Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದೇಶದ ಬಗ್ಗೆ ನಂಬಿಕೆ ಕಾಯ್ದುಕೊಳ್ಳುವ 10 ಅಂಶಗಳು
ಹೌದು ನಮ್ಮಲ್ಲಿ ಧಾರ್ಮಿಕ ಕಿತ್ತಾಟಗಳು ನಡೆಯುತ್ತವೆ, ಜನಸಂಖ್ಯೆ ಅತಿ ಹೆಚ್ಚಾಗಿದೆ ಮತ್ತು ಯಾವಾಗಲೂ ಉಗ್ರವಾದಿಗಳ ಭಯ ನಮ್ಮ ದೇಶಕ್ಕೆ ಇದ್ದೇ ಇದೆ. ಆದರೆ ಭಾರತ ಎಂದರೆ ಕೇವಲ ಇಷ್ಟೇನಾ? ಇಲ್ಲ ಇವೆಲ್ಲವುಗಳನ್ನು ಮೀರಿ ಭಾರತದಲ್ಲಿ ನಿಸ್ಸಂಶಯವಾಗಿ ಸಾಕಷ್ಟು ವಿಷಯಗಳಿವೆ.
ಈ ಹೇಳಿಕೆ ನಿಮಗೆ ಔಪಚಾರಿಕವಾಗಿ ಎಂದೆನಿಸಬಹುದು ಆದರೆ ಖಂಡಿತವಾಗಿ ಭಾರತದಲ್ಲಿ ಸಾಕಷ್ಟು ಹಿರಿಮೆಗಳಿವೆ, ಇದೊಂದು ಅದ್ಭುತವಾದ ರಾಷ್ಟ್ರ ಎಂಬುದನ್ನು ಸಾಬೀತುಪಡಿಸಲು ಈ ಕೆಳಗೆ ನೀಡಿರುವ ಮಾಹಿತಿಗಳೇ ಸಾಕು.
ಜೀವನದಲ್ಲಿ ಸತತ ಸೋಲು; 12 ಕಾರಣಗಳೇನು ಬಲ್ಲೀರಾ?

ದೊಡ್ಡ ಪ್ರಜಾಪ್ರಭುತ್ವ
ಭಾರತದಲ್ಲಿ ಹೊಸ ಸರ್ಕಾರ ನಿರ್ಮಿಸಲು ಮತ ಚಲಾಯಿಸುವವರ ಸಂಖ್ಯೆ ಪ್ರಪಂಚದ ಇತರ ರಾಷ್ಟ್ರಗಳು ಉದಾಹರಣೆಗೆ ಅಮೇರಿಕಾದ ಜನಸಂಖ್ಯೆಗಿಂತ ಅಧಿಕವಾಗಿದೆ. ನಮ್ಮ ಸರ್ಕಾರವನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಮತ್ತು ಪ್ರತಿ ಐದು ವರ್ಷಗಳಿಗೊಮ್ಮೆ ಬದಲಾಯಿಸುವ ಅವಕಾಶವನ್ನು ಭಾರತದಲ್ಲಿ ಪಡೆದಿದ್ದೇವೆ.

ಐಟಿ, ವಿಜ್ಞಾನ ಮತ್ತು ಆರ್ಥಿಕವಾಗಿ ಮುನ್ನುಗ್ಗುತ್ತಿದೆ
ಇನ್ನು ಸ್ವಲ್ಪ ವರ್ಷಗಳಲ್ಲಿ ಭಾರತವು ರಾಷ್ಟ್ರದಲ್ಲೇ ಅತಿ ಹೆಚ್ಚು ಪ್ರಾಬಲ್ಯ ಪಡೆಯಬಹುದು.ತಂತ್ರಜ್ಞಾನ ಮತ್ತು ವಿಜ್ಞಾನದಲ್ಲಿ ಇದು ಮುನ್ನುಗ್ಗುತ್ತಿರುವುದನ್ನು ಮತ್ತು ದೈತ್ಯ ದಾಪುಗಾಲು ಇಡುತ್ತಿರುವುದು ವಿಶೇಷವೇ ಸರಿ.

ವೈವಿಧ್ಯಮಯ
ಭಾರತರವು ನೈಸರ್ಗಿಕವಾಗಿ ಫಲವತ್ತತೆ ಹೊಂದಿದ ರಾಷ್ಟ್ರ. ಇಲ್ಲಿ ವಿವಿಧ ಪ್ರಕೃತಿ ರೀತಿಯನ್ನು ಕಾಣಬಹುದು - ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೆಟ್ಟ, ಪರ್ವತಗಳು, ನದಿ ಸರೋವರಗಳು, ಬೀಚ್, ಕಾಡು, ಮರುಭೂಮಿ ಹೀಗೆ ಎಲ್ಲವನ್ನೂ ನಮ್ಮ ದೇಶ ಹೊಂದಿದೆ. ಭಾರತದಲ್ಲಿ ಪ್ರವಾಸ ಕೈಗೊಂಡರೆ ಅದೊಂದು ಅದ್ಭುತ ಅನುಭವವನ್ನು ಕೊಡುತ್ತದೆ.

ವಿವಿಧ ಸಂಸೃತಿ ಮತ್ತು ಸಾಕಷ್ಟು ಭಾಷೆಗಳು
ಭಾರತದಲ್ಲಿ ಸಾಂಸ್ಕೃತಿಕ ಪರಂಪರೆ ಹೇರಳವಾಗಿದೆ, ಇದಕ್ಕೆ ಬೇರೆ ಎಲ್ಲೂ ಸರಿಸಾಟಿ ಸಿಗಲಾರದು. ಪ್ರತಿಯೊಂದು ರಾಜ್ಯವೂ ಕೂಡ ತನ್ನದೇ ಆದ ವೇಷಭೂಷಣ, ಸಂಪ್ರದಾಯ ಮತ್ತು ಆಧ್ಯಾತ್ಮಿಕ ವಿಧಾನಗಳನ್ನು ಒಳಗೊಂಡಿದೆ.

ಭಾರತೀಯ ಅಡುಗೆ
ಪ್ರಪಂಚದಲ್ಲಿ ಎಲ್ಲೂ ಸಿಗದಷ್ಟು ಬಗೆಬಗೆಯ ಖಾದ್ಯಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಇದು ಭಾರತೀಯ ಸಂಸ್ಕೃತಿಯಲ್ಲಿ ಒಂದು. ಬೇರೆ ಬೇರೆ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವವರು ವಿಭಿನ್ನ ರೀತಿಯ ಪಾಕ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ.

ಭಾರತೀಯ ಸೈನ್ಯ
ಭಾರತವು ಸೈನ್ಯದಲ್ಲಿ ವಿಶ್ವದ ಮೂರನೆ ಅತಿ ದೊಡ್ಡ ಸ್ಥಾನವನ್ನು ಪಡೆದಿದ್ದು ಸುಮಾರು ಹತ್ತು ಲಕ್ಷಕ್ಕೂ ಮೇಲ್ಪಟ್ಟು ಪುರುಷ ಸೈನಿಕರಿದ್ದಾರೆ. ಜೊತೆಗೆ ಸೈನ್ಯದಲ್ಲಿ ಯಾವುದೇ ರೀತಿಯ ರಾಜಕೀಯವಿಲ್ಲದೆ ನಿಜವಾದ ವೃತ್ತಿಪರತೆಯನ್ನು ಪಡೆದಿದ್ದಾರೆ.

ಅವಿಭಕ್ತ ಕುಟುಂಬ ವಿಧಾನ
ಇದು ಭಾರತವು ಪ್ರಪಂಚದ ಇತರ ರಾಷ್ಟ್ರಗಳಿಗಿಂತ ಭಿನ್ನ ಎಂಬುದನ್ನು ತೋರಿಸುತ್ತದೆ. ಇಂದಿಗೂ ಕೂಡ ಹಳ್ಳಿಗಳಲ್ಲಿ ಮಕ್ಕಳು ವಯಸ್ಕ ತಂದೆ ತಾಯಿ ಮತ್ತು ಅವಿಭಕ್ತ ಕುಟುಂಬದ ಜೊತೆ ವಾಸಿಸುತ್ತಿರುವುದನ್ನು ಕಾಣಬಹುದು. ಬಹುಶಃ ಭಾರತೀಯ ಕುಟುಂಬವು ಹೆಚ್ಚು ಸದೃಢವಾಗಿರುವುದಕ್ಕೆ ಇದೇ ಕಾರಣವಿರಬಹುದು.

ಶಿಕ್ಷಣಕ್ಕೆ ಮಹತ್ವ
ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಸಾಕಷ್ಟು ಶಾಲೆ ಮತ್ತು ಕಾಲೇಜುಗಳನ್ನು ತೆರೆದಿದೆ ಮತ್ತು ಬಡವರಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕೂಡ ಒದಗಿಸಲಾಗಿದೆ.

ಅತಿಥಿ ಸತ್ಕಾರ
ಧಾರ್ಮಿಕ ಸಂಪ್ರದಾಯಗಳನ್ನು ಬದಿಗಿಟ್ಟು ಭಾರತೀಯರು ಅತಿಥಿಗಳನ್ನು ದೇವರಂತೆ ಕಾಣುತ್ತಾರೆ ಎಂಬುದು ಸತ್ಯ. ಅತಿಥಿ ಸತ್ಕಾರ ಎಂಬ ಪರಿಕಲ್ಪನೆಯನ್ನು ಪ್ರತಿಯೊಬ್ಬ ಭಾರತೀಯನೂ ಕೂಡ ಪಾಲಿಸುತ್ತಾನೆ.

ಭಾರತೀಯ ಮಹಿಳೆಯರ ಅನೇಕ ಪಾತ್ರಗಳು
ಭಾರತೀಯ ಮಹಿಳೆಯರು ಕೆಲಸ,ಮಕ್ಕಳು ,ಮನೆ, ಸಂಸಾರ, ಅತಿಥಿಗಳು ಹೀಗೆ ಎಲ್ಲವನ್ನೂ ಪಾಲಿಸಿಕೊಂಡು ಹೋಗುತ್ತಾರೆ. ಭಾರತದಲ್ಲಿ ಭ್ರಷ್ಟಾಚಾರವಿರಬಹುದು. ಆದರೆ ಒಂದು ರಾಷ್ಟ್ರವಾಗಿ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆಪಡುವಂತಹ ಸಾಕಷ್ಟು ಕಾರಣಗಳು ಕಾಣಸಿಗುತ್ತವೆ.



Click it and Unblock the Notifications
