Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮಹಿಳಾ ಔತಣಕೂಟದ ಗುಟ್ಟುಗಳು
ಮಾತು ಮತ್ತು ಮಹಿಳೆ ಎಂದಿಗೂ ಬೇರೆಯಾಗದ ಎರಡು ಪದಗಳು. ಇಬ್ಬರು ಮಹಿಳೆಯರು ಒಂದು ಕಡೆ ಭೇಟಿಯಾಗಿ ಮಾತನಾಡದೇ ಇರಲು ಸಾಧ್ಯವೇ ಇಲ್ಲ. ಇಬ್ಬರು ಮಹಿಳೆಯರು ಸೇರಿದರು ಎಂದರೆ ಅಲ್ಲಿ ಏನಾದರೂ ಒಂದು ವಿಷಯದ ಮೇಲೆ ಮಾತು ಇರಲೇ ಬೇಕು. ಮಾತಿನ ವಿಸ್ತಾರವೂ ಬಹಳ ಅಗಾಧವಾಗಿರುತ್ತದೆ. ಮನೆಯಲ್ಲಿ ಮಾಡಿದ ಅಡುಗೆಯಿಂದ ಆರಂಭಿಸಿ ರಾಷ್ಟ್ರ ರಾಜಕಾರಣದ ತನಕ ಏನು ಬೇಕಾದರೂ ಮಾತಿಗೆ ಆಹಾರವಾಗುವ ಸಾಧ್ಯತೆಗಳಿವೆ.
ಹೀಗ ಮಾತನಾಡಲು ಎಲ್ಲೂ ಸಮಯ ಸಿಗದಿದ್ದಾಗ ಪಾರ್ಟಿಗಳನ್ನು ಕರೆಯುವುದು ಮಹಿಳೆಯರ ಸಾಮಾನ್ಯ ಅಭ್ಯಾಸವೂ ಹೌದು. ಇಂತಹ ಪಾರ್ಟಿಯಲ್ಲಿ ಮುಖ್ಯ ಉದ್ದೇಶ ಮಾತನಾಡುವುದೇ ಆಗಿರುತ್ತದೆ. ಇಂತಹ ಪಾರ್ಟಿಗಳಲ್ಲಿ ನಾಲ್ಕು ಹೊಸಬಗೆಯ ತಿನಿಸುಗಳು ಪಾನೀಯ ಮತ್ತು ಮಾತೇ ಆಹಾರ. ಇಲ್ಲಿ ಹೊಸ ವಿಷಯದ ಬಗ್ಗೆ ಮಾತುಗಳು ಇರುತ್ತವೆ ಆದರೆ ಈ ಹೊಸ ವಿಷಯಗಳು ಯಾವುದು ಎನ್ನುವುದರ ಬಗ್ಗೆ ಎಲ್ಲೂ ಮಿತಿಯಿಲ್ಲ.

ಕೆಲವೊಮ್ಮೆ ಸಾಮಾನ್ಯ ಸುದ್ದಿಗಳೇ ಮಾತಾದರೆ ಮತ್ತೆ ಕೆಲವೊಮ್ಮೆ ತುಂಟ ಹಾಗೂ ಸಂಬಂಧವೇ ಇಲ್ಲದ ಮಾತುಗಳೂ ಇರುತ್ತವೆ. ಸಂಶೋಧನೆಗಳು ಹೇಳುವಂತೆ ಮಹಿಳೆಯರು ಪುರುಷರಿಗಿಂತ ಹೆಚ್ಚು ಲೈಂಗಿಕ ಮಾತುಗಳನ್ನು ಆಡುತ್ತಾರೆ. ಇಂತಹ ಮಾತುಗಳಲ್ಲಿ ಸಾಮರ್ಥ್ಯ, ಗಾತ್ರ, ವಿವಿಧ ಭಂಗಿಯ ಲೈಂಗಿಕ ಸಂಪರ್ಕಗಳ ತನಕ ಮಾತು ಮುಂದುವರೆಯುತ್ತದೆ. ಇಂತಹ ವಿಷಯಗಳ ಬಗ್ಗೆ ಪುರುಷರಿಗಿಂತ ಮಹಿಳೆಯರು ಹೆಚ್ಚು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಇಂತಹ ಪಾರ್ಟಿಗಳಲ್ಲಿ ಈ ಮಾತುಗಳು ಹೆಚ್ಚು.
ಒಬ್ಬರು ಇಂತಹ ಮಾತುಗಳನ್ನು ಆರಂಭಿಸಿದ ಮೇಲೆ ಗುಂಪಿನ ಇತರರು ನಾವೂ ಯಾರಿಗೂ ಕಮ್ಮಿ ಇಲ್ಲ ಎಂದು ಸಾಬೀತು ಪಡಿಸಲು ಪಣ ತೊಟ್ಟವರಂತೆ ಮತ್ತು ಹೆಚ್ಚು ಹೆಚ್ಚು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮ ಹಾಗೂ ತಮ್ಮ ಸಂಗಾತಿಯ ನಡುವೆ ನಡೆದ ತೀರಾ ಖಾಸಗಿ ವಿಷಯಗಳು ಇಲ್ಲೇ ಬಹಿರಂಗ ಆಗುತ್ತವೆ. ಇದು ಮಹಿಳೆಯರಿಗೆ ಹೊಸ ವಿಷಯಗಳನ್ನು ತಿಳಿಯುವ ಅವಕಾಶವೂ ಹೌದು. ಲೈಂಗಿಕ ವಿಷಯಗಳ ಬಗ್ಗೆ ಯಾವುದೇ ಸಂದೇಹಗಳಿದ್ದರೂ ಈ ಪಾರ್ಟಿಯಲ್ಲಿ ಅವು ಪರಿಹಾರವಾಗುತ್ತವೆ.
1. ಲೈಂಗಿಕ ವಿಷಯಗಳು: ಮಹಿಳೆಯರ ಪಾರ್ಟಿಗಳಲ್ಲಿ ಮುಖ್ಯವಾಗಿ ಚರ್ಚೆಗೆ ಬರುವ ವಿಷಯ ಲೈಂಗಿಕ ವಿಷಯಗಳಾಗಿರುತ್ತವೆ. ಹೆಚ್ಚಿನ ಮಹಿಳೆಯರು ಇದೇ ವಿಷಯಗಳು ಚರ್ಚೆಗೆ ಬರಲು ಕಾಯುತ್ತಿರುತ್ತಾರೆ. ಪುರುಷರು ಮುಂದೆ ಇದ್ದರೆ ಅವರಿಗೆ ಅವಮಾನ ಆಗುವ ವಿಷಯಗಳೂ ಇಲ್ಲಿ ಮಾತಿಗೆ ಬರುತ್ತವೆ. ಇಲ್ಲಿ ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮಾತುಗಳು ನಡೆಯುವುದರಿಂದ ಪುರುಷರ ಬಗ್ಗೆ ಎಲ್ಲಾ ವಿಷಯಗಳು ಇಲ್ಲಿ ಹರಾಜಾಗುತ್ತವೆ.
2. ಗಾಸಿಪ್ ಗಳು: ಮಹಿಳೆಯರು ಸೇರಿದರೆಂದರೆ ಗಾಸಿಪ್ ಗಳಿಗೇನು ಕಡಿಮೆ ಇಲ್ಲ. ಇಂತಹ ಕಿಟ್ಟಿ ಪಾರ್ಟಿಗಳಲ್ಲೂ ಇದೇ ಚಾಲ್ತಿಯಲ್ಲಿರುತ್ತದೆ. ಯಾವುದಾದರೂ ಹೊಸ ಅಫೇರ್ ಗಳು ಇಲ್ಲಿ ಚರ್ಚೆಯ ವಸ್ತುವಾಗುತ್ತದೆ. ಬೇರೆ ಎಲ್ಲೂ ಹೊರಬರದ ಗುಟ್ಟುಗಳೂ ಇಲ್ಲಿ ರಟ್ಟಾಗುತ್ತವೆ.
3. ಸಾಮರ್ಥ್ಯ ಮತ್ತು ಗಾತ್ರ: ಪಾರ್ಟಿಯಲ್ಲಿ ಮಾತುಗಳು ಎಲ್ಲಿಯ ತನಕ ಮಿತಿ ಮೀರುತ್ತವೆ ಎಂದರೆ ಗಂಡನ ಸಾಮರ್ಥ್ಯ ಮತ್ತು ಆತನ ಜನನಾಂಗದ ಗಾತ್ರ ಕೂಡ ಇಲ್ಲಿ ಬಯಲಾಗುತ್ತದೆ. ಇದು ಕೇಳಲು ಬಹಳ ವಿಚಿತ್ರ ಎನ್ನಿಸಬಹುದು ಆದರೆ ಇದು ಸತ್ಯ. ಬೆಡ್ ರೂಮ್ ನ ರಹಸ್ಯಗಳು ಇಲ್ಲಿ ರಹಸ್ಯಗಳಾಗಿ ಉಳಿಯುವುದಿಲ್ಲ.
4. ಗ್ಯಾಜೆಟ್ ಗಳು: ಮಹಿಳೆಯರ ಪಾರ್ಟಿ ಎಂದ ಕೂಡಲೇ ಇದು ಸ್ವಲ್ಪ ವಿಚಿತ್ರ ಅನ್ನಿಸಿದರೂ ಸಂಶೋಧನೆಗಳ ಪ್ರಕಾರ ನಿಜ. ಹೊಸ ಮೊಬೈಲ್ ಫೋನ್ ಗಳು, ಟಿವಿ ಏನೇ ಇರಲಿ ಇಲ್ಲಿ ಚರ್ಚೆಗೆ ಬರುತ್ತವೆ. ಅವರ ಪತಿ ಖರೀದಿಸಿದ ವಸ್ತುಗಳು, ಅವರು ಹೊರಗೆಲಲ್ಲೋ ನೋಡಿದ ಹೊಸ ಗ್ಯಾಜೆಟ್ ಇಲ್ಲಿ ಮಾತಿನ ಹಾಟ್ ವಿಷಯವೂ ಹೌದು. ಅಡುಗೆ ಮನೆಗೆ ಸಂಬಂಧಿಸಿದ ಹೊಸ ತಂತ್ರಜ್ಞಾನವಂತೂ ಮತ್ತು ಹೆಚ್ಚಾಗಿ ಮಾತಿಗೆ ಬರುತ್ತದೆ.
5. ಫ್ಯಾಷನ್: ಫ್ಯಾಷನ್ ಬಗ್ಗೆ ಮಾತು ಆರಂಭವಾದರೆ ಅದಕ್ಕೆ ಪೂರ್ಣವಿರಾಮ ಎಂಬುದೇ ಇಲ್ಲ. ಅದೂ ಪಾರ್ಟಿಯಲ್ಲಿ ಈ ಮಾತು ಆರಂಭವಾದರೆ ಅದು ನಿಲ್ಲುವುದೇ ಇಲ್ಲ. ತಾವು ತೆಗೆದುಕೊಂಡ ಹೊಸ ವಿನ್ಯಾಸದ ಬಟ್ಟೆಗಳಿಂದ ಆರಂಭಿಸಿ ಖರೀದಿಸಲೂ ಆಗದಂತಹ ಬೆಲೆಬಾಳುವ ಬಟ್ಟೆಗಳ ತನಕ ಯಾವುದಾದರೂ ಸರಿ ಮಾತಿಗೆ ಮೊದಲಾಗುತ್ತವೆ.
6. ಶಾಪಿಂಗ್: ಮಾತು ಮತ್ತು ಮಹಿಳೆ ಇದ್ದಂತೆ ಶಾಪಿಂಗ್ ಮತ್ತು ಮಹಿಳೆ ಕೂಡ ಅವಿನಾಭಾವ ಸಂಬಂಧ ಹೊದಿರುವ ಪದಗಳು. ಹೇಗೆ ಗಂಟೆಗಟ್ಟಲೆ ಶಾಪಿಂಗ್ ಮಾಡುವುದರಲ್ಲಿ ಮಹಿಳೆಯರು ಸಿದ್ಧ ಹಸ್ತರೋ ಅದೇ ರೀತಿ ಶಾಪಿಂಗ್ ಬಗ್ಗೆ ಮಾತನಾಡುವುದರಲ್ಲಿ ಕೂಡ. ಮುಗಿದ ಸೇಲ್ಸ್ ಮಳಿಗೆಯಿಂದ ಆರಂಭಿಸಿ ನಗರದಲ್ಲಿ ಮುಂದಿನ ತಿಂಗಳು ಬರಲಿರುವ ಹೊಸ ಶಾಪಿಂಗ್ ಮಾಲ್ ನ ತನಕ ಎಲ್ಲಾ ತರಹದ ಶಾಪಿಂಗ್ ಮಾಹಿತಿ ಇಲ್ಲಿ ಲಭ್ಯ. ಇದಕ್ಕಾಗಿಯೇ ಪಾರ್ಟಿಗೆ ಹೋಗುವ ಮುನ್ನ ಆದಷ್ಟು ಶಾಪಿಂಗ್ ಬಗೆಗಿನ ಮಾಹಿತಿ ಸಂಗ್ರಹಿಸಿ ತಮ್ಮ ಗೆಳತಿಯರ ಬಾಯಲ್ಲಿ ಭೇಷ್ ಅನ್ನಿಸಿಕೊಳ್ಳಬೇಕು ಎಂಬ ಹಂಬಲಿಸುವ ಮಹಿಳೆಯರೂ ಇಲ್ಲದಿಲ್ಲ.



Click it and Unblock the Notifications
