Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕಠಿಣ ಶಿಕ್ಷಕರೊಂದಿಗೆ ವ್ಯವಹರಿಸುವುದು ಹೇಗೆ?
ವಿದ್ಯಾರ್ಥಿಗಳಾಗಿ ನಿಮಗೆ ಹೆಚ್ಚಿನ ಕೆಲಸ ನೀಡುವ ಶಿಕ್ಷಕರನ್ನು ನೀವು ಕಠಿಣ ಶಿಕ್ಷಕರೆಂದು ಪರಿಗಣಿಸುತ್ತೀರಿ. ಆದರೆ ಇದು ನಿಜವಲ್ಲ. ಇಲ್ಲಿ ನಾವು ನಿಜವಾಗಿಯೂ ಕಠಿಣವಾಗಿರುವ ಶಿಕ್ಷಕರ ಬಗ್ಗೆ ಚರ್ಚಿಸುತ್ತಿದ್ದೇವೆ. ಕಠಿಣ ಶಿಕ್ಷಕರೆಂದರೆ ವಿದ್ಯಾರ್ಥಿಗಳನ್ನು ನಿಭಾಯಿಸಲು ತಾಳ್ಮೆ ಇರದವರು. ಆದರೂ ಶಿಕ್ಷಕ ವೃತ್ತಿ ಮಾಡುತ್ತಿರುತ್ತಾರೆ. ವಿದ್ಯಾರ್ಥಿಗಳ ಕಡೆಗಿನ ಅವರ ದೃಷ್ಟಿಕೋನವು ಪಾರದರ್ಶಕವಾಗಿರುವುದಿಲ್ಲ. ನಿಮ್ಮ ಶಾಲೆಯಲ್ಲಿ ಇಂತಹ ಒಬ್ಬರಾದರೂ ಶಿಕ್ಷಕರು ಇರುವ ಸಾಧ್ಯತೆ ಇದೆ. ನೀವು ಹದಿಹರೆಯದವರಾಗಿರುವ ಕಾರಣ ವಾಸ್ತವ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಎರಡೆರಡು ಸಲ ಯೋಚಿಸಬೇಕಾಗುತ್ತದೆ. ಕೆಲವೊಂದು ಸಲ ನೀವು ಯಾವುದಾದರೂ ವಿಷಯವನ್ನು ಇಷ್ಟಪಡದಿರಬಹುದು. ಇದನ್ನು ಬದಿಗಿರಿಸಿ ಮತ್ತು ನಿಮಗೆ ಕಠಿಣ ಶಿಕ್ಷಕರಿದ್ದಾರೆಯಾ ಎಂದು ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅಭ್ಯಸಿಸಿ.
ನೀವು ತರಗತಿಯಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರೆ ಆಗ ಅವರ ಶಾಲಾ ದಿನಗಳನ್ನು ಭಯಾನಕವಾಗಿಸುವ ಒಬ್ಬ ಶಿಕ್ಷಕನಾದರೂ ಇದ್ದೇ ಇರುತ್ತಾರೆ. ವಿದ್ಯಾರ್ಥಿಯಾಗಿ ಕಠಿಣ ಶಿಕ್ಷಕರೊಂದಿಗೆ ವ್ಯವಹರಿಸುವುದು ನಿಮಗೆ ಕಠಿಣ ಸವಾಲು. ಕಠಿಣ ಶಿಕ್ಷಕರೊಂದಿಗೆ ವ್ಯವಹರಿಸಲು ಹರಿಹರೆಯದವರಿಗೆ ಕೆಲವೊಂದು ಟಿಪ್ಸ್ ಗಳಿವೆ. ನಿಮ್ಮ ಚಿಂತೆಯನ್ನು ತುಂಬಾ ಹತ್ತಿರದಿಂದ ಗಮನಿಸಿ, ಆಗಲೂ ನಿಮಗೆ ಕಠಿಣ ಶಿಕ್ಷಕರೊಂದಿಗೆ ವ್ಯವಹರಿಸುವುದು ಕಠಿಣವೆಂಬ ನಿರ್ಧಾರಕ್ಕೆ ಬಂದರೆ ಈ ಕೆಳಗಿನ ಸರಳ ಮತ್ತು ಪರಿಣಾಮಕಾರಿ ಟಿಪ್ಸ್ ಗಳನ್ನು ಪ್ರಯತ್ನಿಸಿ.

ಕೆರಳಬೇಡಿ
ಕೆರಳಿದಾಗ ನಿಮ್ಮ ಶಿಕ್ಷಕರು ತುಂಬಾ ಒರಟಾಗುತ್ತಾರೆಂದು ನಿಮಗೆ ಖಚಿತವಾಗಿದ್ದರೆ ಶಾಂತ ಹಾಗೂ ಸಮಾಧಾನದಿಂದ ಇರುವುದು ತುಂಬಾ ಮುಖ್ಯ. ಕಠಿಣ ಶಿಕ್ಷಕರನ್ನು ಎದುರಿಸುವ ಅತ್ಯಂತ ಸುಲಭ ಹಾಗೂ ಸರಳ ವಿಧಾನವೆಂದರೆ ತಾಳ್ಮೆಯಿಂದ ಇರುವುದು. ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವಂತಹ ಅವಕಾಶವನ್ನು ಶಿಕ್ಷಕರಿಗೆ ಒದಗಿಸಬೇಡಿ.
ನೀವು ಪರಿಪೂರ್ಣವಾಗಿರಿ
ಕಠಿಣ ಶಿಕ್ಷಕರನ್ನು ಎದುರಿಸಬೇಕಾದರೆ ಆಗ ನೀವು ಆ ಶಿಕ್ಷಕರಿಗೆ ಸಂಬಂಧಪಟ್ಟ ಪ್ರತಿಯೊಂದು ವಿಷಯದಲ್ಲೂ ಪರಿಪೂರ್ಣರಾಗಿರಬೇಕು. ನಿಯಮಿತವಾಗಿ ಮನೆಕೆಲಸಗಳನ್ನು ಮಾಡಿ, ಸಮಯಕ್ಕೆ ಸರಿಯಾಗಿ ಮತ್ತು ವಿಧೇಯರಕರಾಗಿರಿ. ಹೆಚ್ಚಿನ ಶಿಕ್ಷಕರು ಪರಿಪೂರ್ಣ ವಿದ್ಯಾರ್ಥಿಗಳನ್ನು ಇಷ್ಟಪಡುವ ಕಾರಣ ಕಠಿಣ ಶಿಕ್ಷಕರೊಂದಿಗೆ ವ್ಯವಹರಿಸಲು ಹದಿಹರೆಯದವರಿಗೆ ಇದು ಅತ್ಯುತ್ತಮ ಟಿಪ್ಸ್.
ಸಂವಹನವಿರಲಿ
ನೀವು ನೇರನಡೆನುಡಿಯನ್ನು ಪಾಲಿಸುವವರಾದರೆ ನಿಮ್ಮ ಶಿಕ್ಷಕರೊಂದಿಗೆ ನೇರವಾಗಿ ಮಾತನಾಡಿ. ಇದರಿಂದ ನಿಮ್ಮ ಮತ್ತು ಶಿಕ್ಷಕರ ಮಧ್ಯೆ ಇರುವ ಭಿನ್ನಾಭಿಪ್ರಾಯ ಸರಿಪಡಿಸಲು ನೆರವಾಗಬಹುದು. ಮುಕ್ತವಾಗಿ ಮಾತನಾಡುವುದರಿಂದ ಎಲ್ಲಾ ವಿಷಯಗಳು ಸ್ಪಷ್ಟ ಮತ್ತು ಪಾರದರ್ಶಕವಾಗಿರುತ್ತದೆ.
ಪೋಷಕರೊಂದಿಗೆ ಮಾತನಾಡಿ
ಈ ವಿಷಯದ ಬಗ್ಗೆ ನಿಮ್ಮ ಪೋಷಕರೊಂದಿಗೆ ಮಾತನಾಡಿ. ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರು ಇಂತಹ ಪರಿಸ್ಥಿತಿಯನ್ನು ಸುಲಭ ಹಾಗೂ ಪರಿಣಾಮಕಾರಿಯಾಗಿ ನಿಭಾಯಿಸಬಲ್ಲರು. ನಿಮ್ಮ ಶಿಕ್ಷಕ ಅಥವಾ ಅವರ ಮೇಲಿನವರೊಂದಿಗೆ ನೇರವಾಗಿ ಮಾತನಾಡುವಂತೆ ಪೋಷಕರಿಗೆ ತಿಳಿಸಿ. ಈ ಟಿಪ್ಸ್ ನ್ನು ಪಾಲಿಸುವುದರಿಂದ ಹದಿಹರೆಯದ ವಿದ್ಯಾರ್ಥಿಗಳಿಗೆ ಸಮಸ್ಯೆ ಬಗೆಹರಿಸಲು ಸುಲಭವಾಗಲಿದೆ.
ಮೇಲಿನ ಅಧಿಕಾರಿಯ ಭೇಟಿ ಮಾಡಿ
ಶಿಕ್ಷಕನೊಂದಿಗೆ ನೇರವಾಗಿ ಮಾತನಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲವೆಂದು ನಿಮಗನಿಸಿದರೆ ಆಗ ಉಳಿದಿರುವ ಮಾರ್ಗವೆಂದರೆ ಪ್ರಿನ್ಸಿಪಾಲ್ ನ್ನು ಭೇಟಿಯಾಗಿ. ಶಿಕ್ಷಕನ ಬಗ್ಗೆ ನಿಮ್ಮಲ್ಲಿ ಸರಿಯಾದ ದೂರುಗಳಿದ್ದರೆ ಮಾತ್ರ ಹೀಗೆ ಮಾಡಿ.
ತಾಳ್ಮೆಯಿಂದಿರಿ
ತಾಳ್ಮೆಯಿಂದ ಇರಬೇಕೆಂದು ಹೇಳುವುದು ಹದಿಹರೆಯದವರಿಗೆ ಸಾಮಾನ್ಯವಾಗಿ ನೀಡುವಂತಹ ಸಲಹೆ. ಕಠಿಣ ಶಿಕ್ಷಕರೊಂದಿಗೆ ವ್ಯವಹರಿಸುವಾಗ ಕೂಡ ಇದನ್ನು ಪಾಲಿಸಬೇಕು. ತಾಳ್ಮೆಯಿಂದ ಪ್ರತಿಕ್ರಿಯಿಸಿ. ನಿಮ್ಮ ಶಿಕ್ಷಕರಿಗೆ ಹಠಾತ್ ಆಗಿ, ತುಂಬಾ ಕೆಟ್ಟದಾಗಿ ಪ್ರತಿಕ್ರಿಯಿಸಬೇಡಿ.
ನಿಯಮಗಳನ್ನು ತಿಳಿಯಿರಿ
ತಮ್ಮ ವಿದ್ಯಾರ್ಥಿಗಳು ಪಾಲಿಸಬೇಕೆಂಬ ನೀತಿ ನಿಯಮಗಳು ಪ್ರತಿಯೊಬ್ಬ ಶಿಕ್ಷಕನದ್ದಾಗಿರುತ್ತದೆ. ನಿಮ್ಮ ಶಿಕ್ಷಕನನ್ನು ನೋಡಿ, ತಿಳಿಯಿರಿ. ನಿಮ್ಮಿಂದ ನಿಜವಾಗಿಯೂ ಏನು ಬಯಸುತ್ತಿದ್ದಾರೆಂದು ಆಗ ತಿಳಿಯುತ್ತದೆ. ಕಠಿಣ ಶಿಕ್ಷಕರೊಂದಿಗೆ ವ್ಯವಹರಿಸಲು ಇದು ನಿಮಗೆ ನೆರವಾಗಲಿದೆ.



Click it and Unblock the Notifications











