Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಐಆರ್ ಎಫ್ ಡಬ್ಲ್ಯೂನಲ್ಲಿ ಜಯಾ ಮಿಶ್ರ ಸಂಗ್ರಹ
ಐ ಆರ್ ಎಫ್ ಡಬ್ಲ್ಯೂನ ಎರಡನೆ ದಿನ ಜಯಾ ಮಿಶ್ರ ತಮ್ಮ ವಸ್ತ್ರಗಳನ್ನು ಪ್ರದರ್ಶಿಸಿದರು. ಈಕೆ ತನ್ನ ವಿನ್ಯಾಸದ ಅತ್ಯತ್ತಮ ಸಂಗ್ರಹವನ್ನು ಇಲ್ಲಿ ಪ್ರದರ್ಶಿಸಿದರು. ತನ್ನ ಬಣ್ಣಗಳು, ವಿನ್ಯಾಸದ ವೈವಿದ್ಯತೆಯ ಮೂಲಕ ತಮ್ಮ ಅನನ್ಯತೆಯನ್ನು ಈ ವಿನ್ಯಾಸಕಿ ತೋರಿದರು.
ಇಲ್ಲಿ ನಮ್ಮ ಗಮನಸೆಳೆದದ್ದು ಜಯಾ ಮಿಶ್ರ ಮಾಡಿದ್ದ ಬಣ್ಣಗಳ ಕಾಂಬಿನೇಷನ್. ಈ ವಿನ್ಯಾಸಕಿ ಬಂಗಾಳದ ನೇಕಾರರ ಜೊತೆ ಕೆಲಸ ಮಾಡಿದ್ದರು ಎಂದು ಹೇಳಲಾಗುತ್ತದೆ. ಈ ಪ್ರದರ್ಶನದ ಯಶಸ್ಸಿನಲ್ಲಿ ಅವರ ಪಾಲು ಕೂಡ ಇದೆ. ನೀವು ಇಲ್ಲಿ ಪ್ರದರ್ಶಿಸಲಾದ ಉಡುಪಗಳನ್ನು ಗಮನಿಸಿದರೆ ನಿಮಗೆ ಇದರಲ್ಲಿ ಬೊಹೊಮಿಯನ್ ಶೈಲಿ ಅರ್ಥವಾಗುತ್ತದೆ. ಈ ವಿನ್ಯಾಸಕಿ ಇದನ್ನು ಪ್ರದರ್ಶಿಸಲು ಕಾರಣ ಇದು ಅಸಾಂಪ್ರದಾಯಿಕ ಮತ್ತು ಕಲಾತ್ಮಕ ಶೈಲಿಯಲ್ಲಿ ಬದುಕಲಿಚ್ಛಿಸುವ ಜನರನ್ನು ಸೂಚಿಸುತ್ತದೆ. ಆಕೆಯ ಸಂಗ್ರಹ ತೆರೆದ ಮನಸ್ಸಿನ, ಸಂತೋಷವನ್ನು ಪ್ರೀತಿಸುವ ಮತ್ತು ಕೇರ್ ಫ್ರೀ ಜನರಿಗೆ ಅರ್ಪಣೆಗೊಂಡಿತು.
ಜಯಾಮಿಶ್ರ ವಿನ್ಯಾಸ ಸಂಗ್ರಹ

ಆಕಾಶ ನೀಲಿ
ಜಯಾ ಮಿಶ್ರಳ ಈ ಉಡುಗೆ ಅದ್ಭುತವಾಗಿತ್ತು. ಈ ಬಣ್ಣ ಚಳಿಗಾಲಕ್ಕೆ ಚೈತನ್ಯವನ್ನು ತುಂಬುವಂತಿತ್ತು.

ಹಸಿರು ಸುಂದರಿ
ಹಸಿರಿನೊಂದಿಗೆ ತುಸು ಹಳದಿಯನ್ನು ಬಳಸಲಾಗಿದ್ದ ಈ ಕಫ್ತಾನ್ ನಲ್ಲಿನ ಬಣ್ಣಗಳ ಮಿಶ್ರಣ ಕಣ್ಸೆಳೆಯಿತು.

ಸಹಜಸುಂದರಿ
ಈ ಭೂಮಿಯ ಬಣ್ಣವನ್ನು ನೀವು ಮೆಚ್ಚುವಿರಾದರೆ ನಿಮಗೆ ಈ ಉಡುಪು ಖಂಡಿತವಾಗಿಯೂ ಇಷ್ಟವಾಗುತ್ತದೆ.

ಸನ್ ಶೈನ್ ಎಲ್ಲೋ
ಈ ರೀತಿಯ ಬಣ್ಣಗಳು ಯಾವಾಗಲೂ ಮನಸೆಳೆಯುತ್ತವೆ. ಇದರಲ್ಲಿ ಮ್ಯಾಂಗೊ ಎಲ್ಲೋ ಮತ್ತು ಸನ್ ಯೆಲ್ಲೋನ ಅದ್ಭುತ ಕಾಂಬಿನೇಶನ್ ಕಾಣಬಹುದಾಗಿದೆ.

ಸೂರ್ಯನ ಬಣ್ಣ
ಹಳದಿ ಈ ದಿನದ ಬಣ್ಣವಾಗಿತ್ತು. ಜಯಾ ಮಿಶ್ರ ಈ ಬಣ್ಣವನ್ನು ತಮ್ಮ ಸಂಗ್ರಹದಲ್ಲಿ ಹೆಚ್ಚಾಗಿ ಬಳಸಿದ್ದರು.

ಬೊಹೆಮಿಯನ್ ದೇವತೆ
ಈಕೆಯ ಬಹುಪಾಲು ಉಡುಪುಗಳು ಬೊಹೆಮಿಯನ್ ಲೈಫ್ ಸ್ಟೈಲ್ ಅನ್ನು ಬಿಂಬಿಸುವಂತಿತ್ತು. ಇದು ಆಕೆಯನ್ನು ಈ ಪ್ರದರ್ಶನದ ಉಳಿದ ವಿನ್ಯಾಸಕಾರರಗಿಂತ ಭಿನ್ನವಾಗಿಸಿತು.

ಬಿಳಿ ವರ್ಸಸ್ ಆರೆಂಜ್
ಈ ಎರಡು ಥ್ರಿಲ್ಲಿಂಗ್ ಬಣ್ಣಗಳು ಒಂದರೊಡನೊಂದು ಅವಿನಾಭಾವದಲ್ಲಿ ಹೊಂದಿಕೊಂಡಿತ್ತು. ಈ ಬಿಳಿ ಬಣ್ಣದ ಶಾರ್ಟ್ ಉಡುಪು ಆರೆಂಜ್ ಸ್ಯಾಶನ್ನು ಒಳಗೊಂಡಿದ್ದು ಇದೇ ಅದರ ಪ್ರಮುಖ ಆಕರ್ಷಣೆಯಾಗಿತ್ತು.

ಬ್ರೈಟ್ ಆರೆಂಜ್
ಈ ಲೇಸ್ ಆರೆಂಜ್ ಶಾರ್ಟ್ಸ್ ಮತ್ತು ಬಿಳಿ ಬಣ್ಣದ ಶೀರ್ ಹೊಂದಿದ್ದ ಈ ಉಡುಪು ವಿಶೇಷವಾಗಿತ್ತು.

ಅಚ್ಚಬಿಳಿ
ಈ ಅಚ್ಚ ಬಿಳಿ ಬಣ್ಣದ ಶೀರ್ ಉಡುಪು ವಧುವಿನ ಉಡುಪಿನಂತಿತ್ತು. ಅದರಲ್ಲೂ ಸಮುದ್ರ ತೀರದಲ್ಲಿ ಮದುವೆಯಾಗಲಿಚ್ಛಿಸುವ ವಧುವಿಗೆ ಹೇಳಿಮಾಡಿಸಿದಂತಿತ್ತು. ಈ ಉಡುಪಿನ ಎದೆ ಮತ್ತು ತೋಳಿನ ಮೇಲೆ ನಿಯಾನ್ ಬಣ್ಣದ ಎಂಬ್ರಾಯಡರಿ ಇದ್ದದ್ದು ಆಕರ್ಷಣೀಯವಾಗಿತ್ತು.

ಡ್ರೆಸ್ ಟು ಇಂಪ್ರೆಸ್
ಇದು ಜಯಾ ಮಿಶ್ರಳ ಮನಸೆಳೆದ ವಿನ್ಯಾಸಗಳಲ್ಲಿ ಒಂದು. ಬ್ರೈಟ್ ಗ್ರೀನ್ ಮಣಿಗಳ ಬ್ಯಾಂಡ್ ಸೊಂಟದ ಸುತ್ತ ಇದ್ದದ್ದು ಇದಕ್ಕೆ ಹೊಸ ಕಳೆ ನೀಡಿತ್ತು.

ಮಿಂಟ್ ಗ್ರೀನ್
ಮಿಂಟ್ ಗ್ರೀನ್ ಮತ್ತು ಬಿಳಿ ಇದನ್ನು ವೇದಿಕೆಯ ಮೇಲೆ ಹೆಚ್ಚಾಗಿ ಕಾಣಬಹುದಿತ್ತು. ಈ ಉಡುಪಿನ ಮೇಲೆ ಹೂವಿನ ಚಿತ್ತಾರಗಳಿದ್ದವು.

ನೈಟ್ ಬ್ಲೂ
ವೇದಿಕೆ ಮೇಲೆ ಪ್ರದರ್ಶಿತವಾದ ಉಡುಪುಗಳಲೆಲ್ಲ ಇದು ಹೆಚ್ಚು ಗಾಢ ಬಣ್ಣದ್ದಾಗಿತ್ತು.

ವಿನ್ಯಾಸಕಿಯೊಂದಿಗೆ
ತನ್ನ ರೂಪದರ್ಶಿಗಳೊಂದಿಗೆ ಹೆಜ್ಜೆಹಾಕಿದ ವಿನ್ಯಾಸಕಿ ಕೂಡ ಫ್ಯಾಷನೆಬಲ್ ಆಗಿ ಕಾಣುತ್ತಿದ್ದಳು.

ಬಣ್ಣಗಳ ವೈವಿಧ್ಯತೆ
ವಿನ್ಯಾಸಕಿ ಹಲವು ಗಾಢ ಬಣ್ಣಗಳನ್ನು ಇಲ್ಲಿ ಕಣ್ಣಿಗೆ ಹಬ್ಬವಾಗುವಂತೆ ಪ್ರದರ್ಶಿಸಿದಳು. ಸನ್ ಶೈನ್ ಎಲ್ಲೋ ನಿಂದ ಹಿಡಿದು ನೈಟ್ ಬ್ಲೂವರೆಗೆ ಇಲ್ಲಿ ಬಣ್ಣಗಳನ್ನು ಕಾಣಬಹುದಿತ್ತು.



Click it and Unblock the Notifications