Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಇವನ್ನು ಹೆಂಗಸರು ಮಾತ್ರ ಮಾಡಬಲ್ಲರು
ಗಂಡಸರು ಮಾತ್ರ ಮಾಡಲು ಸಾಧ್ಯವಿದ್ದು ಹೆಂಗಸರು ಮಾಡಲು ಸಾಧ್ಯವಿಲ್ಲದಂತಹ ಹಲವಾರು ಸಂಗತಿಗಳಿವೆ. ಅದೇ ರೀತಿ ಹೆಂಗಸರು ಮಾತ್ರ ಮಾಡಲು ಸಾಧ್ಯವಿದ್ದು ಗಂಡಸರಿಗೆ ಸಾಧ್ಯವಾಗದ ಹಲವು ಸಂಗತಿಗಳಿವೆ. ಇಬ್ಬರಿಗೂ ಅವರವರದೇ ಆದ ವಿಶಿಷ್ಟ ಗುಣಲಕ್ಷಣಗಳಿವೆ.
ಹೆಂಗಸರು ಯಾವುದನ್ನಾದರೂ ಕೂಡ ನಿಭಾಯಿಸಬಲ್ಲರು. ಆಕೆ ಏಕಕಾಲಕ್ಕೆ ಸಂಬಂಧಗಳು ಮನೆ ಮತ್ತು ಹೊರಗಿನ ಕೆಲಸ, ಮಕ್ಕಳು ಎಲ್ಲರನ್ನೂ ನಿಭಾಯಿಸಬಲ್ಲಳು. ಗಂಡಸರು ಏಕಕಾಲಕ್ಕೆ ಹೆಚ್ಚೆಂದರೆ 2 ಕೆಲಸಗಳನ್ನು ಮಾತ್ರ ಮಾಡಬಲ್ಲರು. ಗಂಡಸರಿಂದ ಸಾಧ್ಯವಿಲ್ಲದ ಹಲವು ಕೆಲಸಗಳನ್ನು ಹೆಂಗಸರು ಮಾಡಬಲ್ಲರು. ಇದು ಕೇವಲ ಹೆಣ್ತನಕ್ಕೆ ಸಂಬಂಧಿಸಿದ್ದಲ್ಲ.
ಒಂದು ಕಡೆ ಸಾಮಾಜಿಕ ಮತ್ತು ಸಾಂಸ್ಕೃತಿ ಸಂರಚನೆಗಳಲ್ಲಿ ಬದಲಾವಣೆಯಾಗುತ್ತಿದೆ. ಮತ್ತೊಂದೆಡೆ ಹೆಂಗಸರು ಸ್ವತಂತ್ರರಾಗಿ ಹಲವನ್ನು ಖುಷಿಯಿಂದ ಅನುಭವಿಸುವಂತಾಗುತ್ತಿದ್ದಾರೆ. ಉದಾಹರಣೆಗೆ ಹೆಂಗಸರು ಕುಮಾರಿ, ಶ್ರೀಮತಿ ಎಂದು ತಮ್ಮ ಹೆಸರಿನ ಮುಂದೆ ಸೇರಿಸಕೊಳ್ಳಬಹುದು ಆದರೆ ಗಂಡಸರು ಶ್ರೀ ಎಂದು ಮಾತ್ರ ಸೇರಿಸಿಕೊಳ್ಳಲು ಸಾಧ್ಯ.
ಹೆಂಗಸರು ಹೈಹೀಲ್ಡ್ಸ್, ಫ್ರಾಕ್ಸ್, ಸ್ಕರ್ಟ್ಸ್, ಟೈಟ್ ಜೀನ್ಸ್ ಮೊದಲಾದ ಉಡುಪುಗಳನ್ನು ಧರಿಸಬಹುದು. ತಮ್ಮ ಕೂದಲು ಮತ್ತು ಅಲಂಕಾರಗಳನ್ನು ವಿನ್ಯಾಸಗೊಳಿಸಿಕೊಳ್ಳಬಹುದು. ಆದರೆ ಗಂಡಸರು ಜೀನ್ಸ್, ಟ್ರೌಷರ್ಸ್, ಆಫ್ ಪ್ಯಾಂಟ್ಸ್, ಬಾಕ್ಸರ್ಸ್, ಟೀ-ಷರ್ಟ್ಸ್ ಮತ್ತು ಷರ್ಟ್ ಗಳಿಗೆ ಅಂಟಿಕೊಂಡಿರಬೇಕು.
ಅಷ್ಟೇ ಅಲ್ಲ ಅಧ್ಯಯನಗಳು ತೋರಿಸಿರುವ ಪ್ರಕಾರ ಹೆಂಗಸರು ಮುಖಭಾವವನ್ನು ನೋಡಿಯೇ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲರು. ಆದರಿದು ಗಂಡಸರಿಗೆ ಸಾಧ್ಯವಿಲ್ಲ. ಇಲ್ಲಿ ಆರೀತಿ ಹೆಂಗಸರು ಮಾತ್ರ ಮಾಡಬಹುದಾದ ಕೆಲವು ಕೆಲಸಗಳ ಪಟ್ಟಿಯಿದೆ ನೋಡಿ.
ಹೆಂಗಸರು ಮಾಡಬಹುದಾದ ಗಂಡಸರಿಗೆ ಸಾಧ್ಯವಾಗದ ಕೆಲಸಗಳು

ಮಗುವಿಗೆ ಜನ್ಮ ನೀಡುವುದು
ಹೆಣ್ಣು ಹೆಚ್ಚು ಖುಷಿಯಿಂದ ಪ್ರೀತಿಯಿಂದ ಮಾಡುವ ಕೆಲಸಗಳಲ್ಲಿ ಇದು ಕೂಡ ಒಂದು. ತಾಯಿಯಾಗುವುದು ತಂದೆಯಾಗುವುದಕ್ಕಿಂತ ಬಹಳ ಭಿನ್ನ ರೀತಿಯದು. ಗಂಡಸರು ಮಗುವಿನ ಜನನಕ್ಕೆ ಕಾರಣರಾಗುತ್ತಾರೆ ಆದರೆ ಹೆಣ್ಣಿನಂತೆ ಅವರು ಜನ್ಮ ನೀಡಲಾಗುವುದಿಲ್ಲ.

ಹೈಹೀಲ್ಡ್ಸ್
ಹೆಂಗಸರು ಮಾತ್ರ ಮಾಡಬಹುದಾದ ಕೆಲಸಗಳಲ್ಲಿ ಇದು ಕೂಡ ಒಂದು. ಹೈಹೀಲ್ಡ್ಸ ಧರಿಸುವುದರಿಂದ ನೀವು ಉದ್ದ ಕಾಣುವಿರಿ ಅಷ್ಟೇ ಅಲ್ಲ ಸೆಕ್ಸಿಯಾಗಿ ಕೂಡ ಕಾಣುವಿರಿ.

ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು
ಹೆಂಗಸರು ಸಾಮನ್ಯವಾಗಿ ಗಂಡಸರು ತಮ್ಮ ತಂದೆತಾಯಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ದೂರುವುದನ್ನು ಕೇಳಿರುತ್ತೇವೆ. ಆದರೆ ಇದು ಹೆಂಗಸರಿಗೆ ಸಾಧ್ಯವಾದಷ್ಟು ಸುಲಭವಾಗಿ ಗಂಡಸರಿಗೆ ಸಾಧ್ಯವಾಗುವುದಿಲ್ಲ. ಹೆಂಗಸರು ಇದರಲ್ಲಿ ಪರಿಣಿತರು.

ಏಕಕಾಲಕ್ಕೆ ಹಲವು ಕೆಲಸ ಮಾಡಬಲ್ಲರು
ಹೆಂಗಸರು ಏಕಕಾಲಕ್ಕೆ ತಮ್ಮ ಮಗುವಿಗೆ ಪಾಠ ಹೇಳಿಕೊಡಬಲ್ಲರು, ಬಟ್ಟೆ ಒಗೆಯುತ್ತಲೇ ಅಡುಗೆ ಕೂಡ ಮಾಡಬಲ್ಲರು. ಇದನ್ನು ಹೆಂಗಸರು ಮಾತ್ರ ಸಮರ್ಥವಾಗಿ ಹೆಚ್ಚು ಸೂಕ್ತವಾಗಿ ಮಾಡಬಲ್ಲರು.

ಕುಮಾರಿ ಮತ್ತು ಶ್ರೀಮತಿ ಟ್ಯಾಗ್
ಹೆಂಗಸರು ಮಾತ್ರ ತಮ್ಮ ಹೆಸರಿನ ಮುಂದೆ ಕುಮಾರಿ ಅಥವ ಶ್ರೀಮತಿ ಎಂದು ಸೇರಿಸಿಕೊಳ್ಳಬಹುದು. ಆದರೆ ಗಂಡಸರು ಮದುವೆಯಾಗಿರಲಿ ಇಲ್ಲದಿರಲಿ ಶ್ರೀ ಎಂದು ಮಾತ್ರ ಸಾಧ್ಯ ಸೇರಿಸಿಕೊಳ್ಳಲು ಸಾಧ್ಯ.

ಮೋಸ
ಹೆಂಗಸರು ಹಾಸಿಗೆಯಲ್ಲಿ ಮೋಸ ಮಾಡಬಲ್ಲರು ಆದರೆ ಗಂಡಸರಿಗೆ ಅದು ಸಾಧ್ಯವಿಲ್ಲ. ವೆನ್ ಹ್ಯಾರೆ ಮೆಟ್ ಸ್ಯಾಲಿ ಚಿತ್ರದ ಪ್ರಸಿದ್ಧ ಸೀನನ್ನು ನೋಡಿದರೆ ನಿಮಗಿದು ತಿಳಿಯುತ್ತದೆ.

ಎಲ್ಲಕ್ಕೂ ಮುಟ್ಟನ್ನು ದೂರಿಬಿಡಿ
ನಿಮಗೆ ಏನಾದರೂ ಕೆಲಸ ಮಾಡಲು ಮೂಡಿಲ್ಲದಿದ್ದರೆ, ಯಾವುದಾದರೂ ನೋವು ಅಥವ ಬಳಲಿಕೆ ಕಾಡುತ್ತಿದ್ದರೆ ಸರಳವಾಗಿ ಮುಟ್ಟಿನ ದಿನಗಳು ಎಂದು ಹೇಳಿ ತಪ್ಪಿಸಿಕೊಳ್ಳಬಹುದು.

ಕೂದಲನ್ನು ಬೆಳೆಸಿಕೊಳ್ಳುವುದು
ಹೆಂಗಸರು ಹೇರ್ ಕಟ್ ಮಾಡಿಸಿಕೊಳ್ಳದೆ ತಿಂಗಳಾನುಗಟ್ಟಲೆ ಇರಬಹುದು. ಆದರೆ ಗಂಡಸರು ಕೇವಲ ಎರಡು ತಿಂಗಳು ಹೇರ್ ಕಟ್ ಮಾಡಿಸಿಲ್ಲವೆಂದರೆ ಕೆಟ್ಟದಾಗಿ ಕಾಣುತ್ತಾರೆ.

ಯಾರಿಗೂ ಗೊತ್ತಿಲ್ಲದಂತೆ ಉದ್ರೇಕಗೊಳ್ಳಬಹುದು
ಗಂಡಸಿನ ಹಾಗೆ ಹೆಣ್ಣು ಉದ್ರೇಕಗೊಂಡಿರುವುದು ಯಾರಿಗೂ ತಿಳಿಯಲು ಸಾಧ್ಯವಿಲ್ಲ. ಇದೊಂದು ಹೆಣ್ಣಿಗಿರುವ ವಿಶೇಷ ಸವಲತ್ತು.

ಸಾರ್ವಜನಿಕ ಸಾರಿಗೆಯಲ್ಲಿ ಸೀಟು ಗಳಿಸಬಹುದು
ಬಸ್ ಮತ್ತು ಟ್ರೈನುಗಳಲ್ಲಿ ಮಹಿಳೆಯರು ಸೀಟು ಪಡೆಯಬಹುದು. ಆದರೆ ಗಂಡಸರಿಗೆ ಈ ಸೌಲಭ್ಯವಿಲ್ಲ.



Click it and Unblock the Notifications











