Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇತಿಹಾಸದ ಪುಟಗಳಲ್ಲಿ ಅಜರಾಮರರಾದ ವೀರರತ್ನಗಳು
ಜಗತ್ತಿನ ಇತಿಹಾಸವನ್ನು ಕೆದಕಿದರೆ ಜಗತ್ತನ್ನು ಆಳಿದವರಲ್ಲಿ ಬಹುತೇಕರು ರಾಜರೇ ಆಗಿದ್ದಾರೆ. ಒಂದು ಸಾಮ್ರಾಜ್ಯವನ್ನು ಆಳುವ ಮನೆತನವೇ ಶಾಶ್ವತವಾಗಿ ಆಡಳಿತ ನಡೆಸುವ ಪದ್ದತಿಯಿದ್ದಾಗ ಹುಟ್ಟಿದ ಗಂಡು ಮಗುವೇ ಮುಂದಿನ ರಾಜ ಎಂದು ಘೋಷಿಸಲಾಗುತ್ತಿತ್ತು. ಪಟ್ಟ ವಹಿಸುವವರೆಗೂ ಈ ಗಂಡುಮಗು ಯುವರಾಜನಾಗಿ ಮೆರೆಯುತ್ತಿತ್ತು.
ಮಹಿಳೆ ರಾಜ್ಯವಾಳಲು ತಕ್ಕವಳಲ್ಲ, ತನ್ನ ಮನೆ, ಸಂಸಾರವನ್ನು ನೋಡಿಕೊಂಡರೆ ಸಾಕು ಎಂಬ ಮನೋಭಾವ ಜಗತ್ತಿನಲ್ಲಿ ಎಲ್ಲೆಡೆ ಹರಡಿದ್ದಾಗ ಅಲ್ಲಲ್ಲಿ ಕೆಲವು ಮಹಿಳೆಯರು ಅಂದಿನ ಪರಿಸ್ಥಿತಿಗೆ ಹೊಂದಿಕೊಂಡು ರಾಜ್ಯವಾಳಿದ್ದಾರೆ. ಕೆಲವರು ಮಾತ್ರ ಯಾವುದೇ ರಾಜನಿದ್ದರೆ ಸಿಗಬಹುದಾಗಿದ್ದ ಆಳ್ವಿಕೆಗಿಂತಲೂ ಚೆನ್ನಾಗಿ ಆಡಳಿತ ನಡೆಸಿ ಇತಿಹಾಸದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿರಿಸಿದ್ದಾರೆ.
ಇವರ ಆಳ್ವಿಕೆಯಲ್ಲಿ ಆಯಾ ಸಾಮ್ರಾಜ್ಯ ಸುಭಿಕ್ಷತೆ, ಶಾಂತಿ ಮತ್ತು ಸುರಕ್ಷಿತ ಭಾವನೆಯನ್ನು ಜನರು ಪಡೆದಿದ್ದರು. ಒಂದು ಆಂಗ್ಲ ಗಾದೆಯ ಪ್ರಕಾರ ದುರ್ಬಲನಾದ ಆದರೆ ದಯಾವಂತನಾದ ಆಡಳಿತಗಾರನಿಗಿಂತ ನಿರಂಕುಶ ಪ್ರಭುವಾದರೂ ಪ್ರಬಲನಾದ ರಾಜನೇ ಉತ್ತಮ. ಇತಿಹಾಸದಲ್ಲಿ ಮೆರೆದ ಈ ರಾಣಿಯರು ತಮ್ಮ ದಯಾಪರತೆಗಿಂತಲೂ ಆಡಳಿತದಲ್ಲಿ ತಮ್ಮ ಬಲಿಷ್ಠತೆಯನ್ನು ಮೆರೆದವರು. ಚರಿತ್ರೆಯಲ್ಲಿ ನಾವು ಕಾಣುವ 10 ಕ್ರೂರ ಸ್ತ್ರೀಯರು
ಕೆಲವರು ವಂಶಪಾರಂಪರ್ಯವಾಗಿ ತಮಗೆ ದಕ್ಕಿದ ಸ್ಥಾನವನ್ನು ಸದುಪಯೋಗಿಸಿಕೊಂಡರೆ ಕೆಲವರು ತಮ್ಮ ಪತಿಯ ಮರಣಾನಂತರ ಸಿಂಹಾಸನವನ್ನು ಅಲಂಕರಿಸಿದವರು. ಮೊದಲನೆಯ ಎಲಿಜಬೆತ್ ರಾಣಿ, ಸ್ಕಾಟ್ ಲ್ಯಾಂಡ್‌ನ ರಾಣಿ ಮೇರಿಯವರಿಗೆ ವಂಶಪಾರಂಪರ್ಯವಾಗಿ ಪಟ್ಟ ದೊರಕಿತ್ತು. ಇಂತಹ ಪ್ರಮುಖ ಹತ್ತು ರಾಣಿಯರ ಕಿರು ಪರಿಚಯ ಇಲ್ಲಿದೆ: ಎರಡನೇ ಮಹಾಯುದ್ಧದ ಬಗ್ಗೆ ಕುತೂಹಲ ಕೆರಳಿಸುವ 12 ಸತ್ಯಗಳು

ಈಜಿಪ್ಟಿನ ರಾಣಿ ಕ್ಲಿಯೋಪಾತ್ರಾ
ಕ್ರಿ. ಪೂ 50 ರಿಂದ ಕ್ರಿ.ಪೂ 30ರ ವರೆಗೆ ಪುರಾತನ ಈಜಿಪ್ಟನ್ನು ಆಳಿದ ಕ್ಲಿಯೋಪಾತ್ರಾ ಪಟ್ಟವೇರಿದಾಗ ಆಕೆಯ ವಯಸ್ಸು ಕೇವಲ ಹನ್ನೆರಡು. ತನ್ನ ಜೀವನದಲ್ಲಿ ತನ್ನ ಇಬ್ಬರು ಸಹೋದರರನ್ನೇ ಮದುವೆಯಾದ ಈ ರಾಣಿ ಆಡಳಿತದ ವಿಷಯದಲ್ಲಿ ಮಾತ್ರ ತುಂಬಾ ಕಟ್ಟುನಿಟ್ಟಾಗಿದ್ದಳು. ಅಂದಿನ ದಿನಗಳಲ್ಲಿ ಬಲಿಷ್ಟರಾಗಿದ್ದ ಜ್ಯೂಲಿಯಸ್ ಸೀಸರ್ ಮತ್ತು ಮಾರ್ಕ್ ಆಂಟೊನಿಯವರೊಂದಿಗೆ ಮೈತ್ರಿ ಸಾಧಿಸಿ ದೇಶವನ್ನು ಮುನ್ನಡೆಸಲು ಕಾರಣಳಾಗಿದ್ದಳು.

ಝಾನ್ಸಿ ರಾಣಿ ಲಕ್ಷ್ಮೀಬಾಯಿ
ಈಗ ಉತ್ತರ ಪ್ರದೇಶದಲ್ಲಿರುವ ಝಾನ್ಸಿ ನಗರದಲ್ಲಿ ಬಡ ಬ್ರಾಹ್ಮಣ ಕುಟುಂಬದಲ್ಲಿ ಮಣಿಕರ್ಣಿಕ ಎಂಬ ಹೆಸರಿನೊಂದಿಗೆ ಹುಟ್ಟಿದ ಲಕ್ಷ್ಮೀಬಾಯಿ ಭಾರತದ ಇತಿಹಾಸದಲ್ಲಿ ತನ್ನ ಹೆಸರನ್ನು ಶಾಶ್ವತವಾಗಿ ಕೆತ್ತಿ ಬಿಟ್ಟುಹೋಗಿದ್ದಾಳೆ. ಹದಿನಾಲ್ಕನೆಯ ವಯಸ್ಸಿನಲ್ಲಿ ಝಾನ್ಸಿ ಬಾಲಗಂಗಾಧರ ರಾವ್ ರನ್ನು ಮದುವೆಯಾದ ಬಳಿಕ ಅವರ ಹೆಸರು ಲಕ್ಷ್ಮೀಬಾಯಿಯಾಗಿ ಬದಲಾಯಿತು. ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಅವರಿಗೆ ಗಂಡುಮಗುವಾದರೂ ನಾಲ್ಕು ತಿಂಗಳಿಗೆ ಮರಣ ಹೊಂದಿದುದರಿಂದ ದಾಮೋದರ ರಾವ್ ರನ್ನು ದತ್ತು ಪುತ್ರರನ್ನಾಗಿ ಸ್ವೀಕರಿಸಿದರು. ಆದರೆ ಆಘಾತದಿಂದ ಮಹಾರಾಜರು ಬಾಲಗಂಗಾಧರ ರಾವ್ ಮರಣಹೊಂದಿದರು. ದಾಮೋದರ ರಾವ್ ರನ್ನು ಪಟ್ಟಕ್ಕೇರಿಸಲು ಸ್ವಂತಪುತ್ರನಲ್ಲವೆಂಬ ಕಾರಣದಿಂದ ನಿರಾಕರಿಸಿದುದರ ಪರಿಣಾಮವಾಗಿ ಲಕ್ಷ್ಮೀಬಾಯಿಯವರೇ ರಾಣಿಯಾಗಿ ರಾಜಾಡಳಿತ ಪ್ರಾರಂಭಿಸಿದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಗುಲಾಮನತವನ್ನು ಒಪ್ಪದೇ ಕೊನೆಯ ಉಸಿರಿರುವರೆಗೂ ಹೋರಾಡಿ ವೀರ ಮರಣವನ್ನಪ್ಪಿದಾಗ ಆಕೆಯ ವಯಸ್ಸು ಕೇವಲ 29. ಈ ವೀರರಾಣಿಗೆ ಗೌರವ ಸೂಚಿಸಲು ಭಾರತೀಯ ಸೈನ್ಯ ತನ್ನ ಮಹಿಳಾ ಪಡೆಗೆ ಅವರ ಹೆಸರನಿಟ್ಟಿದೆ.

ಬ್ರಿಟನ್ನಿನ ರಾಣಿ ಎಲಿಜಬೆಥ್ 1
ಬ್ರಿಟನ್ನನ್ನು ಆಳಿದ ಪ್ರಥಮ ಹಾಗೂ ಅವಿವಾಹಿತ ರಾಣಿಯೆಂದರೆ ರಾಣಿ ಎಲಿಜಬೆಥ್ 1. ಕನ್ಯೆ ರಾಣಿ (virgin queen) ಎಂದೇ ಕರೆಯಲ್ಪಡುತ್ತಿದ್ದ ಇವರ ಆಳ್ವಿಕೆಯ ಕಾಲವನ್ನು ಇಂಗ್ಲೆಂಡಿನ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಟ್ಯೋಡಾರ್ ವಂಶದ ಐದನೆಯ ಮತ್ತು ಕಡೆಯ ಕುಡಿಯಾದ ಇವರು ಅವಿವಾಹಿತೆಯಾಗಿಯೇ ಉಳಿದರು. ಇವರಿಗೆ ಮಕ್ಕಳಿಲ್ಲದಿದ್ದ ಕಾರಣ ಆ ವಂಶ ಅಲ್ಲಿಗೇ ಕೊನೆಗೊಂಡಿತು. ಈ ರಾಣಿಯ ನಿಜವಾದ ಶೌರ್ಯ ಕಾದಾಟದಲ್ಲಿ ಅಲ್ಲದೇ ಬುದ್ಧಿಶಕ್ತಿಯಲ್ಲಿ ಕಂಡುಬರುತ್ತದೆ. ಅಂದಿನ ದಿನಗಳಲ್ಲಿ ಬಹಳವಾಗಿದ್ದ ವಿವಿಧ ದೇಶಗಳ ಒಳಸಂಚನ್ನು ಸಮರ್ಥವಾಗಿ ಎದುರಿಸಿ ದೇಶವನ್ನು ಶತ್ರುಗಳಿಂದ ಕಾಪಾಡಿರುವುದು ಇವರ ಹೆಗ್ಗಳಿಕೆಯಾಗಿದೆ. ಇವರ ಆಳ್ವಿಕೆಯಲ್ಲಿ ಕಲೆಗೆ ಅತಿ ಹೆಚ್ಚಿನ ಪ್ರೋತ್ಸಾಹ ದೊರಕಿದುದರ ಪರಿಣಾಮವಾಗಿಯೇ ವಿಲಿಯಂ ಶೇಕ್ಸ್ ಪಿಯರ್ ರಂತಹ ಮಹಾನ್ ನಾಟಕಕಾರರು ಬೆಳಕಿಗೆ ಬರುವಂತಾಯ್ತು.

ಫ್ರಾನ್ಸಿನ ರಾಣಿ ಮೇರಿ ಅಂಟಾಯಿನೆಟ್
If they have no bread,let them eat cake ಎಂಬ ವಾಕ್ಯದಿಂದಾಗಿ ಸುಪ್ರಸಿದ್ಧಳಾದ ಫ್ರಾನ್ಸಿನ ಈ ರಾಣಿ ಫ್ರಾನ್ಸ್ ದೇಶವನ್ನು 1774 ರಿಂದ 1792 ರವರೆಗೂ ಆಳಿದರು. ಫ್ರಾನ್ಸ್ ಕ್ರಾಂತಿಯ ದಿನಗಳಲ್ಲಿ ದೇಶ ಛಿದ್ರವಾಗದಂತೆ ಉಳಿಸಿಕೊಂಡ ಶ್ರೇಯ ಅವರದ್ದು.

ಈಜಿಪ್ಟಿನ ರಾಣಿ ನೆಫರ್ಟಿಟಿ
ಇತಿಹಾಸ ಕಂಡ ಅತ್ಯಂತ ಸುಂದರಿಯರ ಪಟ್ಟಿಯಲ್ಲಿ ರಾಣಿ ನೆಫರ್ಟಿಟಿಯ ಹೆಸರು ಪ್ರಾರಂಭದಲ್ಲಿದೆ. ಈಜಿಪ್ಟಿನ ರಾಜ ಅಖೇನಾತೆನ್ ರವರ ದ್ವಿತೀಯ ಪತ್ನಿಯಾಗಿದ್ದ ಈಕೆ ರಾಜನ ಮರಣಾನಂತರ ಪಟ್ಟವನಲಂಕರಿಸಿದರು. ಏಕ ದೇವನ ಆರಾಧನೆಯನ್ನು ಹುಟ್ಟು ಹಾಕಿದ ಈ ರಾಜರಾಣಿಯರು ಈಜಿಪ್ಟ್ ನಲ್ಲಿ ಅಲ್ಲಿಯವರೆಗೂ ಆಚರಣೆಯಲ್ಲಿದ್ದ ಬಹುದೇವರಾಧನೆಗೆ ತಡೆ ನೀಡಿದ್ದರು. ಈಕೆಯ ಆಳ್ವಿಕೆಯ ಕಾಲದಿಂದ ಮುಂದೆ ರಾಜನಾದ ಟುಟೆಂಕಮುನ್ ರ ಆಳ್ವಿಕೆಯವರೆಗೂ ಈಜಿಪ್ಟ್ ಸುಭಿಕ್ಷವಾಗಿದ್ದು ಅತ್ಯಂತ ಶ್ರೀಮಂತಿಕೆಯನ್ನು ಹೊಂದಿತ್ತು. ಆಕೆಯ ಎದೆಮಟ್ಟದ ವಿಗ್ರಹ ಇಂದಿಗೂ ವಿಶ್ವವಿಖ್ಯಾತವಾಗಿದೆ. ತನ್ನ ಸೌಂದರ್ಯವನ್ನು ಕಾಪಾಡಲು ಆಕೆ ಕತ್ತೆಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳೆಂದು ಇತಿಹಾಸದಲ್ಲಿ ದಾಖಲಾಗಿದೆ.

ಸಿರಿಯಾದ ರಾಣಿ ಜೆನೋಬಿಯಾ
ಇಂದಿನ ಸಿರಿಯಾದಲಿರುವ ಪಾಲ್ಮೈರಾ ಪ್ರಾಂತದ ರಾಣಿಯಾಗಿದ್ದ ಜೆನೋಬಿಯಾ ತನ್ನ ಆಳ್ವಿಕೆಯ ಕಾಲದಲ್ಲಿ ದಂಗೆ ಎಬ್ಬಿಸಿದ ರೋಮನ್ನರ ವಿರುದ್ಧ ಹೋರಾಡಿದ್ದರು. ಇವರ ವಿರುದ್ಧ ಹೋರಾಡಲು ತನ್ನ ಜನರನ್ನು ಒಗ್ಗೂಡಿಸಿ ಅವರಲ್ಲು ಹುಮ್ಮಸ್ಸು ತುಂಬಿ ತಾನೇ ಸ್ವತಃ ನಾಯಕತ್ವ ವಹಿಸಿ ಯುದ್ಧ ಮಾಡುತ್ತಲೇ ವೀರಸ್ವರ್ಗ ಪಡೆದಳು. ಈಕೆಯೂ ಪತಿಯ ಮರಣಾನಂತರ ರಾಣಿಯ ಪಟ್ಟ ಪಡೆದಿದ್ದರು.

ಸ್ಕಾಟ್ಲೆಂಡಿನ ರಾಣಿ ಮೇರಿ
ರಾಜ ಜೇಮ್ಸ್ ೫ ರ ಒಂದೇ ಸಂತಾನವಾದ ಈಕೆ ಕೇವಲ ಆರು ದಿನದ ಮಗುವಾಗಿದ್ದಾಗ ರಾಣಿಯ ಪಟ್ಟ ಪಡೆದ ಬಳಿಕ ಫ್ರಾನ್ಸಿನ ರಾಜ ಫ್ರಾನ್ಸಿಸ್ ರನ್ನು ಮದುವೆಯಾದರು. ಆದರೆ ಎರಡು ವರ್ಷದಲ್ಲಿ ಫ್ರಾನ್ಸಿಸ್ ಮರಣ ಹೊಂದಿದುದರಿಂದ ಸ್ಕಾಟ್ಲೆಂಡಿಗೆ ಹಿಂದಿರುಗಿ ನಾಲ್ಕು ವರ್ಷಗಳ ಬಳಿಕ ಲಾರ್ಡ್ ಡಾರ್ನ್ಲೀಯವರನ್ನು ವಿವಾಹವಾದರು. ಆದರೆ ಅವರನ್ನೂ ಕುತಂತ್ರದಿಂದ ಕೊಲೆ ಮಾಡಲಾಯಿತು. ಅಂದು ಪ್ರಬಲರಾಗಿದ್ದ ಪ್ರೊಟೆಸ್ಟೆಂಟ್ ರ ಇಚ್ಛೆಗೆ ವಿರುದ್ಧವಾಗಿ ಹೋಗಲಾಗದೇ ತನ್ನ ದೇಶವನ್ನು ರಕ್ಷಿಸಿಕೊಳ್ಳಲು ಅವರು ಬಹಳ ಶ್ರಮಪಡಬೇಕಾಯಿತು. ಕಡೆಗೆ ತನ್ನ ಸಹೋದರಿಯೇ ಆದ ರಾಣಿ ಎಲಿಜಬೆಥ್ 1 ರಿಂದ ಹದಿನೆಂಟು ವರ್ಷಗಳ ಸೆರೆವಾಸದ ಬಳಿಕ ಗಲ್ಲಿಗೇರಿದರು.

ಇಂಗ್ಲೆಂಡಿನ ರಾಣಿ ಯಾನೆ ಬೋಲಿನ್
ಅಂದಿನ ದಿನಗಳಲ್ಲಿ ಅತ್ಯಂತ ಪ್ರಬಲರಾಗಿದ್ದ ಕ್ಯಾಥೋಲಿಕ್ ಚರ್ಚಿನ ನಿಯಮಗಳಿಗೆ ವಿರುದ್ಧವಾಗಿ ಸೆಟೆದು ನಿಂತು ರಾಣಿಯ ಪಟ್ಟಕ್ಕೇರಿದ ಯಾನೆ ಬೋಲಿನ್ ಜಗತ್ತು ಕಂಡ ಓರ್ವ ಪ್ರಬಲ ರಾಜಕಾರಣಿಯಾಗಿದ್ದಾರೆ. ರಾಜ ಹೆನ್ರಿ ರವರ ದ್ವಿತೀಯ ಪತ್ನಿಯಾಗಿದ್ದ ಈಕೆಯನ್ನು ಮದುವೆಯಾಗಲು ರಾಜ ತನ್ನ ಮೊದಲ ಪತ್ನಿ ಕ್ಯಾಥರಿನ್ ಆಫ್ ಆರಗಾನ್ ರನ್ನು ಹತ್ಯೆಗೈದಿದ್ದ. ರಾಜಮನೆತನದ ನಿರ್ಧಾರಗಳನ್ನೇ ಬದಲಿಸುವಷ್ಟು ಪ್ರಬಲರಾಗಿದ್ದ ಕ್ಯಾಥೋಲಿಕ್ ಚರ್ಚ್ ನ ನಿರ್ಣಯಗಳಿಗೆ ತಲೆಬಾಗದೇ ತನಗೆ ಸರಿಯೆನ್ನಿಸಿದ ಸಂವಿಧಾನವನ್ನು ಎತ್ತಿ ಹಿಡಿದ ಮಹಿಳೆ ಇದಕ್ಕಾಗಿ ಹಲವರನ್ನು ಗಲ್ಲಿಗೇರಿಸಲಾಯಿತು. ಕೇವಲ ಸಂತಾನವಿಲ್ಲದಿದ್ದ ಕಾರಣಕ್ಕಾಗಿ ಜನರೇ ಬಳಿಕ ಇವರ ವಿರುದ್ಧ ಧ್ವನಿ ಎತ್ತಿದುದರ ಪರಿಣಾಮವಾಗಿ ನಿಧಾನವಾಗಿ ಇವರ ಖ್ಯಾತಿ ಇಳಿಯುತ್ತಾ ಬಂದಿತು.

ರಷ್ಯಾದ ರಾಣಿ ಕ್ಯಾಥರಿನ್ ದ ಗ್ರೇಟ್
ಜರ್ಮನ್ ಕುಟುಂಬದಲ್ಲಿ ಹುಟ್ಟಿ ತನ್ನ ಹದಿನಾರನೇ ವಯಸ್ಸಿನಲ್ಲಿ ರಷ್ಯಾದ ರಾಜ ಪೀಟರ್ III ರನ್ನು ವಿವಾಹವಾಗಿದ್ದರು. ರಾಜಕಾರಣದಲ್ಲಿ ಅಷ್ಟೇನೂ ಪರಿಣಿತನಲ್ಲದ ರಾಜನನ್ನು ಏಳು ವರ್ಷಗಳ ರಷ್ಯಾ ಕ್ರಾಂತಿಯ ಯುದ್ದದಲ್ಲಿ ಶಿರಚ್ಛೇದಿಸಿ ತಾನೇ ಸ್ವತಃ ರಾಣಿಯ ಪಟ್ಟಕ್ಕೇರಿ ಬಳಿಕ ತನ್ನ ಅರವತ್ತೇಳನೇ ವಯಸ್ಸಿಯವರೆಗೂ ಇವರು ಆಳ್ವಿಕೆ ನಡೆಸಿದರು. ಈ ಸಮಯವನ್ನು ಕ್ಯಾಥರಿನ್ ಯುಗವೆಂದು ಇತಿಹಾಸದಲ್ಲಿ ಬರೆಯಲಾಗಿದೆ. ಅತ್ಯಂತ ಮೇಧಾವಿಗಳನ್ನು ತನ್ನ ಮಂತ್ರಿಗಳನ್ನಾಗಿ ನೇಮಿಸಿಕೊಂಡು ರಷ್ಯಾದ ಎಲ್ಲೆಗಳನ್ನು ವಿಸ್ತರಿಸುತ್ತಾ ಅಲ್ಲೆಲ್ಲಾ ತನ್ನ ಆಳ್ವಿಕೆಯನ್ನು ಹರಡುತ್ತಾ ಹೋದರು. ಚಿಕ್ಕಪುಟ್ಟ ಪ್ರಾಂತಗಳನ್ನು ಯುದ್ದದಲ್ಲಿ ಗೆದ್ದು ರಷ್ಯಾ ಬಲಿಷ್ಟವಾಗುತ್ತಾ ಹೋಯಿತು. ನೂತನ ಕಟ್ಟಡಗಳು, ದೊಡ್ಡ ದೊಡ್ಡ ನಗರಗಳು ತಲೆಯೆತ್ತಿದವು. ಅಂದು ಕಟ್ಟಿದ ಅತ್ಯಂತ ಭವ್ಯ ಅರಮನೆಗಳು ಮತ್ತು ಕೋಟೆಗಳು ಇಂದಿಗೂ ಆ ಭವ್ಯ ಆಡಳಿತದ ಕಾಲವನ್ನು ನೆನಪಿಸುತ್ತವೆ.

ಹಳೆ ಇಂಗ್ಲೆಂಡಿನ ರಾಣಿ ಬೊಡಿಶಿಯ
ಸುಮಾರು ಕ್ರಿ.ಶ ೪೩ರ ಇಸವಿಯಲ್ಲಿ ಯೂರೋಪಿಯನ್ನರ ಒಂದು ಪಂಗಡವಾದ ಬ್ರಿಟಿಶ್ ಐಸೆನಿ ಪಂಗಡ ರೋಮನ್ನರ ವಿರುದ್ಧ ದಂಗೆ ಎದ್ದು ಬಹುತೇಕ ಬ್ರಿಟನ್ನನ್ನು ವಶಪಡಿಸಿಕೊಳ್ಳುತ್ತದೆ. ಕ್ರಿ. ಶ ೬೦-೬೧ ರಲ್ಲಿ ಈ ಪಂಗಡದ ರಾಜ ಪ್ರಸೂತಗಾಸ್ (Prasutagus) ನ ಮರಣಾನಂತರ ರೋಮನ್ನರು ತಿರುಗಿಬಿದ್ದು ಇವರು ವಶಪಡಿಸಿಕೊಂಡಿದ್ದ ಕೋಟೆಗಳನ್ನು ತಮ್ಮ ವಶಕ್ಕೆ ತಗೆದುಕೊಳ್ಳುತ್ತಾರೆ. ರಾಣಿ ಬೊಡಿಶಿಯ ಮತ್ತು ಆಕೆಯ ಹೆಣ್ಣು ಮಕ್ಕಳನ್ನು ಸಾರ್ವಜನಿಕವಾಗಿ ಅತ್ಯಾಚಾರಗೈಯಲಾಗುತ್ತದೆ. ಇದಕ್ಕೆ ಪ್ರತೀಕಾರವಾಗಿ ರಾಣಿ ಬೊಡಿಶಿಯ ತನ್ನ ಜನರನ್ನು ಒಗ್ಗೂಡಿಸಿ ಸೈನ್ಯ ಕಟ್ಟುತ್ತಾಳೆ. ತನ್ನ ಜನರನ್ನು ಹುರಿದುಂಬಿಸಿ ರೋಮನ್ನರನ್ನು ಎದುರಿಸಿ ತನ್ನ ಸಾಮ್ರಾಜ್ಯವನ್ನು ಮತ್ತೆ ಪಡೆಯುತ್ತಾಳೆ.



Click it and Unblock the Notifications


