Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಚಳಿಗಾಲದಲ್ಲಿ ಓದಲು ಅತ್ಯುತ್ತಮ ಪುಸ್ತಕಗಳು
ಓದುವಿಕೆ ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ ಎಂಬ ಮಾತಿದೆ. ನಮ್ಮ ಬದುಕಿನಲ್ಲಿ ನಾವು ಓದುವ ಓದು, ಪುಸ್ತಕ ಸಾಕಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮಗೆ ಪುಸ್ತಕನ್ನು ಓದುವ ಹುಚ್ಚು ಅಧಿಕವಾಗಿದ್ದರೆ ಅದು ನಿಮ್ಮಲ್ಲಿ ಸಾಕಷ್ಟು ಜ್ಞಾನವನ್ನು ತುಂಬುತ್ತದೆ. ಇದರಿಂದ ಅನೇಕ ವಿಷಯಗಳನ್ನು ನೀವು ತಿಳಿದುಕೊಳ್ಳಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಚಳಿಗಾಲದಲ್ಲಿ ಓದುವುದು ಹೊಸ ಅನುಭವವನ್ನು ನೀಡುತ್ತದೆ. ತಣ್ಣನೆಯ ಗಾಳಿಯಲ್ಲಿ ನಿಮ್ಮ ಕಳೆದ ದಿನಗಳನ್ನು ನೆನಪಿಸುವಂತಹ ಪುಸ್ತಕಗಳು ನಿಮಗೆ ಚಳಿಗಾಲದಲ್ಲಿ ನೆರವಾಗಬಹುದು. ಚಳಿಗಾಲ ನಿಮ್ಮ ಓದುವ ಹವ್ಯಾಸಕ್ಕೆ ಇನ್ನಷ್ಟು ಪುಷ್ಠಿ ನೀಡುವುದರಲ್ಲಿ ಎರಡು ಮಾತಿಲ್ಲ!
ಕುತೂಕಲಕಾರಿಯಾದ ಪುಸ್ತಕ ಹಾಗೂ ಅದರ ಜೊತೆಯಲ್ಲಿ ಸವಿಯಲು ಒಂದು ಉತ್ತಮ ಕಾಫಿ ಜೊತೆಗಿದ್ದರೆ ನಿಮ್ಮ ಚಳಿಗಾಲದ ಅವಧಿ ಹೆಚ್ಚು ವಿಶೇಷವೆನಿಸುವುದರಲ್ಲಿ ಸಂಶಯವಿಲ್ಲ. ಈ ಸಮಯದಲ್ಲಿ ಅಂತರ್ಜಾಲದ ಸಹಾಯದಿಂದಲೂ ನೀವು ಕೆಲವು ಉತ್ತಮ ಪುಸ್ತಕಗಳನ್ನು ಓದಬಹುದು. ನಿಮಗೆ ಪುಸ್ತಕಗಳನ್ನು ಕೊಳ್ಳುವ ಮನಸ್ಸಿದ್ದರೆ ನಿಮ್ಮ ಖರೀದಿಗೆ ಸುಲಭವಾಗುವಂತಹ ಕೆಲವು ಸಲಹೆಗಳು ಇಲ್ಲಿವೆ. ಈ ವರ್ಷ ಹಲವಾರು ಉತ್ತಮ ಪುಸ್ತಕಗಳು ಬಿಡುಗಡೆಯಾಗಿದ್ದು ಇವುಗಳಲ್ಲಿ ಕೆಲವು ನಿಮಗೂ ಇಷ್ಟವಾಗಬಹುದು. ಇಂತಹ ಅದ್ಭುತ ಪುಸ್ತಕಗಳ ರಾಶಿ ನಿಮ್ಮಲ್ಲಿ ಆಯ್ಕೆಯ ಗೊಂದಲವನ್ನು ಸೃಷ್ಟಿಸಬಹುದು.
ಚಳಿಗಾಲದಲ್ಲಿ ಓದಲು ಉತ್ತಮವಾಗಿರುವ ಹಾಗೂ ನಿಮ್ಮ ಆಸಕ್ತಿಗೆ ಹೊಂದಿಕೆಯಾಗುವ ಪುಸ್ತಕಗಳನ್ನು ಆಯ್ಹೆಮಾಡಿ.

ಎಲಿಜಬೆತ್ ಸ್ಟೊಟ್ ಮತ್ತು ಬರ್ಗೆಸ್ ಬಾಯ್ಸ್
ಜಿಮ್ ಮತ್ತು ಬಾಬ್ ಎಂಬ ಇಬ್ಬರು ಸಹೋದರರ ಕಥೆಯನ್ನು ಹೇಳುವ ಈ ಪುಸ್ತಕ ಚಳಿಗಾಲದಲ್ಲಿ ಓದಲು ಅತ್ಯಂತ ಸೂಕ್ತವಾಗಿದೆ. ಅವರು ಅವರ ಹದಿಹರೆಯದ ಸಹೋದರಿಗೆ ಇರುವ ಸಮಸ್ಯೆಯನ್ನು ಪರಿಹರಿಸಲು ಹೋಗುವ ಕಥೆ ಇದಾಗಿದೆ. ಈ ಪುಸ್ತಕ ನಿಜವಾಗಿಯೂ ಉತ್ತಮವಾಗಿದ್ದು, ಅತ್ಯಂತ ಅನಿರೀಕ್ಷಿತ ಘಟನೆಗಳನ್ನು ನಿಮಗೆ ತೋರಿಸುತ್ತದೆ.

ದಿ ಮಿಡಲ್ ಸಿ
ಈ ಪುಸ್ತಕ ವಿಲಿಯಂ.ಹೆಚ್.ಗಾಸ್ ಎಂಬ ಲೇಖಕರ ಕೊಡುಗೆಯಾಗಿದೆ. ಇದು ಚಳಿಗಾಲಕ್ಕಾಗಿ ಕಾಯುತ್ತಿರುವವರಿಗೆ ಅತ್ಯುತ್ತಮ ಪುಸ್ತಕ. ಈ ಪುಸ್ತಕ ಮಾನವ ಗುರುತಿನ ಸಂಪೂರ್ಣ ಪರಿಶೋಧನೆಯನ್ನು ಒಳಗೊಂಡಿದೆ. ಈ ಪುಸ್ತಕ ನಿಮ್ಮ ಓದುವ ಸಮಯಕ್ಕೆ ಮೀಸಲಾದ ಪುಸ್ತಕ. ಈ ಪುಸ್ತಕವನ್ನು ಓದಿ ನಿಮ್ಮ ಚಳಿಗಾಲವನ್ನು ಆನಂದಿಸಿ.

ಮೇವೆ ಬಿಂಚಿ ಮತ್ತು ಎ ವೀಕ್ ಇನ್ ವಿಂಟರ್ (ಚಳಿಗಾಲದ ಒಂದು ವಾರ)
ಮೇವೆ ಬಿಂಚಿ ಎನ್ನುವ ಲೇಖಕ ಬರೆದ ಈ ಪುಸ್ತಕ ನಿಮ್ಮ ಚಳಿಗಾಲದ ಓದುವಿಕೆಯ ಆಸಕ್ತಿಯನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಈ ಪುಸ್ತಕ ಐರ್ಲೆಂಡ್ ನ ಪಶ್ಚಿಮ ತೀರದ ಮೂಲಕ ತನ್ನ ಪ್ರಯಾಣ ಆರಂಭಿಸುತ್ತದೆ. ಈ ಅದ್ಭುತ ಪುಸ್ತಕವನ್ನು ನೀವು ಕೊಂಡುಕೊಂಡರೆ ನಿಮ್ಮ ಓದುವ ಆಸಕ್ತಿ ಇನ್ನಷ್ಟು ಹೆಚ್ಚುತ್ತದೆ.

ದಿ ಲವ್ ಸಾಂಗ್ ಆಫ್ ಜಾನಿ ವ್ಯಾಲೈಂಟೈನ್
ಅಧಿಕ ಭಾವನೆಯನ್ನು ಹುಟ್ಟುಹಾಕುವ ಈ ಪುಸ್ತಕ ಟೆಡ್ಡಿ ವೇನ್ ಅವರದ್ದು. ಒಬ್ಬ ಹುಡುಗ ತನ್ನ ಅಭಿಮಾನಿಗಳು ನಿಜವಾಗಿ ತನ್ನನ್ನು ಇಷ್ಟಪಡುತ್ತಿಲ್ಲ ಎಂಬುದನ್ನು ಅರಿಯುವುದು ಈ ಪುಸ್ತಕದಲ್ಲಿ ಅಡಕವಾದ ಕಥೆ. ಈ ಪುಸ್ತಕವೂ ಸಹ ಚಳಿಗಾಲದಲ್ಲೊಮ್ಮೆ ಓದಲೇ ಬೇಕಾದಂತಹ ಪುಸ್ತಕ!

ಟೆಂಥ್ ಆಫ್ ಡಿಸೆಂಬರ್, ಜಾರ್ಜ್ ಸೌಂಡರ್ಸ್ ಗಿಫ್ಟ್ (ಡಿಸೆಂಬರ್ 10, ಜಾರ್ಜ್ ಸೌಂಡರ್ಸ್ ನ ಉಡುಗೊರೆ)
ಈ ಜಾರ್ಜ್ ಸೌಂಡರ್ಸ್ ನ ಅತ್ಯುತ್ತಮ ಪುಸ್ತಕಗಳಲ್ಲಿ ಒಂದೆಂದು ಹೇಳಬಹುದು. ಈ ಲೇಖಕರಿಂದ ಬರೆಯಲ್ಪಟ್ಟ ಕಥೆಗಳ ನಾಲ್ಕನೇ ಪುಸ್ತಕ ಇದಾಗಿದೆ. ನೀವು ಜಾರ್ಜ್ ಸೌಂಡರ್ ಪುಸ್ತಕ ಇಷ್ಟಪಟ್ಟರೆ ಖಂಡಿತವಾಗಿ ಈ ಪುಸ್ತಕವನ್ನು ಓದುವುದನ್ನು ತಪ್ಪಿಸುವುದಿಲ್ಲ. ಇದು ಓದಿಸಿಕೊಂಡು ಹೋಗುವಂತಹ ಪುಸ್ತಕ.

ಜಿಮ್ ಗೆವಿನ್ ಬರೆದ ಮಿಡಲ್ ಮೆನ್ (ಮಧ್ಯವರ್ತಿ)
ನೀವು ಸಣ್ಣ ಕಥೆಗಳನ್ನು ಇಷ್ಟಪಡುವಿರಾದರೆ ಖಚಿತವಾಗಿ ಈ ಪುಸ್ತಕದ ಸವಿಯನ್ನು ಅನುಭವಿಸುವಿರಿ. ಇದು ಉತ್ತಮ ಪುಸ್ತಕವಾಗಿದ್ದು ಚಳಿಗಾಲದಲ್ಲಿ ನಿಮಗೆ ಮೋಜಿನ ಸಮಯವನ್ನು ನೀಡುತ್ತದೆ. ಈ ಪುಸ್ತಕ ಉಲ್ಲಾಸದ ಕಥೆಗಳ ಸಂಗ್ರಹವಾಗಿದೆ. ಚಳಿಗಾಲದಲ್ಲಿ ನಗೆಗಡಲಲ್ಲಿ ತೇಲಿಸುವ ಈ ಪುಸ್ತಕ ಆನಂದ ಲಹರಿಯನ್ನುಂಟು ಮಾಡುತ್ತದೆ.
ಈ ವರ್ಷ ಹೊರಬಂದಿರುವ ಪುಸ್ತಕಗಳು ಅನೇಕ. ನಿಮಗೆ ಇಷ್ಟವಾದ ಪುಸ್ತಕಗಳನ್ನು ಒಂದು ಪಟ್ಟಿ ಮಾಡಿ ನಿಮ್ಮ ಆಸಕ್ತಿಗೆ ಸರಿಹೊಂದುವ ಪುಸ್ತಕಗಳನ್ನು ಕೊಂಡು ತನ್ನಿ. ನೀವು ಇಂತಹ ಉತ್ತಮ ಪುಸ್ತಕಗಳೊಂದಿಗೆ ಚಳಿಗಾಲದ ಸಮಯವನ್ನು ಉತ್ತಮವಾಗಿ ಕಳೆಯುವಿರಿ ಎಂದು ಭಾವಿಸುತ್ತೇವೆ !



Click it and Unblock the Notifications











