Latest Updates
-
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್!
ಕೆಲಸಕ್ಕೆ ರಜೆ ಹಾಕಲು ಕ್ರಿಯಾತ್ಮಕ ಕಾರಣಗಳು
ಕೆಲಸಕ್ಕೆ ರಜೆ ಹಾಕಲು ಅಥವಾ ಕೆಲಸದಿಂದ ವಿಶ್ರಾಂತಿ ಪಡೆಯಲು ಎಂದಾದರೂ ಕಾರಣ ಬಯಸಿದ್ದೀರಾ? ಯಾವತ್ತಾದರೂ ಒಂದು ಸಲ ನಮಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಲು ಇಚ್ಛಿಸದೆ ಅಥವಾ ಮಾಡಲು ಸಾಧ್ಯವಿಲ್ಲದೆ ಆ ಕೆಲಸದಿಂದ ವಿಶ್ರಾಂತಿ ಬಯಸಬಹುದು. ಪ್ರತೀ ಸಲ ಕೆಲಸದಿಂದ ವಿಶ್ರಾಂತಿ ಪಡೆಯುವುದು ಅಷ್ಟು ಸುಲಭವಲ್ಲ. ಕೆಲವು ಜನರು ಕೆಲಸಕ್ಕಾಗಿ ನಮ್ಮ ಮೇಲೆ ಅವಲಂಬಿತರಾಗಿರುತ್ತಾರೆ. ಇದರಿಂದ ಕೆಲಸದಿಂದ ವಿಶ್ರಾಂತಿ ಪಡೆಯಲು ನಮಗೆ ಒಳ್ಳೆಯ ಕಾರಣಗಳು ಬೇಕು.
ಕೆಲಸಕ್ಕೆ ರಜೆ ಹಾಕಲು ಕೆಲವೊಮ್ಮೆ ಆರೋಗ್ಯ ಅಥವಾ ಅನಾರೋಗ್ಯ, ಕೌಟುಂಬಿಕ ಸಮಸ್ಯೆ ಮತ್ತು ಇತರ ವೈಯಕ್ತಿಕ ಸಮಸ್ಯೆಗಳ ಕಾರಣಗಳನ್ನು ನೀಡಬಹುದು. ಆದರೆ ಇಂದಿನ ದಿನಗಳಲ್ಲಿ ಇಂತಹ ಕಾರಣಗಳಿಂದ ಸುಲಭವಾಗಿ ಸಿಕ್ಕಿಬೀಳಬಹುದು. ಇದರಿಂದ ಕೆಲಸಕ್ಕೆ ರಜೆ ಹಾಕಲು ಕ್ರಿಯಾತ್ಮಕ ಕಾರಣಗಳನ್ನು ನೀಡಬೇಕು. ಕಾರಣಗಳು ನಂಬಲು ಕಠಿಣವಾಗಿರಬಾರದು. ಆದರೆ ತುಂಬಾ ಭಿನ್ನ ಮತ್ತು ವಾಸ್ತವವಾಗಿರಬೇಕು.

ಇಂತಹ ಕೆಲವು ಕಾರಣಗಳ ಬಗ್ಗೆ ಚರ್ಚಿಸಲಾಗಿದೆ.
1. ದೇವಮಾನವರ ಭೇಟಿ
ಭಾರತದಲ್ಲಿ ದೇವಮಾನವರನ್ನು ಭೇಟಿಯಾಗುವುದು ಪವಿತ್ರ ಮತ್ತು ಒಳ್ಳೆಯದೆಂದು ಭಾವಿಸಲಾಗುತ್ತದೆ. ದೇವಮಾನವನನ್ನು ಭೇಟಿಯಾಗಲು ತೆರಳುತ್ತಿದ್ದೇನೆ ಅಥವಾ ತುಂಬಾ ಧಾರ್ಮಿಕ, ಜನಪ್ರಿಯ ವ್ಯಕ್ತಿ ನಿಮ್ಮ ಹುಟ್ಟೂರಿಗೆ ಭೇಟಿ ನೀಡುತ್ತಿದ್ದಾನೆ ಮತ್ತು ಅವರನ್ನು ಭೇಟಿಯಾಗಲು ಹೋಗಲಿಕ್ಕಿದೆ ಎಂದು ಹೇಳಿ. ಆಗ ಖಂಡಿತವಾಗಿಯೂ ನಿಮಗೆ ಅನುಮತಿ ಸಿಗುತ್ತದೆ. ಈ ಕಾರಣ ಹೆಚ್ಚಿನ ಸಲ ಕೆಲಸ ಮಾಡುತ್ತದೆ. ನಿಮ್ಮ ಬಾಸ್ ಗೆ ದೇವರ ಮೇಲೆ ನಂಬಿಕೆಯಿಲ್ಲದಿದ್ದರೆ ಅಥವಾ ನೀವು ನಾಸ್ತಿಕನೆಂದು ತಿಳಿದಿದ್ದರೆ ಇದು ಕೆಲಸ ಮಾಡದು.
2. ಕಾನೂನಿನ ಸಮಸ್ಯೆ
ನಮ್ಮ ದೇಶದ ಕಾನೂನು ವ್ಯವಸ್ಥೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಒಂದು ಸಲ ಭೇಟಿ ನೀಡುವುದರಿಂದ ಯಾವುದೇ ಕೆಲಸ ಪೂರ್ತಿಯಾಗದು. ಕಾನೂನಿಗೆ ಸಂಬಂಧಿತ ದಾಖಲೆ, ಸರ್ಟಿಫಿಕೇಟ್ ಅಥವಾ ಅಫಿದಾವಿತ್ ಮಾಡಲಿಕ್ಕಿದೆಯೆಂದು ನೀವು ಆಗಾಗ ಬಾಸ್ ಗೆ ಹೇಳುತ್ತಿರಬಹುದು. ಇದರ ಮೂಲಕ ನಿಮ್ಮ ಬಾಸ್ ಗೆ ಹೇಗೆ ಮನವರಿಕೆ ಮಾಡಿಕೊಡುತ್ತೀರಿ ಎನ್ನುವುದು ಮುಖ್ಯ.
3. ಮದುವೆ ಪ್ರಸ್ತಾವ
ಒಂದು ವಯಸ್ಸಿನ ಬಳಿಕ ನಿಮಗೆ ಮದುವೆಯ ಪ್ರಸ್ತಾವ ಬರುವುದು ಸಾಮಾನ್ಯ. ಕೆಲಸಕ್ಕೆ ರಜೆ ಕೇಳಲು ಈ ಕಾರಣ ಹೇಳಬಹುದು. ಹುಡುಗಿಯನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಹೇಳಿ. ನಿಮ್ಮ ಭೇಟಿ ಹೇಗಿತ್ತು ಎಂದು ಬಾಸ್ ಕೇಳಿದರೆ, ಆ ಹುಡುಗಿ ಒಪ್ಪಿಗೆಯಾಗಲಿಲ್ಲವೆಂದು ಹೇಳಿ.
4. ಗೆಳೆಯನ ಅಂತ್ಯಕ್ರಿಯೆ
ಕೆಲಸಕ್ಕೆ ರಜೆ ಹಾಕಲು ಅಜ್ಜಅಜ್ಜಂದಿರ ಅಥವಾ ಸಂಬಂಧಿಕರ ಸಾವಿನ ಕಾರಣ ಹೇಳುವುದು ಸಾಮಾನ್ಯ. ಈಗ ನಾವು ಗೆಳೆಯರನ್ನು ಕೂಡ ಈ ಸರದಿಗೆ ಸೇರಿಸಬಹುದು. ಸ್ನೇಹಿತರೊಂದಿಗೆ ಹೊರಗಡೆ ತಿರುಗಾಡಲು ಹೋಗಲಿಕ್ಕಿದರೆ ಅಂತ್ಯಕ್ರಿಯೆ ಕಾರಣ ನೀಡಿ. ಇದು ಅತ್ಯುತ್ತಮ ಕಾರಣವಾಗುತ್ತದೆ. ಪ್ರತಿಯೊಬ್ಬ ಗೆಳೆಯನೂ ಮುಖ್ಯವೆನ್ನುವ ಮಾತಿದೆ. ಆ ಗೆಳೆಯನ ಹೆಸರನ್ನು ಪುನರಾವರ್ತಿಸಬೇಡಿ.
5. ನೆರವು ನೀಡುವ ನೆಪ
ಅಪಘಾತಕ್ಕೀಡಾದ ಬಡ ಮಹಿಳೆಗೆ ನೆರವು ನೀಡುವ ಕಾರಣದಿಂದ ಕೆಲಸಕ್ಕೆ ರಜೆ ಹಾಕಬೇಕಾಯಿತು ಅಥವಾ ಯಾರಿಗಾದರೂ ಲಿಫ್ಟ್ ನೀಡಲಿಕ್ಕಿದೆಯೆಂದು ಹೇಳಿ ರಜೆ ಪಡೆಯಬಹುದು. ಆದರೆ ಇಂತಹ ಕಾರಣಗಳು ನೀವು ರಜೆ ಹಾಕಿದ್ದಕ್ಕೆ ಉಪಯೋಗವಾಗುವಂತಿರಲಿ.
ಇವುಗಳು ಕೆಲಸಕ್ಕೆ ರಜೆ ಹಾಕಲು ಇರುವ ಕೆಲವು ವಿಲಕ್ಷಣ ಮತ್ತು ಅಸಾಮಾನ್ಯ ಕಾರಣಗಳು. ಕೆಲಸಕ್ಕೆ ರಜೆ ಹಾಕಲು ಇಂತಹ ಹಲವಾರು ಕಾರಣಗಳನ್ನು ನೀಡರಬಹುದು ಎನ್ನುವುದು ಸ್ಪಷ್ಟ. ಹಲವರು ಉಪಯೋಗಿಸುವ ಹಳೆ ಕಾರಣಗಳಿಗಿಂತ ಇದು ಸ್ವಲ್ಪ ಭಿನ್ನ ಹಾಗೂ ಹೊಸತು.



Click it and Unblock the Notifications