ಮೆಲೆ ಕಣ್ಮರೆಯಾದದ್ದು ಮಾತ್ರ ಇಂದಿಗೂ ನಿಗೂಢವಾಗಿ ಉಳಿದಿದೆ. ವಿಮಾನಕ್ಕೆ ಬೆಂಕಿ ಇಲ್ಲವೇ ಅದು ಸಮುದ್ರಕ್ಕೆ ಬಿದ್ದಂತಹ ಯಾವುದೇ ಕುರುಹು ಸಿಕ್ಕದೇ ಇದ್ದದ್ದು ಕಣ್ಮರೆಯಾದ್ದನ್ನು ಸಾಬೀತುಪಡಿಸಿತು.

ಏರ್ ಫ್ರಾನ್ಸ್ ಫ್ಲೈಟ್ 447:

ಏರ್ ಫ್ರಾನ್ಸ್ ಫ್ಲೈಟ್ 447:

ವಿಮಾನ ಕಣ್ಮರೆಯಾದ ಇನ್ನೊಂದು ಉದಾಹರಣೆ ಇದಾಗಿದೆ. ಏರ್ ಫ್ರಾನ್ಸ್ 447 ಬ್ರೆಜಿಲಿಯನ್ ಏರ್‌ಸ್ಪೇಸ್‌ನಿಂದ ಸೆನೆಗಲ್ ಏರ್‌ಸ್ಪೇಸ್ ಅನ್ನು ಪ್ರವೇಶಿಸುತ್ತಿದ್ದಂತೆ ಒಮ್ಮೆಲೇ ಏರ್ ಟ್ರಾಫಿಕ್ ಕಂಟ್ರೋಲ್‌ನೊಂದಿಗಿನ ಎಲ್ಲಾ ಸಂಪರ್ಕಗಳನ್ನು ವಿಮಾನ ಕಳೆದುಕೊಂಡಿತು. ಒಮ್ಮೆಲೇ ವಿಮಾನಕ್ಕೆ ಏನಾಯಿತು ಎಂಬುದು ಯಾರಿಗೂ ತಿಳಿಯಲಿಲ್ಲ. ಅಟ್ಲಾಂಟಿಕ್ ಓಶಿಯನ್‌ನಲ್ಲಿ ಯಾವುದೇ ಕುರುಹನ್ನು ಬಾಕಿ ಮಾಡದೇ ಈ ವಿಮಾನ ಕಣ್ಮರೆಯಾಯಿತು.

ಬರ್ಮುಡಾದ ಮೇಲೆ ಅದೃಶ್ಯ:

ಬರ್ಮುಡಾದ ಮೇಲೆ ಅದೃಶ್ಯ:

ಬರ್ಮುಡಾ ಟ್ರಿಯಾಂಗಲ್ ಅದರ ಶಬ್ಧಕ್ಕೆ ನಿಮ್ಮಲ್ಲಿ ಚಳಿ ಹಿಡಿಯುವಂತೆ ಮಾಡುತ್ತದೆ. ಫ್ಲೈಟ್ 19 ಇದುವರೆಗೂ ಯಾವುದೇ ಮಾಹಿತಿ ದೊರೆಯದ ಕಾಣೆಯಾದ ವಿಮಾನವಾಗಿದೆ. ಜೊತೆಗೆ ಐದು ವಿಮಾನಗಳೂ ಕಣ್ಮರೆಯಾದದ್ದು ಬರ್ಮುಡಾ ಟ್ರಿಯಾಂಗಲ್ ಮೇಲೆ. ಕಣ್ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಈ ಐದು ವಿಮಾನಗಳು ಅದೃಶ್ಯಗೊಂಡಿವೆ.

ಸ್ಟಾರ್ ಡಸ್ಟ್ ಫ್ಲೈಟ್:

ಸ್ಟಾರ್ ಡಸ್ಟ್ ಫ್ಲೈಟ್:

ಸ್ಟಾರ್ ಡಸ್ಟ್ ವಿಮಾನದ ಕಥೆ ನಿಮ್ಮನ್ನು ಹೆದರಿಕೆಯಿಂದ ಕಿರುಚುವಂತೆ ಮಾಡಬಹುದು. ಏಂಡಸ್ ಪರ್ವತದ ಮೇಲೆ ಈ ವಿಮಾನ ಕಣ್ಮರೆಯಾಯಿತು. ಯಾವುದೇ ಕುರುಹನ್ನು ಉಳಿಸದೇ ಒಮ್ಮಿಂದೊಮ್ಮಲೇ ಕಣ್ಮರೆಯಾದ ವಿಮಾನ ಹೇಗೆ ಕಣ್ಮರೆಯಾಯಿತು ಎಂಬ ಕೂತೂಹಲವನ್ನು ಭಯವನ್ನು ಹಾಗಯೇ ಬಿಟ್ಟು ಹೋಯಿತು.

ಮಲೇಶಿಯಾ ಏರ್‌ಲೈನ್ಸ್ ಫ್ಲೈಟ್:

ಮಲೇಶಿಯಾ ಏರ್‌ಲೈನ್ಸ್ ಫ್ಲೈಟ್:

ದಕ್ಷಿಣ ಚೀನಾ ಸಮುದ್ರದ ಕತ್ತಲೆಯಲ್ಲಿ ಮಾರ್ಚ್ 8 ರಂದು ಈ ವಿಮಾನ ಕಣ್ಮರೆಯಾಯಿತು. ಏರ್‌ಕ್ರಾಫ್ಟ್‌ನ ಯಾವುದೇ ಉಪಕರಣಕ್ಕೂ ಈ ವಿಮಾನವನ್ನು ಇದುವೆಗೂ ಕಂಡುಹಿಡಿಯಲಾಗದೇ ಇರುವುದು ವಿಪರ್ಯಾಸವೇ ಸರಿ. ಶೋಧನೆ ಮುಂದುವರಿಯುತ್ತಿದೆ ಈ ಮಿಸ್ಸಿಂಗ್ ಫ್ಲೈಟ್‌ನ ಯಾವುದಾದರೂ ಮಾಹಿತಿ ಲಭ್ಯವಾಗಬಹುದೆಂಬುದು ನಮ್ಮ ಆಶಯವಾಗಿದೆ.

ಇಂಗ್ಲೀಷ್‌ನಲ್ಲಿ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: 6 Missing Planes Never Found
English summary

6 Missing Planes Never Found

Just like the Malaysian plane which has been missing since March 8 and no signs of it anywhere, there have been similar instances in the past too.Apart from the Malaysian airplane which went off radar on March 8, there are five more planes which have had an uncanny resemblance.
X
Desktop Bottom Promotion