ಗಂಡಸರು ಕಾಂಡೋಮ್ ಬೇಡ ಎನ್ನಲು 10 ಕಾರಣಗಳು

By Super

ಉತ್ತಮ ದಾಂಪತ್ಯಕ್ಕೆ ಲೈಂಗಿಕ ಆರೋಗ್ಯವೂ ಮುಖ್ಯ. ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಹಾಗೂ ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯಲು ಇಂದು ಸರ್ವೇ ಸಾಧಾರಣವಾಗಿ ಕಾಂಡೋಮ್‌ಗಳು ಸಿಗುತ್ತಿವೆ. ಆಧುನಿಕ ತಂತ್ರಜ್ಞಾನದಿಂದ ಇಂದು ಅತ್ಯಂತ ಸುರಕ್ಷಿತ ಹಾಗೂ ಉತ್ತಮ ಗುಣಮಟ್ಟದ ಸಾಧನಗಳು ಲಭ್ಯವಿವೆ.

ಸುರಕ್ಷತೆಯನ್ನು ಬಯಸುವ ಪ್ರತಿ ಮಹಿಳೆಯೂ ತನ್ನ ಪುರುಷ ಸುರಕ್ಷತೆಯ ಹೆಚ್ಚಿನ ಕಾಳಜಿ ವಹಿಸಬೇಕೆಂದು ಬಯಸುತ್ತಾಳೆ. ಆದರೆ ಹಲವು ಪುರುಷರು ಈ ರಕ್ಷಾಕವಚವನ್ನು ತೊಡದಿರಲು ಹಲವು ಸಬೂಬುಗಳನ್ನು ನೀಡಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ. ಮಹಿಳೆಗೆ ನೇರವಾಗಿ 'ಇಲ್ಲ' ಎನ್ನಲಾಗದೇ ಚತುರ, ವರ್ಣರಂಜಿತ ಹಾಗೂ ಮನಗಾಣುವಂತಿರುವ ಸಬೂಬುಗಳನ್ನು ನೀಡಿ ರಕ್ಷಾರಹಿತರಾಗಲು ಯಶಸ್ವಿಯಾಗುತ್ತಾರೆ.

ಆದರೆ ಹೆಚ್ಚಿನ ಸಂದರ್ಭದಳಲ್ಲಿ ಪರಿಸ್ಥಿತಿ ಕೈಮೀರಿ ಅನೈಚ್ಛಿಕವಾದ ಪರಿಣಾಮಗಳು ಕಂಡುಬರುತ್ತವೆ. ಬೇಡದ ಗರ್ಭಧಾರಣೆಗೆ ಮಹಿಳೆಯನ್ನೇ ದೂಷಿಸಲಾಗುತ್ತದೆ. ಪುರುಷನಿಂದ ಮಹಿಳೆಗೆ ಲೈಂಗಿಕವಾಗಿ ಹರಡುವ ರೋಗಗಳಿಗೂ ಈ ಎಚ್ಚರಿಕೆಯನ್ನು ಪಾಲಿಸದಿರುವುದೇ ಕಾರಣ. ಎಷ್ಟೇ ಆದರೂ ಸುರಕ್ಷತೆಯನ್ನು ನಿರಾಕರಿಸಿ ಪುರುಷತ್ವವನ್ನು ಸಾಬೀತುಪಡಿಸುವ ಪುರುಷರು ನೀಡುವ ಸಬೂಬುಗಳು ಸಮರ್ಥನೆಗಳು ಸುಂದರವೂ ಆಗಿರುತ್ತವೆ. ಅವುಗಳಲ್ಲಿ ಅತ್ಯಂತ ಸುಂದರವಾದ ಹತ್ತು ಸಬೂಬುಗಳನ್ನು ನೋಡೋಣ

ಮಹಿಳೆಯರು ಮಿಲನವನ್ನು ಬಯಸಲು 16 ಕಾರಣಗಳು

ಇಬ್ಬರ ನಡುವೆ ಪ್ಲಾಸ್ಟಿಕ್ ಪರದೆಯಾಗುತ್ತದೆ

ಇಬ್ಬರ ನಡುವೆ ಪ್ಲಾಸ್ಟಿಕ್ ಪರದೆಯಾಗುತ್ತದೆ

ಈ ರಕ್ಷಾಕವಚ ತೊಡುವ ಮೂಲಕ ಸ್ಪರ್ಶಸಂವೇದನೆಯನ್ನು ಪೂರ್ಣವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ. ಮಿಲನದ ಸಂತೋಷವನ್ನು ಪೂರ್ಣವಾಗಿ ಅನುಭವಿಸಲು ನಿಸರ್ಗ ನೀಡಿದ ಕೊಡುಗೆಯನ್ನು ಯಥಾವತ್ತಾಗಿ ಉಪಯೋಗಿಸುವುದರಿಂದ ಪರಿಪೂರ್ಣ ಅನುಭೂತಿ ಸಿಗುತ್ತದೆ. ಈ ರಕ್ಷಾಕವಚ ಇಬ್ಬರ ನಡುವೆ ಪ್ಲಾಸ್ಟಿಕ್ ಪರದೆಯಾಗುತ್ತದೆ.

ಆದರೆ ಇಂದು ನಿಮ್ಮ ಸುರಕ್ಷಾ ದಿನಗಳಾಗಿವೆ

ಆದರೆ ಇಂದು ನಿಮ್ಮ ಸುರಕ್ಷಾ ದಿನಗಳಾಗಿವೆ

ಮಹಿಳೆಯರ ತಿಂಗಳ ರಜಾ ಕಾಲದ ಅಕ್ಕಪಕ್ಕದ ದಿನಗಳನ್ನು ಸುರಕ್ಷಾ ದಿನಗಳೆಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ರಕ್ಷಾಕವಚ ತೊಡದಿದ್ದರೆ ಏನು ತೊಂದರೆ ಎಂಬುವುದು ಪುರುಷರ ಪ್ರಶ್ನೆ. ಆದರೆ ಆ ದಿನಗಳಲ್ಲೂ ಪುರುಷರಿಂದ ಲೈಂಗಿಕ ರೋಗಗಳು ಹರಡುವ ಸಾಧ್ಯತೆಗಳು ಇದ್ದೇ ಇರುತ್ತದೆ.

ಯಾವುದೂ ಶೇ 100 ಸುರಕ್ಷಿತವಲ್ಲ

ಯಾವುದೂ ಶೇ 100 ಸುರಕ್ಷಿತವಲ್ಲ

ಎಷ್ಟೇ ಉತ್ತಮ ಗುಣಮಟ್ಟ ಹೊಂದಿದ್ದರೂ ಶೇಕಡ 3ರಷ್ಟು ಸಾಧನಗಳು ಗುಣಮಟ್ಟ ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವ ಸಂಭವವಿದೆ. ಈಗ ತೊಡುವ ರಕ್ಷಾ ಕವಚವೂ ಆ ಮೂರರಲ್ಲಿ ಒಂದಾಗಿದ್ದರೆ? ಎಲ್ಲಾ ದೇವರ ಕೈಯಲ್ಲಿದೆ, ನಾವು ನಿಮಿತ್ತ ಮಾತ್ರ, ಎಂಬುವುದು ಪುರುಷರು ನೀಡುವ ಇನ್ನೊಂದು ಸಮರ್ಥನೆ.

ನೀವೇ ಗರ್ಭನಿರೋಧಕ ಗುಳಿಗೆಗಳನ್ನು ತೆಗೆದುಕೊಳ್ಳಬಹುದಲ್ಲಾ

ನೀವೇ ಗರ್ಭನಿರೋಧಕ ಗುಳಿಗೆಗಳನ್ನು ತೆಗೆದುಕೊಳ್ಳಬಹುದಲ್ಲಾ

ಗರ್ಭನಿರೋಧಕ ಗುಳಿಗೆಗಳಿಂದ ಗರ್ಭಧಾರಣೆಯ ಸಾಧ್ಯತೆ ಎಂಭತ್ತು ಶೇ. ಮಾತ್ರ. ಆದರೂ ಗರ್ಭಧಾರಣೆಯ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಪುರುಷರಿಂದ ಲೈಂಗಿಕ ರೋಗಗಳು ಹರಡುವ ಸಾಧ್ಯತೆಗಳನ್ನು ಈ ಗುಳಿಗೆಗಳು ತಡೆಯುವುದಿಲ್ಲ. ಈ ಎಚ್ಚರಿಕೆಗಳನ್ನು ಹೆಚ್ಚಿನ ಪುರುಷರು ಅಲಕ್ಷಿಸುತ್ತಾರೆ.

ನಿಮಗೆ ಪರಿಪೂರ್ಣ ಅನುಭೂತಿ ಸಿಗದು

ನಿಮಗೆ ಪರಿಪೂರ್ಣ ಅನುಭೂತಿ ಸಿಗದು

ಹೆಚ್ಚಿನ ಪುರುಷರು ರಕ್ಷಾಕವಚದೊ೦ದಿಗಿನ ಮಿಲನವನ್ನು ಮಹಿಳೆಯರು ಇಷ್ಟಪಡುವುದಿಲ್ಲ ಎಂದು ಭಾವಿಸಿದ್ದಾರೆ. ಈ ನಂಬಿಕೆಯನ್ನು ಅವರು ಬಲವಂತವಾಗಿ ಹೇರಲು ಪ್ರಯತ್ನಿಸುತ್ತಾರೆ.

ನನ್ನಲ್ಲಿ ಅದ್ಭುತವಾದ ನಿಯಂತ್ರಣ ಶಕ್ತಿಯಿದೆ

ನನ್ನಲ್ಲಿ ಅದ್ಭುತವಾದ ನಿಯಂತ್ರಣ ಶಕ್ತಿಯಿದೆ

ಹೆಚ್ಚಿನ ಪುರುಷರು ತಮ್ಮಲ್ಲಿ ಅದ್ಭುತವಾದ ನಿಯಂತ್ರಣ ಶಕ್ತಿಯಿದೆ ಎಂದು ಭಾವಿಸುತ್ತಾರೆ. ಈ ಶಕ್ತಿಯಿಂದ ಸ್ಖಲನದ ಸಮಯವನ್ನು ಹಿಂದೆ ಮುಂದೆ ಮಾಡಲು ಸಾಧ್ಯ, ತಾವು ಬಯಸಿದ ಬಳಿಕವೇ ಸ್ಖಲನವಾಗಲು ಸಾಧ್ಯ ಎಂದು ಭಾವಿಸಿದ್ದಾರೆ. ಆದರೆ ಸ್ಖಲನವನ್ನು ಪುರುಷರು ಎಣಿಸಿದಂತೆ ನಿಯಂತ್ರಿಸುವುದು ಸಾಧ್ಯವಿಲ್ಲ.

ನಾನು ನಿನ್ನನ್ನು ನಿಜವಾಗಿಯೂ ತುಂಬಾ ಪ್ರೀತಿಸುತ್ತೇನೆ

ನಾನು ನಿನ್ನನ್ನು ನಿಜವಾಗಿಯೂ ತುಂಬಾ ಪ್ರೀತಿಸುತ್ತೇನೆ

ಪ್ರೀತಿಗೂ ಸುರಕ್ಷತೆಯ ಮಿಲನಕ್ಕೂ ಖಂಡಿತವಾಗಿಯೂ ತುಂಬಾ ವ್ಯತ್ಯಾಸವಿದೆ. ಜೀವನದ ಪ್ರತಿ ಹಂತದಲ್ಲಿಯೂ ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ವಿಧಾನಗಳಿವೆ. ಆದರೆ ರಕ್ಷಾಕವಚ ತೊಡುವುದನ್ನೂ ಈ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನಗಳಲ್ಲಿ ಒಂದು ಎಂದು ಪುರುಷರು ಭಾವಿಸುತ್ತಾರೆ.

ಇಂದು ಕಾಂಡೋಮ್‌ಗಳು ಭಾರೀ ದುಬಾರಿಯಾಗಿವೆ

ಇಂದು ಕಾಂಡೋಮ್‌ಗಳು ಭಾರೀ ದುಬಾರಿಯಾಗಿವೆ

ಸ್ವಾಭಾವಿಕವಾಗಿ ಉತ್ತಮ ಗುಣಮಟ್ಟ ಪಡೆಯಲು ಉತೃಷ್ಟ ಕಚ್ಚಾವಸ್ತುಗಳು ಹಾಗೂ ಆಧುನಿಕ ತಂತ್ರಜ್ಞಾನ, ದುಬಾರಿ ಯಂತ್ರಗಳ ಬಳಕೆಯಾಗುವುದರಿಂದ ಕೊಂಚ ಬೆಲೆ ದುಬಾರಿಯಾಗಿರುವುದು ಸಹಜ. ಆದರೆ ಈ ಬೆಲೆ ಅನೈಚ್ಛಿಕವಾಗಿ ಗರ್ಭಧಾರಣೆಯಿಂದ ಎದುರಾಗುವ ಖರ್ಚುಗಳನ್ನು ಪರಿಗಣಿಸಿದರೆ ಈ ಬೆಲೆ ತೃಣಮಾತ್ರ. ಹಲವು ಧರ್ಮಗಳಲ್ಲಿ ಗರ್ಭಾಪಾತಕ್ಕೆ ಅನುಮತಿಯಿಲ್ಲದ ಕಾರಣ ಶಿಶುವಿನ ಲಾಲನೆ ಪಾಲನೆ, ಶೈಕ್ಷಣಿಕ ಖರ್ಚುಗಳು ದಂಪತಿಯರ ಗಳಿಕೆಯ ಮೇಲೆ ನೇರ ಪರಿಣಾಮ ಬೀರುವುದರಿಂದ ಕಾಂಡೋಮ್ ಕೊಳ್ಳಲು ಹಣ ಉಳಿಸುವ ಉಸಾಬರಿ ಬೇಡ.

ಮಹಿಳೆಯರೂ ಬಳಸ ಬಹುದಾದ ಸುರಕ್ಷಾ ಸಾಧನಗಳನ್ನು ಬಳಸಿ

ಮಹಿಳೆಯರೂ ಬಳಸ ಬಹುದಾದ ಸುರಕ್ಷಾ ಸಾಧನಗಳನ್ನು ಬಳಸಿ

ಮಹಿಳೆಯರಿಗೂ ಹಲವು ವಿಧದ ಸುರಕ್ಷಾ ಸಾಧನಗಳು ಲಭ್ಯವಿದ್ದರೂ ಎಲ್ಲರಿಗೂ ಈ ಸಾಧನಗಳು ಸೂಕ್ತವಲ್ಲ. ವೈದ್ಯರ ಸಲಹೆಯ ಪ್ರಕಾರವೇ ಈ ಸಾಧನಗಳನ್ನು ಅಳವಡಿಸಬೇಕು. ಆದರೂ ಕೆಲವು ವೇಳೆ ಈ ಸಾಧನ ಫಲಕಾರಿಯಾಗದಿದ್ದರೆ ಸುರಕ್ಷಾ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಹಲವು ದೈಹಿಕ ತೊಂದರೆಗಳನ್ನು ಅನುಭವಿಸುವ ತೊಂದರೆ ಇರುತ್ತದೆ. ಬದಲಿಗೆ ಪುರುಷರೇ ರಕ್ಷಾಕವಚ ತೊಟ್ಟರೆ ಈ ಅಪಾಯಗಳಿಂದ ಪಾರಾದಂತಾಗುತ್ತದೆ.

ನನ್ನಲ್ಲಿ ನಂಬಿಕೆ ಇಲ್ಲವೇ

ನನ್ನಲ್ಲಿ ನಂಬಿಕೆ ಇಲ್ಲವೇ

ಬೇರೆಲ್ಲಾ ಅಸ್ತ್ರಗಳು ಮುರಿದುಬಿದ್ದಾಗ ಪುರುಷರು ಅಂತಿಮವಾಗಿ ನಂಬಿಕೆಯ ಅಸ್ತ್ರವನ್ನು ಹೊರತೆಗೆಯುತ್ತಾರೆ. ಯಾವುದೇ ಸಂಬಂಧದಲ್ಲಿ ಅಗತ್ಯವಿರುವುದು ಪರಸ್ಪರ ನಂಬಿಕೆ. ರಕ್ಷಾಕವಚವನ್ನು ತೊಡಲು ಬಲವಂತಪಡಿಸುವ ಮೂಲಕ ಈ ನಂಬಿಕೆಯನ್ನು ನೀವು ಕಳೆದುಕೊಳ್ಳುತ್ತಿದ್ದೀರಿ ಎಂದು ಪುರುಷರು ಸೂಚ್ಯವಾಗಿ ತಿಳಿಸಿ ತಮ್ಮ ಕೆಲಸ ಪೂರೈಸಿಕೊಳ್ಳಲು ಯತ್ನಿಸುತ್ತಾರೆ.

Story first published: Tuesday, September 9, 2014, 17:03 [IST]
X
Desktop Bottom Promotion