Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಿಳೆಯರಿಗಾಗಿ ಇರುವ ಜನಪ್ರಿಯ ಮದ್ಯಗಳು
ಕೆಲವು ಮಹಿಳೆಯರಿಗೆ ಕುಡಿಯುವುದು ಒಂದು ಸಂವೇದನಾಶೀಲ ವಿಷಯ ಮತ್ತವರು ಇದನ್ನು ಇಷ್ಟಪಡುತ್ತಾರೆ. ಕುಡಿಯುವುದನ್ನು ತುಂಬಾ ಇಷ್ಟಪಡುವ ಮಹಿಳೆಯನೊಮ್ಮೆ ಕೇಳಿನೋಡಿ, ಆಗ ಆಕೆ ಬಾಟಲಿಯ ಮುಚ್ಚಳ ತಿರುಗಿಸುವ ಸದ್ದಿನ ಪುಳಕ ಮತ್ತು ಅದು ಗ್ಲಾಸ್ ಗೆ ಬೀಳುವಾಗ ಉಂಟಾಗುವ ಸದ್ದಿನ ತನಕ ಎಲ್ಲವನ್ನೂ ವಿವರಿಸುತ್ತಾಳೆ. ಒಂದು ಗ್ಲಾಸ್ ಮದ್ಯದೊಂದಿಗೆ ಇಡೀ ವಿಶ್ವವೇ ಸಂಭ್ರಮಿಸಬಹುದು. ಕುಡಿಯುವುದು ಪುರುಷರಲ್ಲಿ ಸಾಮಾನ್ಯ, ಆದಾಗ್ಯೂ ಮಹಿಳೆಯರಲ್ಲಿ ಇದು ಅಷ್ಟು ಸಾಮಾನ್ಯವಾಗಿಲ್ಲ. ಮಹಿಳೆಯರು ಸಮಾಜದೊಂದಿಗೆ ಬೆರೆಯುತ್ತಾರೆ ಮತ್ತು ಕುಡಿಯುತ್ತಾರೆ. ಆದರೆ ಕುಡಿಯುವುದರಲ್ಲಿ ಪುರುಷರು ಹಾಗೂ ಮಹಿಳೆಯರ ರುಚಿ ಭಿನ್ನವಾಗಿರುತ್ತದೆ.
ಮದ್ಯಕ್ಕೆ ಬಂದರೆ ಮಹಿಳೆಯರಿಗೆ ಅಷ್ಟು ತಿಳಿದಿರುವುದಿಲ್ಲ. ಕೆಲವೊಂದು ಮ್ಯಾಗಜಿನ್ ಗಳಿಂದ ಅವರು ನೆರವು ಪಡೆಯಬಹುದು, ಆದರೂ ಇದರಿಂದ ಹೆಚ್ಚಿನ ಮಾಹಿತಿ ಸಿಗದು. ಮೊದಲಿಗೆ ಮದ್ಯಪಾನ ಆರಂಭಿಸಲು ಯಾವುದು ಸೂಕ್ತ ಎಂದು ನಿರ್ಣಯಿಸುವುದು ಸುಲಭವಲ್ಲ. ಮದ್ಯದ ಬಗ್ಗೆ ವಿವರಣೆ ನೀಡಲು ವಿಶ್ವಕೋಶವೇ ಇದ್ದರೂ ಈ ಪ್ರಶ್ನೆಗೆ ಉತ್ತರ ಸರಳವಲ್ಲ. ಲಿಂಗತಾರತಮ್ಯ ಮತ್ತು ಸಾಮಾಜಿಕ ಅಸಮಾನತೆ ಮಹಿಳೆಯರ ಮಧ್ಯೆ ಒಂದು ಗಡಿಯನ್ನು ಹಾಕಿದೆ. ಮಹಿಳೆಯರು ಕೂಡ ಸಮಾಜ ಜೀವಿಗಳು, ಅವರಿಗೂ ತಿಳಿಯುವ ಮತ್ತು ತಮ್ಮ ಜೀವನವನ್ನು ತಮ್ಮದೇ ರೀತಿಯಲ್ಲಿ ಬದುಕುವ ಹಕ್ಕಿದೆ.
ಮಹಿಳೆಯರು ತಮಗೆ ಇಷ್ಟವಾಗಿರುವುದನ್ನು ಕುಡಿಯುತ್ತಾರೆ. ಮಹಿಳೆಯರು ಮತ್ತು ಪುರುಷರು ಭಿನ್ನ ಎಂಬ ಒಂದು ಸಾಮಾನ್ಯ ಕಲ್ಪನೆಯಿದೆ. ಬಾರ್ ಟೆಂಡರ್ ಕೂಡ ಮಹಿಳೆಯರಿಗೆ ಸಿಹಿ ಅಥವಾ ಹಣ್ಣಿನ ಡ್ರಿಂಕ್ಸ್ ಕೊಡುತ್ತಾನೆ. ಗಡುಸು ಮದ್ಯಗಳಿಗೆ ಹೋಲಿಸಿದರೆ ಮಹಿಳೆಯರು ವೈನ್ ಪ್ರಪಂಚದಲ್ಲೇ ಇರುತ್ತದೆ.
ಮುಂದಿನ ಸಲ ನೀವು ಕುಡಿಯಲು ಇಚ್ಛಿಸಿದರೆ ಕುಡಿಯಬಹುದಾದ ಕೆಲವೊಂದು ಮಹಿಳಾ ಮದ್ಯಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಕಾಗ್ನಾಕ್ ಗೆ ಪಟ್ಟಿಯಲ್ಲಿ ಮೊದಲ ಸ್ಥಾನ
ಮಹಿಳೆಯರು ಕುಡಿಯುವ ಮದ್ಯವನ್ನು ಹುಡುಕುತ್ತಿದ್ದರೆ ಕಾಗ್ನಾಕ್ ಈ ಪಟ್ಟಿಯಲ್ಲಿರುವ ಅಗ್ರ ಮದ್ಯ. ಇದು ಅತ್ಯಂತ ಜನಪ್ರಿಯ ಮದ್ಯ. ಶೇ.40ಕ್ಕೂ ಹೆಚ್ಚಿನ ಮಹಿಳೆಯರು ಕಾಗ್ನಾಕ್ ಕುಡಿಯಲು ಇಷ್ಟಪಡುತ್ತಾರೆ ಎನ್ನುವುದು ಅಂಕಿಅಂಶಗಳಿಂದ ತಿಳಿದುಬಂದಿದೆ.

2. ಕಾಲ್ವರ್ಟ್ ಎಕ್ಸ್ ಟ್ರಾ
ಮಹಿಳೆಯರು ಇಂದು ಬ್ಲೆಂಡೆಡ್ ವಿಸ್ಕಿಯ ವಿಭಾಗಕ್ಕೂ ಹೋಗಿದ್ದಾರೆ. ಬ್ಲೆಂಡೆಡ್ ವಿಸ್ಕಿ ವಿಭಾಗದಲ್ಲಿ ಕಾಲ್ವರ್ಟ್ ಎಕ್ಸ್ ಟ್ರಾ ಅಗ್ರ ಸ್ಥಾನದಲ್ಲಿದೆ. ಶೇ. 37ಕ್ಕೂ ಹೆಚ್ಚಿನ ಮಹಿಳೆಯರು ಇದನ್ನು ಕುಡಿಯುತ್ತಾರೆ ಮತ್ತು ಇದು ಮಹಿಳೆಯರು ಬಯಸುವ ಅತ್ಯುತ್ತಮ ಮದ್ಯ.

3. ಮುಂದಿನದ್ದು ಬಾಸಿಲ್ ಹೇಡನ್
ಮಹಿಳೆಯರು ಕುಡಿಯುವ ಮದ್ಯಗಳಲ್ಲಿ ಮುಂದಿನ ಸ್ಥಾನ ಬಾಸಿಲ್ ಹೇಡನ್ ಗೆ. ಇದು ತುಂಬಾ ಜನಪ್ರಿಯ ಮದ್ಯ. ವಿಸ್ಕಿ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದೆ. ಶೇ. 31ರಷ್ಟು ಮಹಿಳೆಯರು ಇದನ್ನು ಸೇವಿಸುತ್ತಾರೆಂದು ಅಂಕಿಅಂಶಗಳು ಹೇಳಿವೆ.

4. ಜಾನ್ ಪವರ್ಸ್
ಈ ಐರಿಷ್ ವಿಸ್ಕಿಯನ್ನು ಹೆಚ್ಚಿನ ಮಹಿಳೆಯರು ಕುಡಿಯುತ್ತಾರೆ. ಐರಿಷ್ ವಿಸ್ಕಿ ವಿಭಾಗಕ್ಕೆ ಬಂದರೆ ಮಹಿಳೆಯರು ಸೇವಿಸುವ ಅತ್ಯುತ್ತಮ ಮದ್ಯ ಜಾನ್ ಪವರ್ಸ್. ಅತ್ಯಂತ ಜನಪ್ರಿಯ ಮದ್ಯವನ್ನು ಶೇ. 30ರಷ್ಟು ಮಹಿಳೆಯರು ಕುಡಿಯುತ್ತಾರೆ.

5. ದ ಬ್ಲ್ಯಾಕ್ ಆ್ಯಂಡ್ ವೈಟ್
ಸ್ಕಾಚ್ ವಿಸ್ಕಿ ವಿಭಾಗಕ್ಕೆ ಬಂದರೆ ಮಹಿಳೆಯರು ಹೆಚ್ಚು ಕುಡಿಯುವುದಿಲ್ಲ. ಆದಾಗ್ಯೂ ಸ್ಕಾಚ್ ವಿಸ್ಕಿ ಸೇವಿಸುವ ಮಹಿಳೆಯರಲ್ಲಿ ಶೇ. 52ರಷ್ಟು ಮಂದಿ ಮಹಿಳೆಯರು ಬ್ಲ್ಯಾಕ್ ಆ್ಯಂಡ್ ವೈಟ್ ನ್ನು ಕುಡಿಯುತ್ತಾರೆ.

6. ವೊಲಿ ಲೈಟ್ ವೊಡ್ಕ
ಇದು ಮಹಿಳೆಯರು ಕುಡಿಯುವ ಅತ್ಯುತ್ತಮ ಮದ್ಯಗಳಲ್ಲಿ ಒಂದಾಗಿದೆ. ಸಿಹಿ ಮದ್ಯವನ್ನು ಕುಡಿಯುವುದೇ ಒಂದು ಮೋಜು ಮತ್ತು ಯುವತಿಯರು ಪಾರ್ಟಿಯಲ್ಲಿ ಇದನ್ನೇ ಬಯಸುತ್ತಾರೆ. ಯುವತಿಯರೇ ವಾರಾಂತ್ಯದ ಪಾರ್ಟಿಗೆ ಹೋಗುತ್ತಿದ್ದೀರಾ? ಹಾಗಾದರೆ ಇದನ್ನು ಪ್ರಯತ್ನಿಸಿ.

7. ನಿಕಟತೆಯ ಮನಸ್ಥಿತಿ ಪ್ರವೇಶಿಸಲು
ಮಹಿಳೆಯರ X-ರೇಟೆಡ್ ಫ್ಯೂಷನ್ ಮದ್ಯಕ್ಕೆ ಆದ್ಯತೆ ನೀಡುತ್ತಾರೆ ಮತ್ತು ಈ ವಿಭಾಗದಲ್ಲಿ ಮಹಿಳೆಯರು ಆಯ್ಕೆ ಮಾಡುವ ಅತ್ಯುತ್ತಮ ಮದ್ಯಗಳಲ್ಲಿ ಒಂದು. ನಿಕಟತೆಯ ಮನಸ್ಥಿತಿ ಪ್ರವೇಶಿಸುವುದನ್ನು ಮಹಿಳೆಯರು ಆನಂದಿಸುತ್ತಾರೆ ಮತ್ತು ಈ ಕಿತ್ತಳೆ ಮದ್ಯ ಒಗಟು ಬಿಡಿಸುತ್ತದೆ. ಈ ಜನಪ್ರಿಯ ಮದ್ಯದೊಂದಿಗೆ ವಾರಾಂತ್ಯವನ್ನು ವಿಶೇಷವಾಗಿಸಿ.

8. ಲೂಯಿಸ್ XIII
ಇಂದಿನ ದಿನಗಳಲ್ಲಿ ಮಹಿಳೆಯರು ಅತೀ ಹೆಚ್ಚು ಇಷ್ಟಪಡುವ ಮದ್ಯಗಳಲ್ಲಿ ಇದು ಒಂದಾಗಿದೆ ಮತ್ತು ಈ ಮದ್ಯದ ಹಿಂದೆ ಒಂದು ಇತಿಹಾಸವೇ ಇದೆ. ಕಾಗ್ನಾಕ್ ವಿಭಾಗಕ್ಕೆ ಸೇರುವ ಈ ಮದ್ಯವು ಅತ್ಯುತ್ತಮ.

9. ಮೆಕೆಲ್ಲನ್
9. ಮೆಕೆಲ್ಲನ್

10. ಮೆರಿಟೆಜ್
ಮಹಿಳೆಯರಿಗೆ ತಮ್ಮದೇ ಆದ ಕೆಲವೊಂದು ಬ್ರಾಂಡ್ ಇರುತ್ತದೆ ಮತ್ತು ಇದನ್ನು ಮಾಡಲು ಅವರು ಇಷ್ಟಪಡುತ್ತಾರೆ. ವಾರಾಂತ್ಯದ ಸಂಭ್ರಮವೆಂದರೆ ಸ್ವಲ್ಪ ಮದ್ಯ ಮತ್ತು ಬೀಚ್ ನಲ್ಲಿ ಸಮಯ ಕಳೆಯುವುದೆಂದರೆ ಅವರು ಯಾವಾಗಲೂ ರೆಡಿ!. ಇಂದಿನ ದಿನಗಳಲ್ಲಿ ಮಹಿಳೆಯರು ಹೆಚ್ಚಾಗಿ ಈ ಬ್ರಾಂಡ್ ನ್ನು ಆಯ್ಕೆ ಮಾಡುತ್ತಾರೆ.



Click it and Unblock the Notifications
