ಸಭ್ಯತೆಯಿಂದ ಟೀಕಿಸುವ ವಿಧಾನಗಳು

By Hemanth P

ಯಾರನ್ನಾದರೂ ಸರಿಪಡಿಸಬೇಕು ಅಥವಾ ಅವರಿಗೆ ಸಲಹೆ ನೀಡಬೇಕೆಂದು ನಿಮಗೆ ಯಾವತ್ತಾದರೂ ಅನಿಸಿದೆಯಾ? ಜನರನ್ನು ಟೀಕೆ ಮಾಡಿ ಅವರನ್ನು ಸರಿ ಮಾಡುವುದು ಕೂಡ ಒಂದು ಕಲೆ. ಮೊಂಡು ಮತ್ತು ನೇರ ಮಾತುಗಳಿಂದ ಟೀಕೆ ಮಾಡಿದರೆ ಅದು ಎದುರಿನ ವ್ಯಕ್ತಿಗೆ ಪ್ರಶಂಸಾರ್ಹವಲ್ಲ. ಇದರಿಂದ ಭಿನ್ನಾಭಿಪ್ರಾಯ ಅಥವಾ ದ್ವೇಷ ಉಂಟಾಗಬಹುದು. ವಿಶೇಷವಾಗಿ ಕಾರ್ಪೊರೇಟ್ ಜಗತ್ತಿನಲ್ಲಿ ಟೀಕಿಸಲು ಒಂದು ಸರಿಯಾದ ವಿಧಾನವಿದೆ. ನೀವು ಟೀಕೆ ಮಾಡುವಾಗ ವಿನಮ್ರತೆ ಮತ್ತು ಶಿಷ್ಟಾಚಾರವಿರಬೇಕು.

ಟೀಕಿಸುವ ಮೊದಲು ನೀವು ಪರಿಸ್ಥಿತಿ ಅರ್ಥಮಾಡಿಕೊಳ್ಳಿ ಮತ್ತು ಇದರ ಬಳಿಕ ಕ್ರಮ ಕೈಗೊಳ್ಳಿ. ಒಳ್ಳೆಯ ರೀತಿಯಲ್ಲಿ ಟೀಕೆ ಮಾಡುವುದು ತುಂಬಾ ಕಠಿಣ. ಯಾರದ್ದೇ ಭಾವನೆಗಳಿಗೆ ನೋವುಂಟು ಮಾಡದ ರೀತಿಯಲ್ಲಿ ಟೀಕಿಸಲು ಹಲವಾರು ಸರಳ ವಿಧಾನಗಳಿವೆ. ಹಿತವಾಗಿ ಟೀಕಿಸುವಂತಹ ಕೆಲವೊಂದು ಸರಳ ವಿಧಾನಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

Simple ways to criticise gracefully

1. ಸಭ್ಯವಾಗಿ ಟೀಕಿಸಿ
ಟೀಕೆ ಕೇಳುವವನಿಗೆ ಅದು ಕಠೋರ ಮತ್ತು ಅಸಭ್ಯವೆಂದು ಅನಿಸಬಾರದು. ಇದರಿಂದ ಎದುರಿನ ವ್ಯಕ್ತಿಯ ನೈತಿಕತೆ ಮತ್ತು ಉತ್ಸಾಹ ಕುಂದಿ ತಾನು ಮಾಡುವ ಕೆಲಸವು ಒಳ್ಳೆಯದಿಲ್ಲವೆನ್ನುವ ಭಾವನೆ ಮೂಡಬಹುದು. ಸಭ್ಯ ಮತ್ತು ನವಿರಾದ ಪದಗಳನ್ನು ಟೀಕಿಸಲು ಬಳಸಿದರೆ ಇದರಿಂದ ವ್ಯಕ್ತಿಯು ಅದನ್ನು ಧನಾತ್ಮಕವಾಗಿ ತೆಗೆದುಕೊಂಡು ಕೆಲಸದಲ್ಲಿ ಮಾಡಿರುವ ತಪ್ಪನ್ನು ತಿದ್ದಿಕೊಳ್ಳಬಹುದು. ಸಭ್ಯ ಪದಗಳು ವ್ಯಕ್ತಿಯನ್ನು ಉತ್ತಮವಾಗಿ ಕೆಲಸ ಮಾಡಲು ಪ್ರೋತ್ಸಾಹಿಸುತ್ತದೆ.

2. ಪರಿಸ್ಥಿತಿ ಅರ್ಥಮಾಡಿಕೊಳ್ಳಿ
ಕೆಲಸದ ಬಗ್ಗೆ ಯಾವುದೇ ವ್ಯಕ್ತಿಯನ್ನು ಟೀಕಿಸುವ ಮೊದಲು ಆ ವ್ಯಕ್ತಿ ಯಾವ ಪರಿಸ್ಥಿತಿಯಲ್ಲಿ ಕೆಲಸ ಮಾಡಿದ್ದಾನೆ ಎಂದು ತಿಳಿದುಕೊಳ್ಳಿ. ಕೆಲಸ ಪೂರ್ತಿಯಾಗದೆ ಅಥವಾ ತೃಪ್ತಿದಾಯಕವಿಲ್ಲದೆ ಕೆಲವೊಂದು ಸಲ ಈ ರೀತಿಯಾಗುತ್ತದೆ. ಇಂತಹ ಸಮಯದಲ್ಲಿ ಸಭ್ಯರಾಗಿ ತುಂಬಾ ಸರಳವಾಗಿ ಟೀಕೆ ಮಾಡಿ. ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಮತ್ತು ಅದರಂತೆ ವಿವರಿಸಿ, ಭವಿಷ್ಯದಲ್ಲಿ ತಪ್ಪುಗಳಾಗದಂತೆ ತಿಳಿಹೇಳಿ.

3. ಕಲ್ಪಿಸುವುದು
ನೀವು ಒಳ್ಳೆಯ ಮತ್ತು ಸಭ್ಯ ಟೀಕಾಕಾರರಾಗಬೇಕಾದರೆ ಯಾವತ್ತೂ ಕಲ್ಪಿಸಿಕೊಳ್ಳಲು ಹೋಗಬೇಡಿ. ಟೀಕೆಯೊಳಗಡೆ ಊಹೆಗಳನ್ನು ಪ್ರವೇಶಿಸಲು ಬಿಡಬೇಡಿ. ಟೀಕೆ ಯಾವತ್ತಿಗೂ ಆಧಾರರಹಿತವಾಗಿರಬಾರದು. ಯಾವುದೇ ಕೆಲಸದ ಬಗ್ಗೆ ಟೀಕೆ ಅಥವಾ ಟಿಪ್ಪಣಿ ಮಾಡುವ ಮೊದಲು ಸರಿಯಾದ ಕಾರಣವಿರಬೇಕು. ಕಟು ಮತ್ತು ನಿರಾಧಾರ ಟೀಕೆ ನಿಮ್ಮನ್ನು ಕೆಟ್ಟ ಟೀಕಾಕಾರನನ್ನಾಗಿ ಮಾಡಬಹುದು. ಯಾವುದನ್ನು ಊಹಿಸುವ ಮತ್ತು ಒಳ್ಳೆಯ ಕೆಲಸ ಟೀಕಿಸುವ ಮೊದಲು ನೈಜಾಂಶಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.

4. ನೇರವಾಗಿ ಹೇಳಿ
ಯಾವುದೇ ಕೆಲಸವನ್ನು ಟೀಕಿಸಲು ಇರುವ ಸರಳ ವಿಧಾನವೆಂದರೆ ನೇರವಾಗಿ ಹೇಳುವುದು. ಎದುರಿನ ವ್ಯಕ್ತಿಯನ್ನು ಹೆಚ್ಚು ಗೊಂದಲಗೊಳಿಸಿದಷ್ಟು ನಿಮ್ಮ ಟೀಕೆಯೂ ಜಟಿಲವಾಗುತ್ತದೆ. ಯಾರದ್ದೇ ಕೆಲಸ ಟೀಕಿಸುವ ಅಥವಾ ಟಿಪ್ಪಣಿ ಮಾಡುವಾಗ ನೇರ ಮತ್ತು ವಿಷಯವನ್ನು ಸ್ಪಷ್ಟವಾಗಿ ತಿಳಿಸಿ. ಆದರೆ ಟೀಕೆ ಕಟು ಮತ್ತು ಅಸಭ್ಯವಾಗದಂತೆ ಎಚ್ಚರವಹಿಸಿ. ನಿಮ್ಮ ಟೀಕೆಗಳು ಯಾವಾಗಲೂ ರಚನಾತ್ಮಕ ಮತ್ತು ಕ್ರಿಯಾತ್ಮಕವಾಗಿರಲಿ. ಆದರೆ ಇತರರಿಗೆ ಕಠಿಣವಾಗುವುದನ್ನು ತಪ್ಪಿಸಿ. ಇದನ್ನು ಎಲ್ಲರು ಧನಾತ್ಮಕವಾಗಿ ಸ್ವೀಕರಿಸಲಾರರು.

5. ಎರಡು ಕಡೆಗಳನ್ನು ಹೇಳಿ
ಟೀಕೆ ಮಾಡುವಾಗ ಯಾವಾಗಲೂ ಅದರ ಜತೆಯಲ್ಲಿ ಪ್ರಶಂಸೆಯನ್ನು ಸೇರಿಸಿ. ಒಂದು ಲೇಖನದ ನಕಾರಾತ್ಮಕ ವಿಷಯಗಳನ್ನು ಹೇಳುತ್ತಿದ್ದರೆ ಆಗ ಅದರ ಧನಾತ್ಮಕ ವಿಷಯಗಳನ್ನು ಹೇಳಲು ಮರೆಯಬೇಡಿ. ಸಭ್ಯತೆಯಿಂದ ಟೀಕೆ ಮಾಡಲು ಇದು ತುಂಬಾ ಸರಳ ಹಾದಿ. ನಿಮ್ಮ ಟೀಕೆಯಿಂದ ಭವಿಷ್ಯದಲ್ಲಿ ಅವರ ಕೆಲಸವನ್ನು ಸುಧಾರಿಸಿದರೆ ಆಗ ಅದು ಖಂಡಿತವಾಗಿಯೂ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ನಕಾರಾತ್ಮಕ ಅಂಶಗಳೇ ನಿಮ್ಮ ಟೀಕೆಯಲ್ಲಿ ತುಂಬಿರುವುದು ಬೇಡ. ಟೀಕೆ ಮತ್ತು ಪ್ರಶಂಸೆಯ ಸರಿಯಾದ ಮಿಶ್ರಣವಿರಲಿ.

ಒಳ್ಳೆಯ ಹಾಗೂ ಸಭ್ಯತೆಯ ಟೀಕೆಗೆ ಇದು ಕೆಲವೊಂದು ವಿಧಾನಗಳು. ಟೀಕಾಕಾರರಾಗಿ ನೀವು ಯಾವಾಗಲೂ ನೆರವು ನೀಡುವುದು ಮತ್ತು ಅರ್ಥ ಮಾಡಿಕೊಳ್ಳುವವರಾಗಿರಬೇಕು. ಒಬ್ಬನ ತಪ್ಪುಗಳನ್ನು ಎತ್ತಿ ತೋರಿಸುವುದು ಮಾತ್ರ ಟೀಕಾಕಾರನ ಕೆಲಸವಾಗಿರಬಾರದು. ಟೀಕೆಯಿಂದ ಒಬ್ಬ ತನ್ನ ತಪ್ಪುಗಳನ್ನು ತಿದ್ದಿಕೊಂಡು ಅದು ಭವಿಷ್ಯದಲ್ಲಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಟೀಕೆಯು ಕೆಲಸಕ್ಕೆ ಒಂದು ಒಳ್ಳೆಯ ಅಂತ್ಯ ನೀಡಿ ಅದನ್ನು ಸ್ವೀಕಾರಾರ್ಹವಾಗಿ ಮಾಡುತ್ತದೆ. ವಿನಯ ಹಾಗೂ ಹಿತವಾಗಿ ಟೀಕೆ ಮಾಡಬೇಕು.

Story first published: Wednesday, December 18, 2013, 18:02 [IST]
X
Desktop Bottom Promotion