Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೈಜತೆಯ ಅನುಭವವನ್ನು ನೀಡುವ 15 ಕಾರ್ಟೂನ್ ಪಾತ್ರಗಳು
ನಾವು ಚಿಕ್ಕವರಿದ್ದಾಗ ಪತ್ರಿಕೆಗಳಲ್ಲಿ ವಾರಕ್ಕೊಮ್ಮೆ ಬರುತ್ತಿದ್ದ ಚಿತ್ರರೂಪದ ಕಾರ್ಟೂನುಗಳು ಮನರಂಜಿಸುತ್ತಿದ್ದವು. ರಾಮು ಮತ್ತು ಶ್ಯಾಮು, ಮಜನೂ ರಾಮನ್ ಮೊದಲಾದ ಪಾತ್ರಗಳು ನಮ್ಮಲ್ಲಿ ನಗೆಯುಕ್ಕಿಸುತ್ತಿದ್ದವು. ಸುಮಾರು ತೊಂಭತ್ತರ ದಶಕದ ಬಳಿಕ ಆಗಮಿಸಿದ ಉಪಗ್ರಹ ಟೀವಿಯ ಮೂಲಕ ವಿದೇಶಗಳ ಕಾರ್ಟೂನುಗಳು ಸಹಾ ನಮ್ಮ ಟೀವಿ ಪರದೆಯಲ್ಲಿ ಮೂಡಿಬಂದು ಜನಪ್ರಿಯತೆಯನ್ನು ಗಳಿಸತೊಡಗಿದವು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಕಾರ್ಟೂನುಗಳನ್ನು ಎಡೆಬಿಡದಂತೆ ನೋಡುವಲ್ಲಿ ನಿರತರಾಗಿರುವ ಮೋಡಿ ಮಾಡಿದವು.
ಇಂದು ಆಧುನಿಕ ತಂತ್ರಜ್ಞಾನದ ಮೂಲಕ ಹಲವು ಹೊಸ ಪಾತ್ರಗಳು ಹೊಸ ಅವತಾರದೊಡನೆ ಬಂದರೂ ಹಳೆಯ ಪಾತ್ರಗಳು ಇಂದಿಗೂ ಹಿಂದಿನಂತೆಯೇ ಮನರಂಜಿಸುತ್ತಿವೆ. ಯಾವಾಗ ನೋಡಿದರೂ ತಮ್ಮ ಬಾಲ್ಯವನ್ನು ನೆನಪಿಸುವ ಈ ಪಾತ್ರಗಳು ಅಮರವಾಗಿವೆ. ನಮ್ಮ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿರುವ ಈ ಪಾತ್ರಗಳಲ್ಲಿ ಪ್ರಮುಖವಾದ ಹದಿನೈದು ಪಾತ್ರಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಜೀನಿ
ಅರೇಬಿಯನ್ ನೈಟ್ಸ್ ಎಂಬ ಕಥಾರೂಪಕದಲ್ಲಿ ಅಲ್ಲಾವುದ್ದೀನನಿಗೆ ಸಿಕ್ಕ ಅದ್ಭುತ ದೀಪದ ಮೂಲಕ ಪ್ರಕಟವಾಗುವ ಜೀನಿ ಎಲ್ಲರ ಮನಗೆದ್ದಿರುವ ಭೂತವಾಗಿದೆ. ತನ್ನ ಗುಲಾಮನಾಗಿರುವ ಭೂತದ ಮೂಲಕ ಎಷ್ಟೋ ಐಶ್ವರ್ಯವನ್ನು ಪಡೆದು ಆರಾಮವಾಗಿರುವ ಬದಲು ಬಡಜನರಿಗೆ ನೆರವಾಗಿ ಸುಖದುಃಖಗಳಲ್ಲಿ ಭಾಗಿಯಾಗುವ ಬಡಹುಡುಗ ಪಾತ್ರವಾದ ಅಲ್ಲಾವುದ್ದೀನನ್ನು ಜೀನಿ ಎಂಬ ಭೂತವನ್ನೂ ಸೇರಿಸಿ ಎಲ್ಲರೂ ಇಷ್ಟಪಡುತ್ತಾರೆ. ಕಲ್ಪನೆಗೂ ನಿಲುಕದ ಕಮಾಲುಗಳನ್ನು ಚಿಟಿಕೆ ಹೊಡೆದು ಸಾಧಿಸುವ ಜೀನಿಯ ಚಮತ್ಕಾರಗಳು ಮಕ್ಕಳ ಮನಗೆಲ್ಲುತ್ತವೆ.

ಹಕ್ಯುಲೀಸ್
ವಿಶ್ವದ ಅತ್ಯಂತ ಬಲಶಾಲಿಯಾದ ಹರ್ಕ್ಯುಲಿಸ್ ಜಗತ್ತನ್ನೇ ಜಯಿಸುವ ಮಹತ್ವಾಕಾಂಕ್ಷಿಯಾಗಿರುತ್ತಾನೆ. ವಿಶ್ವಕ್ಕೆ ಎದುರಾಗುವ ಕಂಟಕಗಳನ್ನು ತನ್ನ ದೈತ್ಯಬಲದಿಂದ ಮಣಿಸುವ ಹರ್ಕ್ಯುಲೀಸ್ ತನ್ನ ಪ್ರಿಯತಮೆ ಮೆಗ್ ಳ ಪ್ರೀತಿಯನ್ನು ಪಡೆಯಲು ಸೋಲುತ್ತಾನೆ. ವಿಶ್ವದಲ್ಲಿ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ಎಂಬ ಸತ್ಯವನ್ನು ಈ ಮೂಲಕ ತಿಳಿಸುವ ಹರ್ಕ್ಯುಲೀಸ್ ಮಕ್ಕಳ ಪ್ರಿಯ ಪಾತ್ರನಾಗಿದ್ದಾನೆ.

ಟಾಮ್ ಮತ್ತು ಜೆರ್‍ರಿ
ಬಲಹೀನನಾದ ಪುಟ್ಟ ಇಲಿ ಜೆರ್‍ರಿಯನ್ನು ಗೋಳು ಹೊಯ್ದುಕೊಳ್ಳುವ ಬಲಶಾಲಿ ಟಾಂ ಅದರಿಂದ ಪಾರಾಗಲು ಜೆರ್‍ರಿ ಅನುಸರಿಸುವ ಉಪಾಯಗಳು ಮಕ್ಕಳಿಂದ ಹಿರಿಯರವರೆಗೆ ಎಲ್ಲರನ್ನೂ ನಗೆಗಡಲಲ್ಲಿ ಮುಳುಗಿಸುತ್ತದೆ. ಇತ್ತೀಚೆಗೆ ಈ ಪಾತ್ರಗಳನ್ನು ಮಾತನಾಡುವಂತೆ ಪ್ರಸ್ತುತಪಡಿಸಿರುವ ಚಲನಚಿತ್ರವೇ ಈ ಜೋಡಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಪಾಪಾಯ್
ಪೋಪಾಯ್ ಅಥವಾ ಪಾಪಾಯ್ ಎಂದು ಭಿನ್ನರೀತಿಯಲ್ಲಿ ಕರೆಯಲ್ಪಡುವ ಈ ಯುವ ನಾವಿಕ ತನ್ನ ಪ್ರಿಯತಮೆ ಆಲಿವ್ ಆಯ್ಲ್ ಳ ಪ್ರೀತಿ ಪಡೆಯಲು ಮಾಡುವ ಸರ್ಕಸ್ಸುಗಳು, ಅದಕ್ಕೆ ತಡೆಯೊಡ್ಡುವ ಬ್ರೂಟಸ್ ಎಂಬ ದೈತ್ಯನಿಗೆ ಬುದ್ದಿಕಲಿಸಲು ಪಾಪಾಯ್ ನಿಗೆ ಪಾಲಕ್ ಸೊಪ್ಪನ್ನು ತಿಂದಾಕ್ಷಣ ಸಿಗುವ ಅಪಾರ ಶಕ್ತಿಯ ವರದಾನದ ಪ್ರಯೋಗ ಈ ಪಾತ್ರದ ವಿಶೇಷತೆಯಾಗಿದೆ. ಹಲವು ದೇಶಗಳಲ್ಲಿ ತೆರೆದಿರುವ ಪಾಪಾಯ್ ರೆಸ್ಟೋರೆಂಟುಗಳು ಈ ಪಾತ್ರದ ಜನಪ್ರಿಯತೆಗೆ ಸಾಕ್ಷಿಯಾಗಿವೆ.

ಸ್ಕ್ರೂಜ್ ಮ್ಯಾಕ್ ಡಕ್
ವಾಲ್ಟ್ ಡಿಸ್ನಿಯವರ ಕಲ್ಪನೆಯ ಕೂಸಾದ ಮಿಕ್ಕಿ ಮತ್ತು ಡೋನಾಲ್ಡ್ ಪಾತ್ರಗಳ ಜೊತೆಜೊತೆಗೇ ಡೋನಾಲ್ಡ್ ನ ಚಿಕ್ಕಪ್ಪನ ಪಾತ್ರವಾದ ಅಂಕಲ್ ಸ್ಕ್ರೂಜ್ ಸಹಾ ಮಕ್ಕಳಿಗೆ ಅಚ್ಚುಮೆಚ್ಚಿನ ಪಾತ್ರವಾಗಿದೆ. ಆಗರ್ಭ ಶ್ರೀಮಂತನಾಗಿದ್ದರೂ ಪೈಸೆ ಪೈಸೆ ಉಳಿಸುವ ಲೋಭಿಯಾದ ಸ್ಕ್ರೂಜ್ ಮ್ಯಾಕ್ ಡಕ್ ಹಣ ಸಂಪಾದನೆಗಾಗಿ ಸಾಹಸಯಾತ್ರೆಗಳನ್ನೂ ಕೈಗೊಳ್ಳುತ್ತದೆ.

ಚಿಪ್ ಮತ್ತು ಡೇಲ್
ಡೋನಾಲ್ಡ್ ಡಕ್ ನಿಗೆ ತೊಂದರೆ ನೀಡುವಲ್ಲಿ ಸಿದ್ಧಹಸ್ತರಾದ ಚಿಪ್ ಮತ್ತು ಡೇಲ್ ಎಂಬ ಪುಟ್ಟ ಅಳಿಲುಗಳು ಮಕ್ಕಳ ಅಚ್ಚುಮೆಚ್ಚಿನ ಪಾತ್ರಗಳಾಗಿವೆ. ಈ ಜನಪ್ರಿಯತೆಯೇ ಇತ್ತೀಚೆಗೆ ಆಲ್ವಿನ್ ಅಂಡ್ ದ ಚಿಪ್ ಮಂಕ್ಸ್ ಎಂಬ ಚಲನಚಿತ್ರಗಳ ಸರಣಿಗೂ ಕಾರಣವಾಗಿದೆ.

ಪವರ್ ಪಫ್ ಗರ್ಲ್ಸ್
ನಾವು ಹುಡುಗರಿಗೇನು ಕಡಿಮೆ ಎಂಬ ಮನೋಭಾವನೆಯನ್ನು ಪುಟ್ಟ ಹುಡುಗಿಯರಲ್ಲಿ ಬಿತ್ತುವ ಈ ಮೂರು ಹುಡುಗಿಯರು ವಿಶೇಷವಾಗಿ ಹೆಣ್ಣುಮಕ್ಕಳಿಗೆ ಪ್ರಿಯರಾದ ಪಾತ್ರವಾಗಿದ್ದಾರೆ. ಪ್ರತಿಭಾವಂತ ವಿಜ್ಞಾನಿಯ ಮೂವರು ಹೆಣ್ಣುಮಕ್ಕಳಾದ ಬ್ಲಾಸಮ್, ಬಬ್ಬಲ್ಸ್ ಮತ್ತು ಬಟರ್ ಕಪ್ ರಿಗೆ ವಿಶೇಷವಾದ ಶಕ್ತಿ ಲಭಿಸಿರುತ್ತದೆ. ಅವರು ಈ ಶಕ್ತಿಯನ್ನು ಉಪಯೋಗಿಸಿ ಟೌನ್ಸ್ ವಿಲ್ಲೇ ಪಟ್ಟಣಕ್ಕೆ ಎದುರಾಗುವ ಕಂಟಕಗಳನ್ನು ತೊಡಗಿಸಿ ಮೇಯರ್ ರ ಕೃಪೆಗೆ ಪಾತ್ರರಾಗುತ್ತಾರೆ. ಇದು ಹುಡುಗಿಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಫ್ರೆಡ್ ಫ್ಲಿನ್ಸ್ ಟೋನ್
ಶಿಲಾಯುಗದ ಕಥೆಯಾದ ' ದ ಫ್ಲಿನ್ಸ್ ಟೋನ್ಸ್' ನ ಪ್ರಮುಖ ಪಾತ್ರಧಾರಿ ಫ್ರೆಡ್ ವಯಸ್ಕನಾದರೂ ಬೆಳೆಯದ ಬುದ್ದಿ ಆತನಿಗೆ ಎಷ್ಟೋ ತೊಂದರೆಗಳನ್ನು ತಂದಿರಿಸುತ್ತದೆ. ಇವನ ಭೋಳೀತನವನ್ನು ದುರುಪಯೋಗಿಸಿಕೊಳ್ಳುವ ಸ್ನೇಹಿತರಿಗೆ ತಿರುಗುಬಾಣವಾಗುವ ಪ್ರಸಂಗಗಳು ನಕ್ಕು ಹೊಟ್ಟೆ ಹುಣ್ಣಾಗಿಸುತ್ತವೆ. ಫ್ರೆಡ್ ನ ಕಾರಿನಲ್ಲಿ ಒಂದು ರೌಂಡು ಹೊಡೆಯಲು ಬರುವಿರಾ?

ಪ್ಲೂಟೋ
ಮಿಕ್ಕಿ ಮೌಸ್ ನೊಂದಿಗೇ ಆತನ ನೆಚ್ಚಿನ ನಾಯಿ ಪ್ಲೂಟೋ ಸಹಾ ಅಷ್ಟೇ ಜನಪ್ರಿಯತೆಯನ್ನು ಪಡೆದಿದೆ. ಚಾವಟಿಬಾಲದ, ಇಳಿಬಿದ್ದಿರುವ ಕಿವಿಯ ಪುಟ್ಟ ನಾಯಿಯನ್ನು ಡೋನಾಲ್ಡ್ ಡಕ್ ನಿಂದ ಹಿಡಿದು ಇತರರೂ ಗೋಳು ಹೊಯ್ದುಕೊಳ್ಳುವಾಗ ಮಿಕ್ಕಿ ಬಂದು ಸಂತೈಸಿ ಎದೆಗವಚಿಕೊಳ್ಳುವ ಮೂಲಕ ಎಲ್ಲರ ಹೃದಯ ಗೆಲ್ಲುತ್ತದೆ.

ಪಿಂಕ್ ಪ್ಯಾಂಥರ್
ಚಿರತೆ ಎಂದರೆ ಚುಕ್ಕೆಗಳ ಪ್ರಾಣಿ ಎಂಬ ನಂಬಿಕೆಗೆ ತದ್ವಿರುದ್ಧವಾಗಿ ಗುಲಾಬಿ ಬಣ್ಣದ ಈ ಪತ್ತೇದಾರ ತನ್ನ ಪಾತ್ರಕ್ಕಿಂತಲೂ ಪಾತ್ರಕ್ಕೆ ನೀಡಿದ ಪೂರಕ ಸಂಗೀತದ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ಪಾತ್ರ.

ಸ್ಕೂಬಿ ಡೂ
ದೈತ್ಯ ದೇಹಿಯಾಗಿದ್ದರೂ ಪುಕ್ಕಲ ಹೃದಯವನ್ನು ಪಡೆದಿರುವ ನಾಯಿ ಸ್ಕೂಬಿ ಡೂ. ತನ್ನ ಮಾಲಿಕ ಫ್ರೆಡ್ ಮತ್ತು ಅವರ ಸ್ನೇಹಿತರೊಂದಿಗೆ ಹಲವು ರಹಸ್ಯಗಳನ್ನು ಬಗೆಹರಿಸುವ ಸ್ಕೂಬಿ ಡೂ ಕೊಂಚ ಹೆದರಿಕೆಯಾದರೂ ಹೌಹಾರಿ ತನ್ನ ಮಾಲಿಕನ ಹಿಂದೆ ಅಡಗುವ ಶೈಲಿ ಮಕ್ಕಳಿಗೆ ಅಚ್ಚುಮೆಚ್ಚಿನದ್ದಾಗಿದೆ.

ಟ್ವೀಟಿ ಪೈ
ಟ್ವೀಟಿ ಎಂಬ ಗುಬ್ಬಚ್ಚಿ ಜಾತಿಯ ಹಳದಿ ಬಣ್ಣದ ಕ್ಯಾನರಿ ಹಕ್ಕಿ ಸುಮಾರು ೧೯೨೬ ರಿಂದಲೇ ಪುಟ್ಟಮಕ್ಕಳ ಪ್ರೀತಿಪಾತ್ರ ಹಕ್ಕಿಯಾಗಿದೆ. ಇದರ ಜನಪ್ರಿಯತೆ ಎಷ್ಟಿದೆ ಎಂದರೆ ಇಂದು ಲಭ್ಯವಿರುವ ದಿಂಬು, ಆಟಿಕೆ, ಪುಸ್ತಕದ ಚೀಲ ಮೊದಲಾದವುಗಳನ್ನು ಈ ಹಕ್ಕಿಯ ರೂಪದಲ್ಲಿ ನಿರ್ಮಿಸಲಾಗಿದೆ. ಈ ವಸ್ತುಗಳನ್ನು ಹೊಂದಲು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ.

ವಿನ್ನೀ ದ ಪೂಹ್
ಟೆಡ್ಡಿ ಎಂಬ ಮುದ್ದು ಕರಡಿಯಂತೆಯೇ ವಿನ್ನೀ ಸಹಾ ಒಂದು ಪುಟ್ಟ ಕರಡಿಯಾಗಿದೆ. ೧೯೨೮ ರಲ್ಲಿ ಕಪ್ಪು ಬಿಳುಪು ಚಿತ್ರಗಳಲ್ಲಿ ಮೂಡಿಬಂದ ವಿನ್ನೀ ಇಂದಿಗೂ ತನ್ನ ಬಾಲಿಶತನ ಮತ್ತು ಮುದ್ದಿನ ರೂಪದಿಂದ ಮಕ್ಕಳ ಮನಗೆದ್ದಿದೆ. ಮಾರುಕಟ್ಟೆಯಲ್ಲಿ ಇಂದಿಗೂ ಪೆನ್ನು, ಟಿಫಿನ್ ಬಾಕ್ಸ್, ಪುಸ್ತಕದ ಹೊರಗವಚ ಮೊದಲಾದವುಗಳಲ್ಲಿ ವಿನ್ನೀ ರಾಜಾಜಿಸುತ್ತಾನೆ. ಪ್ರತಿ ಚಿತ್ರದಲ್ಲಿಯೂ ಆತನಿಗೆ ಪ್ರಿಯವಾದ ಜೇನಿನ ಕುಡಿಕೆಯೊಂದು ಜೊತೆಯಲ್ಲಿರುವುದು ಒಂದು ಸ್ವಾರಸ್ಯವಾಗಿದೆ.

ರೋಡ್ ರನ್ನರ್ ಮತ್ತು ಬಗ್ಸ್ ಬನ್ನಿ
ಟಾಮ್ ಅಂಡ್ ಜೆರ್‍ರಿಯಂತೆಯೇ ರೋಡ್ ರನ್ನರ್ ಎಂಬ ಕೋಳಿಯನ್ನು ಗೋಳುಹೊಯ್ದುಕೊಳ್ಳುವ ಬಗ್ಸ್ ಬನ್ನಿ ಎಂಬ ಮೊಲದ ಕಥೆ ೧೯೬೮ ರಿಂದಲೂ ಮಕ್ಕಳನ್ನು ರಂಜಿಸುತ್ತಾ ಬಂದಿದೆ. ಅತಿ ವೇಗವಾಗಿ ಓಡುವ ರೋಡ್ ರನ್ನರ್ ಬರುವಾಗ ಎರಡು ಬಾರಿ ಹೊಡೆಯುವ ಹಾರನ್ನಿನ ಶಬ್ದ ಕೇಳಿದಾಕ್ಷಣ ಮಕ್ಕಳು ಎಲ್ಲಿದ್ದರೂ ಟೀವಿಯೆಡೆಗೆ ಓಡಿ ಬರುತ್ತಾರೆ.

ಡೋನಾಲ್ಡ್ ಡಕ್
ಮಿಕ್ಕಿ ಮೌಸ್ ನ ಜೊತೆಜೊತೆಗೇ ಬರುವ ಡೋನಾಲ್ಡ್ ಡಕ್ ಯಾವಾಗಲೂ ಏನಾದರೊಂದು ತೊಂದರೆಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿರುತ್ತಾನೆ. ಡೋನಾಲ್ಡ್ ನ ಪಾತ್ರ ಎಷ್ಟು ಜನಪ್ರಿಯವೋ ಅದಕ್ಕಿಂತ ಅದರ ಸ್ವರ ಹೆಚ್ಚು ಜನಪ್ರಿಯವಾಗಿದೆ. ಸುಲಭವಾಗಿ ಅನುಕರಣೆ ಮಾಡಲಾಗದ ಈ ಸ್ವರ ಕೇಳಿದಾಕ್ಷಣ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಟೀವಿಯೆಡೆಗೆ ಸೆಳಿಯುವ ಡೋನಾಲ್ಡ್ ಎಲ್ಲರ ಅಚ್ಚುಮೆಚ್ಚಿನ ಬಾತುಕೋಳಿಯಾಗಿದ್ದಾನೆ.



Click it and Unblock the Notifications


