Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ವೆಗಾಸ್ ನಲ್ಲಿನ ಅತ್ಯಂತ ವಿಲಕ್ಷಣ ವಿಷಯಗಳು
ಜೂಜು, ಕ್ಯಾಸಿನೊ, ಐಷಾರಾಮಿ ಹೋಟೆಲ್ ಮತ್ತು ಪಾರ್ಟಿ ಜೀವನದ ಬಗ್ಗೆ ಯೋಚಿಸುತ್ತಿದ್ದರೆ ಆಗ ನಿಮಗೆ ಹೊಳೆಯುವ ಮೊದಲ ಹೆಸರು ಲಾಸ್ ವೆಗಾಸ್. ಅದ್ಭುತಗಳ ನಗರವೇ ಲಾಸ್ ವೆಗಾಸ್. ಇಲ್ಲಿರುವ ಕೆಲವೊಂದು ಆಕರ್ಷಣೆಗಳು ನಗರದ ಬಗ್ಗೆ ನೀವು ಮತ್ತಷ್ಟು ತಿಳಿಯಬೇಕೆಂದು ಹಂಬಲಿಸುವಂತೆ ಮಾಡಬಹುದು. ವೆಗಾಸ್ ನಲ್ಲಿನ ಕೆಲವೊಂದು ವಿಚಿತ್ರ ವಿಷಯಗಳು ನಿಮ್ಮನ್ನು ವೆಗಾಸ್ ನಲ್ಲಿ ಏನು ನಡೆಯುತ್ತದೆ, ವೆಗಾಸ್ ನಲ್ಲಿ ವಾಸ್ತವ್ಯ ಮಾಡಿ ಎನ್ನುವುದರೊಂದಿಗೆ ಸ್ವಾಗತಿಸುತ್ತದೆ.
ಸುಮಾರು ನೂರು ವರ್ಷ ಹಳೆಯ ನಗರವಾಗಿರುವ ವೆಗಾಸ್ ನಲ್ಲಿ ಯಾವುದೇ ವೈಯಕ್ತಿಕ ಅಥವಾ ಕಾರ್ಪೊರೇಟ್ ತೆರಿಗೆಯಿಲ್ಲ. 1910ರಲ್ಲಿ ಲಾಸ್ ವೆಗಾಸ್ ನಲ್ಲಿ ಜೂಜನ್ನು ಕಾನೂನುಬದ್ಧಗೊಳಿಸಿರುವ ಕಾರಣ ಜೂಜು ಪ್ರಿಯರಿಗೆ ಇದು ಅತ್ಯಂತ ನೆಚ್ಚಿನ ಪ್ರವಾಸಿ ತಾಣವಾಗಿದೆ. ವೆಗಾಸ್ ಅಲ್ಲಿನ ಆಹಾರ ಮತ್ತು ಅಲ್ಲಿ ಪ್ರತೀವರ್ಷ ತಿನ್ನುವ ಹಲವಾರು ಕಿಲೋಗಟ್ಟಲೆ ಸಿಗಡಿಗೆ ಜನಪ್ರಿಯವಾಗಿದೆ.

ಬೇಸರವಿಲ್ಲದೆ ವ್ಯಯಿಸಲು ನಿಮ್ಮಲ್ಲಿ ಸಾಕಷ್ಟು ಹಣವಿದ್ದರೆ ಆಗ ಲಾಸ್ ವೆಗಾಸ್ ನಿಮ್ಮ ಹೃದಯಕ್ಕೆ ತುಂಬಾ ಹತ್ತಿರವಾಗಲಿದೆ. ಲಾಸ್ ವೆಗಾಸ್ ನಲ್ಲಿ ನಡೆಯುವಂತಹ ಕೆಲವೊಂದು ವಿಚಿತ್ರ ವಿಷಯಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದರಿಂದ ನಗರವು ನಿಮ್ಮನ್ನು ಅಚ್ಚರಿಗೀಡುಮಾಡಲಿದೆ.
ಜನರು ಭೂಗತ ಸುರಂಗಗಳಲ್ಲಿ ವಾಸಿಸುತ್ತಾರೆ
ನಗರದ ಮಳೆನೀರು ಹೋಗಲು ವ್ಯವಸ್ಥೆ ಮಾಡಲಾಗಿರುವ ಭೂಗತ ಸುರಂಗದಲ್ಲಿ ಕೆಲವರು ವಾಸಿಸುತ್ತಾರೆ. ಸತತ ಮೂರು ದಿನ ಮಳೆಯಾದರೆ ಸುರಂಗದಲ್ಲಿರುವ ಎಲ್ಲವೂ ಕೊಚ್ಚಿ ಹೋಗುತ್ತದೆ ಎಂದು ಅವರು ಒಪ್ಪಿಕೊಳ್ಳುತ್ತಾರೆ. ಇದು ವೆಗಾಸ್ ನ ನಂಬಲಸಾಧ್ಯ ಅತ್ಯಂತ ವಿಲಕ್ಷಣ ವಿಷಯವೆಂದು ನಿಮಗನಿಸುವುದಿಲ್ಲವೇ?
ಮೋಜಿಗಾಗಿ ಬುಲ್ಡೋಜರ್ ಚಲಾಯಿಸಿ
ಲಾಸ್ ವೆಗಾಸ್ ನಲ್ಲಿ ಭಾರೀ ಉಪಕರಣಗಳ ಆಟದ ಮೈದಾನವಿದೆ. 14ರಿಂದ 114 ವರ್ಷದವರೆಗೆ ಸುಮಾರು 90 ನಿಮಿಷಗಳ ಕಾಲ ಬುಲ್ಡೋಜರ್ ಬಳಸಿಕೊಂಡು ಮಣ್ಣಿನ ರಾಶಿ ಹಾಕಬಹುದು ಅಥವಾ ಅಗೆಯುವ ಚಟುವಟಿಕೆ ಮಾಡಬಹುದು. ಮುಂದಿನ ಸಲ ನೀವು ವೆಗಾಸ್ ಗೆ ಭೇಟಿ ನೀಡಿದಾಗ ವೆಗಾಸ್ ನಲ್ಲಿರುವ ಇಂತಹ ವಿಚಿತ್ರಗಳನ್ನು ನೀವು ಪ್ರಯತ್ನಿಸಬಹುದು.
ವೆಗಾಸ್ ನ ಕ್ಯಾಸಿನೊದಲ್ಲಿ ಗಡಿಯಾರಗಳಿಲ್ಲ
ಗಡಿಯಾರಗಳು ಇಲ್ಲದೆ ಇರುವ ಕಾರಣ ನಿಮಗೆ ಹೊರಗಿನ ವಿಶ್ವದ ಪರಿವೆಯೇ ಇರದು. ಇದರಿಂದ ಕ್ಯಾಸಿನೊ ಪ್ರಿಯರಿಗೆ ಹೊರಗಿನ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಕೇವಲ ಆಟದಲ್ಲಿ ಮಗ್ನರಾಗಬಹುದು. ಇದು ವೆಗಾಸ್ ನ ವಿಚಿತ್ರ ಸಂಗತಿಗಳಲ್ಲಿ ಅಗ್ರ ಸ್ಥಾನ ಪಡೆದಿದೆ.
ವಿಶ್ವದಲ್ಲಿ ಅತ್ಯಂತ ಗಾಢವಾದ ಬೆಳಕು
ಬಾಹ್ಯಕಾಶದಿಂದ ನೋಡಿದಾಗ ಲಾಸ್ ವೆಗಾಸ್ ನಲ್ಲಿ ವಿಶ್ವದ ಅತ್ಯಂತ ಹೆಚ್ಚು ಹೊಳೆಯುವ ಬೆಳಕು ಕಾಣಿಸಿದೆ. ಇದು ಲಾಸ್ ವೆಗಾಸ್ ನ ಲಕ್ಸೊರ್ ಹೋಟೆಲ್ ನಲ್ಲಿದೆ. ಲಾಸ್ ವೆಗಾಸ್ ನ ನೆವಾಡ್ ನ ಜನಪ್ರಿಯ ಕ್ಯಾಸಿನೊ ಇರುವುದು ಇದೇ ಹೋಟೆಲ್ ನಲ್ಲಿ. ಲಕ್ಸೊರ್ ಹೋಟೆಲ್ ಅತ್ಯಂತ ಆಸಕ್ತಿಯ ವಾಸ್ತುಶಿಲ್ಪ ಹೊಂದಿದ್ದು, ಇದು 30 ಮಳಿಗೆಗಳ ಪಿರಾಮಿಡ್ ಆಕೃತಿಯಲ್ಲಿದೆ. ಇದು ವೆಗಾಸ್ ನಲ್ಲಿ ಜನಾಕರ್ಷಣೆಯ ವಿಲಕ್ಷಣ ವಿಷಯ.
ಪಾರಿವಾಳಗಳಿಗೆ ಆಹಾರ ಹಾಕುವುದು ನಿಷಿದ್ಧ
ಇತ್ತೀಚೆಗೆ ಕ್ಲಾರ್ಕ್ ಕೌಂಟಿ ಜಾರಿಗೊಳಿಸಿದ ಕಾಯ್ದೆಯಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಲಾಗಿದೆ. ಪಾರಿವಾಗಳು ಛಾವಣಿ ನಾಶ ಮಾಡುತ್ತದೆ ಮತ್ತು ಪ್ರವಾಸಿಗರ ಮೇಲೆ ದಾಳಿ ಮಾಡುತ್ತದೆ ಎಂದು ಪ್ರತಿಪಾದಕರು ವಾದಿಸಿದ್ದಾರೆ. ಇದು ವೆಗಾಸ್ ನ ಅತ್ಯಂತ ವಿಲಕ್ಷಣ ವಿಷಯ.
ಕ್ಯಾಸಿನೊ ಸಂಸ್ಕೃತಿ
ವೆಗಾಸ್ ನ ಅತ್ಯಂತ ಆಸಕ್ತಿದಾಯಕ ವಿಲಕ್ಷಣ ವಿಷಯವೆಂದರೆ ಅದು ಜೂಜನ್ನು ಇಷ್ಟಪಡುವ ಕ್ಯಾಸಿನೊಗೆ ಭೇಟಿ ನೀಡುವ ಪ್ರವಾಸಿಗರು. ಈ ಕ್ಯಾಸಿನೊಗಳು ಇಲ್ಲಿಗೆ ಬರುವ ಪ್ರವಾಸಿಗರನ್ನು ಆಡುವಂತೆ ಪ್ರೇರೇಪಿಸುತ್ತದೆ. ಕ್ಯಾಸಿನೋದಲ್ಲಿ ಯಾವುದೇ ಗಡಿಯಾರ ಅಥವಾ ಕಿಟಕಿಗಳೂ ಇಲ್ಲ. ಇಲ್ಲಿ ಉಚಿತವಾಗಿ ಮದ್ಯ ನೀಡುವ ಕಾರಣ ಜನರು ದೀರ್ಘಾವಧಿ ತನಕ ಆಡುತ್ತಾರೆ.
ವಿಶ್ವದ ಮದುವೆಯ ರಾಜಧಾನಿ
ವೆಗಾಸ್ ವಿಶ್ವದ ಮದುವೆಯ ರಾಜಧಾನಿ ಎಂದು ಹೇಳದೆ ವೆಗಾಸ್ ನ ವಿಚಿತ್ರಗಳ ಪಟ್ಟಿಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ವೆಗಾಸ್ ನ್ನು ವಿಶ್ವದ ಮದುವೆಯ ರಾಜಧಾನಿಯೆಂದು ಕರೆಯಲು ಕಾರಣವೆಂದರೆ ಇಲ್ಲಿ ಮದುವೆ ಲೈಸನ್ಸ್ ಸುಲಭವಾಗಿ ಸಿಗುತ್ತದೆ ಮತ್ತು ಕಡಿಮೆ ಖರ್ಚಿನೊಂದಿಗೆ ಸಿಗುತ್ತದೆ.
ವಿಶ್ವದಲ್ಲಿ ಬೃಹತ್ ಹೋಟೆಲ್ ಗಳು
ವಿಶ್ವದಲ್ಲಿನ ಬೃಹತ್ ಹೋಟೆಲ್ ಗಳ ಪಟ್ಟಿಯನ್ನು ನೋಡಿದರೆ ವೆಗಾಸ್ ನ ವಿಚಿತ್ರ ವಿಷಯಗಳು ನಿಮ್ಮನ್ನು ಚಕಿತಗೊಳಿಸುವಂತೆ ಮಾಡಬಹುದು. ವಿಶ್ವದ ಬೃಹತ್ 25 ಹೋಟೆಲ್ ಗಳಲ್ಲಿ 18 ಹೋಟೆಲ್ ಗಳು ಲಾಸ್ ವೆಗಾಸ್ ನಲ್ಲಿದೆ. ಅದೇ ರೀತಿ ಅಮೆರಿಕಾದ 5 ಬೃಹತ್ ಹೋಟೆಲ್ ಗಳಲ್ಲಿ ನಾಲ್ಕು ಹೋಟೆಲ್ ಗಳು ಲಾಸ್ ವೆಗಾಸ್ ನಲ್ಲಿದೆ.



Click it and Unblock the Notifications