For Quick Alerts
ALLOW NOTIFICATIONS  
For Daily Alerts

ವ್ಯಕ್ತಿತ್ವ ವಿಕಸನಕ್ಕಾಗಿ ಪರಿಣಾಮಕಾರಿ ಸಲಹೆಗಳು

|

ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಭಿನ್ನ ವ್ಯಕ್ತಿತ್ವವಿರುತ್ತದೆ. ಆದರೆ ಅದನ್ನು ನಾವು ಅರಿಯದೇ, ಚಿಕ್ಕಂದಿನಿಂದ ಹಿರಿಯರು ಮೂಡಿಸಿರುವ, ಜಾಹೀರಾತುಗಳು ನೀಡುವ ಸುಳ್ಳು ಮಾಹಿತಿಗಳಿಗೆ ಅನುಗುಣವಾಗಿ ನಡೆಯುತ್ತಾ ನಮ್ಮ ವ್ಯಕ್ತಿತ್ವದ ದಾರಿಯಿಂದ ದೂರವಾಗುತ್ತಾ ಬರುತ್ತಿದ್ದೇವೆ. ಉದಾಹರಣೆಗೆ ಈ ಕ್ರೀಮ್ ಉಪಯೋಗಿಸಿರಿ, ಗೌರವರ್ಣ ಪಡೆಯಿರಿ, ಹುಡುಗಿಯರು ನಿಮ್ಮ ಹಿಂದೆ ಬೀಳುತ್ತಾರೆ ಎಂದು ಜಾಹೀರಾತೊಂದು ಸಾರುತ್ತದೆ. ಅದನ್ನು ನಂಬಿ ಕ್ರೀಮ್ ಉಪಯೋಗಿಸಿ ಗೌರವರ್ಣ ಪಡೆದರೂ ಹುಡುಗಿಯರು ಆಕರ್ಷಿತವಾಗುವುದು ನಮ್ಮ ವ್ಯಕ್ತಿತ್ವಕ್ಕೇ ಹೊರತು ಗೌರವರ್ಣಕ್ಕೆ ಅಲ್ಲ. ಒಂದು ವೇಳೆ ಹಾಗಿದ್ದಿದ್ದರೆ ಭಾರತೀಯ ಅಷ್ಟೂ ತರುಣಿಯರು ರಶ್ಯನ್ ಯುವಕರ ಹಿಂದೆ ಬಿದ್ದಿರಬೇಕಾಗಿತ್ತು!

ಹೊಸ ಭಾಷೆಯನ್ನು ಕಲಿತರೆ ಉಂಟಾಗುವ 8 ಪ್ರಯೋಜನಗಳು

ಆದರೆ ನಿಮ್ಮ ವ್ಯಕ್ತಿತ್ವವನ್ನು ಪಡೆಯುವುದು ಹೇಗೆ? ಅಂತರ್ಜಾಲವನ್ನು ಜಾಲಾಡಿದರೆ ಸಾಕಷ್ಟು ಪ್ರಮಾಣದ ಮಾಹಿತಿ ದೊರಕುತ್ತದೆ. ಆದರೆ ಅದರಲ್ಲಿ ಯಾವ ಮಾಹಿತಿಯನ್ನು ಅಳವಡಿಸಿಕೊಳ್ಳಬೇಕು ಎಂಬುವುದು ಮಾತ್ರ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಮೊತ್ತ ಮೊದಲನೆಯದಾಗಿ ನಾವು ಯಾವ ತರಹದವರು ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಬನ್ನಿ ಇನ್ನಷ್ಟು ಮಾಹಿತಿಯನ್ನು ಮುಂದೆ ಓದಿ...

ಪರಿಣಾಮಕಾರಿ ಸಂವಹನ ಕಲೆಗೆ ಈ ಏಳು ಸೂತ್ರಗಳು ರಹದಾರಿ

ನಿಮ್ಮ ಸ್ವಂತ ತಪ್ಪುಗಳಿಂದ ಕಲಿತುಕೊಳ್ಳಿ

ನಿಮ್ಮ ಸ್ವಂತ ತಪ್ಪುಗಳಿಂದ ಕಲಿತುಕೊಳ್ಳಿ

ತಪ್ಪು ಮಾಡದ ಮಾನವರೇ ಇಲ್ಲ. ಆದರೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುವುದು ಮಾತ್ರ ಮೂರ್ಖರ ಲಕ್ಷಣ. ಒಂದು ನಗೆಹನಿಯಲ್ಲಿ ಸರ್ದಾರ್ ರಸ್ತೆಯಲ್ಲಿ ಬಿದ್ದಿದ್ದ ಬಾಳೆಹಣ್ಣಿನ ಸಿಪ್ಪೆ ನೋಡಿ ಹೀಗೆ ಯೋಚಿಸಿದನಂತೆ-ಛೇ, ಇವತ್ತು ಕೂಡ ಜಾರಿ ಬೀಳಬೇಕಾಯ್ತಲ್ಲಾ. ಆದುದರಿಂದ ನಮ್ಮಿಂದಾದ ತಪ್ಪುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹಾಗೂ ಅದನ್ನು ಮತ್ತೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಅತಿ ಅಗತ್ಯ.

ತಾತ್ಕಾಲಿಕ ಭಾವಪರವಶತೆ

ತಾತ್ಕಾಲಿಕ ಭಾವಪರವಶತೆ

ನಾವೆಲ್ಲರೂ ತಾತ್ಕಾಲಿಕವಾಗಿ ಭಾವುಕರಾಗುತ್ತೇವೆ. ಉದಾಹರಣೆಗೆ ಸ್ಮಶಾನ ವೈರಾಗ್ಯ, ಭಿಕ್ಷೆ ನೀಡುವುದು. ಈ ಭಾವುಕತೆಯನ್ನು ಭಿಕ್ಷುಕರು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತಾರೆ ಎಂದರೆ ಸಾಮಾನ್ಯವಾಗಿ ಅವರು ಕಾರ್ಮಿಕನೊಬ್ಬ ಒಂದು ದಿನದಲ್ಲಿ ಗಳಿಸಬಹುದಾದುದಕ್ಕಿಂತಲೂ ಹತ್ತು ಪಟ್ಟು ಹೆಚ್ಚುಹಣವನ್ನು ಕೆಲವೇ ಘಂಟೆಗಳಲ್ಲಿ ಗಳಿಸುತ್ತಾರೆ. ಅಮ್ಮಾ, ತಾಯೀ ಮೂರು ದಿನದಿಂದ ಊಟ ಮಾಡಿಲ್ಲಮ್ಮಾ.. ಎಂಬ ಆರ್ತನಾದ ನಿಮ್ಮನ್ನು ವಿಚಲಿತರನ್ನಾಗಿಸುತ್ತದೆ. ಪರಿಣಾಮವಾಗಿ ನಿಮ್ಮ ಜೇಬಿನಿಂದ ಒಂದು ರೂಪಾಯಿ ಸಂದಾಯವಾಗುತ್ತದೆ. ಆ ಭಿಕ್ಷುಕನ ಊಟಕ್ಕೆ ನೆರವಾದೆ ಎಂಬ ಭಾವನೆಯಿಂದ ಮನ ಪ್ರಫುಲ್ಲವಾಗುತ್ತದೆ. ಆದರೆ ನಿಜವಾಗಿ ನೋಡಿದರೆ ನಿಮ್ಮ ತಾತ್ಕಾಲಿಕ ಭಾವಪರವಶತೆಯನ್ನು ಆ ಭಿಕ್ಷುಕ ನಗದಾಸಿಕೊಂಡಿರುತ್ತಾನೆ. ಒಂದು ಪ್ರಯೋಗ ಮಾಡಿ ನೋಡಿ. ಮುಂದಿನ ಬಾರಿ ಭಿಕ್ಷುಕ ಬಂದಾಗ ಯಾವುದೇ ಭಾವಪರವಶತೆಯನ್ನು ತೋರದೆ ಒಂದು ಘಂಟೆಯ ಕಾಲ ಆ ಸ್ಥಳದ ಸುತ್ತ ಮುತ್ತ ಇರುವ ಕಸವನ್ನೆಲ್ಲಾ ಹೆಕ್ಕಿ ಸ್ವಚ್ಛಮಾಡಿದರೆ ನೂರು ರೂಪಾಯಿ ಕೊಡುವೆ ಎಂಬ ಪ್ರಲೋಭನೆಯನ್ನೊಡ್ಡಿ, ಭಿಕ್ಷುಕನ ಪ್ರತಿಕ್ರಿಯೆ ಗಮನಿಸಿ, ಬಳಿಕ ನಿರ್ಧರಿಸಿ.

ಸ್ವಚ್ಛತೆ, ನೈರ್ಮಲ್ಯ

ಸ್ವಚ್ಛತೆ, ನೈರ್ಮಲ್ಯ

ನಿಮ್ಮ ಬಳಿ ಬರುವ ವ್ಯಕ್ತಿ ದುರ್ವಾಸನೆ ಸೂಸುತ್ತಾ ಬಂದರೆ ನಿಮಗೆ ಸಹನೀಯವಾಗುತ್ತದೆಯೇ? ಇಲ್ಲ, ಇದೇ ಮಾತು ನಮಗೂ ಅನ್ವಯಿಸುತ್ತದೆ. ನಾವು ಪ್ರತಿದಿನವೂ, ಸಾಧ್ಯವಾದಷ್ಟು ಹೆಚ್ಚಿಗೆ ನೈರ್ಮಲ್ಯ, ಸ್ವಚ್ಛತೆಯನ್ನು ಪಾಲಿಸಬೇಕು. ಆದಷ್ಟು ಸ್ವಚ್ಛ ಉಡುಪುಗಳನ್ನೇ ತೊಡಬೇಕು, ನಮ್ಮನ್ನು ಸಂಪರ್ಕಿಸುವವರು ನಮ್ಮನ್ನು ನಮ್ಮ ಅತ್ಯುತ್ತಮ ರೂಪದಲ್ಲಿ, ಸ್ವಚ್ಛವಾಗಿ ನೋಡುವಂತಿರಬೇಕು. ಆಯಾ ಕಾಲಕ್ಕೆ ತಕ್ಕ ಉಡುಪುಗಳನ್ನು ತೊಡಬೇಕು.

ಉತ್ತಮ ಕೇಳುಗರಾಗಿರಿ

ಉತ್ತಮ ಕೇಳುಗರಾಗಿರಿ

ದೇವರು ಎರಡು ಕಿವಿಗಳನ್ನು ಒಂದು ಬಾಯಿಯನ್ನು ಏಕೆ ಕೊಟ್ಟ ಎಂದರೆ ಕಡಿಮೆ ಮಾತನಾಡಿ ಹೆಚ್ಚು ಕೇಳುವರಂತಾಗಿ ಎಂದು ಸುಭಾಷಿತವೊಂದು ಹೇಳುತ್ತದೆ. ನಾವೆಲ್ಲರೂ ನಮ್ಮ ಭಾವನೆಗಳನ್ನು ಇತರರಿಗೆ ಮುಟ್ಟಿಸುವ ಮೂಲಕ ಸಾರ್ಥಕತೆಯನ್ನು ಅನುಭವಿಸುತ್ತೇವೆ. ಇದರಲ್ಲಿ ಅತ್ಯಂತ ಸಮರ್ಪಕವಾದುದೆಂದರೆ ಮಾತನಾಡುವುದು ಹಾಗೂ ಎದುರಿನವರು ಕೇಳುವುದು. ನಾವು ಮಾತನಾಡುವವರಿಗೆ ಹೆಚ್ಚು ಅವಕಾಶ ಕೊಟ್ಟು ಹೆಚ್ಚು ಕೇಳುವವರಂತಾದರೆ ಅವರಿಂದ ಹೆಚ್ಚು ಹೆಚ್ಚು ಮಾಹಿತಿ ಪಡೆಯಬಹುದು. ಈ ಮಾಹಿತಿಗಳು ನಮ್ಮ ಮುಂದಿನ ಕೆಲಸಗಳಲ್ಲಿ ತುಂಬಾ ನೆರವಿಗೆ ಬರುವುವು.

ಪ್ರಗತಿಗಳ ಬಗ್ಗೆ ಸದಾ ಮಾಹಿತಿ ಪಡೆಯುತ್ತಿರಿ

ಪ್ರಗತಿಗಳ ಬಗ್ಗೆ ಸದಾ ಮಾಹಿತಿ ಪಡೆಯುತ್ತಿರಿ

ಯಾರೂ ನಮ್ಮಿಂದ ಕದಿಯಲಾರದ ಸಂಪತ್ತೆಂದರೆ ತಿಳಿವಳಿಕೆ, ಜ್ಞಾನ. ಆದರೆ ಈ ತಿಳಿವಳಿಕೆ, ಜ್ಞಾನ ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಪಡೆಯುತ್ತಲೇ ಇರುತ್ತದೆ. ಈ ಬದಲಾವಣೆಗಳನ್ನು ಗಮನಿಸಿ ಕೂಡಲೇ ನಮ್ಮನ್ನು ನಾವು ಆ ಮಟ್ಟಕ್ಕೇರಿಸಿಕೊಳ್ಳಬೇಕು. ನಮ್ಮ ಕ್ಷೇತ್ರದಲ್ಲಿ ನಮಗೆಲ್ಲಾ ಗೊತ್ತಿದೆ ಎಂಬ ಅಹಮ್ಮಿಕೆ ಸಲ್ಲದು. ಈ ಕ್ಷೇತ್ರದಲ್ಲಿ ಹೊಸತಾಗಿ ಬಂದವರಿಗೂ ನಮಗೆ ಗೊತ್ತಿಲ್ಲದ ವಿಷಯವಿರಬಹುದು. ಅವರಿಂದಲೂ ನಾವು ಕಲಿಯುತ್ತಿರಬೇಕು. ಅತ್ಯಂತ ಪ್ರಸ್ತುತವಾದ ತಿಳಿವಳಿಕೆ ಹಾಗೂ ಜ್ಞಾನವೇ ನಮ್ಮ ನಿಜವಾದ ಭಂಡಾರವಾಗಿದೆ. ಇಂದು ಅಂತರ್ಜಾಲ ಹಾಗೂ ಇತರ ಮಾಧ್ಯಮಗಳ ಮೂಲಕ ಜ್ಞಾನವನ್ನು ಪಡೆಯುವುದು ಸುಲಭವಾಗಿದೆ. ಈ ಮಾಧ್ಯಮಗಳನ್ನುಪಯೋಗಿಸಿಕೊಂಡು ನಮ್ಮ ಅರಿವನ್ನು ಇಂದಿನದ್ದಾಗಿಸಿಕೊಳ್ಳುತ್ತಾ ಹೋಗಬೇಕು.

ಜೀವನದಲ್ಲಿ ನೀವು ಎಲ್ಲಿದ್ದೀರಿ ಎಂದು ಗಮನಿಸುತ್ತಿರಿ

ಜೀವನದಲ್ಲಿ ನೀವು ಎಲ್ಲಿದ್ದೀರಿ ಎಂದು ಗಮನಿಸುತ್ತಿರಿ

ಜೀವನ ಕಳೆಯುತ್ತಿದ್ದಂತೆ ಯಾವ ಮಟ್ಟಕ್ಕೇರಿದ್ದೀರೆಂದು ಕಾಲಕಾಲಕ್ಕೆ ಮಾಪನ ಮಾಡಿಕೊಳ್ಳುತ್ತಿರಿ. ಜೀವನದ ಗುರಿ ಸಾಧಿಸಲು ನಮಗೆ ನಾವೇ ಕೆಲವೊಂದು ಘಟ್ಟಗಳನ್ನು ನಿರ್ಧರಿಸಿಕೊಳ್ಳಬೇಕು. ಈ ಅವಲೋಕನದಿಂದ ಆ ಘಟ್ಟವನ್ನು ನಾವು ಏರಿದ್ದೇವೆಯೇ, ಇಲ್ಲದಿದ್ದರೆ ಎಲ್ಲಿ ತಪ್ಪಿದ್ದೇವೆ, ಆ ತಪ್ಪನ್ನು ಸರಿಪಡಿಸಿಕೊಳ್ಳುವುದು ಹೇಗೆ? ಎಂದು ಪರಾಮರ್ಶಿಸುವ ಮೂಲಕ ಜೀವನದ ಗುರಿಯಿಂದ ವಿಚಲಿತರಾಗುವುದರಿಂದ ತಪ್ಪಿಸಿಕೊಳ್ಳಬಹುದು ಹಾಗೂ ಶೀಘ್ರವೇ ಗುರಿ ಸಾಧಿಸಬಹುದು. ನಿಮ್ಮದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರರನ್ನು ಗಮನಿಸಿ ಅವರೊಂದಿಗೆ ಹೋಲಿಸಿಕೊಳ್ಳುವ ಮೂಲಕ ಪರಾಮರ್ಶೆ ಸಾಧ್ಯ. ಒಂದು ವೇಳೆ ಅವರಿಂದಲೂ ತಪ್ಪಾಗುತ್ತಿದ್ದಲ್ಲಿ ಆ ತಪ್ಪನ್ನು ಅವರಿಗೆ ಅರಿಕೆ ಮಾಡಿಕೊಡುವ ಮೂಲಕ ಅವರ ವಿಶ್ವಾಸ ಮತ್ತು ಸ್ನೇಹವನ್ನು ಗಳಿಸಿ ಅವರಿಂದಲೂ ಹೆಚ್ಚಿನ ಸಹಕಾರವನ್ನು ಮುಂದಿನ ದಿನಗಳಲ್ಲಿ ಪಡೆಯಬಹುದು. ಆದರೆ ಒಂದು ವೇಳೆ ಹೋಲಿಕೆಯಲ್ಲಿ ತುಂಬಾ ಹಿಂದೆ ಬಿದ್ದಿರುವುದು ಮನವರಿಕೆಯಾದರೆ ಕಂಗೆಡಬಾರದು. ಮರಳಿಯತ್ನವ ಮಾಡಿ ಯಶಸ್ಸು ಸಾಧಿಸಬೇಕು.

ಉತ್ತಮ ಶಾರೀರ ಹೊಂದಿರುವುದು

ಉತ್ತಮ ಶಾರೀರ ಹೊಂದಿರುವುದು

ಆರೋಗ್ಯವೇ ಭಾಗ್ಯ ಎಂಬ ಗಾದೆಯಿದೆ. ಆರೋಗ್ಯವನ್ನು ಮಾನಸಿಕ ಹಾಗೂ ದೈಹಿಕ ಆರೋಗ್ಯ ಎಂದು ಎರಡು ಬಗೆಯಾಗಿ ತೆಗೆದುಕೊಳ್ಳಬೇಕು. ಎರಡೂ ಆರೋಗ್ಯಗಳನ್ನು ಸುಸ್ಥಿತಿಯಲ್ಲಿಡುವುದು ತುಂಬಾ ಅಗತ್ಯ. ಆರೋಗ್ಯವೇ ಇಲ್ಲದಿದ್ದಲ್ಲಿ ಸಾಧಿಸಿದ ಸಾಧನೆಗಳಿಗೆ ಬೆಲೆ ಏನು? ಚಿತ್ರನಟ ದೊಡ್ಡಣ್ಣ ರವರು ತಮ್ಮ ಸ್ಥೂಲಕಾಯದ ಬಗ್ಗೆ ಚಿಂತೆ ವ್ಯಕ್ತಪಡಿಸುತ್ತಾ ಒಂದು ಮಾತು ಹೇಳುತ್ತಾರೆ. ಅವರ ವೃತ್ತಿಜೀವನದ ಮೊದಲಿನಲ್ಲಿ ಗಳಿಸುತ್ತಿದ್ದ ಹಣ ಊಟಕ್ಕೂ ಸಾಲದೇ ಇದ್ದಾಗ ಅವರ ನೆಚ್ಚಿನ ಕಬ್ಬಿನ ಹಾಲು ಕುಡಿಯಲು ಸಾಧ್ಯವಾಗುತ್ತಿದ್ದಿರಲಿಲ್ಲ.

ಆದರೆ ವೃತ್ತಿಜೀವನದಲ್ಲಿ ಬೆಳೆದು ಹಣ ಸಂಪಾದಿಸುವ ವೇಳೆ ಆರೋಗ್ಯದ ಕಡೆ ಗಮನ ಕೊಡದೇ ಸ್ಥೂಲಕಾಯ ಆವರಿಸಿದ ಬಳಿಕ ಹಣವಿದ್ದರೂ ಒಂದು ಲೋಟ ಕಬ್ಬಿನ ಹಾಲು ಕುಡಿಯುವಂತಿಲ್ಲ. ಆದುದರಿಂದ ಅವರು ತಾವು ಏನೂ ಕುಡಿಯದೇ ಅಗತ್ಯವಿದ್ದವರಿಗೆ ನೆರವು ನೀಡಿ ಧನ್ಯತೆಯನ್ನು ಅನುಭವಿಸುತ್ತಿದ್ದಾರೆ. ನಮ್ಮ ಸುತ್ತಮುತ್ತಲ ಸಮಾಜದೊಂದಿಗೆ ಉತ್ತಮ ಒಡನಾಟ, ಮಾನವತೆಯನ್ನೆ ಮೆರೆಯುವುದರ ಮೂಲಕ ಮಾನಸಿಕ ಆರೋಗ್ಯದ ವೃದ್ಧಿಯಾದರೆ ನಿಯಮಿತ ವ್ಯಾಯಾಮ, ಉತ್ತಮ ಆಹಾರ, ನಿದ್ರೆಗಳ ಮೂಲಕ ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ನಿಜವಾದ ಸಂಪತ್ತಾಗಿದೆ.

ಒಮ್ಮೆಲೇ ತೀರ್ಮಾನಕ್ಕೆ ಬಂದುಬಿಡಬೇಡಿ

ಒಮ್ಮೆಲೇ ತೀರ್ಮಾನಕ್ಕೆ ಬಂದುಬಿಡಬೇಡಿ

ನಾವು ಎಷ್ಟೋ ವಿಷಯದಲ್ಲಿ ಪೂರ್ವಾಗ್ರಹ ಪೀಡಿತರಾಗಿದ್ದೇವೆ. ಆ ಮೂಲಕ ಎಷ್ಟೂ ವಿಷಯಗಳನ್ನು, ಜನರನ್ನು ಅರಿಯುವ ಮುನ್ನವೇ ತೀರ್ಪು ಕೊಟ್ಟುಬಿಡುತ್ತೇವೆ. ಮೇಲ್ನೋಟಕ್ಕೆ ಒಳ್ಳೆಯವರಂತೆ ಕಾಣುವ ವ್ಯಕ್ತಿಗಳೂ ಆಯಾ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ನೈಜಬಣ್ಣ ತೋರಿಸುತ್ತಾರೆ. ಅತಿವಿನಯಂ ಧೂರ್ತಲಕ್ಷಣಂ ಎಂಬ ಸುಭಾಷಿತವನ್ನು ಸದಾ ನೆನಪಿನಲ್ಲಿಡಿ. ಅಗತ್ಯವಿರುವವರಿಗೆ ಸಾಧ್ಯವಾದಷ್ಟು ಮಟ್ಟಿನ ಸಹಾಯವನ್ನು ನಿರಪೇಕ್ಷವಾಗಿ ನೀಡಿ. ಆದರೆ ಸಹಾಯ ಪಡೆಯುತ್ತಿರುವ ವ್ಯಕ್ತಿ ನಿಮ್ಮ ಉದಾರತೆಯ ತಪ್ಪು ಉಪಯೋಗ ಪಡೆದುಕೊಳ್ಳುತ್ತಿದ್ದಾನೆಯೇ ಎಂದು ಒರೆಹಚ್ಚಿ ನೋಡುವುದು ಒಳ್ಳೆಯದು.

English summary

11 Ways To Improve Your Personality

In this world of nearly 7 billion people, anybody would love to encounter a person with an awesome personality, isn't it? However, while we look at ways to improve your personality, we view things in a slightly different perspective in this article.
X
Desktop Bottom Promotion